
ಅಶ್ವಿನಿ ಗೌಡ ಕಥೆ
ಬಿಗ್ಬಾಸ್ ಮನೆಯಲ್ಲಿ ಸ್ಪರ್ಧಿಗಳು ತನಗೆ ಮರ್ಯಾದೆ ಕೊಡ್ತಿಲ್ಲ ಅಂತ ಅಶ್ವಿನಿ ಗೌಡ ಉಪವಾಸ ಸತ್ಯಾಗ್ರಹ ಮಾಡ್ತಾ ಇದ್ದಾರೆ. ದೊಡ್ಮನೆಯಲ್ಲಿ ಇದೊಂಥರಾ ಹೊಸ ಎಪಿಸೋಡ್ ಅನ್ನಬಹುದು. ಆದ್ರೆ ಅಶ್ವಿನಿ ಆಟ ನೋಡಿ ವೀಕ್ಷಕರು ಏನ್ ಹೇಳ್ತಿದ್ದಾರೆ..? ಇಲ್ಲಿದೆ ನೋಡಿ ಆ ಕುರಿತ ಸ್ಟೋರಿ.
ಬಿಗ್ಬಾಸ್ ಮನೆಯಲ್ಲಿ ಅಶ್ವಿನಿ ಉಪವಾಸ ಸತ್ಯಾಗ್ರಹ..!
ಯೆಸ್ ಬಿಗ್ಬಾಸ್ ಇಷ್ಟು ಸೀಸನ್ಗಳಲ್ಲಿ ನಡೆಯದಂಥಾ ಹೊಸತೊಂದು ಎಪಿಸೋಡ್ ಈ ಸಾರಿ ನಡೀತಾ ಇದೆ. ಬಿಗ್ಬಾಸ್ನ ಇತರ ಸ್ಪರ್ಧಿಗಳು ತನಗೆ ಮರ್ಯಾದೆ ಕೊಡ್ತಾ ಇಲ್ಲ ಅಂತ ಬಾಗಿಲು ತೆಗೆದು ಹೊರಹೋಗಲಿಕ್ಕೆ ಸಜ್ಜಾಗಿದ್ದ ಅಶ್ವಿನಿ, ಈಗ ಹೊರಗೆ ಹೋಗೋದ್ರ ಬದಲು ಒಳಗೆ ಉಪವಾಸ ಸತ್ಯಾಗ್ರಹ ಮಾಡ್ಲಿಕ್ಕೆ ನಿರ್ಧಾರ ಮಾಡಿದ್ದಾರೆ.
ಇತರೇ ಸ್ಪರ್ಧಿಗಳು ಎಷ್ಟೇ ಮನವೊಲಿಸಿದ್ರೂ ಅಶ್ವಿನಿ ಊಟ ಮಾಡೋದಕ್ಕೆ ನಿರಾಕರಿಸಿದ್ದಾರೆ. ತನ್ನ ವಯಸ್ಸಿಗೆ, ತನ್ನ ಅಂತಸ್ಥಿಗೆ ಇಲ್ಯಾರೂ ಗೌರವ ಕೊಡ್ತಾ ಇಲ್ಲ. ತನ್ನ ಮರ್ಯಾದೆಗೆ ಧಕ್ಕೆ ಬಂದ ಕಡೆಗೆ ತಾನು ಒಂದು ತುತ್ತು ಅನ್ನ ಕೂಡ ತಿನ್ನಲ್ಲ ಅಂತ ಹಠ ಹಿಡಿದಿದ್ದಾರೆ.
ಹೌದು ಅಶ್ವಿನಿಯ ಈ ಉಪವಾಸ ಸತ್ಯಾಗ್ರಹ ನೋಡಿದ ವೀಕ್ಷಕರು ಇದು ಪಕ್ಕಾ ಸಿಂಪತಿ ಗಳಿಸೋ ಆಟ ಅಂತಿದ್ದಾರೆ. ಅಶ್ವಿನಿ ಗೌಡ ಯಾವಾಗಲೂ ಬೇರೆಯವರು ತನಗೆ ಗೌರವ ನೀಡಬೇಕು ಅಂತ ನಿರೀಕ್ಷೆ ಮಾಡ್ತಾರೆ. ಆದರೆ, ಅವರು ಮಾತ್ರ ಎಲ್ಲರಿಗೂ ಏಕವಚನದಲ್ಲಿ ಮಾತನಾಡ್ತಾರೆ. ಜಗಳಕ್ಕೆ ನಿಂತುಕೊಂಡ್ರಂತೂ ಹೋಗಲೋ ಬಾರಲೋ ಅಂತ ನಿಂದಿಸ್ತಾರೆ.
ಆದ್ರೆ ಅಪ್ಪಿ ತಪ್ಪಿ ಅಶ್ವಿನಿಯನ್ನ ಎದುಗಡೆಯವರು ಏಕವಚನದಲ್ಲಿ ಕರೆದರೇ ಮುಗಿದೇ ಹೋಯ್ತು... ಅಶ್ವಿನಿ ಚಂಡಿ ಚಾಮುಂಡಿ ಆಗಿಬಿಡ್ತಾರೆ. , ‘ನನಗೆ ಗೌರವ ಸಿಗುತ್ತಿಲ್ಲ’ ಅನ್ನೋ ಕಾರ್ಡ್ ಪ್ಲೇ ಮಾಡ್ತಾರೆ. ಇದು ಮೊದಲಿನಿಂದಲೂ ನಡೆದು ಬಂದಿದೆ. ಖುದ್ದು ಸುದೀಪ್ ಕೂಡ ವೀಕೆಂಡ್ನಲ್ಲಿ ಅಶ್ವಿನಿಗೆ ಈ ಬಗ್ಗೆ ತಿಳಿ ಹೇಳಿದ್ರು. ಆದ್ರೆ ಅವರ ಮೊಂಡಾಟ ಮುಂದುವರೆದಿದೆ.
ಅಶ್ವಿನಿ ಗೌಡ ಬಂಡವಾಳ ಬಯಲು ಮಾಡಿದ ಗಿಲ್ಲಿ..!
ಹೌದು ಬುಧವಾರ ಟಾಸ್ಕ್ ಮುಗಿದ ಮೇಲೆ ಉಸ್ತುವಾರಿಗಳು ಮಾತನಾಡೋವಾಗ ಅಶ್ವಿನಿ , ಹೋಗಲೋ ಎಂದಿದ್ದನ್ನ ಎತ್ತಿ ತೋರಿಸಿದ್ದ ಗಿಲ್ಲಿ, ಅದಕ್ಕೆ ನಮ್ಮ ಬಾಯಲ್ಲೂ ಆಗಾಗ ಆವಾಗ ಅಂಥಾ ಪದ ಬರುತ್ವೆ ಅಂತ ಟಾಂಗ್ ಕೊಟ್ಟಿದ್ದ. ಅಶ್ವಿನಿ ಮಾಡೋ ತಪ್ಪನ್ನ ಎತ್ತಿ ತೋರಿಸಿದ್ದಾನೆ.
ರಘು ಜೊತೆಗೆ ಕಿತ್ತಾಟವಾಡಿ ಕಣ್ಣೀರು ಹಾಕಿದ್ದ ಅಶ್ವಿನಿ, ನನಗೆ ಗೌರವ ಕೊಡದ ಕಡೆ ಇರೋದಿಲ್ಲ. ಹೊರಹೋಗ್ತಿನಿ ಅಂದಿದ್ರು. ಈಗ ಉಪವಾಸದ ಡ್ರಾಮಾ ಮಾಡ್ತಿದ್ದಾರೆ. ಇದೆಲ್ಲಾ ಬರೀ ನಾಟಕ. ಅಶ್ವಿನಿಯದ್ದು ಮೊಸಳೆ ಕಣ್ಣೀರು ಅಂತಿದ್ದಾರೆ ವೀಕ್ಷಕರು.
ಬೇರೆ ಸ್ಪರ್ಧಿಗಳಿಗೆ ಗೌರವ ಕೊಡದೇ ಹೋಗಲೋ ಬಾರಲೋ ಅಂತ ಕರೆಯೋ ಅಶ್ವಿನಿ, ತನಗೆ ಮಾತ್ರ ಗೌರವ ಕೊಡಬೇಕು ಅಂತ ಬಯಸೋದು ಹಾಸ್ಯಾಸ್ಪದ. ಹೊರಗೆ ಅದೆಷ್ಟೇ ದೊಡ್ಡ ವ್ಯಕ್ತಿಯಾದ್ರೂ ಬಿಗ್ಬಾಸ್ ಮನೆಯಲ್ಲಿ ಎಲ್ಲರೂ ಸಮಾನರೇ. ಆದ್ರೆ ಹೊರಗೆ ದೊಡ್ಡವರು ಅನ್ನಿಸಿಕೊಂಡವರು ದೊಡ್ಮನೆಗೆ ಹೋಗಿ ತಮ್ಮ ಸಣ್ಣತನವನ್ನ ಪ್ರದರ್ಶನ ಮಾಡಿ ಸಣ್ಣವರಾಗಿಬಿಡ್ತಾರೆ..! ಅಶ್ವಿನಿ ಗೌಡ ವಿಚಾರದಲ್ಲೂ ಅದೇ ಆಗ್ತಾ ಇದೆ..!
ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮಾ ನೋಡಿ..
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.