ಒಬ್ಬರು 'ಚಾರು ಯಾಕೆ ಅವರ ತಂದೆ ಹತ್ರ ಮಾತಾಡ್ತಾ ಇಲ್ಲ..' ಎಂದು ಕಾಮೆಂಟ್ ಮಾಡಿದ್ದರೆ ಇನ್ನೊಬ್ಬರು 'ರಾಮಜಿ ಸೀರಿಯಲ್ ಅಲ್ಲಿ ಕೆಲವೊಂದು ಸಂಬಂಧ ದಿಡೀರ್ ಅಂತ ಉದ್ರಕೊಂಡು ಬಿಡ್ತಾವೆ..' ಎಂದು ಪೋಸ್ಟ್ ಮಾಡಿದ್ದಾರೆ.
ಕಿಟ್ಟಿ ಕಾರಣಕ್ಕೆ ರಾಮಾಚಾರಿ ಜೈಲು ಸೇರಿಕೊಂಡಿದ್ದು ಗೊತ್ತೇ ಇದೆ. ರಾಮಾಚಾರಿಯನ್ನು ಈಗ ಮನಸಾರೆ ಪ್ರೀತಿಸುತ್ತಿರುವ ಚಾರುಗೆ ಜೈಲಿನಿಂದ ಹೇಗಾದರೂ ರಾಮಾಚಾರಿಯನ್ನು ಬಿಡಿಸಿಕೊಂಡು ಹೊರಗೆ ಕರೆದುಕೊಂಡು ಬರುವುದು ತುಂಬಾ ಮುಖ್ಯವಾದ ಕೆಲಸ. ಈ ನಿಟ್ಟಿನಲ್ಲಿ ಚಾರು ಪ್ರಯತ್ನ ನಡೆಯುತ್ತಿದೆ. ಆದರೆ, ಅದ್ಯಾಕೋ ಚಾರುಗೆ ಈ ಕೆಲಸದಲ್ಲಿ ಸದ್ಯಕ್ಕೆ ಸಕ್ಸಸ್ ಸಿಗುತ್ತಿಲ್ಲ. ಈ ಬೆಳವಣಿಗೆ ನೋಡಿ, ಅಥವಾ ಚಾರುಗೆ ಸಾಧ್ಯವಾಗದ ಈ ಬೆಳವಣಿಗೆ ನೋಡಿ ರಾಮಾಚಾರಿ ಸೀರಿಯಲ್ ಅಭಿಮಾನಿಗಳು ಬಗೆಬಗೆಯ ಕಾಮೆಂಟ್ ಹಾಕುತ್ತಿದ್ದಾರೆ.
ಕಿರುತೆರೆ ಪ್ರೇಕ್ಷಕರಿಗೆ, ಅದರಲ್ಲೂ ಮುಖ್ಯವಾಗಿ ರಾಮಾಚಾರಿ ಸೀರಿಯಲ್ ಪ್ರಿಯರಿಗೆ ಆದಷ್ಟು ಬೇಗ ರಾಮಾಚಾರಿ ಜೈಲಿಂದ ಹೊರಗೆ ಬರಬೇಕಿದೆ. ಏನೂ ಕೆಟ್ಟ ಕೆಲಸ ಮಾಡದ ರಾಮಾಚಾರಿ ಕಿಟ್ಟಿ ಮಾಡಿದ ರಾದ್ಧಾಂತಕ್ಕೆ ಜೈಲು ಸೇರಿಕೊಂಡಿದ್ದು ವೀಕ್ಷಕರಿಗೆ ಇಷ್ಟವಾಗಿಲ್ಲ. ಜತೆಗೆ, ರಾಮಾಚಾರಿ ಜೈಲಿಗೆ ಹೋಗಿರುವ ಕಾರಣಕ್ಕೆ ಚಾರು ಕಷ್ಟಪಡುತ್ತಿರುವುದನ್ನು ನೋಡಲಾಗುತ್ತಿಲ್ಲ. ಈ ಕಾರಣಕ್ಕೆ ವೀಕ್ಷಕರು ಸೋಷಿಯಲ್ ಮೀಡಿಯಾಗಳಲ್ಲಿ ವಿಭಿನ್ನ ಕಾಮೆಂಟ್ ಹಾಕುತ್ತಿದ್ದಾರೆ. ಕೆಲವು ಕಾಮೆಂಟ್‌ಗಳನ್ನು ನೋಡಿ ವೀಕ್ಷಕರ ಬಗೆಬಗೆಯ ಅಭಿಪ್ರಾಯಗಳನ್ನು ಅರಿತುಕೊಳ್ಳಿ...
'ಗೂಢಾಚಾರಿ-2' ಟೀಂ ಸೇರಿದ ಬಾಲಿವುಡ್ ಸ್ಟಾರ್; ತೆಲುಗು ನಟ ಅಡಿವಿಶೇಷ್ ಜೊತೆ ಇಮ್ರಾನ್ ಹಶ್ಮಿ
ಒಬ್ಬರು 'ಚಾರು ಯಾಕೆ ಅವರ ತಂದೆ ಹತ್ರ ಮಾತಾಡ್ತಾ ಇಲ್ಲ..' ಎಂದು ಕಾಮೆಂಟ್ ಮಾಡಿದ್ದರೆ ಇನ್ನೊಬ್ಬರು 'ರಾಮಜಿ ಸೀರಿಯಲ್ ಅಲ್ಲಿ ಕೆಲವೊಂದು ಸಂಬಂಧ ದಿಡೀರ್ ಅಂತ ಉದ್ರಕೊಂಡು ಬಿಡ್ತಾವೆ..' ಎಂದು ಪೋಸ್ಟ್ ಮಾಡಿದ್ದಾರೆ. ಮತ್ತೊಬ್ಬರು 'ಡ್ಯಾಡಿಗೆ ಹೇಳಿ ಆಚೆ ಕರ್ಕೊಂಡು ಬಾ ಚಾರು.. 'ಎಂದಿದ್ದರೆ ಮಗದೊಬ್ಬರು 'ಕಲಿಯುಗ ರಾಮಾಚಾರಿ, ಇದು ನ್ಯಾಯಾ ನೀತಿ ಅಂತ ಕೂತುಕೊಂಡರೆ ನಿನಗೆ ಅನ್ಯಾಯ ಆಗುತ್ತೆ, ಚಾರು ಹೇಳಿದ್ದು ಸರಿ, ಮೊದಲು jail ಇಂದ ಆಚೆ ಬಾ' ಎಂದಿದ್ದಾರೆ.
ಅಂಬರೀಷ್‌ಗಾಗಿ ಮನೆಯಲ್ಲಿ ಬಾರ್ ಓಪನ್ ಮಾಡಿದ್ರು ವಿಷ್ಣುವರ್ಧನ್; ದಿಗ್ಗಜರ ದರ್ಬಾರ್ ಹೇಗಿತ್ತು ನೋಡ್ರಿ!
'ಚಾರು ಆದಷ್ಟು ಬೇಗ ರಾಮಾಚಾರಿ ನ ಅಲ್ಲಿಂದ ಕರ್ಕೊಂಡು ಹೋಗು ಇಲ್ಲಾಂದ್ರೆ ಇನ್ನ ರಾಮಚಾರಿ ನಿನ್ನ ಕೈಗೆ ಸಿಗಲ್ಲ ನೋಡು, ಕೃಷ್ಣನಾಥರ ಜತೆ ನೇರ ಮಾತಾಡು..' ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ ಮತ್ತೊಬ್ಬರು 'ರಾಮಾಚಾರಿಗೆ ಆಧಾರ್ ಕಾರ್ಡ್ ಇಲ್ವಾ....???...ಆಧಾರ್ ಕಾರ್ಡ್ ಮೂಲಕ ಕಿಟ್ಟಿ ರಾಮಾಚಾರಿ ಬೇರೆ ಬೇರೆ ಅಂತಾ ತೋರಿಸಬಹುದಲ್ಲ.. 'ಎಂದು ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ ರಾಮಾಚಾರಿ ಜೈಲಿನಲ್ಲಿರುವುದು ಚಾರು ಹಾಗೂ ರಾಮಾಚಾರಿ ಮನೆಯವರಿಗೆ ಮಾತ್ರವಲ್ಲ, ವೀಕ್ಷಕರಿಗೂ ತಲೆನೋವು ತಂದಿದೆ ಎನ್ನಬಹುದು. ಇದಕ್ಕೆ ಪರಿಹಾರ ಆದಷ್ಟು ಬೇಗ ಸಿಗಲಿ ಎಂದು ಹಾರೈಸಲಾಗುತ್ತಿದೆ.
ಬೆಂಗಳೂರು ಸಿನಿಮೋತ್ಸವದಲ್ಲಿ ಪ್ರಶಸ್ತಿ ಬೇಟೆಗಿಳಿದ ಲೈನ್‌ಮ್ಯಾನ್; ರಘು ಶಾಸ್ತ್ರಿ ಚಿತ್ರ ಮ್ಯಾಜಿಕ್ ಮಾಡಬಹುದೇ?
https://www.instagram.com/reel/C3RsTUdP1ro/?igsh=MWY2ZG1xdnZzemo1bA==