TRP: ಮೊದಲ ಸ್ಥಾನದಲ್ಲಿ ಹಿಟ್ಲರ್ ಕಲ್ಯಾಣ, ಎರಡನೇ ಸ್ಥಾನ ಪಾರು....!

Suvarna News   | Asianet News
Published : Oct 03, 2021, 03:16 PM IST
TRP: ಮೊದಲ ಸ್ಥಾನದಲ್ಲಿ ಹಿಟ್ಲರ್ ಕಲ್ಯಾಣ, ಎರಡನೇ ಸ್ಥಾನ ಪಾರು....!

ಸಾರಾಂಶ

ವಿಭಿನ್ನ ಕಥೆಗಳಿಗೆ ಫಿದಾ ಆದ ವೀಕ್ಷಕರು. ಹಿಟ್ಲರ್ ಕಲ್ಯಾಣ ಒಂಥರಾ ಸೂಪರ್ ಎಂದ ನೆಟ್ಟಿಗರು...

ಜೀ ಕನ್ನಡ ವಾಹಿನಿಯಲ್ಲಿ(Zee Kannada) ಪ್ರಸಾರವಾಗುತ್ತಿರುವ ಧಾರವಾಹಿಗಳು ಒಂದಕ್ಕಿಂತ ಒಂದು ವಿಭಿನ್ನವಾಗಿವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಪ್ರಸಾರವಾಗುತ್ತಿರುವ ಧಾರವಾಹಿಗಳು ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೂ ದೊಡ್ಡ ಕ್ರೇಜ್ ಹುಟ್ಟು ಹಾಕಿದೆ. ಹೀಗಾಗಿ ಟಿಆರ್‌ಪಿಯಲ್ಲಿ(TRP) ಅವುಗಳೇ ಮೊದಲ ಸ್ಥಾನ ಪಡೆದುಕೊಳ್ಳುತ್ತಿವೆ.

ಕೆಲವು ತಿಂಗಳಿಂದ ಪ್ರಸಾರವಾಗುತ್ತಿರುವ ಹಿಟ್ಲರ್ ಕಲ್ಯಾಣ(Hitler Kalyana) ಧಾರವಾಹಿ ಒಂದು ರೀತಿ ವಿಭಿನ್ನವಾಗಿದೆ. ಎರಡನೇ ಮದುವೆ ಆಗುತ್ತಿರುವ ನಟ, ಮದುವೆನೇ ಬೇಡ ಎಂದು ಕುಣ್ಣೀರಿಡುತ್ತಿರುವ ನಟಿ. ಇವರಿಬ್ಬರಿಂದ ಎರಡೂ ಕುಟುಂಬಗಳು ಗೊಂದಲದಲ್ಲಿ. ಎಜೆ ಪರ್ಫೆಕ್ಟ್ ಮ್ಯಾನ್, ಲೀಲ ಎಡವಟ್ಟಿನ ರಾಣಿ. ಮದುವೆ ಆಗು ಎಂದು ನಟ ಹಿಂದೆ ಬಿದ್ದರೆ ಈ ಅಂಕಲ್ ಸಹವಾಸವೇ ಬೇಡ ಎಂದು ಓಡಿ ಹೋಗುತ್ತಿರುವ ಸುಂದರಿ. ಏನೋ ಮಾಡಲು ಹೋಗಿ ಏನೋ ಮಾಡಿ ಮತ್ತೆ ಎಜೆ ಕೈಗೆ ಸಿಕ್ಕಾಕೊಳ್ಳುತ್ತಿರುವ ಲೀಲಾ(Leela). ಇವರು ಮದುವೆ ಆಗ್ತಾರಾ ಇಲ್ಲವಾ ಅನ್ನೋದು ವೀಕ್ಷಕರಿಗೆ ಕುತೂಹಲ ಹೆಚ್ಚಿಸಿದೆ. 

ಈ ಕುತೂಹಲದಿಂದಲೇ ಟಿಆರ್‌ಪಿಯಲ್ಲಿ ಹಿಟ್ಲರ್ ಕಲ್ಯಾಣ ಮೊದಲ ಸ್ಥಾನ ಪಡೆದುಕೊಂಡಿದೆ. ಇನ್ನು ಅರಸನ ಕೋಟೆ ಅಖಿಲಾಂಡೇಶ್ವರಿ ಬಲೆಯಲ್ಲಿ ಸಿಲುಕಿಕೊಂಡಿರುವ ಪಾರು(Paru) ಪ್ರೀತಿ ಹೇಳಿಕೊಳ್ಳಲಾಗದೆ, ತಂದೆಯ ನೋವು ಹೀಗೆ ಮುಂದೆ ಹೇಗೆ ಹೆಜ್ಜೆ ಇಡಬೇಕು ಎಂದು ಚಿಂತಿಸುತ್ತಿದ್ದಾರೆ. ಅಖಿಲಾಂಡೇಶ್ವರಿ ಸೊಸೆ ಆಗೇ ಬಿಟ್ಟಳು ಎನ್ನುವಷ್ಟರ ಮತ್ತೊಂದು ತೊಂದರೆ. ಈ ಗೊಂದಲ ವೀಕ್ಷಕರಿಗೆ ಕುತೂಹಲ ಹೆಚ್ಚಿಸಿದ ಕಾರಣ ಟಿಆರ್‌ಪಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ.

ಅಬ್ಬಾ! ಕಿರುತೆರೆ ನಟಿ ಐಶ್ವರ್ಯಾ ಬಸ್ಪುರೆ ವೇಟ್‌ ಲಾಸ್ ನೋಡಿ ನೆಟ್ಟಿಗರು ಶಾಕ್

ಮೂರನೇ ಸ್ಥಾನದಲ್ಲಿ ಅನು-ಅರ್ಯವರ್ಧನ್ 'ಜೊತೆ ಜೊತೆಯಲಿ'(Jothe Jotheyali) ಧಾರವಾಹಿ ಇದೆ. ಒಂದು ವಾರಗಳ ಕಾಲ ಬೆಂಗಳೂರಿನ ರೆಸಾರ್ಟ್‌ ಒಂದರಲ್ಲಿ ಅದ್ಧೂರಿ ಮದುವೆ ಕಾರ್ಯಕ್ರಮ ಮಾಡಿದ್ದರು. 500 ಸಂಚಿಕೆ ಪೂರೈಸಿದ ಧಾರಾವಾಹಿ ಅನು ಹಾಗೂ ಆರ್ಯಗೆ ಡಿಫರೆಂಟ್ ಲುಕ್ ನೀಡಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ಕಲರ್ಸ್ ಕನ್ನಡ(Colors Kannada) ವಾಹಿನಿಯ ಮಂಗಳ ಗೌರಿ(Mangala Gowri Maduve) ಮದುವೆ ಇದೆ. ಮಂಗಳ ಮಗುವನ್ನು ಹುಡುಕುವ ಅವಸರಲ್ಲಿದ್ದಾಳೆ. ಸೋಷಿಯಲ್ ಮೀಡಿಯಾದಲ್ಲಿ ಈ ಧಾರಾವಾಹಿಯನ್ನು ಹೆಚ್ಚಿಗೆ ಟ್ರೋಲ್ ಮಾಡುತ್ತಾರೆ. ಈ ಧಾರಾವಾಹಿಯಲ್ಲಿ ನಟಿಸುವ ಯಾರಿಗೂ ಸಾವಿಲ್ಲ ಎಂದು ಕಾಲೆಳೆಯುತ್ತಾರೆ. ಹಾಗೇ ಐದನೇ ಸ್ಥಾನದಲ್ಲಿ ಗಟ್ಟಿಮೇಳ(Gattimela) ಧಾರಾವಾಹಿ ಇದೆ. ಅಮೂಲ್ಯ ಮತ್ತು ವೇದಾಂತ್ ಮದುವೆ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ತುಂಬಿದ ಕುಟುಂಬವನ್ನು ಬಿಟ್ಟು ಹೋಗಬೇಕು ಎಂಬ ದುಃಖದಲ್ಲಿ ಅಮುಲ್ಯಾ ಇದ್ದಾಳೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಸಮಾನ್ಯಳಲ್ಲಿ ಅಸಮಾನ್ಯ ಈ ಪುಟಾಣಿ: Naa Ninna Bidalaare ಹಿತಾ ನಿಬ್ಬೆರಗಾಗುವ ಫೋಟೋಶೂಟ್​!
Bigg Boss ಅಭಿಷೇಕ್​ಗೆ ದೊಡ್ಮನೆಯಿಂದ ಸಿಕ್ಕಿರೋ ಸಂಭಾವನೆ ಎಷ್ಟು? ಫ್ಯಾನ್ಸ್​ ನಿರೀಕ್ಷೆ ಸುಳ್ಳಾಗೋಯ್ತು!