Amruthadhaare Serial: ಮುಠ್ಠಾಳ ಕೆಲಸ ಮಾಡಿದ ಗೌತಮ್‌ ದಿವಾನ್;‌ ಕೆಂಡಕಾರಿದ ವೀಕ್ಷಕರು!

Published : Sep 09, 2025, 11:12 AM IST
amruthadhaare serial

ಸಾರಾಂಶ

Amruthadhaare Kannada Serial Today Episode: ‘ಅಮೃತಧಾರೆ’ ಧಾರಾವಾಹಿಯಲ್ಲಿ ಭೂಮಿಕಾ ಹಾಗೂ ಮಗುವಿನ ಹುಡುಕಾಟದಲ್ಲಿರುವ ಗೌತಮ್‌ ದಿವಾನ್‌ಗೆ ಸತ್ಯ ದರ್ಶನ ಆಗಿದೆ. 

‘ಅಮೃತಧಾರೆ’ ಧಾರಾವಾಹಿಯಲ್ಲಿ ( Amruthadhaare Serial ) ಶಕುಂತಲಾಳ ಹಣೆಬರಹ ಏನು ಎಂದು ಗೌತಮ್‌ಗೆ ಗೊತ್ತಾಗಿದೆ. ಶಕುಂತಲಾ, ಜಯದೇವ್‌, ದಿಯಾ ಸೇರಿಕೊಂಡು ಮೋಸ ಮಾಡಿದ್ದಾರೆ ಎಂದು ಭಾಗ್ಯಮ್ಮ ಅವನಿಗೆ ಹೇಳಿದ್ದಾರೆ. ಆಸ್ತಿಗೋಸ್ಕರ ಈ ರೀತಿ ಕೆಲಸ ಮಾಡಿದರು ಎಂದು ಬೇಸರಗೊಂಡು, ಗೌತಮ್‌ ಎಲ್ಲ ಆಸ್ತಿಯನ್ನು ಅವರಿಗೆ ಬರೆದುಕೊಟ್ಟು ಮನೆಯಿಂದ ಹೊರಟು ಹೋಗಿದ್ದಾನೆ.

ವೀಕ್ಷಕರು ಏನು ಹೇಳಿದರು?

  • ಆ ಆಸ್ತಿ ಎಲ್ಲವನ್ನೂ ಯಾವುದಾದರೂ ಅನಾಥಾಶ್ರಮಕ್ಕೆ ಬರೆದಿದ್ದರೆ, ಮೆಚ್ಚಿಕೊಳ್ಳುತ್ತಿದ್ದೆವು. ಅದು ಬಿಟ್ಟು ಎಲ್ಲ ಆಸ್ತಿಯನ್ನು ತಿಂದು ತೇಗುವಂಥವ್ರಿಗೆ ಬರೆದುಕೊಟ್ಟು ಹೋಗಿದ್ದು ಒಂದು ಚೂರು ಸರಿ ಕಾಣ್ತಾ ಇಲ್ಲಾ ! ಒಳ್ಳೆಯವರಿಗೆ ಒಳ್ಳೆತನಕ್ಕೆ ಯಾವತ್ತೂ ಬೆಲೆ ಇಲ್ಲ ಅಂತ ತೋರಿಸಿಕೊಟ್ಟು ಬಿಟ್ರಿ ನೀವು! ಧರ್ಮವನ್ನು ಸೋಲಿಸಿ ಅಧರ್ಮವನ್ನು ಗೆಲ್ಲಿಸಿದ್ದೀರಾ! ಸುಧಾ ಹೆಸರಿಗೋ, ಭಾಗ್ಯಮ್ಮನ ಹೆಸರಿಗೋ ಆಸ್ತಿ ಬರೆದಿದ್ದರೂ ಒಂದು ಅರ್ಥ ಇರುತ್ತಿತ್ತು. ಈಗ ಮತ್ತೆ ಸುಧಾ, ಭಾಗ್ಯಮ್ಮ ಬೀದಿಪಾಲು. ಅದೇ ರಾಗ, ಅದೇ ಹಾಡು. ಜನ ಹೆಂಗೂ ನೋಡ್ತಾರಂತ ಹೆಂಗ್ಹೆಂಗೊ ಕಥೆ ಮಾಡೋದೇ ಇವರ ಕೆಲಸ
  • ಅಷ್ಟೆಲ್ಲ ಆಸ್ತಿ ಪಾಸ್ತಿ ಜಮೀನು ಮನೆ ಅನಾಥಾಶ್ರಮಕ್ಕೆ ದಾನವಾಗಿ ಕೊಟ್ಟರೆ ಚೆನ್ನಾಗಿತ್ತು. ಅದನ್ನು ಬಿಟ್ಟು ಶಕುಂತಲಾ ಮತ್ತು ಅವಳ ಮಕ್ಕಳಿಗೆ ಕೊಟ್ಟೆಯಲ್ಲ ಅದಕ್ಕಿಂತ ದೊಡ್ಡ ಪಾಪ ಯಾವುದು ಇಲ್ಲ
  • ಎಲ್ಲ ಆಸ್ತಿಯನ್ನು ಅವರಿಗೆ ಕೊಟ್ರೆ ಆರಾಮಾಗಿರ್ತಾರೆ. ಆದರೆ ಅನ್ಯಾಯಕ್ಕೆ ಯಾವ ಬೆಲೆ ಸಿಕ್ತು? ಅನ್ಯಾಯ ಮಾಡಿದವರಿಗೆ ನೀವು ನಿಮ್ಮ ಆಸ್ತಿಯಲ್ಲ ಕೊಟ್ರೆ ಹೇಗೆ? ಗೌತಮ್ ಯಾವ ರೀತಿ ಸಂಪಾದನೆ ಮಾಡಿದ್ರೋ, ಅದೇ ರೀತಿ ಅವರು ಸಂಪಾದನೆ ಮಾಡುತ್ತಾರೆ. ಬುದ್ಧಿ ಕಲಿಸಿದರೆ ಆ ದಾರಾವಾಹಿಯಿಂದ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಕೊಟ್ಟಂಗಾಗುತ್ತದೆ. ನಿಮ್ಮ ಶ್ರಮ ಹಾಗೂ ಕರ್ನಾಟಕ ಜನತೆ ಅವರ ಸಮಯವನ್ನು ನಮ್ಮ ಧಾರವಾಹಿಗೆ ಮೀಸಲಿಟ್ಟು ಎಲ್ಲ ಎಪಿಸೋಡ್‌ಗಳನ್ನು ನೋಡುತ್ತಾರೆ. ಅವರ ಸಮಯಕ್ಕೆ ಬೆಲೆ ಕೊಡುವಂತಹ ಸಂಚಿಕೆಗಳನ್ನು ನೀಡಿ, ಜನರ ಸಮಯವನ್ನು ವ್ಯರ್ಥ ಮಾಡಬೇಡಿ
  • ಅದೇ ಆಸ್ತಿಗೋಸ್ಕರ ಜಯದೇವ್ ಶಕುಂತಲಾಳನ್ನು ಸಾಯಿಸ್ತಾನೆ. ಅಣ್ಣಯ್ಯ ಸಿನಿಮಾ ಸ್ಟೋರಿ ಆಗುವುದು. ಆದರೆ ಅದರಲ್ಲಿ ಹೀರೋ ಓದದೇ ಇರೋನು, ಇವನು ಓದಿರೋ ದಡ್ಡ ಅಷ್ಟೇ.

 

  • ಮೊದಲೇ ಆಸ್ತಿಗಾಗಿ ಶಕುಂತಲ ಮೆರೆಯುತ್ತಿದ್ದಳು. ಈಗ ಸರಿ ಆಯ್ತು, ಇದಕ್ಕೆನಾ ಗೌತಮ್ ಕಷ್ಟಪಟ್ಟು ಆಸ್ತಿ ಮಾಡಿದ್ದು? ನರರಾಕ್ಷಕರ ಬಾಯಿಗೆ ತುತ್ತಾದಾಗ ನಾವು ಪ್ರೇಕ್ಷಕರು ಮಾತ್ರ ಏನು ಮಾಡಲು ಸಾಧ್ಯ?
  • ಆಸ್ತಿಗಾಗಿ ಇಷ್ಟೆಲ್ಲಾ ಕುತಂತ್ರ ಮಾಡಿರೋದು ಅಂತಾ ಗೊತ್ತದ್ಮೇಲೂ ಎಲ್ಲ ಆಸ್ತಿಯನ್ನು ಅವರ ಹೆಸರಿಗೆ ಬರೆದು ಮನೆಬಿಟ್ಟು ಹೋಗುತ್ತಿರುವುದು ಸರಿಯಲ್ಲ. ಅಧರ್ಮಕ್ಕೆ ಮೇಲುಗೈ ಆದ್ರೇ ಒಳ್ಳೆಯತನಕ್ಕೆ ಕಾಲ ಇಲ್ಲ ಅನ್ನೋದನ್ನು ತೋರಿಸಿಕೊಟ್ಟ ನಿರ್ದೇಶಕರಿಗೆ ಒಂದು ಧಿಕ್ಕಾರ..
  • ಇರೋ ಆಸ್ತಿಯನ್ನು ತಂಗಿ ಹೆಸರಿಗೋ ಅಮ್ಮನ ಹೆಸರಿಗೋ ಮಾಡಿದ್ರೆ ಒಂದು ಮೆಚ್ಚುಗೆ ಇರುತ್ತಿತ್ತು....ಈ ಬದಲಾವಣೆ ಸ್ವಲ್ಪವೂ ಸರಿಯಿಲ್ಲ.
  • ಗೌತಮ್ ದಿವಾನ್ ಅಲ್ಲಲ್, ದಿವಾಳಿ ಅಂತ ಹೆಸ್ರು ಬದಲಾಯ್ಸಿಕೊಳ್ಳಬೇಕಾ ಹಾಗಾದ್ರೆ..
  • ಎಂತ ದಡ್ಡರು ನೀವು? ಅವರನ್ನು ಮನೆ ಬಿಟ್ಟು ಓಡಿಸೋದು ಬಿಟ್ಟು ನೀವೇ ಬುದ್ದು ತರಹ ಹೊರಗೆ ಬಂದಿದ್ದು ತಪ್ಪು
  • ಮೋಸಕ್ಕೆ ಕಾಲ ಅನ್ನೋದಾದ್ರೆ ನಾವ್ಯಾಕೆ‌ ಈ ಧಾರಾವಾಹಿ ನೋಡ್ಬೇಕು
  • ಜನರು ಇದನ್ನೇ ಅನುಸರಿಸಿದ್ರೆ ಅನ್ನೋ ಪ್ರಜ್ಞೆ ಆದ್ರೂ ಬೇಡ್ವಾ ನಿರ್ದೇಶಕರಿಗೆ...
  • ಎಂತ ಅವಸ್ಥೆ ಮರ್ರೆ...ಇನ್ನು ವಿಷಧಾರೆ ಅಂತ ನಾಮಕರಣ ಮಾಡಿ ಸಾಕು
  • ಭಾಗ್ಯಮನಿಗೆ ಮಾತು ಬಂದು ಎಲ್ಲ ವಿಷಯ ಗೌತಮಗೆ ಹೇಳಿದ್ದರೆ ಈ ಪರಿಸ್ಥಿತಿ ಬರ್ತಿರ್ಲಿಲ್ಲ. ತೂಗುಡಾಸ್ತಾ ಇರೋರಿಗೆ ಹಾಸಿಗೆ ಹಾಸಿ ಬ್ಲಾಂಕೆಟ್ ಹೊದ್ದಿಸಿದ ಹಾಗೆ ಆಯಿತು. ಡೈರೆಕ್ಟರ್‌ಗೆ ಅಷ್ಟು ದೊಡ್ಡಮನೆ ಬಾಡಿಗೆ, ಎಲ್ಲರಿಗೂ ಸಂಬಳ ಕೊಡಲು ಕಷ್ಟ ಆಗ್ತಿರಬೇಕು ಅದಕ್ಕೆ ಭೂಮಿಕಾ ಗೌತಮ್‌, ಬಡವರು ಮಾಡಿದರೆ ಬಾಡಿಗೇನು ಕಮ್ಮಿ ಸಂಬಳನು ಕಮ್ಮಿ ಆಗುತ್ತೆ ಅಲ್ವಾ?
  • ಹೋಗಿ ಹೋಗಿ ಆ ಪಾಪಿಗಳಿಗೆ ಕೊಡೋದ. ಮನೆಯಿಂದ ಆಚೆ ಹಾಕಬಹುದಿತ್ತು. ಅವರಿಬ್ಬರ ಜೋಡಿ ಚೆನ್ನಾಗಿತ್ತು ಅಂತ ನೋಡ್ತಾ ಇದ್ವಿ. ಈಗ ಅದು ಕೂಡಾ ಹಳ್ಳ ಹಿಡಿಯಿತು.

 

  • ಎಂತ ಮೂರ್ಖರು ಇವರು... ಅವರೆಲ್ಲ ಆಸ್ತಿಗಾಗಿಯೇ ಅಷ್ಟೆಲ್ಲ ಮಾಡಿದ್ರು,, ನೀವೂ ಇಷ್ಟು ಸುಲಭವಾಗಿ ಕೊಟ್ಟು ಹೋದ್ರಲ್ಲ.. ಏನು ದಡ್ಡರ ನೀವೂ? ಹೀಗೆ ಕೊಡೋ ಹಾಗಿದ್ರೆ ವಿಲ್ ಯಾಕೆ ಮಾಡ್ಬೇಕಿತ್ತು? ನನಗೆ ಏನು ಬೇಡಾ ಅಂತಾ ಅವತ್ತೇ ಎಲ್ಲಾ ಕೊಡಬಹುದಿತ್ತು ಅಲ್ವಾ.. ಗೌತಮ್ ದಡ್ಡ ರೀ ನೀವೂ.. ಭೂಮಿ ಭಯಪಟ್ಟು ಹೋದಳು.
  • ಆಸ್ತಿಯನ್ನು ಅನಾಥ ಆಶ್ರಮಕ್ಕೆ ಬರೆದಿದ್ದರೆ? ಆಗ ಇವರಿಗೆ ಬುದ್ಧಿ ಕಲಿಸಿದ ಹಾಗೆ ಆಗುತ್ತಿತ್ತು. ಈಗ ಕಳ್ಳರಿಗೆ ಮೋಸಗಾರರಿಗೆ ದಾರಿ ಆಯಿತು.
  • ತಪ್ಪು ನಿರ್ಧಾರ ಮಾಡಿ ಆಸ್ತಿ ಕೊಟ್ಟು ಬರಬಾರದಿತ್ತು, ಅವರೆಲ್ಲರನ್ನು ಒದ್ದು ಜೈಲಿಗೆ ಹಾಕಬೇಕು
  • ನಿರ್ದೇಶಕರೇ, ಕಥೆಗೆ ಒಂದು ಅರ್ಥವೇ ಇಲ್ಲ.

ಕಥೆ ಏನು?

ಗೌತಮ್‌ ಹಾಗೂ ಭೂಮಿಕಾಗೆ ಮಗ ಇದ್ದಾನೆ, ಆದರೆ ಹೆರಿಗೆ ಟೈಮ್‌ನಲ್ಲಿ ಮಗಳು ಹುಟ್ಟಿರೋದು, ಅವಳು ಕಾಣೆ ಆಗಿರೋ ವಿಚಾರ ಭೂಮಿಕಾಗೆ ತಡವಾಗಿ ಗೊತ್ತಾಯಿತು. ಇದಕ್ಕೆಲ್ಲ ಗೌತಮ್ ಮಲತಾಯಿ‌ ಶಕುಂತಲಾ ಕಾರಣ ಎಂದು ಭೂಮಿಕಾ, ಮನೆ ಬಿಟ್ಟು ಹೋಗಿದ್ದಾಳೆ. ಈಗ ಗೌತಮ್‌ಗೆ ಮಲತಾಯಿ, ಮಲತಾಯಿಯೇ ಅಂತ ಗೊತ್ತಾಗಿದೆ. ಈಗ ಗೌತಮ್‌ ಎಲ್ಲ ಆಸ್ತಿಯನ್ನು ಅವಳಿಗೆ ಬರೆದುಕೊಟ್ಟು ಹೋಗಿದ್ದಾನೆ.

ಪಾತ್ರಧಾರಿಗಳು

ಗೌತಮ್‌ ದಿವಾನ್-‌ ರಾಜೇಶ್‌ ನಟರಂಗ

ಭೂಮಿಕಾ- ಛಾಯಾ ಸಿಂಗ್‌

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ
Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?