
ಬಿಬಿಕೆ 12 (BBK 12)ರ ಸ್ಪರ್ಧಿ ಮಾಳು ನಿಪನಾಳ (Malu Nipanala) ಮ್ಯೂಸಿಕ್ ವಿಡಿಯೋದಿಂದ್ಲೇ ಪ್ರಸಿದ್ಧಿಗೆ ಬಂದವರು. ಹಾಡನ್ನು ಅವರೇ ಬರೆದು, ಹಾಡಿ, ಅದನ್ನು ವಿಡಿಯೋ ಮಾಡಿ ಜನ ಮೆಚ್ಚುಗೆ ಗಳಿಸಿದ್ದಾರೆ. ಬಿಗ್ ಬಾಸ್ ಮನೆ ಪುಟ್ಟಿ ಅಂತಲೇ ಪ್ರಸಿದ್ಧಿ ಪಡೆದಿರುವ ರಕ್ಷಿತಾ ಈಗ ಮಾಳು ಹಿಂದೆ ಬಿದ್ದಿದ್ದಾರೆ. ನಿಮ್ಮ ವಿಡಿಯೋ ಸಾಂಗ್ ನಲ್ಲಿ ನನಗೆ ಅವಕಾಶ ನೀಡಿ ಅಂತ ಮಾಳುಗೆ ರಿಕ್ವೆಸ್ಟ್ ಮಾಡಿದ್ದಾರೆ ರಕ್ಷಿತಾ.
ಬಿಗ್ ಬಾಸ್ ಮನೆಯಲ್ಲಿ ಮಾಳು ಹಾಗೂ ರಕ್ಷಿತಾ ಬಾಂಡಿಂಗ್ ಚೆನ್ನಾಗಿದೆ. ಈಗ ಇವರಿಬ್ಬರ ಚರ್ಚೆಯೊಂದು ವೈರಲ್ ಆಗಿದೆ. ಮಾಳು ಬಳಿ ಬರುವ ರಕ್ಷಿತಾ, ನಿಮ್ಮ ಸಾಂಗ್ ನಲ್ಲಿ ನನ್ನನ್ನು ಹೀರೋಯಿನ್ ಮಾಡಿ ಅಂತ ಕೇಳಿಕೊಂಡಿದ್ದಾರೆ. ಇದಕ್ಕೆ ಮಾಳು, ನೀನು ನನ್ನ ತಂಗಿ ಅಂತಾರೆ. ಪಟ್ಟು ಬಿಡದ ರಕ್ಷಿತಾ, ಬಿಗ್ ಬಾಸ್ ಮನೆಯಲ್ಲಿ ನಾನು ನಿಮ್ಮ ತಂಗಿ. ಸಾಂಗ್ ನಲ್ಲಿ ಹೀರೋಯಿನ್. ನನಗೆ ಅವಕಾಶ ನೀಡಿ ಅಂತಾರೆ. ಅಲ್ಲೇ ಇದ್ದ ರಘು ಕೂಡ ತನಗೂ ಅವಕಾಶ ನೀಡುವಂತೆ ಮಾಳು ಅವರನ್ನು ಕೇಳಿದ್ದಾರೆ. ಎಲ್ಲರಿಗೂ ಯಸ್ ಅಂತ ಮಾಳು ಹೇಳಿದ್ರೆ, ರಕ್ಷಿತಾ ಮಾತ್ರ ಅಲ್ಲಿಯೇ ರಘು ಕಾಲೆಳೆದಿದ್ದಾರೆ. ನನಗೆ ಹೀರೋಯಿನ್ ಸ್ಥಾನ ನೀಡಿ, ರಘುಗೆ ನನ್ನ ಅಪ್ಪನ ಕ್ಯಾರೆಕ್ಟರ್ ನೀಡಿ ಎಂದಿದ್ದಾರೆ. ಇದನ್ನು ಕೇಳಿದ ರಘು, ರಕ್ಷಿತಾ ಮೇಲೆ ಹುಸಿ ಮುನಿಸಿ ತೋರಿಸಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಸೀರಿಯಲ್, ಸಿನಿಮಾದಿಂದ ಒಂದಿಷ್ಟು ಮಂದಿ ಬಂದಿದ್ರೂ ರಕ್ಷಿತಾ, ರಘು ಬೇರೆ ಕ್ಷೇತ್ರದವರು. ಇನ್ನು ಮಾಳು ಕೂಡ ಭಾಷೆ ಕಾರಣಕ್ಕೆ ಭಿನ್ನವಾಗಿ ನಿಲ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಭಿನ್ನ ಮಾತಿನ ಮೂಲಕವೇ ಸಾಕಷ್ಟು ಸುದ್ದಿ ಮಾಡಿದ್ದ ರಕ್ಷಿತಾ ತುಂಬಾ ದಿನ ಬಿಗ್ ಬಾಸ್ ಮನೆಯಲ್ಲಿರೋದಿಲ್ಲ ಅಂತ್ಲೇ ಅನೇಕರು ಅಂದ್ಕೊಂಡಿದ್ರು. ಆದ್ರೆ ಎಲ್ಲ ಲೆಕ್ಕಾಚಾರ ಉಲ್ಟಾ ಆಗಿದೆ. ಬಿಗ್ ಬಾಸ್ ಮನೆಯಲ್ಲಿ 50 ದಿನ ಪೂರೈಸಿರುವ ರಕ್ಷಿತಾ, ಅಶ್ವಿನಿ ಗೌಡರಂತ ಹುಲಿಯನ್ನೇ ಎದುರು ಹಾಕಿಕೊಂಡಿದ್ದಾರೆ. ಗಿಲ್ಲಿ ಜೊತೆ ಭರ್ಜರಿ ಆಟ ಆಡ್ತಿರುವ ರಕ್ಷಿತಾಗೆ ಹೊರಗೆ ಸಿಕ್ಕಾಪಟ್ಟೆ ಫ್ಯಾನ್ಸ್ ಇದ್ದಾರೆ. ಪ್ರತಿ ವಾರ ನಾಮಿನೇಟ್ ಆದ್ರೂ ಮೊದಲು ಸೇವ್ ಆಗ್ತಿರುವ ರಕ್ಷಿತಾ ಬಗ್ಗೆ ಸುಧಿ ಕೂಡ ತಮ್ಮ ಅಭಿಪ್ರಾಯ ಬದಲಿಸಿದ್ದಾರೆ. ಮನೆಯಿಂದ ಹೊರಗೆ ಬಂದ್ಮೇಲೆ ರಕ್ಷಿತಾ ಏನು ಅನ್ನೋದು ಗೊತ್ತಾಯ್ತು ಎಂದಿದ್ದಾರೆ.
BBK 12 : ಎಲ್ಲೋ ಒಂದ್ಕಡೆ, ಅಣ್ಣಾ ಅಂತ ಅಶ್ವಿನಿ ಮಿಮಿಕ್ರಿ ಮಾಡಿದ ಗಿಲ್ಲಿಗೆ ಫ್ಯಾನ್ಸ್ ಶಹಬ್ಬಾಸ್ ಗಿರಿ
ಇನ್ನು ಮಾಳು ಕೂಡ ನಿರೀಕ್ಷೆ ಮಾಡದ ಆಟವನ್ನು ಬಿಗ್ ಬಾಸ್ ಮನೆಯಲ್ಲಿ ಆಡಿ ತೋರಿಸಿದ್ದಾರೆ. ಸಾರ್ವಜನಿಕರ ಮುಂದೆ ಖಡಕ್ ಭಾಷಣ ಮಾಡಿ ಕ್ಯಾಪ್ಟನ್ ಪಟ್ಟಕ್ಕೇರಿದ್ದ ಮಾಳು, ಮನೆಯವರ ವಿರೋಧ ಕಟ್ಟಿಕೊಂಡು ಜೈಲು ಸೇರಿದ್ರೂ ತಮ್ಮ ಸ್ವಭಾವ ಬಿಟ್ಟುಕೊಟ್ಟಿಲ್ಲ. ಅನವಶ್ಯಕ ಜಗಳಕ್ಕೆ ತಲೆ ಹಾಕೋದಿಲ್ಲ. ಇಂದು ರಿಷಿಕಾ ಜೊತೆ ಜಗಳಕ್ಕಿಳಿದು ತಾವ್ಯಾರು ಅನ್ನೋದನ್ನು ಮಾಳು ತೋರಿಸಿದ್ದಾರೆ. ಉತ್ತರ ಕರ್ನಾಟಕದಲ್ಲಿ ಬಹಳ ಫೇಮಸ್ ಆಗಿರುವ ದೆಸಿ ಗಾಯಕ ಮಾಳು, ಸಿನಿಮಾಗಳಿಗೂ ಹಾಡಿದ್ದಾರೆ. ನಾ ಡ್ರೈವರಾ ಎನ್ನುವ ಹಾಡಿನ ಮೂಲಕ ಪ್ರಸಿದ್ಧಿ ಪಡೆದಿದ್ದ ಮಾಳುಗೆ ಪ್ರಭುದೇವ ಮತ್ತು ನಿಶ್ವಿಕಾ ನಾಯ್ಡು ಅವರ ಹಿತ್ತಲಕ ಕರೀಬ್ಯಾಡ್ ಮಾವ ಸಾಂಗ್ ಹಾಡಲು ಅವಕಾಶ ಸಿಕ್ಕಿತ್ತು. ಯೂಟ್ಯೂಬ್ ನಲ್ಲಿ ಪ್ರಸಿದ್ಧಿ ಪಡೆದಿರುವ ಮಾಳು ಈ ಬಾರಿ ನಾಮಿನೇಟ್ ಆಗಿದ್ದು, ಅವರ ಫ್ಯಾನ್ಸ್ ಉಳಿಸ್ತಾರಾ ಕಾದು ನೋಡ್ಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.