ಪರೀಕ್ಷೆಯಲ್ಲಿ ನಾನು ನಂದಿನಿ ಬೆಂಗಳೂರಿಗೆ ಬಂದೀನಿ ಹಾಡು ಬರೆದ ವಿದ್ಯಾರ್ಥಿ: ಫುಲ್‌ ಮಾರ್ಕ್ಸ್‌ ಕೊಡಬೇಕೆಂದ ನೆಟ್ಟಿಗರು!

By Sathish Kumar KH  |  First Published Sep 22, 2023, 7:24 PM IST

ಬೆಂಗಳೂರಿನ ವಿಕ್ಕಿಪೀಡಿಯಾ ಸೃಷ್ಟಿಸಿರುವ 'ನಾನು ನಂದಿನಿ.. ಬೆಂಗಳೂರಿಗೆ ಬಂದೀನಿ.. ಹಾಡನ್ನು ವಿದ್ಯಾರ್ಥಿಯೊಬ್ಬ ಪರೀಕ್ಷೆಯಲ್ಲಿ ಉತ್ತರವಾಗಿ ಬರೆದು ಬಂದಿದ್ದು, ಆತನಿಗೆ ಫುಲ್‌ ಮಾರ್ಕ್ಸ್‌ ಕೊಡುವಂತೆ ನೆಟ್ಟಿಗರು ಹೇಳಿದ್ದಾರೆ.


ಬೆಂಗಳೂರು (ಸೆ.22): ಸಿಲಿಕಾನ್‌ ಸಿಟಿ, ಐಟಿ ಸಿಟಿ ಎಂದು ಕರೆಯುವ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಐಟಿ ಉದ್ಯೋಗಿಗಳನ್ನೇ ಗುರಿಯಾಗಿಸಿಕೊಂಟು ನಾನು ನಂದಿನಿ..ಬೆಂಗಳೂರಿಗೆ ಬಂದೀನಿ.. ಪಿಜಿಲಿ ಇರ್ತೀನಿ.. ಎಂಬ ಹಾಡು ವೈರಲ್‌ ಆಗಿದೆ. ಆದರೆ, ಇಷ್ಟೊಂದು ವೈರಲ್‌ ಆಗಿ ಟ್ರೆಂಡ್‌ ಸೃಷ್ಟಿಸಿರುವ ಹಾಡನ್ನು ಈಗ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿಯೂ ಬರೆಯಲಾಗಿದೆ. ಪರೀಕ್ಷೆಯ ಉತ್ತರ ಪತ್ರಿಕೆಯ ಪ್ರತಿ ವೈರಲ್‌ ಆಗಿದೆ.

ಬೆಂಗಳೂರಿನ ವಿಕ್ಕಿಪೀಡಿಯಾ ಎನ್ನುವ ಸಾಮಾಜಿಕ ಜಾಲತಾಣದ ಖಾತೆ ಹೊಂದಿರುವ ಈ ಯುವಕನ ಹಾಡು ಹೊಸ ಟ್ರೆಂಡ್‌ ಸೃಷ್ಟಿಸಿದೆ. ಇನ್ನು ಯಾವುದೇ ಸಿನಿಮಾದ ಹಾಡು ಹಾಗೂ ಮ್ಯೂಸಿಕ್‌ ಮೀರಿಸುವಂತೆ ಟ್ರೆಂಡ್‌ ಆಗುತ್ತಿದ್ದು, ರೀಲ್ಸ್‌ಗಳನ್ನು ಮಾಡಲು, ಗಣೇಶ ಹಬ್ಬದಲ್ಲಿ ಡಿಜೆ ಸಾಂಗ್‌ ಹಾಕಿಕೊಂಡು ಕುಣಿಯಲು, ಪಬ್‌ಗಳಲ್ಲಿ ಡಿಸ್ಕೋ ಹಾಡಾಗಿ ಬಳಕೆ ಮಾಡಲಾಗುತ್ತಿದೆ. ಇನ್ನು ಸಿನಿಮಾದವರು, ಟಿಕ್‌ಟಾಕ್‌ ಸ್ಟಾರ್‌ಗಳು ಹಾಗೂ ರೀಲ್ಸ್‌ ಸ್ಟಾರ್‌ಗಳಿಂದ ನಾನು ನಂದಿನಿ, ಬೆಂಗಳೂರಿಗೆ ಬಂದೀನಿ ರೀಲ್ಸ್‌ಗಳೇ ಹೆಚ್ಚಾಗಿ ಬರುತ್ತಿವೆ. ಅದರಲ್ಲಿ ಈಗ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿಯೂ ಈ ಹಾಡನ್ನು ಉತ್ತರವಾಗಿ ಬರೆದಿರುವುದು ವೈರಲ್‌ ಆಗುತ್ತಿದೆ.

Tap to resize

Latest Videos

ನಾನು ನಂದಿನಿ, ಬೆಂಗಳೂರಿಗೆ ಬಂದೀನಿ... ವೈರಲ್‌ ಹಾಡಿಗೆ ಹೊಸ ಲೈನ್‌ ಸೇರಿಸಿದ ಬೆಂಗ್ಳೂರ್‌ ಮಂದಿ!

ಇನ್ನು ಮೇಲಿನ ಉತ್ತರ ಪತ್ರಿಕೆಯನ್ನು ನೋಡಿದರೆ ಯಾವ ತರಗತಿ ಎಂದು ಹೇಳುವುದು ಕಷ್ಟವಾಗಬಹುದು. ಆದರೆ, ಇದು ಜೀವಶಾಸ್ತ್ರ ವಿಷಯದ ಪರೀಕ್ಷೆ ಎಂದು ಅಂದಾಜಿಸಬಹುದು. ಇದರಲ್ಲಿ ಮೊದಲ ಎರಡು ಪ್ಯಾರಾಗಳಲ್ಲಿ ಪ್ರಶ್ನೆಗೆ ಸಂಬಂಧಪಟ್ಟ ಉತ್ತರವನ್ನು ಬರೆದಿರುವ ವಿದ್ಯಾರ್ಥಿ ನಂತರ ಮೂರು ಮತ್ತು ನಾಲ್ಕನೇ ಪ್ಯಾರಾಗಳಲ್ಲಿ ನಾನು ನಂದಿನಿ.. ಬೆಂಗಳೂರಿಗೆ ಬಂದೀನಿ... ಎಂಬ ಹಾಡನ್ನು ಪೂರ್ಣವಾಗಿ ಬರೆದು ಪುಟವನ್ನು ತುಂಬಿಸಿದ್ದಾನೆ. ಆದರೆ, ಉತ್ತರ ಪತ್ರಿಕೆ ಯಾವ ತರಗತಿ, ಯಾವ ಶಾಲೆ ಅಥವಾ ಕಾಲೇಜಿನದ್ದು, ಯಾರು ವಿದ್ಯಾರ್ಥಿ ಎಂಬ ಸುಳಿವನ್ನು ಮಾತ್ರ ಬಿಟ್ಟಕೊಟ್ಟಿಲ್ಲ.

ನಾನು ನಂದಿನಿ.. ಹಾಡಿನ ಸೃಷ್ಟಿಕರ್ತ ವಿಕ್ಕಿ ಸ್ವತಃ ತಾವು ಈ ಫೋಟೋವನ್ನು ಹಂಚಿಕೊಂಡಿದ್ದು, ಗಣಪತಿ ಹಬ್ಬ ಆಯ್ತು, ರೀಲ್ಸ್‌ ಆಯ್ತು, ಟ್ರಾಫಿಕ್‌ ಜಾಮ್‌ ಹಾಗೂ ಪಬ್‌ಗಳಲ್ಲಿಯೂ ಆಯ್ತು. ಅಯ್ಯೋ ಅಯ್ಯೋ ಅಯ್ಯೋ.. ಏನ್‌ ಇದು.? ಎಕ್ಸಾಂನಲ್ಲೂ ಫುಲ್‌ ಹವಾ ಎಂದು ಬರೆದುಕೊಂಡಿದ್ದಾನೆ. ಇನ್ನು ಬೆಂಗಳೂರಿನಲ್ಲಿ ಮಾತ್ರವಲ್ಲದೇ ಇಡೀ ದೇಶದಲ್ಲಿ ಈ ಹಾಡು ವೈರಲ್‌ ಆಗಿ ಟ್ರೆಂಡ್‌ ಸೃಷ್ಟಿ ಮಾಡಿದೆ. ಇನ್ನು ಮುಂದೆ ಯಾವ ಹಂತವನ್ನು ತಲುಪಲಿದೆ ಎನ್ನುವುದನ್ನು ನಾವು ಕಾದು ನೋಡಬೇಕಿದೆ. ಆದರೆ, ಹಾಡು ಸೃಷ್ಟಿಸಿದ ವಿಕ್ಕಿ ಮಾತ್ರ ಎಲ್ಲೆಡೆ ಪ್ರಸಿದ್ಧಿ ಪಡೆಯುತ್ತಿದ್ದಾನೆ.

'ನಾನು ನಂದಿನಿ, ಬೆಂಗ್ಳೂರು ಬಂದೀನಿ' ಸಾಂಗ್ ಹಾಡಿದ ಸಿಹಿ, ಮುದ್ದು ಪುಟಾಣಿ ವಿಡಿಯೋ ಸಖತ್ ಕ್ಯೂಟು!

ಮೂಲ ವೀಡಿಯೋದಲ್ಲೇನಿದೆ? 
'ನಾನು ನಂದಿನಿ ಬೆಂಗಳೂರು ಬಂದಿನಿ, ಪಿಜಿಲಿ ಇದ್ದೀನಿ ಐಟಿ  ಕೆಲಸ ಮಾಡ್ತೀನಿ, ಊಟ ಸರಿ ಇಲ್ಲ ಅಂದ್ರೂನು ತಿಂತಿನಿ ಬಂದ ದುಡ್ಡೆಲ್ಲಾ ಮನೆಗೆ ಕಳಿಸ್ತೀನಿ, ಬಾರೆ ನಂದಿನಿ ಗೋಬಿ ತಿನಿಸ್ತೀನಿ ಬೇ ಬೇ ಬೇಡ, ಬಾರೆ ನಂದಿನಿ ಬೆಂಗಳೂರು ತೋರಿಸ್ತೀನಿ, ಓಹ್ ಬೇಡ ಓಹ್ ಬೇಡ, ಬಾರೆ ನಂದಿನಿ ಪೇಡ ತಿನ್ನಿಸ್ತೀನಿ, ಬೆ ಬೆ ಬೇಡ, ಬಾರೆ ನಂದಿನಿ ಪಿಕ್ಚರ್ ತೋರಿಸ್ತೀನಿ, ಬೇಡ ಬೇಡ, ನೋಡಮ್ಮ ಇಂಗ್ಲೀಷ್ ನೀನು ಕಲಿಬೇಕು,  ಇಲ್ಲ ಅಂದ್ರೆ ಐಟಿಲಿ ಕಷ್ಟ ಆಗುತ್ತೆ ಸರ್ ನಾನು ಕನ್ನಡ ಮೀಡಿಯಾಂನಲ್ಲಿ ಓದಿದ್ದೆ. ಅದಕ್ಕೆ ನನ್ನ ಇಂಗ್ಲೀಷ್ ಅಷ್ಟಕಷ್ಟೆ,  ಐ ಕ್ಯಾನ್ ಟ್ರೈ ಐ ಕ್ಯಾನ್ ಟಾಕ್, ಬಟ್ ವಾಟ್ ಐ ಸ್ಪೀಕ್ ಇಟ್ಸ್ ಬಟ್ಲರ್ ಇಂಗ್ಲೀಷ್'  ಇದು ಈ ಹಾಡಿನ ಲಿರೀಕ್ಸ್‌ ಆಗಿದೆ.

click me!