ಕಲರ್ಸ್ ಕನ್ನಡ ಸೀರಿಯಲ್ ನಲ್ಲಿ ಭಾಗ್ಯಾ ದೃಢ ನಿರ್ಧಾರ ತೆಗೆದುಕೊಂಡಿದ್ದಾಳೆ. ತಾಂಡವ್ ನಿಂದ ಭಾಗ್ಯಾ ದೂರವಾಗಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದ ವೀಕ್ಷಕರು ಭಾಗ್ಯಾ ನಡೆಗೆ ಒಂದ್ಕಡೆ ಖುಷಿ, ಇನ್ನೊಂದ್ಕರೆ ಕನ್ಫ್ಯೂಸ್ ಆಗಿದ್ದಾರೆ.
ಕಲರ್ಸ್ ಕನ್ನಡ ಭಾಗ್ಯಲಕ್ಷ್ಮಿ ಸೀರಿಯಲ್ (Colors Kannada Bhagyalakshmi Serial)ನಲ್ಲಿ ಭಾಗ್ಯಾ ಆಟ ಶುರುವಾಗಿದೆ. ಗಂಡನಿಗೆ ಸವಾಲು ಹಾಕಿ ಭಾಗ್ಯಾ ಮನೆಯಿಂದ ಹೊರಬಂದಿದ್ದಾಳೆ. ಭಾಗ್ಯಲಕ್ಷ್ಮಿ ಸೀರಿಯಲ್ ನಲ್ಲಿ ದೊಡ್ಡ ಮಳೆ ಸುರಿದು ನಿಂತಂತಾಗಿದೆ. ಭಾಗ್ಯಾಳ ಇನ್ನೊಂದು ಭಾಗ ಈಗ ತೆರೆದುಕೊಳ್ಳಲಿದೆ.
ಹೋಟೆಲ್ (Hotel)ಗೆ ಹೋದ ಭಾಗ್ಯಾಗೆ ಗಂಡ ಹಾಗೂ ತಾಂಡವ್ ಇಬ್ಬರು ಪ್ರೀತಿ ಮಾಡ್ತಿದ್ದಾರೆ ಎಂಬ ಸತ್ಯ ಗೊತ್ತಾಗ್ತಿದ್ದಂತೆ ಭಾಗ್ಯಾ ಏನು ಮಾಡ್ತಾಳೆ ಎಂಬ ಪ್ರಶ್ನೆ ವೀಕ್ಷಕರನ್ನು ಕಾಡಿತ್ತು. ಭಾಗ್ಯ ಇಡೀ ರಾತ್ರಿ ಅತ್ತಿದ್ದನ್ನು ನೋಡಿ ವೀಕ್ಷಕರು, ಭಾಗ್ಯ ನೋವಿನಲ್ಲೇ ದಿನ ಕಳೆಯುತ್ತಾಳೆ ಅಂದ್ಕೊಂಡಿದ್ದರು. ಆದ್ರೆ ಭಾಗ್ಯ ಹಾಗೆ ಮಾಡ್ಲಿಲ್ಲ. ವೆಡ್ಡಿಂಗ್ ಆನಿವರ್ಸರಿ ದಿನ ಭಾಗ್ಯಾ ಮನೆಯವರಿಗೆಲ್ಲ ಶಾಕ್ ನೀಡಿದ್ದಳು. ಇದು ವಿಶೇಷ ದಿನ ಎನ್ನುತ್ತಲೇ ಮದುವೆ ಮಂಟಪವನ್ನೆಲ್ಲ ಸಿದ್ಧ ಮಾಡಿದ್ದ ಭಾಗ್ಯ ವರ್ತನೆ ಎಲ್ಲರಿಗೂ ಅನುಮಾನ ಮೂಡಿಸಿತ್ತು. ಆದ್ರೂ ಭಾಗ್ಯಾಗೆ ಸತ್ಯ ತಿಳಿದಿಲ್ಲ ಎನ್ನುವ ನಂಬಿಕೆಯಲ್ಲೇ ಇದ್ರು. ಮದುವೆ (Wedding) ದಿನ ಮತ್ತೆ ತಾಳಿ ಕಟ್ಟಲು ತಾಂಡವ್ ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಭಾಗ್ಯ ಸಿಡಿದೆದ್ದಿದ್ದಳು. ತಾಂಡವ್ ಹಾಗೂ ಶ್ರೇಷ್ಠಾ ವಿಷ್ಯವನ್ನು ಮನೆಯವರ ಮುಂದೆ ತೆರೆದಿಟ್ಟಿದ್ದಳು. ಪತಿ ತನಗೆ ಮೋಸ ಮಾಡಿದ್ದಾನೆ ಅಂತ ಭಾಗ್ಯ ಹೇಳ್ತಿದ್ದಂತೆ ತಾಂಡವ್, ನನಗೆ ನೀನು ಇಷ್ಟವಿಲ್ಲ ಎಂದು ಚೀರಿದ್ದ. ಶ್ರೇಷ್ಠಾ ಮದುವೆ ಆಗಿಯೇ ತೀರುತ್ತೇನೆ, ನಿನ್ನ ಜೊತೆ ನನಗೆ ಇರಲು ಇಷ್ಟವಿಲ್ಲ ಅಂತ ತಾಂಡವ್ ಭಾಗ್ಯಾ ಮೇಲಿರುವ ತನ್ನ ಭಾವನೆಯನ್ನು ಹೊರ ಹಾಕಿದ್ದ. ಇತ್ತ ಶ್ರೇಷ್ಠಾ, ತಾಂಡವ್ ನಾನು ಪ್ರೀತಿ ಮಾಡಿದ್ದೇವೆ ಎಂದಿದ್ದಳು. ದಂಪತಿ ಮಧ್ಯೆ ಬಂದ ಶ್ರೇಷ್ಠಾ ಎಷ್ಟು ತಪ್ಪು ಮಾಡಿದ್ದಾಳೆ ಎಂಬುದನ್ನು ಭಾಗ್ಯ ತಿಳಿಸಿ ಹೇಳಿದ್ರು ಅದನ್ನು ಒಪ್ಪಿಕೊಳ್ಳಲಿಲ್ಲ ಶ್ರೇಷ್ಠಾ. ತಾಳಿಗೇನು ಬೆಲೆ ಎಂದ ಶ್ರೇಷ್ಠಾ, ಭಾಗ್ಯಾಳಿಂದ ಏಟು ತಿಂದಿದ್ದಾಳೆ.
ಮಧು ಗೌಡ ಮದುವೆಯಲ್ಲಿ ಅಳಿಯನ ಮೇಲೆ ಅತ್ತೆ ರಂಪಾಟ; ಇಡೀ ಘಟನೆ ಬಗ್ಗೆ ಸ್ಪಷ್ಟನೆ ಕೊಟ್ಟ ಸಹೋದರ ಮದನ್
ಶ್ರೇಷ್ಠಾ ಹಾಗೂ ಭಾಗ್ಯಾ ತಮ್ಮ ಪ್ರೀತಿ ಬಿಟ್ಟುಕೊಡಲು ಸಿದ್ಧವಿರಲಿಲ್ಲ. ಆರಂಭದಲ್ಲಿ ಪತಿಯನ್ನು ಬಿಟ್ಟುಕೊಡಲು ಸಾಧ್ಯವೇ ಇಲ್ಲ ಅಂತ ಶ್ರೇಷ್ಠಾಗೆ ಎದುರಾಗಿ ನಿಂತಿದ್ದ ಭಾಗ್ಯ ಕೊನೆಯಲ್ಲಿ ತಾಂಡವ್ ನಿಂದ ಬೇರೆಯಾಗಿದ್ದಾಳೆ. ನೀವಿಲ್ಲದೆ ಬದುಕಿ ತೋರಿಸ್ತಾಳೆ ಈ ಭಾಗ್ಯ ಎಂದು ತಾಂಡವ್ ಗೆ ಸೆಡ್ಡು ಹೊಡೆದಿರುವ ಭಾಗ್ಯಾ ಗಂಡನಿಂದ ದೂರವಾಗಿದ್ದಾಳೆ. ಬದುಕು ನಂದು, ನಿರ್ಧಾರ ನಂದು ಮತ್ತು ಮಕ್ಕಳು ನನ್ನವರು, ಅತ್ತೆ ಮಾವ ಕೂಡ ನಮ್ಮವರೇ ಎನ್ನುತ್ತಲೇ ಭಾಗ್ಯ ಮನೆಯಿಂದ ಹೊರಗೆ ಬಂದಿದ್ದಾಳೆ.
ಕಲರ್ಸ್ ಕನ್ನಡ ತನ್ನ ಪ್ರೋಮೋ ಪೋಸ್ಟ್ ಮಾಡ್ತಿದ್ದಂತೆ ವೀಕ್ಷಕರು ಕಮೆಂಟ್ ಶುರು ಮಾಡಿದ್ದಾರೆ. ಭಾಗ್ಯಾ ನಡೆಯನ್ನು ವೀಕ್ಷಕರು ಮೆಚ್ಚಿದ್ದಾರೆ. ಭಾಗ್ಯಾ ಒಳ್ಳೆ ತೀರ್ಮಾನಕ್ಕೆ ಬಂದಿದ್ದಾಳೆ. ನಾಲಾಯಕ್ ಗಂಡನ ಜೊತೆ ಬದುಕುವ ಬದಲು, ದೂರ ಇರುವುದು ಒಳ್ಳೆಯದು ಎಂದು ವೀಕ್ಷಕರು ಹೇಳಿದ್ದಾರೆ. ತಾಂಡವ್ ಲಕ್ಷ್ಮಿ ಕಳೆದುಕೊಂಡು ಭಿಕ್ಷುಕನಾಗ್ತಿದ್ದಾನೆ ಎಂದು ವೀಕ್ಷಕರು ಕಮೆಂಟ್ ಮಾಡಿದ್ದಾರೆ. ಶೋಕಿ ಮಾಡೋ ಶ್ರೇಷ್ಠಾ ಜೊತೆ ಇರೋದು ಕಷ್ಟ, ಅವಳು ಈತನಿಗೆ ಸರಿಯಾಗಿ ಬುದ್ಧಿ ಕಲಿಸ್ತಾಳೆ, ಶ್ರೇಷ್ಠಾ ಅಂತ ಮೆರೆಯುತ್ತಿದ್ದ ವ್ಯಕ್ತಿ ಭಾಗ್ಯಾ ಕಾಲಿಗೆ ಬೀಳ್ತಾನೆ, ಅವನಿಗೆ ಬುದ್ಧಿ ಬರಬೇಕು ಹೀಗೆ ನಾನಾ ಕಮೆಂಟ್ ಗಳನ್ನು ವೀಕ್ಷಕರು ಹಾಕ್ತಿದ್ದಾರೆ.
ಕಿಚ್ಚನ ಬಳಿ ಅತ್ತು ಗೋಗರೆದು ಬಿಗ್‌ಬಾಸ್‌ಗೆ ವಿದಾಯ ಹೇಳಿದ ಶೋಭಾ ಶೆಟ್ಟಿ! 2ವಾರದ
ಕೆಲ ವೀಕ್ಷಕರಿಗೆ ಭಾಗ್ಯಾ ಹಾಗೂ ಆಕೆ ಅತ್ತೆ – ಮಾವ ಮನೆಬಿಟ್ಟು ಹೋಗಿದ್ದು ಇಷ್ಟವಾಗಿಲ್ಲ. ಭಾಗ್ಯಾ ಇದೇ ಮನೆಯಲ್ಲಿ ಇರ್ಬೇಕಾಗಿತ್ತು. ತಾಂಡವ್ ನನ್ನು ಮನೆಯಿಂದ ಹೊರಗೆ ಹಾಕ್ಬೇಕಿತ್ತು. ಈಗ ಅವನಿಗೆ ಅವನು ಕೇಳಿದ್ದು ಸಿಕ್ಕಿದೆ ಎಂದಿದ್ದಾರೆ ವೀಕ್ಷಕರು.