ಸಿಹಿ ಕಹಿ ದಂಪತಿಗಳಿಗೆ 'ಆಪ್ತ ರಕ್ಷಕ'ರಾಗಿದ್ರು ಡಾ ವಿಷ್ಣುವರ್ಧನ್; ವೇದಿಕೆಯಲ್ಲಿ ನೆನೆದು ಭಾವುಕರಾದ ಚಂದ್ರು-ಗೀತಾ

By Shriram Bhat  |  First Published Feb 18, 2024, 11:34 PM IST

'ಜಾಕ್‌ಪಾಟ್ ಪ್ರೇಮೋತ್ಸವ'ದಲ್ಲಿ ಕರ್ನಾಟಕದ ಹೆಸರಾಂತ ಗಾನ ಕೋಗಿಲೆ  ಶ್ರೀಮತಿ ಬಿಆರ್ ಛಾಯಾ ಅವರನ್ನು ಸನ್ಮಾನಿಸಿದ ಅಪರೂಪದ ಕ್ಷಣಗಳನ್ನು ಪ್ರಸಾರ ಮಾಡಲಾಯಿತು. ಶ್ರೀಮತಿ ಬಿಆರ್ ಛಾಯಾ ಅವರು ಹಿನ್ನಲೆ ಗಾಯಕಿಯಾಗಿ ಸಂಗೀತ ಕ್ಷೇತ್ರದಲ್ಲಿ 40 ವರ್ಷಗಳನ್ನು ಪೂರೈಸಿದ್ದಾರೆ.


ಸ್ಟಾರ್ ಸುವರ್ಣ ವಾಹಿನಿಯು 'ವ್ಯಾಲಂಟೈನ್ಸ್ ಡೇ' ಪ್ರಯುಕ್ತ 'ಜಾಕ್‌ಪಾಟ್ ಪ್ರೇಮೋತ್ಸವ' ಎಂಬ ವಿಶೇಷ ಸಂಚಿಕೆಯನ್ನು ಇಂದು ಭಾನುವಾರ (18 February 2024) ಪ್ರಸಾರ ಮಾಡಿದೆ. ಇದರಲ್ಲಿ ಭಾಗಿಯಾಗಿದ್ದ ಸಿಹಿ ಕಹಿ ಚಂದ್ರು ಮತ್ತು ಗೀತಾ ದಂಪತಿಗಳು ತಮ್ಮ ಜೀವನದಲ್ಲಿ ನಡೆದ ಮರೆಯಲಾಗದ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ. ಕನ್ನಡದ ಸಾಹಸಸಿಂಹ ಖ್ಯಾತಿಯ ನಟ ಡಾ ವಿಷ್ಣುವರ್ಧನ್ ಹೆಸರನ್ನು ಸಿಹಿ ಕಹಿ ದಂಪತಿ ಹೇಳಿ ತಮ್ಮ ಹೃದಯ ಹಗುರ ಮಾಡಿಕೊಂಡಿದ್ದಾರೆ. 

ಹಾಗಿದ್ದರೆ, ಸುವರ್ಣ ವಾಹಿನಿಯ 'ಜಾಕ್‌ಪಾಟ್ ಪ್ರೇಮೋತ್ಸವ'ದಲ್ಲಿ ಸಿಹಿಕಹಿ ಚಂದ್ರು-ಗೀತಾ ದಂಪತಿಗಳು ಹೇಳಿದ್ದೇನು, ಯಾಕೆ ಅವರು ನಟ ವಿಷ್ಣುವರ್ಧನ್ ಅವರನ್ನು ಮನಸಾರೆ ಸ್ಮರಿಸಿದ್ದಾರೆ ಎಂಬುದನ್ನು ನೋಡೋಣ. ಚಂದ್ರು ಅವರದೇ ಮಾತುಗಳಲ್ಲಿ ಹೇಳುವುದಾದರೆ 'ನಾನು ಆಗೊಮ್ಮೆ ಅನಾರೋಗ್ಯಕ್ಕೆ ಒಳಗಾಗಿದ್ದೆ. ಡಾಕ್ಟರ್ ಬದುಕಿದ್ರೆ ಬದುಕಿದೆ ಹೋದ್ರೆ ಹೋದೆ' ಎಂದ್ರು. 

Tap to resize

Latest Videos

ಮುಂದೆ ಮಾತನ್ನು ಮುಂದುವರೆಸಿದ ಗೀತಾ ಅವರು 'ವಿಷ್ಣುವರ್ಧನ್ ಅವರು ದೇವರ ರೂಪದಲ್ಲಿ ಬಂದು ನಮ್ಮನ್ನ ಕಾಪಾಡಿದ್ರು' ಎಂದಿದ್ದಾರೆ. ಇಷ್ಟು ಹೇಳುತ್ತಲೇ ಚಂದ್ರು ಅವರು ಇಮೋಶನಲ್ ಆಗಿದ್ದರೆ ಗೀತಾ ಅವರು ಕಣ್ಣೀರು ಸುರಿಸುತ್ತ ಚಂದ್ರು ಎದೆಗೊರಗಿದರು. ಈ ದಂಪತಿಗಳು ಹೇಳಿದ ಮಾತನ್ನು ಕೇಳಿ ನಿರೂಪಕಿ ಅನುಪಮಾ ಗೌಡ ಭಾವನಾತ್ಕಕವಾಗಿ ಸ್ಪಂದಿಸಿದರು. 

ಅಂಬರೀಷ್‌ಗಾಗಿ ಮನೆಯಲ್ಲಿ ಬಾರ್ ಓಪನ್ ಮಾಡಿದ್ರು ವಿಷ್ಣುವರ್ಧನ್; ದಿಗ್ಗಜರ ದರ್ಬಾರ್ ಹೇಗಿತ್ತು ನೋಡ್ರಿ!

ಇನ್ನು, ಇಂದಿನ 'ಜಾಕ್‌ಪಾಟ್ ಪ್ರೇಮೋತ್ಸವ'ದಲ್ಲಿ ಕರ್ನಾಟಕದ ಹೆಸರಾಂತ ಗಾನ ಕೋಗಿಲೆ  ಶ್ರೀಮತಿ ಬಿಆರ್ ಛಾಯಾ ಅವರನ್ನು ಸನ್ಮಾನಿಸಿದ ಅಪರೂಪದ ಕ್ಷಣಗಳನ್ನು ಪ್ರಸಾರ ಮಾಡಲಾಯಿತು. ಶ್ರೀಮತಿ ಬಿಆರ್ ಛಾಯಾ ಅವರು ಹಿನ್ನಲೆ ಗಾಯಕಿಯಾಗಿ ಸಂಗೀತ ಕ್ಷೇತ್ರದಲ್ಲಿ 40 ವರ್ಷಗಳನ್ನು ಪೂರೈಸಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಅವರು ಮಾಡಿದ ಅನುಪಮ ಸಾಧನೆಗಾಗಿ 'ಪ್ರೇಮೋತ್ಸವ'ದ ವೇದಿಕೆಯಲ್ಲಿ ಗೌರವಾರ್ಪಣೆಯನ್ನು ಸಲ್ಲಿಸಲಾಗಿದೆ.

ನಾನು ಯಾವ್ದೇ ವಿಷ್ಯದಲ್ಲಿ ಚೀಟ್ ಮಾಡಲ್ಲ; ರಾಕಿಂಗ್ ಸ್ಟಾರ್ ಯಶ್ ಹೀಗೆ ಹೇಳಿದ್ಯಾಕೆ?

ಸುವರ್ಣ ವಾಹಿನಿಯು ತನ್ನ ವೀಕ್ಷಕರಿಗೆ ಯಾವತ್ತೂ ಹೊಸ ಹೊಸ ಕಾರ್ಯಕ್ರಮಗಳನ್ನು ನೀಡಲು ಉತ್ಸುಕವಾಗಿರುತ್ತದೆ. ಕನ್ನಡ ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ 'ಜಾಕ್ ಪಾಟ್ ಪ್ರೇಮೋತ್ಸವ' ವೇದಿಕೆಯಲ್ಲಿ ಕರಾವಳಿ 'ಚಂಡೆ'ಯ ನಾದಾಮೃತವನ್ನು ಸಹ ವೀಕ್ಷಕರಿಗೆ ಅಚ್ಚುಕಟ್ಟಾಗಿ ತೋರಿಸಲಾಗಿದೆ. ಈ ಮೂಲಕ ಸುವರ್ಣ ವಾಹಿನಿಯ ಪ್ರೇಮಿಗಳ ದಿನ, ಜಾಕ್ ಪಾಟ್ ಪ್ರೇಮೋತ್ಸವ ಸಂಗೀತಮಯವಾಗಿತ್ತು. 

ಕಾರಿನ ಪಕ್ಕದಲ್ಲಿದ್ದ ಮಕ್ಕಳ ಬಳಿ ಬಂದು 'ಚುಕ್ಕಿ ತಾರೆ' ಬರೆದ ಸಿಂಗರ್ ನವೀನ್ ಸಜ್ಜು!

ಕನ್ನಡಿಗರ ನೆಚ್ಚಿನ ರಾಪರ್, ಗಾಯಕ ಚಂದನ್ ಶೆಟ್ಟಿ, ಕಾಟೇರ ಸಿನಿಮಾ ಖ್ಯಾತಿಯ ಗಾಯಕ ಅನಿರುದ್ಧ ಶಾಸ್ತ್ರೀ, ಐಶ್ವರ್ಯ ರಂಗರಾಜನ್, ಚಿನ್ಮಯಿ ಅತ್ರೇಯಸ್, ಇಂಪನಾ ಜಯರಾಜ್, ಸುಹಾನಾ ಸೈಯದ್ ಮತ್ತು ಕಾರ್ತಿಕ್ ಶರ್ಮ ಸೇರಿದಂತೆ ಖ್ಯಾತ ಗಾಯಕ-ಗಾಯಕಿಯರು ಒಟ್ಟಾಗಿ ಸಂಗೀತದ ವರ್ಷಧಾರೆಯನ್ನು ಹರಿಸಿದ್ದಾರೆ. ಕರ್ನಾಟಕದ ಕಲಾ ರಸಿಕರು ಅವರೆಲ್ಲರ ಸುಶ್ರಾವ್ಯ ಸಂಗೀತದ ಸುಧೆಯನ್ನು ಕಿವಿ-ಮನಗಳಲ್ಲಿ ತುಂಬಿಕೊಂಡಿದ್ದಾರೆ. 

ಬೆಂಗಳೂರು ಸಿನಿಮೋತ್ಸವದಲ್ಲಿ ಪ್ರಶಸ್ತಿ ಬೇಟೆಗಿಳಿದ ಲೈನ್‌ಮ್ಯಾನ್; ರಘು ಶಾಸ್ತ್ರಿ ಚಿತ್ರ ಮ್ಯಾಜಿಕ್ ಮಾಡಬಹುದೇ?

ಈ ಸಂದರ್ಭದಲ್ಲಿ ಸುವರ್ಣ ವಾಹಿನಿಯ ಬಳಗದ ಜೊತೆಗೆ, ಅಲ್ಲಿ ನಿರೂಪಣೆ, ನಟನೆ ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವ ಕಲಾವಿದರು ಹಾಜರಿದ್ದರು. ಬಗೆಬಗೆಯ ಕಾರ್ಯಕ್ರಮಗಳ ಮೂಲಕ ಈ ಪ್ರೇಮೋತ್ಸವದ ಸಂಭ್ರಮದ ಕಳೆ ಹೆಚ್ಚುವಲ್ಲಿ ಅವರೆಲ್ಲರ ಕೊಡುಗೆಯೂ ಅಪಾರವಾಗಿದೆ. ಇವೆಲ್ಲವುಗಳ ಜೊತೆಗೆ, 40 ವರ್ಷಗಳ ತಮ್ಮ ಸುದೀರ್ಘ ದಾಂಪತ್ಯ ಜೀವನವನ್ನು ಪೂರೈಸಿರುವ 'ಬೊಂಬಾಟ್ ಭೋಜನ' ಖ್ಯಾತಿಯ ಸಿಹಿ ಕಹಿ ಚಂದ್ರು ಮತ್ತು ಗೀತಾ ಅವರು ತಮ್ಮ ಮದುವೆ ವಾರ್ಷಿಕೋತ್ಸವವನ್ನು ಪ್ರೇಮೋತ್ಸವ ವೇದಿಕೆಯಲ್ಲಿ ಸಂಭ್ರಮಿಸಿದ್ದಾರೆ. 

 

click me!