
ಬಿಗ್ ಬಾಸ್ (Bigg Boss) ಮನೆಯಲ್ಲಿ ಅಶ್ವಿನಿ ಗೌಡ (Ashwini Gowda) ಹಾಗೂ ಗಿಲ್ಲಿ ನಟ ಹಾವು – ಮುಂಗುಸಿಯಂತೆ ಕಚ್ಚಾಡ್ತಾರೆ. ಗಿಲ್ಲಿ ಅಂದ್ರೆ ಮೂಗು ಉದ್ದ ಮಾಡುವ ಅಶ್ವಿನಿ ಒಂದ್ಕಡೆಯಾದ್ರೆ ಕಾಲೆಳೆದು ಅಶ್ವಿನಿಯನ್ನು ಜಗಳಕ್ಕೆ ಎಳೆಯೋ ಗಿಲ್ಲಿ ಇನ್ನೊಂದ್ಕಡೆ. ಪ್ರತಿಯೊಬ್ಬರ ಕ್ಯಾರೆಕ್ಟರ್ ಚೆನ್ನಾಗಿ ತಿಳಿದುಕೊಂಡಿರುವ ಗಿಲ್ಲಿ ನಟ, ಹಾಸ್ಯ ಬೆರೆಸಿ ಸದಾ ತಮಾಷೆ ಮಾಡ್ತಿರುತ್ತಾರೆ. ಬಿಗ್ ಬಾಸ್ ಮನೆಯಲ್ಲಿ ಈ ವಾರ ಸಾಕಷ್ಟು ಘಟನೆ ನಡೆದಿದೆ. ಅದ್ರಲ್ಲಿ ಅಶ್ವಿನಿ ಗೌಡ ಮುನಿಸು, ನಾನು ಮನೆಯಿಂದ ಹೊರ ಹೋಗ್ತೇನೆ ಅಂತ ಬಾಗಿಲು ಬಳಿ ಹೋಗಿದ್ದು, ಉಪವಾಸ ಇದ್ದಿದ್ದು ಎಲ್ಲವೂ ಚರ್ಚೆಗೆ ಬಿಗ್ ಟಾಪಿಕ್. ವೀಕೆಂಡ್ ನಲ್ಲಿ ಏನಾಗುತ್ತೆ? ಕಿಚ್ಚ ಸುದೀಪ್ ಪ್ರಶ್ನೆಗೆ ಅಶ್ವಿನಿ ಹೇಗೆ ಉತ್ತರ ನೀಡ್ತಾರೆ ಅಂತ ಗಿಲ್ಲಿ ನಟ ತೋರಿಸಿದ್ದಾರೆ.
ರಿಷಿ ಗೌಡ ಹಾಗೂ ರಘು ಮುಂದೆ ತಮ್ಮ ಆಕ್ಟಿಂಗ್ ಸ್ಕಿಲ್ಸ್ ತೋರಿಸಿದ್ದಾರೆ ಗಿಲ್ಲಿ. ʻʻಎಲ್ಲೋ ಒಂದ್ಕಡೆʼʼ ಅಂತ ಮಾತು ಶುರು ಮಾಡುವ ಗಿಲ್ಲಿ, ತಪ್ಪು ಅಂತ ಗೊತ್ತಾಗ್ಲಿಲ್ಲ ಅಣ್ಣ ಅಂತ ಮಧ್ಯೆ ಮಧ್ಯೆ ಕೈ ಆಕ್ಟಿಂಗ್ ಕೂಡ ಮಾಡ್ತಾರೆ. ನನಗೆ ಈಗ ಅರಿವಾಯ್ತು, ಮಾತನಾಡೋ ಭರದಲ್ಲಿ, ಮಾತಾಡೋ ವೇಗದಲ್ಲಿ ಎಲ್ಲೋ ಒಂದ್ಕಡೆ ನಾನು ತಪ್ಪು ಮಾಡಿದಿನಿ ಎನ್ನುವ ಗಿಲ್ಲಿ, ಸುದೀಪ್ ಏನು ಪ್ರಶ್ನೆ ಕೇಳ್ಬಹುದು ಅನ್ನೋದನ್ನೂ ಗೆಸ್ ಮಾಡಿದ್ದಾರೆ.
ಕರ್ಣನ ಪ್ರೇಯಸಿ ನಿಧಿಗೆ ಬಂಪರ್, ಮೊದಲ ಬಾರಿ ಸಿನಿಮಾ ಮಾಡ್ತಿದ್ದಾರೆ ಭವ್ಯಾ ಗೌಡ
ಅಶ್ವಿನಿ ಅವ್ರೆ ನೀವ್ಯಾಕೆ ಮನೆಯಿಂದ ಹೋಗ್ತೇನೆ ಅಂದ್ರಿ ಅಂತ ಕಿಚ್ಚ ಸುದೀಪ್ ಪ್ರಶ್ನೆ ಕೇಳಿದ್ರೆ, ಅದಕ್ಕೆ ಅಶ್ವಿನಿ ಏನು ಉತ್ತರ ನೀಡ್ತಾರೆ ಎಂಬುದನ್ನೂ ಗಿಲ್ಲಿ ತೋರಿಸಿದ್ದಾರೆ. ಅಣ್ಣಾ, ಎಲ್ಲೋ ಒಂದ್ಕಡೆ, ನನಗೆ ರಿಗ್ರೆಟ್ ಫೀಲ್ ಆಯ್ತು ಅಣ್ಣಾ, ನನಗೆ ಬ್ಯಾಕ್ ಪೇನ್ ಇದ್ದಿದ್ದರಿಂದ ಮನೆಯಿಂದ ಆಚೆ ಹೋಗಿ ಸರ್ಜರಿ ಮಾಡಿಸ್ಕೊಂಡು ಬರಬೇಕು ಅಂದ್ಕಂಡಿದ್ದೆ. ನನಗೆ ಅನ್ನಿಸ್ತು ಆಮೇಲೆ, ನಾನ್ಯಾಕೆ ಮನೆಯಿಂದ ಹೊರಗೆ ಹೋಗಬೇಕು, ನಂದು ತಪ್ಪೇ ಇಲ್ವಲ್ಲ ಅಂತ ನನಗೆ ಆಮೇಲೆ ಅನ್ನಿಸ್ತು ಅಂತಾರೆ.
ನನಗೆ 2ನೇ ಮದುವೆಯಾಗಿ 2 ವರ್ಷವಾಯ್ತು; ಗಂಡನ ಬಗ್ಗೆ Naa Ninna Bidalaare Serial ಕೋಳಿ ರಮ್ಯ ಮಾತು
ಅಷ್ಟೇ ಅಲ್ಲ, ಮತ್ತೆ ಆ ಟೈಂನಲ್ಲಿ ಯಾಕೆ ಹಾಗೆ ಮಾಡಿದ್ರಿ ಅಂತ ಸುದೀಪ್ ಪ್ರಶ್ನೆ ಕೇಳಿದ್ರೆ, ಇಲ್ಲ ಅಣ್ಣ ಎಲ್ಲೋ ಒಂದ್ಕಡೆ ಮಾತಾಡೋ ಭರದಲ್ಲಿ ಹೇಳ್ಬಿಟ್ಟೆ ನಾನು, ಗೊತ್ತಾಗಿಲ್ಲ ಅಣ್ಣಾ ಅಂತ ಅಶ್ವಿನಿ ಹೇಳ್ತಾರಂತೆ. ಇಷ್ಟಕ್ಕೇ ಗಿಲ್ಲಿ ತಮಾಷೆ ನಿಲ್ಲೋದಿಲ್ಲ. ಕಿಚ್ಚ ಸುದೀಪ್, ಬಿಗ್ ಬಾಸ್ ಗೆ ಡೋರ್ ಓಪನ್ ಮಾಡುವಂತೆ ಆದೇಶ ನೀಡ್ತಾರೆ. ಈಗ ಅಶ್ವಿನಿ ಹೋಗ್ತಾರಾ ನೋಡೋಣ, ಅಶ್ವಿನಿ ಅವ್ರೆ ಡೋರ್ ಓಪನ್ ಆಗಿದೆ, ಹೊರಡಿ ಎಂದಾಗ, ಅಶ್ವಿನಿ, ಅಣ್ಣಾ, ಎಲ್ಲೋ ಒಂದ್ಕಡೆ ನಾನು ಈಗ ಮನಸ್ಸು ಚೇಂಜ್ ಮಾಡ್ಕೊಂಡಿದ್ದೀನಿ ಅಣ್ಣಾ ಹೋಗ್ತೇನೆ ಎಂದ ತಕ್ಷಣ ಹೋಗೋಕೆ ಆಗಲ್ಲ, ಇರುತ್ತೇನೆ ಎಂದ ತಕ್ಷಣ ಇರೋದಕ್ಕೆ ಆಗೋದಿಲ್ಲ. ಅದನ್ನು ಜನ ತೀರ್ಮಾನ ಮಾಡ್ತಾರೆ ಅಂತ ಅಶ್ವಿನಿ ಡೈಲಾಗ್ ಹೇಳಿದ್ದಾರೆ ಗಿಲ್ಲಿ. ಅಶ್ವಿನಿ ಜನರನ್ನು ಹೇಗೆ ಕ್ಷಮೆ ಕೇಳ್ತಾರೆ ಅನ್ನೋದನ್ನೂ ಗಿಲ್ಲಿ ತೋರಿಸಿದ್ದಾರೆ.
ಗಿಲ್ಲಿ ಡೈಲಾಗ್ ಗೆ ರಿಷಿ ಗೌಡ ಬಿದ್ದು ಬಿದ್ದು ನಗ್ತಿದ್ರೆ ರಘು ಹೌದು, ನಿಜ, ಇದು ಬರುತ್ತೆ ಎನ್ನುತ್ತಿದ್ದಾರೆ. ವಿಡಿಯೋ ನೋಡಿದ ಫ್ಯಾನ್ಸ್, ಮಹಾನ್ ಕಲಾವಿದ ಗಿಲ್ಲಿ ಎನ್ನುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.