
ನಾಯಕನ ಮೇಲೆ ಆತ್ಮವೊಂದು ದ್ವೇಷ ಕಾರುತ್ತಿದೆ. ಆ ಆತ್ಮದಿಂದ ತನ್ನ ಪ್ರಿಯಕರನ ಕಾಪಾಡಿಕೊಳ್ಳುವುದು ರಾಯರ ಆಪ್ತೆ ಭಕ್ತೆಯಾಗಿರುವ ನಾಯಕಿ ಮೈತ್ರಿ ಕೆಲಸ. ಈ ಆತ್ಮಕ್ಕೆ ನಾಯಕನ ಮೇಲೆ ಯಾಕೆ ದ್ವೇಷವಿರುತ್ತದೆ. ಆ ಆತ್ಮಕ್ಕೂ ಹಾಗೂ ನಾಯಕನಿಗೂ ಏನು ಸಂಬಂಧ? ನಾಯಕನ ತಪ್ಪೇನು ಎಂಬ ಸೀರಿಯಲ್ಲೇ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿರೋ ನೂರು ಜನ್ಮಕೂ ಸೀರಿಯಲ್ ಕಥೆ. ಇದು ಹಿಂದಿಯ ಸುಹಗಾನ್ ಚುಡೈಲ್ ಎಂಬ ಧಾರಾವಾಹಿಯ ರೀಮೇಕ್ ಆಗಿದೆ. ಇದರಲ್ಲಿ ನಾಯಕಿ ಬೆಟ್ಟದ ತುದಿಯಲ್ಲಿ ಜೋತು ಬೀಳುವ ದೃಶ್ಯವಿದೆ. ಇದನ್ನು ನೋಡಿದ ಸೀರಿಯಲ್ ಪ್ರೇಮಿಗಳಿಗೆ ಅರೆ ಕ್ಷಣ ಎದೆ ಝಲ್ ಎನ್ನೋದು ಗ್ಯಾರೆಂಟಿ. ಶೂಟಿಂಗ್ ವೇಳೆ ಏನಾದ್ರೂ ಹೆಚ್ಚೂ ಕಮ್ಮಿಯಾದ್ರೆ ಏನ್ ಗತಿ? ಇಷ್ಟೊಂದು ರಿಸ್ಕ್ ಯಾಕೆ ತಗೋಬೇಕು ಎಂದೆಲ್ಲಾ ಸೀರಿಯಲ್ ಪ್ರೇಮಿಗಳು ಅಂದುಕೊಳ್ಳಬಹುದು.
ಆದರೆ ಅಸಲಿಯತ್ತು ಇಲ್ಲಿದೆ ನೋಡಿ. ಒಂದು ಸಿನಿಮಾ ಅಥವಾ ಸೀರಿಯಲ್ ಎಷ್ಟರಮಟ್ಟಿಗೆ ಸಕ್ಸಸ್ ಆಗುತ್ತದೆಯೆಂದು ಹೇಳುವುದು ಕಷ್ಟ. ಹಾಗೆಂದು ಯಾವುದೇ ನಿರ್ದೇಶಕರು ತಮ್ಮ ಸರ್ವ ಪ್ರಯತ್ನವನ್ನೂ ಮಾಡಲೇಬೇಕು. ಅದಕ್ಕಾಗಿಯೇ ವೀಕ್ಷಕರಿಗೆ ಇಷ್ಟವಾಗುವಂಥ ಹೊಸ ಹೊಸ ರೋಚಕತನವನ್ನು ತೋರಿಸಲಾಗುತ್ತದೆ. ವೀಕ್ಷಕರಿಗೆ ರೋಚಕತೆ ಮುಂದಿಡಲು ಇಂಥ ಕೆಲವು ಕಠಿಣ ದೃಶ್ಯಗಳಿಗೆ ನಟ-ನಟಿಯರು ಒಗ್ಗಿಕೊಳ್ಳಲೇಬೇಕು. ಅವರಿಗೆ ಈ ರೀತಿಯ ಶೂಟಿಂಗ್ ಮಾಡುವಾಗ ಎಲ್ಲ ರೀತಿಯ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆಯಾದರೂ ಇಂಥ ಆ್ಯಕ್ಷನ್ ಶೂಟಿಂಗ್ ಮಾಡುವುದು ಸುಲಭದ ಮಾತಲ್ಲ ಎನ್ನುವುದೂ ಅಷ್ಟೇ ದಿಟ.
ಗಂಡು ಎಂದ್ರೆ ಕೆಂಡಕಾರುವ ಝಾನ್ಸಿ ಹಾಟ್ ರೂಪ ನೋಡಿ! 50 ಕೋಟಿ ಒಡತಿ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ...
ಕೆಲವೊಂದು ಸೀನ್ಗಳನ್ನು ಬಹಳ ಶ್ರಮ ಪಟ್ಟು ತೆಗೆದರೆ, ಮತ್ತೆ ಕೆಲವನ್ನು ಇರುವಲ್ಲಿಯೇ ಸನ್ನಿವೇಶ ಕ್ರಿಯೇಟ್ ಮಾಡಿ ಶೂಟ್ ಮಾಡಲಾಗುತ್ತದೆ. ಅಂಥದ್ದೇ ಒಂದು ದೃಶ್ಯ ಬೆಟ್ಟದ ತುದಿಯ ಮೇಲಿನದ್ದು. ಹಲವು ಸೀರಿಯಲ್ಗಳಲ್ಲಿ ನಟನೋ, ನಟಿಯೋ ಅಥವಾ ಇನ್ನಾರೋ ಬೆಟ್ಟದ ತುದಿಗೆ ಹೋಗಿ ಮೇಲಿನಿಂದ ಕೆಳಕ್ಕೆ ನೋಡುವ ದೃಶ್ಯ ನೋಡಿದರೆ ವೀಕ್ಷಕರ ಮೈ ಝುಂ ಎನ್ನುತ್ತದೆ. ಅಬ್ಬಬ್ಬಾ ಅವರಿಗೆ ತಲೆ ತಿರುಗಿ ಬಿಟ್ಟರೆ ಗತಿಯೇನು ಎನ್ನಿಸುವುದು ಉಂಟು. ಒಂದು ಶೂಟಿಂಗ್ಗೆ ಅಷ್ಟೆಲ್ಲಾ ಶ್ರಮ ಪಡುತ್ತಾರಾ ಎಂದೂ ಅನ್ನಿಸುವುದು ಉಂಟು. ಆದರೆ ಅಸಲಿಗೆ ಎಲ್ಲಾ ಸಂದರ್ಭದಲ್ಲಿ ಬೆಟ್ಟ- ಗುಡ್ಡವನ್ನು ಹುಡುಕಿಯೇ ಶೂಟಿಂಗ್ ಮಾಡುವುದಿಲ್ಲ.
ಬದಲಿಗೆ ನಟರಿಗೆ ಎತ್ತರ ಪ್ರದೇಶದಲ್ಲಿ ನಿಲ್ಲಿಸಿ ಕೆಳಗೆ ಬೆಟ್ಟದ ತುದಿಯಲ್ಲಿ ನಿಂತಾಗ ನೋಡುವಂತೆ ಹೇಳಲಾಗುತ್ತದೆ. ಶೂಟಿಂಗ್ ಮಾಡುವ ಮನೆಗಳಲ್ಲಿಯೇ ಬೇಕಿದ್ದರೆ ಈ ದೃಶ್ಯವನ್ನು ಕ್ರಿಯೇಟ್ ಮಾಡಲಾಗುತ್ತದೆ. ಬೆಟ್ಟದ ತುದಿಯಲ್ಲಿ ಇರುವಂತೆ ಭಾಸವಾಗುವ ರೀತಿಯಲ್ಲಿ ನಟರು ಆ್ಯಕ್ಟ್ ಮಾಡಬೇಕು ಅಷ್ಟೇ. ಬಳಿಕ ಗ್ರೀನ್ ಅಥವಾ ಬ್ಲೂ ಸ್ಕ್ರೀನ್ ತಂತ್ರವನ್ನು ಬಳಸಿ ಅದನ್ನು ಬೆಟ್ಟಕ್ಕೆ ಜೋಡಿಸಿ, ನಟರು ಬೆಟ್ಟದ ಮೇಲೆ ಇರುವಂಥ ದೃಶ್ಯವನ್ನು ಕ್ರಿಯೇಟ್ ಮಾಡಲಾಗುತ್ತದೆ. ನೂರು ಜನ್ಮಕೂ ಸೀರಿಯಲ್ನಲ್ಲಿಯೂ ಇದನ್ನೇ ಬಳಸಲಾಗಿದೆ. ಇನ್ನು ಈ ಸೀರಿಯಲ್ ಕುರಿತು ಹೇಳುವುದಾದರೆ, 'ಗೀತಾ'ದಲ್ಲಿ ನಾಯಕನಾಗಿ ಕಾಣಸಿಕೊಂಡಿದ್ದ ಧನುಷ್ ಗೌಡ ಇಲ್ಲಿ ನಾಯಕ ಆಗಿದ್ದಾರೆ. ಮಿಸ್ ಮಂಗಳೂರು ಪಟ್ಟ ಮುಡಿಗೇರಿಸಿಕೊಂಡಿದ್ದ ಶಿಲ್ಪಾ ಕಾಮತ್ ನಾಯಕಿಯಾಗಿ ನಟಿಸಿದ್ದಾರೆ. ಈ ಧಾರಾವಾಹಿಯಲ್ಲಿ ನಾಯಕನನ್ನು ಕಾಡುವ ಆತ್ಮವಾಗಿ ಚಂದನಾ ಗೌಡ ಕಾಣಿಸಿಕೊಂಡಿದ್ದಾರೆ. ಅವರು ಈ ಹಿಂದೆ ಕನ್ಯದಾನ ಸೀರಿಯಲ್‌ನಲ್ಲಿ ನಟಿಸಿದ್ದರು. ಜೊತೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಮಹಾನಟಿ ರಿಯಾಲಿ ಶೋನಲ್ಲೂ ಭಾಗವಹಿಸಿದ್ದರು.
ಕಪ್ಪು ಹಚ್ಚಿದಷ್ಟೂ ಎಲ್ಲಾ ಕಡೆ ಬೆಳ್ಳಗಾಗತ್ತೆ- ಶೂಟಿಂಗ್ನಲ್ಲಿ ದೃಷ್ಟಿ ಪಡೋ ಕಷ್ಟ ನೋಡಿ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.