'ಅಮೃತಧಾರೆ' ಶೂಟಿಂಗ್ ವೇಳೆ ಭೂಮಿಕಾ ಸೀರೆಗೆ ಬೆಂಕಿ ಬಿದ್ದಾಗ ಏನಾಗಿತ್ತು? ಶೂಟಿಂಗ್ ಸೆಟ್ನಲ್ಲಿ ನಡೆದದ್ದೇನು? ತೆರೆಮರೆ ಕಥೆ ಏನು?
ತನಗೆ ಮಕ್ಕಳಾಗಲ್ಲ ಎಂದು ಕುತಂತ್ರಿ ಅತ್ತೆಯ ಮಾತು ಕೇಳಿ, ಗಂಡನನ್ನು ಬೇರೆ ಮದುವೆ ಮಾಡಿಸಲು ಹೊರಟಿದ್ದಳು ಭೂಮಿಕಾ. ಆದರೆ ಪತ್ನಿಯೇ ಸರ್ವಸ್ವ ಎಂದುಕೊಂಡಿರೋ ಗೌತಮ್ ಹಾಗೆ ಮಾಡಲು ಸಾಧ್ಯನಾ? ಆ ಮದುವೆಯಾಗಲು ಬಂದಿರುವ ಹುಡುಗಿಯ ಜೊತೆ ಮೊದಲೇ ಪ್ಲ್ಯಾನ್ ಮಾಡಿ ಸೀರಿಯಲ್ ವೀಕ್ಷಕರಿಗೆ ಟೆನ್ಷನ್ ಕೊಟ್ಟಿದ್ದ ಗೌತಮ್. ಮದುವೆಯಾಗಲು ರೆಡಿಯಾಗುವಂತೆ ಮಾಡಿ, ಕೊನೆಗೆ ಮದುವೆಗೆ ತಾಳಿ ಕಟ್ಟುವ ಸಮಯದಲ್ಲಿ ತನ್ನ ಪತ್ನಿ ಭೂಮಿಕಾಗೇ ಮರುಮಾಂಗಲ್ಯ ಮಾಡಿದ್ದ. ನೀವೇ ನನ್ನ ಸರ್ವಸ್ವ ಎನ್ನುವ ಮೂಲಕ ಅಬ್ಬಾ ಇದ್ದರೆ ಇಂಥ ಗಂಡ ಇರಬೇಕು ಎನ್ನುವಂಥ ಪಾತ್ರ ಮಾಡಿದ್ದ ಗೌತಮ್. ಅದಾದ ತಕ್ಷಣವೇ ಭೂಮಿಕಾಗೆ ತಲೆಸುತ್ತಿತು. ಅಲ್ಲಿಯೇ ಇದ್ದ ವೈದ್ಯೆ ಆಕೆ ಗರ್ಭಿಣಿ ಎಂದು ಹೇಳುವ ಮೂಲಕ ಎಲ್ಲರನ್ನೂ ಖುಷಿಗೊಳಿಸಿದ್ದಾರೆ. ಈಗೇನಿದ್ದರೂ ವಿಲನ್ಗಳಾಗಿರುವ ಶಕುಂತಲಾ, ಜೈದೇವ ಎಲ್ಲಾ ಸೇರಿ ಏನು ಮಾಡುತ್ತಾರೋ ನೋಡುವುದು ಒಂದೇ ಬಾಕಿ.
ಇದು ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಅಮೃತಧಾರೆ ಸೀರಿಯಲ್ ಕಥೆ. ಇದಕ್ಕೂ ಮುನ್ನ, ಕೆಲವು ಎಪಿಸೋಡ್ ಹಿಂದೆ ಭೂಮಿಕಾ ದೇವರ ಮನೆಯಲ್ಲಿ ಪೂಜೆ ಮಾಡುವಾಗ ಆಕೆಯ ಸೀರೆಯ ಸೆರಗಿಗೆ ಬೆಂಕಿ ತಗುಲಿತ್ತು. ಅದನ್ನು ಸುಧಾ ಬಂದು ಕೈಯಿಂದಲೇ ಆರಿಸಿದ್ದಳು. ಆಗಿನ್ನೂ ಸುಧಾ, ಗೌತಮ್ನ ತಂಗಿ ಎಂದು ತಿಳಿಯದ ಸಮಯ. ಆಕೆ ಕೆಲಸದವಳಾಗಿ ಬಂದಿದ್ದಳು. ಆ ಸಮಯದಲ್ಲಿ ಕೈಯಲ್ಲಿ ಬೆಂಕಿಯನ್ನು ಆರಿಸಿದ್ದರಿಂದ ಆಕೆಯ ಕೈಗೆ ಸಿಕ್ಕಾಪಟ್ಟೆ ಗಾಯಗಳಾಗಿದ್ದವು. ಅಂದಹಾಗೆ ಇಂಥ ದೃಶ್ಯಗಳು ಸಿನಿಮಾ, ಸೀರಿಯಲ್ಗಳಲ್ಲಿ ಮಾಮೂಲು. ನಾವು ನೋಡುವಾಗ ನಿಜಕ್ಕೂ ಬೆಂಕಿಯನ್ನು ಕೈಯಲ್ಲಿ ಆರಿಸಿದರು ಎಂದೇ ಅಂದುಕೊಳ್ಳುವ ಹಾಗೆ ಇರುತ್ತದೆ.
ಗಂಡನ ಜೊತೆ ವರ್ಷದಲ್ಲಿ 10 ದಿನ ಇರೋದೇ ಕಷ್ಟವಾಗಿದೆ: ಸಂಸಾರದ ಸುಖ-ದುಃಖ ಬಿಚ್ಚಿಟ್ಟ ನಟಿ ಛಾಯಾ ಸಿಂಗ್
ಆದರೆ, ನಿಜವಾಗಿಯೂ ಶೂಟಿಂಗ್‌ನಲ್ಲಿ ಮಾಡಿದ್ದೇನು ಎನ್ನುವ ವಿಡಿಯೋ ವೈರಲ್ ಆಗಿದೆ. ಇಲ್ಲಿ ಭೂಮಿಕಾಳ ಸೀರೆಯ ಸೆರಗಿಗೆ ಬೆಂಕಿ ಬಿದ್ದದ್ದು ನಿಜ. ಆದರೆ ಹಾಗೆ ಬೆಂಕಿ ಹಚ್ಚುವ ಮೊದಲು ಸೆರಗಿಗೆ ಒಂದು ರೀತಿಯ ಲಿಕ್ವಿಡ್ ಹಾಕುವುದನ್ನು ನೋಡಬಹುದು. ಆಗ ಅದನ್ನು ಮುಟ್ಟುವವರ ಕೈಗೂ ಹಚ್ಚಲಾಗಿರುತ್ತದೆ. ಆದ್ದರಿಂದ ಬೆಂಕಿ ತಗುಲಿದರೂ ಅದೇನೂ ಅಪಾಯ ಆಗುವುದಿಲ್ಲ. ಈ ರೀತಿಯಾಗಿ ಶೂಟಿಂಗ್ ಮಾಡಿರುವುದನ್ನು ಇದರಲ್ಲಿ ನೋಡಬಹುದು. ಸೆರಗಿಗೆ ಆ ಲಿಕ್ವಿಡ್ ಅನ್ನು ಹಚ್ಚುತ್ತಿರುವ ವಿಡಿಯೋ ಅನ್ನು ಖುದ್ದು ಭೂಮಿಕಾ ಅರ್ಥಾತ್ ನಟಿ ಛಾಯಾ ಸಿಂಗ್ ಶೇರ್ ಮಾಡಿಕೊಂಡಿದ್ದಾರೆ. ಸೀರಿಯಲ್ನಲ್ಲಿ ಆ ಸನ್ನಿವೇಶವನ್ನು ಸಕತ್ ಭಯಾನಕ ಹಾಗೂ ಟೆನ್ಷನ್ ರೀತಿಯಲ್ಲಿ ತೋರಿಸಲಾಗಿದ್ದರೆ, ಶೂಟಿಂಗ್ ಸೆಟ್ನಲ್ಲಿ ಬೆಂಕಿ ಬಿದ್ದ ತಕ್ಷಣ ಎಲ್ಲರೂ ಬಿದ್ದೂ ಬಿದ್ದೂ ನಗುವುದನ್ನು ನೋಡಬಹುದು.
ಭೂಮಿಕಾ ಅಂದರೆ ಛಾಯಾ ಸಿಂಗ್ ಅವರ ವಿಷಯಕ್ಕೆ ಬರುವುದಾದರೆ, ಅವರು ಸೋಷಿಯಲ್ ಮೀಡಿಯಾದಲ್ಲಿಯೂ ಸಕತ್ ಆ್ಯಕ್ಟೀವ್ ಇದ್ದಾರೆ. ಇದೀಗ ಅವರ ಫ್ಯಾನ್ಸ್ ಪೇಜ್ನಿಂದ ಛಾಯಾ ಸಿಂಗ್ ಮತ್ತು ಅವರ ನಿಜ ಜೀವನದ ಪತಿ ಕೃಷ್ಣ ಅವರ ರೊಮ್ಯಾಂಟಿಕ್ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದೆ. ಇದರಲ್ಲಿ ಕೃಷ್ಣ ಅವರು ತಮ್ಮ ಪತ್ನಿ ಛಾಯಾ ಕುರಿತು ಮಾತನಾಡಿದ್ದಾರೆ, ಜೊತೆಗೆ ಗುಲಾಬಿ ಹೂವಿನ ಗುಚ್ಛ ನೀಡಿ ಮತ್ತೊಮ್ಮೆ ಪ್ರಪೋಸ್ ಮಾಡಿದ್ದಾರೆ. ಇದರಿಂದ ಭಾವುಕರಾಗಿರುವ ಛಾಯಾ ಅವರು ಆನಂದ ಭಾಷ್ಪ ಹರಿಸಿದ್ದಾರೆ. ಜೊತೆಗೆ ಇಬ್ಬರೂ ಕೈ ಕೈ ಹಿಡಿದು ಡ್ಯಾನ್ಸ್ ಮಾಡಿದ್ದಾರೆ. ಇನ್ನು ಈ ಜೋಡಿಯ ಕುರಿತು ಹೇಳುವುದಾದರೆ, ಕೃಷ್ಣ ಅವರ ಜೊತೆ ಛಾಯಾ ಅವರ ಮದುವೆಯಾಗಿ 11 ವರ್ಷಗಳು ಕಳೆದಿವೆ. ಇನ್ಸ್ಟಾಗ್ರಾಮ್ನಲ್ಲಿ ಅವರು ಪತಿಯ ಜೊತೆ ಆಗಾಗ ಫೋಟೋ ಶೇರ್ ಮಾಡಿಕೊಳ್ಳುತ್ತಿರುತ್ತಾರೆ.
ಆ್ಯಕ್ಟಿಂಗ್ ಬರಲ್ಲ ಅಂತ ರಿಜೆಕ್ಟ್ ಮಾಡಿಬಿಟ್ರು, ನಾನ್ ಬಿಡ್ತೀನಾ? ಆ ದಿನಗಳ ನೆನಪಿಸಿಕೊಂಡ 'ಅಮೃತಧಾರೆ' ಭೂಮಿಕಾ!