BBK11: ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟ ಗೀತಾ ನಟಿ ಭವ್ಯಾ ಗೌಡ; ಮೊದಲು ಕಾಲಿಟ್ಟಿದ್ದೇ ನರಕಕ್ಕೆ!

Published : Sep 29, 2024, 06:51 PM ISTUpdated : Sep 29, 2024, 07:04 PM IST
BBK11: ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟ ಗೀತಾ ನಟಿ ಭವ್ಯಾ ಗೌಡ; ಮೊದಲು ಕಾಲಿಟ್ಟಿದ್ದೇ ನರಕಕ್ಕೆ!

ಸಾರಾಂಶ

ಗೀತಾ ಧಾರಾವಾಹಿ ಖ್ಯಾತಿಯ ಭವ್ಯಾ ಗೌಡ ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಸ್ಪರ್ಧಿಯಾಗಿ ಪ್ರವೇಶಿಸಿದ್ದಾರೆ. ಆದರೆ ಮೊದಲ ಹಂತದಲ್ಲೇ 'ನರಕ'ದ ಮನೆಗೆ ಹೋಗಿದ್ದಾರೆ. ಭವ್ಯಾಗೆ ಮುಂದೆ ಸ್ವರ್ಗ ಸಿಗುತ್ತದೆಯೇ? ನೋಡಬೇಕಿದೆ.

ಬೆಂಗಳೂರು (ಸೆ.29): ರಾಜ್ಯದಲ್ಲಿ ಗೀತಾ ಸೀರಿಯಲ್ ಮೂಲಕ ಮನೆ ಮಾತಾಗಿರುವ ಮುದ್ದು ಮುಖದ ಸುಂದರಿ ಭವ್ಯಾ ಗೌಡ ಅವರು ಇದೀಗ ಕನ್ನಡ ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿಯಾಗಿ ದೊಡ್ಡಮನೆಗೆ ಕಾಲಿಟ್ಟಿದ್ದಾರೆ. ಮೊದಲ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಬಂದಿರುವ ಅಪ್ಸರೆಯಂತಿರುವ ಭವ್ಯಾ ಗೌಡ ಮೊದಲನೆಯದಾಗಿ ನರಕಕ್ಕೆ ಕಾಲಿಟ್ಟಿದ್ದಾಳೆ.

ಹೌದು, ಇಷ್ಟು ದಿನ ಕಾತರದಿಂದ ಕಾಯುತ್ತಿದ್ದ ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭವಾಗಿದೆ. ಯಾರಾರು ಬಿಗ್ ಬಾಸ್ ಮನೆಗೆ ಬರುತ್ತಾರೆ ಎಂದು ಕಾತರದಿಂದ ಕಾಯುತ್ತಿದ್ದ ವೀಕ್ಷಕರಿಗೆ ಇದೀಗ ಯಾರು ಸ್ಪರ್ಧಿಗಳು ಎಂಬುದು ರಿವೀಲ್ ಆಗುತ್ತಿದೆ. ಇಂದು ರಾತ್ರಿ 11 ಗಂಟೆಯೊಳಗೆ ಬಿಗ್ ಬಾಸ್ ಮನೆಯೊಳಗೆ ಸೇರುವ ಅಭ್ಯರ್ಥಿಗಳು ಯಾರಾರು ಎಂಬ ಸತ್ಯಾಂಶ ರಿವೀಲ್ ಆಗಲಿದೆ. ಇನ್ನು ಮೊದಲ ಕಂಟೆಸ್ಟೆಂಟ್ ಆಗಿರುವ ಭವ್ಯಾ ಗೌಡ ಅವರು ಎಂಟ್ರಿ ಕೊಟ್ಟಿದ್ದು, ಭಾರಿ ಸಂತಸವಾಗಿದೆ. ಗೀತಾ ಸೀರಿಯಲ್ ಮೂಲಕ ಮನೆ ಮಾತಾಗಿರುವ ಮುದ್ದು ಸುಂದರಿ ಇದೀಗ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವುದಕ್ಕೆ ವೀಕ್ಷಕರು ಖುಷಿಯಾಗಿದ್ದಾರೆ.

BBK 11: ಮಗುವಿನಿಂದ ಬಂದ ಅದೃಷ್ಟ: ಬಿಗ್ ಬಾಸ್ ಮನೆಗೆ ಟಿಕ್‌ಟಾಕ್ ಸ್ಟಾರ್ ಧನರಾಜ್ ಆಚಾರ್ಯ ಎಂಟ್ರಿ..!

ನರಕಕ್ಕೆ ಕಾಲಿಟ್ಟ ಭವ್ಯಾ ಗೌಡಗೆ ಯಾವ ಮನೆ ಸಿಗುತ್ತೆ?
ಬಿಗ್ ಬಾಸ್ ಕನ್ನಡ ಸೀಸನ್ 11ಕ್ಕೆ ಸ್ಪರ್ಧಿಯಾಗಿ ಮನೆಯೊಳಗೆ ಹೋಗುವಾಗ ಅವರೊಂದಿಗೆ ಮತ್ತೊಬ್ಬ ಹಿರಿಯ ಧಾರಾವಾಹಿ ನಟಿ ಯಮುನಾ ಅವರು ಕೂಡ ಜಂಟಿಯಾಗಿ ಮನೆ ಪ್ರವೇಶ ಮಾಡಿದ್ದಾರೆ. ಆದರೆ, ಇಬ್ಬರು ಒಟ್ಟಿಗೆ ಮನೆಯೊಳಗೆ ಹೋದರೆ, ಯಮುನಾ ಅವರು ಸೀದಾ ಸ್ವರ್ಗಕ್ಕೆ ಹೋಗಿದ್ದಾರೆ. ಇನ್ನು ಮನೆಯೊಳಗೆ ಹೋದ ಭವ್ಯಾ ಗೌಡ ಎಂಟ್ರಿ ಕೊಟ್ಟ ತಕ್ಷಣವೇ ನರಕವನ್ನು ನೋಡಲು ನರಕದ ಮನೆಯೊಳಗೆ ಹೋಗಿದ್ದಾಳೆ. ಹಾಗಾದರೆ, ಅಪ್ಸರೆಯಂತಿರುವ ಭವ್ಯಾಗೌಡಗೆ ಸ್ವರ್ಗವಾಸಿ ಆಗುತ್ತಾ ಅಥವಾ ನರಕಕ್ಕೆ ಬಂದು ಸೇರುತ್ತಾರಾ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ಸಿಂಗಲ್ ಇರೋ ಭವ್ಯಾ ಗೌಡ ಮಿಂಗಲ್ ಆಗ್ತಾರಾ?
ಇನ್ನು ಬಿಗ್ ಬಾಸ್ ಮನೆಯಲ್ಲಿ ಸಿಂಗಲ್ ಆಗಿ ಹೋಗಿದ್ದ ಅನೇಕರು ಮಿಂಗಲ್ ಆಗಿ ಬಂದಿರುವ ಉದಾಹರಣೆಗಳಿವೆ. ಇದೀಗ ಭವ್ಯಾ ಗೌಡ ಸಿಂಗಲ್ ಆಗಿ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡಿದ್ದಾಳೆ. ಇನ್ನು ಹಲವು ಮೋಸ್ಟ್ ಬ್ಯಾಚುಲರ್ ಕಂಟೆಸ್ಟೆಂಟ್‌ಗಳು ಬಿಗ್ ಬಾಸ್ ಮನೆಯೊಳಗೆ ಹೋಗಲಿದ್ದಾರೆ. ಆಗ, ಭವ್ಯಾ ಗೌಡ ಕೂಡ ಸಿಂಗಲ್ ಆಗಿರುವವಳು ಮಿಂಗಲ್ ಆಗುತ್ತಾಳಾ? ಎಂಬುದನ್ನು ಕಾದು ನೋಡಬೇಕಿದೆ. ಇತ್ತೀಚಿನ ಕೆಲವು ಬಿಗ್ ಬಾಸ್ ಸೀಸನ್‌ನಗಳಲ್ಲಿ ದೊಡ್ಮನೆಯಲ್ಲಿ ಲವರ್ ರೀತಿಯಲ್ಲಿ ಜೋಡಿಯಾದರೆ ಒಂದಷ್ಟು ವಾರಗಳು ಉಳಿದುಕೊಳ್ಳಬಹುದು ಎಂಬ ನಂಬಿಕೆ ಬಂದಿದೆ. ಈ ಅಸ್ತ್ರವನ್ನು ಪ್ರತಿ ಸೀಸನ್‌ನಲ್ಲಿಯೂ ಕೆಲವರು ಪಾಲನೆ ಮಾಡುತ್ತಿದ್ದಾರೆ. ಆದರೆ, ಕೆಲವು ಜೋಡಿಗಳು ಬಿಗ್ ಬಾಸ್ ಮನೆಯಲ್ಲಿ ಲವ್ ಮಾಡಿ ಹೊರಗೆ ಬಂದು ಮದುವೆ ಆದವರೂ ಇದ್ದಾರೆ.

ಬಿಗ್‌ಬಾಸ್ ಎಂಟ್ರಿ ಪ್ರೋಮೋದಲ್ಲಿಯೇ ಅಚ್ಚರಿ ವಿಷಯ ಹಂಚಿಕೊಂಡ ಚೈತ್ರಾ ಕುಂದಾಪುರ!

ಗಗನಸಖಿ ಕನಸು ಕಂಡಿದ್ದ ಭವ್ಯಾ ಆಗಿದ್ದು ನಟಿ:
ನಟಿ ಭವ್ಯಾ ಗೌಡ ಅವರು ಗಗನಸಖಿ ಆಗಬೇಕು ಎಂಬ ಗುರಿಯನ್ನು ಹೊಂದಿದ್ದರು. ಆದರೆ, ಟಿಕ್ ಟಾಕ್ ಆಪ್ ಇರುವ ಸಂದರ್ಭದಲ್ಲಿ ಹಲವು ವಿಡಿಯೋಗಳಿಗೆ ಲಿಪ್‌ಸಿಂಕ್ ಮಾಡಿ ಒಳ್ಳೊಳ್ಳೆಯ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದರು. ಇದರಿಂದ ಲಕ್ಷಾಂತರ ಫಾಲೋವರ್ಸ್ ಕೂಡ ಹೊಂದಿದ್ದಳು. ಆದರೆ, ಟಿಕ್ ಟಾಕ್ ನಿಷೇಧದ ಬೆನ್ನಲ್ಲಿಯೇ ಹೆಚ್ಚು ಆಕ್ಟೀವ್ ಆಗಿರಲಿಲ್ಲ. ಒಂದು ಪ್ರಯತ್ನವಿರಲಿ ಎಂದು ಧಾರಾವಾಹಿಗೆ ಆಡಿಷನ್ ಕೊಟ್ಟಾಗ ಸೆಲೆಕ್ಟ್ ಆಗಿದ್ದಾಳೆ. ಇದಾದ ನಂತರ ಒಂದೆರೆಡು ಧಾರಾವಾಹಿಗಳಲ್ಲಿ ನಟಿಸಿ ಕನ್ನಡಿಗರ ಮೆಚ್ಚುಗೆ ಗಳಿಸಿದ್ದಾಳೆ. ಬಿಕಾಂ ಮಾಡಿರುವ ಭವ್ಯಾ ಗೌಡ ನಟಿಯಾಗಿ ಮಿಂಚುತ್ತಾ ಇದೀಗ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾಳೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare Serial: ಗೌತಮ್-ಭೂಮಿಕಾ ಜೀವನ ಸರಿಮಾಡೋಕೆ ಯಾರು ಬರಬೇಕೋ ಅವ್ರು ಬಂದ್ರು; ಕೇಡಿಗಳಿಗೆ ಮಾರಿಹಬ್ಬ
Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?