ಅರೆರೆ... ಭಾಗ್ಯಳ ತಲೆಗೆ ಹೊಡೀತಿರೋ ವ್ಯಕ್ತಿ ಯಾರಿದು? ಕುಂಭಮೇಳಕ್ಕೆ ಹೋದ ನಟಿಗೆ ಹೀಗೆ ಆಗೋದಾ?

Published : Feb 27, 2025, 01:35 PM ISTUpdated : Feb 27, 2025, 03:11 PM IST
ಅರೆರೆ... ಭಾಗ್ಯಳ ತಲೆಗೆ ಹೊಡೀತಿರೋ ವ್ಯಕ್ತಿ ಯಾರಿದು? ಕುಂಭಮೇಳಕ್ಕೆ ಹೋದ ನಟಿಗೆ ಹೀಗೆ ಆಗೋದಾ?

ಸಾರಾಂಶ

ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ, ತಾಂಡವ್ ಶ್ರೇಷ್ಠಾಳನ್ನು ಮದುವೆಯಾಗಿದ್ದು, ಭಾಗ್ಯ ತಾಳಿಯನ್ನು ಹಿಂದಿರುಗಿಸಿದ್ದಾಳೆ. ಇದರಿಂದ ತಾಂಡವ್ ಅಹಂಗೆ ಧಕ್ಕೆಯಾಗಿದೆ. ನಟಿ ಸುಷ್ಮಾ ರಾವ್ ಕುಂಭಮೇಳಕ್ಕೆ ಹೋಗಿ ಕಾನ್ಪುರದಲ್ಲಿ ಪ್ರವಾಸ ಮಾಡಿದ್ದಾರೆ. ಸುಷ್ಮಾ ಚಿಕ್ಕಮಗಳೂರಿನವರು, ಕಂಪ್ಯೂಟರ್ ಸೈನ್ಸ್ ಪದವೀಧರೆ, ಭರತನಾಟ್ಯ ಕಲಾವಿದೆ ಮತ್ತು ಆರ್ಯಭಟ ಪ್ರಶಸ್ತಿ ವಿಜೇತೆ. ಅವರು ಭಾಗೀರಥಿ ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು. ಶ್ರೇಷ್ಠಾ ಪಾತ್ರದ ಬಗ್ಗೆ ಮಾತನಾಡುತ್ತಾ, ಪ್ರೀತಿಯಲ್ಲಿ ಆಕೆಯ ತಪ್ಪು ಇಲ್ಲ ಎಂದಿದ್ದಾರೆ.

ಭಾಗ್ಯಲಕ್ಷ್ಮಿ ಸೀರಿಯಲ್​ ಮಹತ್ವದ ತಿರುವು ಪಡೆದುಕೊಂಡಿದೆ. ಇಲ್ಲಿಯವರೆಗೆ ಪತ್ನಿಗೆ ಮಾನಸಿಕ ಟಾರ್ಚರ್​ ಕೊಡುತ್ತಲೇ ಲವರ್​ ಶ್ರೇಷ್ಠಾ ಜೊತೆ ಎಂಜಾಯ್ ಮಾಡುತ್ತಿದ್ದ ತಾಂಡವ್​, ಶ್ರೇಷ್ಠಾಳ ಕುತಂತ್ರದ ಅರಿವು ಇಲ್ಲದೇ ಈಗ ಆಕೆಯನ್ನು ಮದುವೆಯಾಗಿದ್ದಾನೆ. ತಾಳಿಯೇ ಸರ್ವಸ್ವ ಎಂದುಕೊಂಡು ಮಾತನಾಡುತ್ತಿದ್ದ ಭಾಗ್ಯ ಈಗ ತಾಳಿಯನ್ನು ಗಂಡನ ಕೈಗೆ ಇಟ್ಟಿದ್ದಾಳೆ.  ಪತ್ನಿಗೆ ಬೆಲೆ ಇಲ್ಲದ ಮೇಲೆ ತಾಳಿಗೇನು ಬೆಲೆ, ಇದು ಹೇಗಿದ್ದರೂ ಶ್ರೇಷ್ಠಾಳಿಗೆ ಸೇರಿದ್ದು, ಅವಳಿಗೇ ಕಟ್ಟಿ ಎಂದು ಹೇಳಿ ಹೋಗಿದ್ದಾಳೆ. ಭಾಗ್ಯಳ ಈ ನಿರ್ಧಾರಕ್ಕೆ ಆಕೆಯ ಅಮ್ಮ ವಿರೋಧ ವ್ಯಕ್ತಪಡಿಸಿದರೂ ಅತ್ತೆ ಕುಸುಮಾ ಸೊಸೆಯ ಪರ ನಿಂತಿದ್ದಾಳೆ. ಇದನ್ನು ನೋಡಿದ ತಾಂಡವ್​ಗೆ ಖುಷಿಯಾಗುವ ಬದಲು ಇಗೋ ಹರ್ಟ್​ ಆಗಿದೆ. ಭಾಗ್ಯಳಿಗೆ ಇಷ್ಟು ಧೈರ್ಯ ಎಲ್ಲಿಂದ ಬಂತು ಎಂದು ಪ್ರಶ್ನಿಸುತ್ತಿದ್ದಾನೆ. ತನ್ನ ಪ್ರೇಯಸಿ ಜೊತೆ ಮದ್ವೆಯಾದರೂ ಆ ಖುಷಿ ಮಾಯವಾಗಿದೆ. ಈಗಲೂ ಭಾಗ್ಯಳ ಬಗ್ಗೆಯೇ ಯೋಚನೆ ಮಾಡುತ್ತಿದ್ದಾನೆ.


ಇದು ಭಾಗ್ಯಲಕ್ಷ್ಮಿ ಸೀರಿಯಲ್ ಕಥೆಯಾದ್ರೆ ಇದೀಗ ಭಾಗ್ಯ ಪಾತ್ರಧಾರಿ ಸುಷ್ಮಾ ರಾವ್​ ಅವರು ಕುಂಭಮೇಳಕ್ಕೆ ಹೋಗಿ ಬಂದಿದ್ದಾರೆ.   ಕುಂಭಮೇಳಕ್ಕೆ ಹೊರಟಿದ್ದ ವಿಡಿಯೋ ಶೇರ್​ ಮಾಡಿದ್ದರು ನಟಿ. ಆದರೆ ಅಲ್ಲಿ ಪುಣ್ಯಸ್ನಾನ ಮಾಡಿ, ಅದರ ಬಗ್ಗೆ ಮಾಹಿತಿ ಕೊಡುವ ವಿಡಿಯೋಗಾಗಿ ಅಭಿಮಾನಿಗಳು ಕಾಯ್ತಿದ್ದಾರೆ. ಆದರೆ ನಟಿ, ಅಲ್ಲಿಂದ ಉತ್ತರ ಪ್ರದೇಶದ ಕಾನ್ಪುರಕ್ಕೆ ಹೋಗಿದ್ದು, ಅಲ್ಲಿ ಸುತ್ತಾಡಿದ್ದಾರೆ. ಇಂಟರ್​ನೆಟ್​ನಲ್ಲಿ ಝೂ ಬಗ್ಗೆ ನೋಡಿ ಅದರ ಟೈಮಿಂಗ್ಸ್​ ನೋಡಿ ಹೋದರೆ, ಅಲ್ಲಿರುವ ಟೈಮಿಂಗ್ಸ್​ಗಿಂತ ಮೊದಲೇ ಝೂ ಬಂದಾಗಿಹೋಗಿದೆ ಎಂದ ನಟ, ಕೊನೆಗೆ ನಾನಾರಾವ್​ ಪಾರ್ಕ್​ಗೆ ಹೋಗಿದ್ದಾರೆ.  ಅಲ್ಲಿರುವ ಕೆಲವೊಂದು ಮೂರ್ತಿಗಳ ಪರಿಚಯ ಮಾಡಿರುವ ನಟಿ, ಆ ಮೂರ್ತಿ ತಮ್ಮ ತಲೆಗೆ ಹೊಡೆದಂತೆ ಆ್ಯಕ್ಟ್​  ಮಾಡಿ ಅಭಿಮಾನಿಗಳನ್ನು ತಮ್ಮ ಎಂದಿನ ಹಾಸ್ಯದ ರೀತಿಯಲ್ಲಿ ರಂಜಿಸಿದ್ದಾರೆ. ಅರೆರೆ ಭಾಗ್ಯಕ್ಕಾ ಏನಾಯ್ತು ಎಂದು ಕಮೆಂಟಿಗರು ತಮಾಷೆ ಮಾಡುತ್ತಿದ್ದಾರೆ. ಮತ್ತೆ ಕೆಲವರು ತಾಳಿ ಬಿಚ್ಚಿಕೊಟ್ಟಿದ್ದಕ್ಕೆ ಆ ಯಪ್ಪಂಗೆ ಸಿಟ್ಟು ಬಂದಿದೆ ಎಂದಿದ್ದಾರೆ. 

ಮದ್ವೆ ಸೀನ್​ ಮಾಡಲ್ಲ ಎಂದು ಭಾಗ್ಯಲಕ್ಷ್ಮಿ ಶೂಟಿಂಗ್​ ಸೆಟ್​ನಲ್ಲೇ ಶ್ರೇಷ್ಠಾ ಕಣ್ಣೀರು! ಅಷ್ಟಕ್ಕೂ ಆಗಿದ್ದೇನು?


ಇನ್ನು ಸುಷ್ಮಾ ಕುರಿತು ಹೇಳುವುದಾದರೆ, ಇವರು ಚಿಕ್ಕಮಗಳೂರಿನ ಕೊಪ್ಪದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದಾರೆ. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಿಂದ ಹಿಂದಿಯಲ್ಲಿ ಪದವಿ ಪಡೆದಿದ್ದಾರೆ.  ಭರತನಾಟ್ಯ ಮತ್ತು ಕೂಚುಪುಡಿ ಕಲಾವಿದೆ. ನೃತ್ಯಕ್ಕಾಗಿ  1997ರಲ್ಲಿ  ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. 2005ರಲ್ಲಿ ನಟನೆಗಾಗಿಯೂ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. ಇವರಿಗೆ ಈಗ 38 ವರ್ಷ ವಯಸ್ಸು. ಸುಷ್ಮಾ ರಾವ್ ಎಸ್‌.ನಾರಾಯಣ್ ನಿರ್ದೇಶನದ ಭಾಗಗೀರಥಿ ಧಾರಾವಾಹಿಯಲ್ಲಿ ಹೇಮಾ ಪ್ರಭಾತ್ ಅವರ ತಂಗಿಯ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು. ನಂತರ ಯಾವ ಜನ್ಮದ ಮೈತ್ರಿ, ಗುಪ್ತಗಾಮಿನಿ, ಸೊಸೆ ತಂದ ಭಾಗ್ಯ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದರು.  ಇನ್ನು ಆ್ಯಂಕರ್​ ಆಗಿಯೂ ನಟಿ ಸಾಕಷ್ಟು ಫೇಮಸ್​ ಆಗಿದ್ದಾರೆ.  

ಕೆಲ ದಿನಗಳ ಹಿಂದೆ ತಮ್ಮ ಮತ್ತು ಶ್ರೇಷ್ಠಾ ಪಾತ್ರದ ಕುರಿತು ಮಾತನಾಡಿದ್ದ ಸುಷ್ಮಾ,   ಹಾಗೆ ನೋಡಿದ್ರೆ ಎರಡು ಮಕ್ಕಳ ತಂದೆಯನ್ನು ಪ್ರೀತಿ ಮಾಡಿರುವುದು ಶ್ರೇಷ್ಠಾಳ ತಪ್ಪೇನೂ ಅಲ್ಲ ಎನ್ನುತ್ತಲೇ ಅದಕ್ಕೆ ಸಮಜಾಯಿಷಿಯನ್ನೂ ಕೊಟ್ಟಿದ್ದರು. ಪಾಪ ಅವಳಿಗೆ ಲವ್​ ಮಾಡುವಾಗ ತಾಂಡವ್​ ಬಗ್ಗೆ ಗೊತ್ತಿರುವುದಿಲ್ಲ. ಆಮೇಲೆ ಗೊತ್ತಾಗತ್ತೆ. ಅವಳಾದ್ರೂ ಏನು ಮಾಡ್ತಾಳೆ. ಪ್ರೀತಿ ಕುರುಡು ಅಂತಾರಲ್ಲ ಹಾಗಾಗಿದೆ ಅವಳ ಪರಿಸ್ಥಿತಿ. ಲವ್​ ಮಾಡಿ ಆಗಿರುತ್ತೆ, ಆಮೇಲೆ ಏನೂ ಮಾಡುವ ಸ್ಥಿತಿಯಲ್ಲಿ ಇರಲ್ಲ.  ಆದರೆ, ಎಲ್ಲಾ ಗೊತ್ತಾದ ಮೇಲೆ ಅವಳು ಹಿಂದಕ್ಕೆ ಸರಿಯಬಹುದಿತ್ತು. ಮದುವೆ, ಮಕ್ಕಳು ಎಂದೆಲ್ಲಾ ತಿಳಿದ ಮೇಲೆ ತನ್ನದು ತಪ್ಪು ನಿರ್ಧಾರ ಎಂದು ತಿಳಿದುಕೊಳ್ಳಬೇಕಿತ್ತು. ಆದರೆ ಅವಳು ಹಠಕ್ಕೆ ಬಿದ್ದು ಮುಂದುವರೆದದ್ದು ತಪ್ಪು ಎಂದಿದ್ದರು. 
ಗಂಡನ ಕೈಗೆ ತಾಳಿ ಇಟ್ಟು, ಪತಿಯನ್ನು ಲವರ್​ಗೆ ಬಿಟ್ಟುಕೊಟ್ಟು ಕುಂಭಮೇಳಕ್ಕೆ ಹೊರಟ ಭಾಗ್ಯ: ನಟಿ ಹೇಳಿದ್ದೇನು ಕೇಳಿ..

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬರಿಗೈಯಲ್ಲಿ ಟಾಯ್ಲೆಟ್​ ತೊಳೆದ Bigg Boss ಡಾಗ್​ ಸತೀಶ್​​: ನಿಮ್ಮ ಮನೆಗೂ ಬೇಕಾದ್ರೆ ಬರ್ತಾರಂತೆ!
Karna: ಎಲ್ಲವೂ ಸರಿ ಹೋಗತ್ತೆ ಅಂದುಕೊಂಡಾಗ್ಲೇ ನಿಧಿಯ ಈ ನಿರ್ಧಾರ ಸರಿನಾ? ನಿತ್ಯಾ ಮುಂದೆ ಆಗಿದ್ದೇನು?