ʼಸರಿಗಮಪʼ ಮಂಜಮ್ಮ ಸಹೋದರಿ 5 ತಿಂಗಳ ಗರ್ಭಿಣಿ ಹೊಟ್ಟೆಯಲ್ಲಿ ಗಡ್ಡೆ: ಸಹಾಯಕ್ಕೆ ಮುಂದಾದ ಡ್ರೋನ್‌ ಪ್ರತಾಪ್

Published : Jan 31, 2025, 03:41 PM ISTUpdated : Jan 31, 2025, 03:45 PM IST
ʼಸರಿಗಮಪʼ ಮಂಜಮ್ಮ ಸಹೋದರಿ 5 ತಿಂಗಳ ಗರ್ಭಿಣಿ ಹೊಟ್ಟೆಯಲ್ಲಿ ಗಡ್ಡೆ: ಸಹಾಯಕ್ಕೆ ಮುಂದಾದ ಡ್ರೋನ್‌ ಪ್ರತಾಪ್

ಸಾರಾಂಶ

ʼಸರಿಗಮʼ ಖ್ಯಾತಿಯ ಮಂಜಮ್ಮ ಸಹೋದರಿಗೆ ʼಬಿಗ್‌ ಬಾಸ್‌ ಕನ್ನಡ ಸೀಸನ್‌ 10ʼ ಸ್ಪರ್ಧಿ ಡ್ರೋನ್‌ ಪ್ರತಾಪ್‌ ಅವರು ಸಹಾಯ ಮಾಡಿದ್ದಾರೆ.   

ಆಗಾಗ ಕಾಂಟ್ರವರ್ಸಿಗಳಲ್ಲಿ ಸದ್ದು ಮಾಡುವ ಡ್ರೋನ್‌ ಪ್ರತಾಪ್‌ ಆಗಾಗ ಸಮಾಜ ಸೇವೆ ಮಾಡೋದನ್ನು ಮರೆಯೋದಿಲ್ಲ. ಇತ್ತೀಚೆಗೆ ನಿಧನ ಹೊಂದಿರುವ ʼಸರಿಗಮಪʼ ಖ್ಯಾತಿಯ ಮಂಜಮ್ಮ ಮನೆಗೆ ಅವರು ಭೇಟಿ ನೀಡಿದ್ದರು. ಅಷ್ಟೇ ಅಲ್ಲದೆ ಮಂಜಮ್ಮ ಸಹೋದರಿಗೆ ಅವರು ಹಣದ ನೆರವು ನೀಡಿದ್ದಾರೆ. 

ಮಂಜಮ್ಮ ಸಹೋದರಿ ಗರ್ಭಿಣಿ!
ಮಂಜಮ್ಮ ಸಹೋದರಿಗೂ ಕೂಡ ಕಣ್ಣು ಕಾಣೋದಿಲ್ಲ. ಅವರಿಗೆ ಮದುವೆಯಾಗಿ ಈಗ ಗರ್ಭಿಣಿ. ಇನ್ನು ಹೊಟ್ಟೆಯೊಳಗಡೆ ಗಡ್ಡೆಯೂ ಆಗಿದೆಯಂತೆ. ಡಾಕ್ಟರ್‌ ಆಪರೇಶನ್‌ ಮಾಡಲು ಹೇಳಿದ್ದಾರಂತೆ. “ನನ್ನ ಸಹೋದರಿ ಮಂಜಮ್ಮಗೆ ಕಿಡ್ನಿ ವೈಫಲ್ಯ ಆಗಿತ್ತು. ಮಂಜಮ್ಮ ಸಾಯೋ ಟೈಮ್‌ನಲ್ಲಿ ತುಂಬ ಒದ್ದಾಡಿದ್ದಾಳೆ. ನನಗೆ ಸಹಾಯ ಮಾಡಿದ ನೀವು ದೇವರು, ಜನ್ಮ ಅಂತಿದ್ದರೆ ನಿಮ್ಮ ಋಣ ತೀರಿಸುವೆ” ಎಂದು ಡ್ರೋನ್‌ ಪ್ರತಾಪ್‌ ಅವರನ್ನು ಮಂಜಮ್ಮ ಸಹೋದರಿ ಹೊಗಳಿದ್ದಾರೆ.

15 ನಿಮಿಷಗಳಲ್ಲಿ ತಿರುಪತಿ ಕಾಲ್ತುಳಿತದಿಂದ ಪಾರಾದ ನಟಿ ಶುಭ್ರ ಅಯ್ಯಪ್ಪ ದಂಪತಿ

ಧೈರ್ಯ ತುಂಬಿದ ಡ್ರೋನ್‌ ಪ್ರತಾಪ್!‌ 
ಡ್ರೋನ್‌ ಪ್ರತಾಪ್‌ ಅವರ ಒಳ್ಳೆಯ ಗುಣ ಕಂಡು ಅನೇಕರು ಖುಷಿ ಪಟ್ಟಿದ್ದಾರೆ. “ಮಗು ಆರೋಗ್ಯ ನೋಡಿಕೊಳ್ಳಿ, ನಿಮ್ಮ ಹೊಟ್ಟೆಯಲ್ಲಿರುವ ಗಡ್ಡೆ ಎಲ್ಲ ನಿವಾರಣೆ ಆಗತ್ತೆ” ಎಂದು ಮಂಜಮ್ಮ ಸಹೋದರಿಗೆ ಡ್ರೋನ್‌ ಪ್ರತಾಪ್‌ ಅವರು ಧೈರ್ಯ ತುಂಬಿದ್ದಾರೆ. 

 

ಅನಾರೋಗ್ಯದಿಂದ ಮಂಜಮ್ಮ ನಿಧನ! 
ಜೀ ಕನ್ನಡ ವಾಹಿನಿಯ ʼಸರಿಗಮಪʼ ಶೋನಲ್ಲಿ ಮಂಜಮ್ಮ ಭಾಗವಹಿಸಿದ್ದರು. ಮಂಜಮ್ಮ ಸಹೋದರಿಯರು ದೇವಸ್ಥಾನವೊಂದರಲ್ಲಿ ಹಾಡೋದನ್ನು ನೋಡಿ ʼಸರಿಗಮಪʼ ತಂಡದವರು ವೇದಿಕೆಯಲ್ಲಿ ಹಾಡುಬ ಅವಕಾಶ ಕೊಟ್ಟಿದ್ದರು. ಮಂಜಮ್ಮ ಅವರು ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಡಿವಿ ಹಳ್ಳಿಯವರು. ಅನಾರೋಗ್ಯದಿಂದ ಬಳಲುತ್ತಿದ್ದ ಮಂಜಮ್ಮರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅಲ್ಲಿಯೇ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಕೊನೆಗೂ ಮಂಜಮ್ಮ ಅವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 

ನೀನು ಏನ್ ಬಲತ್ಕಾರ ಮಾಡಿದ್ಯಾ? ಹೆದರಬೇಡ ಸುಮ್ಮನೆ ಟಾರ್ಗೆಟ್ ಮಾಡ್ತಿದ್ದಾರೆ; ಡ್ರೋನ್ ಪ್ರತಾಪ್‌ಗೆ ಧೈರ್ಯ ಹೇಳಿದ ನೀತು

ಡ್ರೋನ್‌ ಪ್ರತಾಪ್‌ ಕಾಂಟ್ರವರ್ಸಿ…! 
ಸೋಡಿಯಂ ಬಳಸಿ ಕೃಷಿ ಹೊಂಡದಲ್ಲಿ ಸ್ಫೋಟ ಮಾಡಿದ್ದರು ಎಂದು ಡ್ರೋನ್‌ ಪ್ರತಾಪ್‌ ಅವರ ವಿರುದ್ಧ ದೂರು ದಾಖಲಾಗಿತ್ತು. ಹೀಗಾಗಿ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದರು. ಜಾಮೀನಿನ ಮೇರೆಗೆ ಪ್ರತಾಪ್‌ ಹೊರಗಡೆ ಬಂದಿದ್ದಾರೆ. ಈ ಹಿಂದೆ ಕೂಡ ಸಾಕಷ್ಟು ಸುಳ್ಳುಗಳನ್ನು ಹೇಳಿದ್ದಾರೆ ಎಂದು ಡ್ರೋನ್‌ ಪ್ರತಾಪ್‌ ಅವರನ್ನು ಸಿಕ್ಕಾಪಟ್ಟೆ ಟ್ರೋಲ್‌ ಮಾಡಲಾಗಿತ್ತು. ಅಷ್ಟೇ ಅಲ್ಲದೆ ಲಾಕ್‌ಡೌನ್‌ ನಿಯಮ ಮುರಿದಿದ್ದಾರೆ ಎಂಬ ಆರೋಪವೂ ಇತ್ತು. ಸಾಕಷ್ಟು ನೆಗೆಟಿವಿಟಿಯಿಂದ ʼಬಿಗ್‌ ಬಾಸ್ʼ ಮನೆಗೆ ಹೋಗಿದ್ದ, ಹೊರಗಡೆ ಬರುವಾಗ ಸಾಕಷ್ಟು ಜನರ ಪ್ರೀತಿ ಗಳಿಸಿ ಹೊರಗಡೆ ಬಂದಿದ್ದರು. 

ಕೆಲವರಿಗೆ ಧನ ಸಹಾಯ! 
ʼಬಿಗ್‌ ಬಾಸ್‌ ಕನ್ನಡ ಸೀಸನ್‌ 10ʼ ಶೋ ರನ್ನರ್‌ ಅಪ್‌ ಆಗಿರುವ ಡ್ರೋನ್‌ ಪ್ರತಾಪ್‌ ಅವರು ಹೊರಗಡೆ ಬಂದಬಳಿಕ ಓರ್ವ ಮನೆಯ ಹೆಣ್ಣು ಮಗಳಿಗೆ ಓದಲು ಅನುಕೂಲ ಆಗಲಿ ಎಂದು ಧನಸಹಾಯ ಮಾಡಿದ್ದರು. ಅಪ್ಪ-ಅಮ್ಮನನ್ನು ಕಳೆದುಕೊಂಡು ಅಜ್ಜಿಯ ಜೊತೆ ಬೆಳೆಯುತ್ತಿರುವ ಇಬ್ಬರು ಹುಡುಗರಿಗೆ ಕೂಡ ಡ್ರೋನ್‌ ಪ್ರತಾಪ್‌ ಸಹಾಯ ಮಾಡಿದ್ದರು. ಸಾಮಾಜಿಕ ಸೇವೆ ಮಾಡಿದ ವಿಡಿಯೋಗಳನ್ನು ಡ್ರೋನ್‌ ಪ್ರತಾಪ್‌ ಅವರು ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡುತ್ತಿರುತ್ತಾರೆ. 

ಡ್ರೋನ್‌ ಪ್ರತಾಪ್‌ ಅವರು ಡ್ರೋನ್‌ ಕುರಿತಂತೆ ಕಂಪೆನಿ ಬೆಳೆಸಬೇಕು, ಇನ್ನಷ್ಟು ಜನರಿಗೆ ಸಹಾಯ ಮಾಡಬೇಕು ಎನ್ನುವ ಆಸೆಯನ್ನು ಹೊಂದಿದ್ದಾರಂತೆ. ಈ ಬಗ್ಗೆ ಅವರು ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಏನು ಮಾಡಲಿದ್ದಾರೆ ಎಂದು ಕಾದು ನೋಡಬೇಕಿದೆ. ನೀವು ಏನು ಹೇಳ್ತೀರಾ? ನಿಮ್ಮ ಅಭಿಪ್ರಾಯ ತಿಳಿಸಿ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಗಿಲ್ಲಿ ನಟನ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೇಡು ತೀರಿಸಿಕೊಳ್ಳಲು ರೆಡಿಯಾದ ರಘು; ಪ್ಲ್ಯಾನ್‌ ಏನು?
Bigg Boss: 'ಜುಂ ಜುಂ ಮಾಯಾ, ಪ್ರಾಯ ಬಂದ್ರೆ..' ಗಿಲ್ಲಿ- ಅಶ್ವಿನಿ ರೊಮಾನ್ಸ್​, ಕಾವ್ಯಾನ ಕಣ್ಣು ಮುಚ್ರಪ್ಪೋ ಪ್ಲೀಸ್​