BBK10 Breaking: ಬಿಗ್‌ಬಾಸ್ ಮನೆಯಿಂದ ರಕ್ಷಕ್ ಬುಲೆಟ್ ಔಟ್: ಇದು ನಿಜಾನಾ ಎಂದ ಫ್ಯಾನ್ಸ್?

Published : Nov 05, 2023, 01:46 PM IST
BBK10 Breaking: ಬಿಗ್‌ಬಾಸ್ ಮನೆಯಿಂದ ರಕ್ಷಕ್ ಬುಲೆಟ್ ಔಟ್: ಇದು ನಿಜಾನಾ ಎಂದ ಫ್ಯಾನ್ಸ್?

ಸಾರಾಂಶ

ಬಿಗ್​ ಬಾಸ್​ ಆರಂಭವಾಗಿ 1 ತಿಂಗಳೇ ಆಯ್ತು. ಈಗಾಗಲೇ ಮನೆಯಿಂದ ಸ್ನೇಕ್​ ಶ್ಯಾಮ್​ ಜತ್ತು ಗೌರೀಶ್​ ಅಕ್ಕಿ ಎಲಿಮಿನೇಟ್​ ಆಗಿದ್ದಾರೆ. ಇದೀಗ ಬುಲೆಟ್ ಪುತ್ರ ರಕ್ಷಕ್ ಬುಲೆಟ್ ಅವರು ಮೂರನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ.

ಬಿಗ್​ ಬಾಸ್​ ಆರಂಭವಾಗಿ 1 ತಿಂಗಳೇ ಆಯ್ತು. ಈಗಾಗಲೇ ಮನೆಯಿಂದ ಸ್ನೇಕ್​ ಶ್ಯಾಮ್​ ಜತ್ತು ಗೌರೀಶ್​ ಅಕ್ಕಿ ಎಲಿಮಿನೇಟ್​ ಆಗಿದ್ದಾರೆ. ಇದೀಗ ಬುಲೆಟ್ ಪುತ್ರ ರಕ್ಷಕ್ ಬುಲೆಟ್ ಅವರು ಮೂರನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ. ಸದಾ ಖಡಕ್ ಡೈಲಾಗ್ ಮೂಲಕ ಗಮನ ಸೆಳೆದಿದ್ದ ಯುವ ನಟ ರಕ್ಷಕ್‌ಗೆ ದೊಡ್ಮನೆಯ ಆಟ ಅಂತ್ಯವಾಗಿದೆ. ಈ ವಾರ ಮನೆಯಿಂದ ಹೊರಗೆ ಹೋಗೋದು ರಕ್ಷಕ್​ ಬುಲೆಟ್​ ಅಂತೆ. ಹೌದು! ರಕ್ಷಕ್​ ಬುಲೆಟ್ ಹೋಗ್ತಾರೆ ಅಂತ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗ್ತಾ ಇದೆ. 

ಬುಲೆಟ್ ಪ್ರಕಾಶ್​ ಅವರ ಮಗ ಮನೆ ಒಳಗೆ ಬಂದು ವಿನಯ್​ ಗುಂಪಿನಲ್ಲಿ ಮಾತಾಡಿಕೊಂಡು , ಗಾಸಿಪ್​ ಮಾಡಿಕೊಂಡು ಇರ್ತಾ ಇದ್ದ. 2 ನೇ ವಾರದಲ್ಲಿ ಕ್ಯಾಪ್ಟನ್​ ಕೂಡ ಆಗಿದ್ರು. ಮನೆಯ ಉತ್ತಮ ಆಟಗಾರ ಎಂದು ಕೂಡ ಗುರುತಿಸಿಕೊಂಡಿದ್ದರು. ರಕ್ಷಕ್ ಮನೆಗೆ ಬಂದಾಗಿನಿಂದ ಸೈಲೆಂಟ್ ರಕ್ಷಕ್ ನನ್ನು ನೋಡಿರುವ ದೃಷ್ಟಿಕೋನವೇ ಬೇರೆ. ಬಿಗ್ ಬಾಸ್ ಮನೆಗೆ ಹೋಗುವುದಕ್ಕೂ ಮುನ್ನ ಸೋಷಿಯಲ್ ಮೀಡಿಯಾದಲ್ಲಿ ಜನರ ಕಣ್ಣಿಗೆ ಬೇರೆ ರೀತಿಯಾಗಿಯೇ ಕಾಣಿಸಿಕೊಳ್ಳುತ್ತಿದ್ದರು. ಯಾವಾಗಲೂ ಮಾಸ್ ಡೈಲಾಗ್ ಹೊಡೆಯುತ್ತಾ, ಅಟಿಟ್ಯೂಡ್‌ ಇರುವಂತಹ ಹುಡುಗ ಎಂದೇ ಎಲ್ಲರ ಮನಸ್ಸಲ್ಲಿ ಬೇರೂರಿಬಿಟ್ಟಿದ್ದರು. 

ಚೂಡಿದಾರ್​​​​ನಲ್ಲಿ ಬೊಂಬೆಯಂತೆ ಮಿಂಚಿದ ಮಿಲನಾ: ನಿಧಿಮಾ ಹೇರ್‌ಸ್ಟೈಲ್ ಮಿಸ್ ಮಾಡಿಕೊಳ್ಳುತ್ತೇವೆಂದ ಫ್ಯಾನ್ಸ್‌!

ವೇದಿಕೆ ಮೇಲೆ ಕೂಡ, ಸುದೀಪ್ ಬಳಿ ಫೇಮಸ್ ಆಗ್ಬೇಕು ಅಣ್ಣ ಎಂದಿದ್ದರು.  ಬಿಗ್ ಬಾಸ್ ಮನೆಯೊಳಗೆ ಹೋದ ಕೂಡಲೇ ಇನ್ನು ರಕ್ಷಕ್ ಮಾಸ್ ಡೈಲಾಗ್‌ನಿಂದಾನೇ ಮಿಸ್ ಅಂಡರ್ ಸ್ಟ್ಯಾಂಡಿಂಗ್ ಶುರುವಾಗುತ್ತೇನೊ ಎಂದುಕೊಂಡಿದ್ದರು. ಆದರೆ, ರಕ್ಷಕ್ ಬಿಗ್ ಬಾಸ್‌ನಲ್ಲಿ ಇರುವ ರೀತಿಗೆ ಎಲ್ಲರ ಮೆಚ್ಚುಗೆ ಸಿಕ್ಕಿತ್ತು. ಜೊತೆಗೆ ರಕ್ಷಕ್ ಮನರಂಜನೆ ಕೂಡ ಫ್ಯಾನ್ಸ್‌ಗೆ ಖುಷಿಕೊಟ್ಟಿತ್ತು. ಟಾಸ್ಕ್, ಪಂಚಿಂಗ್ ಡೈಲಾಗ್ ಹೇಳೋದ್ರಲ್ಲಿ ರಕ್ಷಕ್ ಸದಾ ಮುಂದಿದ್ದರು. ಸದ್ಯ ವರದಿಗಳ ಪ್ರಕಾರ ರಕ್ಷಕ್‌ ಬುಲೆಟ್‌ ಬಿಗ್‌ ಬಾಸ್‌ ಮನೆಯಲ್ಲಿ ಒಂದು ದಿನಕ್ಕೆ 15 ರಿಂದ 20 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. 

BBK 10 Breaking: ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಮೊದಲ ಸ್ಪರ್ಧಿ ಸ್ನೇಕ್ ಶ್ಯಾಮ್!

ಅಂದರೆ ವಾರಕ್ಕೆ ಸುಮಾರು ಒಂದು ಲಕ್ಷ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಡ್ರೋನ್ ಪ್ರತಾಪ್‌ಗೆ ಗೂಬೆ ಎಂದಿದ್ದಕ್ಕೆ ಕಿಚ್ಚ ರಕ್ಷಕ್​ಗೆ ಸರಿಯಾಗಿ ಕ್ಲಾಸ್​ ತಗೊಂಡಿದ್ರೂ ಕೂಡ, ಎಲ್ಲೋ ವರ್ಕ್​ ಔಟ್​ ಆಗಿಲ್ಲ ಅಂತ ಅನಿಸ್ತಾ ಇದೆ. ಯಾವುದಕ್ಕೂ ಇಂದಿನ ಬಿಗ್​ ಬಾಸ್​ ಎಪಿಸೋಡ್​ನ್ನು ನೋಡಬೇಕು. ರಕ್ಷಕ್ ಬುಲೆಟ್ ಎಲಿಮಿನೇಟ್ ಆಗಿರೋದು ಅವರ ಫ್ಯಾನ್ಸ್‌ಗೆ ಬೇಸರವನ್ನುಂಟು ಮಾಡಿದೆ. ಆದರೆ ಮುಂಬರುವ ಸಿನಿಮಾಗಳಲ್ಲಿ ನಟನೆಯ ಮೂಲಕ ರಕ್ಷಕ್ ಬುಲೆಟ್ ಮೋಡಿ ಮಾಡಲಿ ಎಂಬುದೇ ಅಭಿಮಾನಿಗಳ ಆಶಯ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare: ಅಜ್ಜಿ-ಮೊಮ್ಮಕ್ಕಳ ಮಿಲನದ ಅಪೂರ್ವ ಮಿಲನ; ವೀಕ್ಷಕರು ನಿರೀಕ್ಷಿಸುತ್ತಿದ್ದ ಘಳಿಗೆ ಬಂತು, ಆದ್ರೆ...
ಬಿಗ್ ಬಾಸ್ 19 ವಿನ್ನರ್ ಹೆಸರು ಆನ್‌ಲೈನ್‌ನಲ್ಲಿ ಲೀಕ್? ಹರಿದಾಡುತ್ತಿದೆ ಸ್ಕ್ರೀನ್‌ಶಾಟ್