
ಮುಂಬರುವ ಸೆಪ್ಟೆಂಬರ್ 28ಕ್ಕೆ ‘ಬಿಗ್ ಬಾಸ್ ಕನ್ನಡ ಸೀಸನ್ 12ʼ ಶೋ ( Bigg Boss Kannada Season 12 ) ಶುರುವಾಗುವುದು. ಈ ಬಾರಿ ಯಾರು? ಯಾರು ಬಿಗ್ ಬಾಸ್ ಮನೆ ಪ್ರವೇಶ ಮಾಡಲಿದ್ದಾರೆ ಎಂಬ ಕುತೂಹಲ ಶುರುವಾಗಿದೆ. ಇದರ ಜೊತೆಗೆ ಯಾರು ಯಾರು ಬಿಗ್ ಬಾಸ್ ಮನೆಗೆ ಬರಬೇಕು ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡಿ ಸೌಂಡ್ ಮಾಡುತ್ತಿರುವ ಕಿಪ್ಪಿ ಕೀರ್ತಿ. ಮಾತುಗಳಿಂದ ಅವರು ಟ್ರೋಲ್ ಆಗಿದ್ದೇ ಹೆಚ್ಚು. ಅದರಲ್ಲಿ ಇವರ ಲವ್ ಸ್ಟೋರಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.
ಕನ್ನಡ ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಿರುವ ಜ್ಯೋತಿ ರೈ ಅವರು ಈಗ ಫಿಟ್‌ನೆಸ್ ಕಡೆಗೆ ಗಮನ ಕೊಡುತ್ತಿದ್ದಾರೆ. ಇವರ ಮಾದಕ ಫೋಟೋಗಳು ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಂತೂ ಹೌದು.
ಬಿಗ್ ಬಾಸ್ ಕನ್ನಡ ಒಟಿಟಿಯಲ್ಲಿ ಭಾಗವಹಿಸಿರುವ ಸೋನು ಶ್ರೀನಿವಾಸ್ ಗೌಡ ಅವರು ಟಿವಿ ಸೀಸನ್‌ಗೆ ಬರಲಿ ಎಂದು ಕೆಲವರು ಹೇಳುತ್ತಿದ್ದಾರೆ. ಈಗ ಅವರು ಯುಟ್ಯೂಬ್‌ನಲ್ಲಿ ವಿಡಿಯೋ ಅಪ್‌ಲೋಡ್ ಮಾಡುತ್ತ, ಬ್ರ್ಯಾಂಡ್ ಪ್ರಚಾರಗಳನ್ನು ಮಾಡುತ್ತ ಬ್ಯುಸಿ ಆಗಿದ್ದಾರೆ.
ದೇಶ-ವಿದೇಶಗಳನ್ನು ಸುತ್ತಿ ಅಲ್ಲಿನ ವೈವಿಧ್ಯಮಯ ಬದುಕಿನ ಅನಾವರಣ ಮಾಡುವ ಡಾ ಬ್ರೋ ಅವರಿಗೆ ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗವಿದೆ. ಇವರು ಈ ಬಾರಿ ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ.
ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುವ ಸ್ಯಾಮ್ ಸಮೀರ್ ಈ ಬಾರಿ ಬಿಗ್ ಬಾಸ್ ಶೋಗೆ ಬರೋದಿಲ್ಲ ಎಂದು ಹೇಳಿದ್ದಾರೆ. ಆದರೆ ಇವರು ದೊಡ್ಮನೆಗೆ ಬರಬೇಕು ಎಂದು ಕೆಲವರು ಹೇಳುತ್ತಿದ್ದಾರೆ.
ರಿಯಾಲಿಟಿ ಶೋಗಳ ಮೂಲಕ ಹೆಸರು ಮಾಡಿರುವ ನಟಿ ರಮೋಲಾ ಅವರು ಈ ಬಾರಿ ಬಿಗ್ ಬಾಸ್ ಮನೆಗೆ ಬರಲಿ ಎಂದು ಕೆಲವರು ಹೇಳಿದ್ದುಂಟು.
ಯುಟ್ಯೂಬರ್ ಭೂಮಿಕಾ ದೇಶಪಾಂಡೆ ಅವರು ನಟಿ, ಫಿಟ್‌ನೆಸ್ ಕೋಚ್, ಮಾಡೆಲ್ ಹೌದು. ಸಾಕಷ್ಟು ಕಿರುಚಿತ್ರಗಳ ಮೂಲಕ ಜನರಿಗೆ ಹತ್ತಿರ ಆಗಿರುವ ಅವರು ಬಿಗ್ ಬಾಸ್ ಮನೆಗೆ ಬರುತ್ತಾರಾ ಎಂದು ಕಾದು ನೋಡಬೇಕಿದೆ.
ಧರ್ಮಸ್ಥಳ ಸೌಜನ್ಯ ಕೇಸ್‌ನಲ್ಲಿ ದನಿ ಎತ್ತಿರುವ ಸಮೀರ್ ಎಂಡಿ ಈಗ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಇವರು ದೊಡ್ಮನೆಗೆ ಬರಬೇಕು ಎಂದು ಹೇಳಲಾಗುತ್ತಿದೆ.
ಕಳೆದ ಬಿಗ್ ಬಾಸ್ ಸೀಸನ್‌ನಲ್ಲಿ ಭವ್ಯಾ ಗೌಡ ಸಹೋದರಿ ಸಾಕಷ್ಟು ಜನರ ಮನಸ್ಸು ಗೆದ್ದರು. ದಿವ್ಯಾ ಗೌಡ ಅವರು ಈ ಬಾರಿ ಬಿಗ್ ಬಾಸ್ ನೋಡ್ತಾರಾ? ಇಲ್ಲವಾ ಎಂದು ಕಾದು ನೋಡಬೇಕಿದೆ.
ರೀಲ್ಸ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ರೇಷ್ಮಾ ಅವರು ‘ಗಿಚ್ಚಿ ಗಿಲಿಗಿಲಿ’ ಶೋನಲ್ಲಿ ಭಾಗವಹಿಸಿದ್ದರು. ಇವರು ದೊಡ್ಮನೆಗೆ ಬರ್ತಾರಾ? ಇಲ್ಲವಾ ಎಂದು ಕಾದು ನೋಡಬೇಕಿದೆ.
ಅಮೃಂತಾಜನ್ ಸೇರಿದಂತೆ ಕಿರುಚಿತ್ರಗಳ ಮೂಲಕ ಹೆಸರು ಮಾಡಿರುವ ಪಾಯಲ್ ಚೆಂಗಪ್ಪ ಕೂಡ ದೊಡ್ಮನೆಗೆ ಬರಬೇಕು ಎಂಬ ಮಾತು ಕೇಳಿ ಬರುತ್ತಿದೆ.
ಗೀತಾ ಧಾರಾವಾಹಿ ನಟಿ ಶರ್ಮಿತಾ ಗೌಡ ಅವರು ಬಿಗ್ ಬಾಸ್ ಮನೆಗೆ ಬರಬೇಕು ಎಂದು ಕೆಲವರು ಹೇಳಿದ್ದುಂಟು.
ಗಿಲ್ಲಿ ನಟ ಅವರು ಕಾಮಿಡಿ ಶೋಗಳಲ್ಲಿ ಕಾಣಿಸಿಕೊಂಡಿದ್ದವರು. ಇವರು ಬಿಗ್ ಬಾಸ್ ಮನೆಗೆ ಬಂದರೆ ಹಾಸ್ಯಕ್ಕೆ ಕೊರತೆ ಇಲ್ಲ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಕಾಮಿಡಿ ಶೋಗಳಲ್ಲಿ ಕಾಣಿಸಿಕೊಂಡಿರೋ ಮಡೆನೂರು ಮನು ಅವರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಾಂಟ್ರವರ್ಸಿ ಮಾಡಿಕೊಂಡಿರೋ ಅವರು ಈ ಬಾರಿ ದೊಡ್ಮನೆಗೆ ಬಂದರೆ ಅಸಲಿ ಮುಖ ಏನು ಎನ್ನೋದು ಗೊತ್ತಾಗುವುದು ಎಂದು ಕೆಲವರು ಹೇಳಿದ್ದುಂಟು.
ಯುಟ್ಯೂಬರ್, ಬೃಂದಾವನ ಧಾರಾವಾಹಿ ನಟ ವರುಣ್ ಆರಾಧ್ಯ ಬಿಗ್ ಬಾಸ್ ಮನೆಗೆ ಬರ್ತಾರೆ ಎಂದು ಕೆಲ ಸೀಸನ್‌ಗಳಿಂದಲೂ ಮಾತು ಕೇಳಿ ಬರುತ್ತಿದೆ.
ವರ್ಷಾ ಕಾವೇರಿ ಅವರು ಯುಟ್ಯೂಬರ್. ಬಿಗ್ ಬಾಸ್ ಆಫರ್ ಬಂದರೆ ಪಕ್ಕಾ ಹೋಗ್ತೀನಿ ಎಂದು ಅವರೇ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.