ಮನೆ ಬಿಟ್ಟ ತುಳಸಿ- ಅತ್ತೆ ಬರದೇ ಮನೆಯೊಳಕ್ಕೆ ಪ್ರವೇಶ ಮಾಡಲ್ಲ ಎಂದ ವಧು! ಭಲೇ ದೀಪಿಕಾ ಅಂದ ಫ್ಯಾನ್ಸ್​...

Published : Feb 05, 2024, 12:41 PM IST
ಮನೆ ಬಿಟ್ಟ ತುಳಸಿ- ಅತ್ತೆ ಬರದೇ ಮನೆಯೊಳಕ್ಕೆ ಪ್ರವೇಶ ಮಾಡಲ್ಲ ಎಂದ ವಧು! ಭಲೇ ದೀಪಿಕಾ ಅಂದ ಫ್ಯಾನ್ಸ್​...

ಸಾರಾಂಶ

ಅವಿ-ದೀಪಿಕಾ ಮದ್ವೆಯಾಗುತ್ತಿದ್ದಂತೆಯೇ ಷರತ್ತಿನ ಅನ್ವಯ ತುಳಸಿ ಮನೆ ಬಿಟ್ಟಿದ್ದಾಳೆ. ತುಳಸಿ ಅಮ್ಮ ಇಲ್ಲದೇ ಮನೆ ಪ್ರವೇಶ ಮಾಡುವುದಿಲ್ಲ ಎಂದಿದ್ದಾಳೆ ದೀಪಿಕಾ. ಮುಂದೇನು?   

ಎಲ್ಲಾ ಸಮಸ್ಯೆಗಳನ್ನು ದಾಟಿ ತುಳಸಿ ಮಾಧವ್​ ಮಗ ಅವಿಯ ಮದುವೆ ಮಾಡಿಸಿದ್ದಾಳೆ. ಅವಿಯ ಮದುವೆ ಆಗಬಾರದು ಎಂದು ಚಿಕ್ಕಮ್ಮ ಶಾರ್ವರಿ ಮಾಡಿದ ಪ್ಲ್ಯಾನ್​ ಎಲ್ಲಾ ಠುಸ್​ ಆಗಿದೆ. ಅವಿಯ ಮಾವನ ಜೊತೆ ಸೇರಿ ತಂತ್ರ ಹೆಣೆದಿದ್ದಳು ಶಾರ್ವರಿ. ಆದರೆ ಅವಿಯ ಪ್ರೇಯಸಿ ಇದಕ್ಕೆ ಅವಕಾಶ ಕೊಡದೇ ಅಪ್ಪನ ವಿರುದ್ಧವೇ ತಿರುಗಿ ಬಿದ್ದಳು. ಇದರಿಂದ ಮದುವೆಯೇನೋ ಆಗಿಬಿಟ್ಟಿದೆ. ಆದರೆ ಮದುವೆ ಮನೆಯಲ್ಲಿ, ಅವಿಯ ಮಾವ ತುಳಸಿಗೆ ಕಂಡೀಷನ್​ ಹಾಕಿದ್ದಾನೆ. ಅದೇನೆಂದರೆ, ನನ್ನ ಮಗಳು ದೀಪಿಕಾ ಬರಬೇಕು ಎಂದರೆ ಮದುವೆ ಮನೆ ಹೊಸಲು ದಾಟಿ ಹೋಗಬೇಕು ಎಂದು. ಸದಾ ಎಲ್ಲರ ಹಿತವನ್ನೇ ಬಯಸುವ ತುಳಸಿ ತನ್ನಿಂದ ಮನೆಯವರಿಗೆ ಸಮಸ್ಯೆ ಆಗಬಾರದು ಎಂದುಕೊಂಡು ಇದಕ್ಕೆ ಒಪ್ಪಿದ್ದಾಳೆ. ಅತ್ತ ಮದುವೆಯಾಗುತ್ತಿದ್ದಂತೆಯೇ ಇತ್ತ ಮನೆ ಬಿಟ್ಟು ಹೋಗಿದ್ದಾಳೆ. ಆದರೆ ಅವಿಯ ಪತ್ನಿಗೆ ಅಪ್ಪನ ಕುತಂತ್ರದ ಅರಿವಿದೆ. ತುಳಸಿಯಿಂದಲೇ ತಮ್ಮ ಮದುವೆ ಸಾಧ್ಯವಾಗಿದೆ ಎನ್ನುವುದೂ ಆಕೆಗೆ ಗೊತ್ತಿದೆ.
 
ದೀಪಿಕಾಳ ಮನೆ  ತುಂಬಿಸಿಕೊಳ್ಳುವ ಹೊತ್ತಿನಲ್ಲಿ ಎಲ್ಲರೂ ತುಳಸಿಗಾಗಿ ಹುಡುಕಾಡಿದ್ದಾರೆ. ಆದ ದೀಪಿಕಾಳ ಅಪ್ಪ, ನನ್ನ ಮಗಳನ್ನು ಬೇಗನೇ ಮನೆ ತುಂಬಿಸಿಕೊಳ್ಳಿ, ಆಮೇಲೆ ತುಳಸಿಯನ್ನು ಹುಡುಕುವಿರಂತೆ ಎಂದಿದ್ದಾರೆ.  ಎಲ್ಲರೂ ದೀಪಿಕಾಳನ್ನು ಮನೆ ತುಂಬಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ ದೀಪಿಕಾ, ಹೊಸಲು ದಾಟುವ ಮೊದಲೇ  ತುಳಸಿ ಅತ್ತೆ ಎಲ್ಲಿ ಎಂದು ಕೇಳಿದ್ದಾಳೆ. ಇದನ್ನು ಕೇಳಿ ಶಾರ್ವರಿಗೆ ಶಾಕ್​ ಆಗಿದೆ. ದೀಪಿಕಾಗೆ ಮೊದಲೇ ಸಂದೇಹ ಬಂದಿದ್ದರಿಂದ ಈ ರೀತಿ ಕೇಳಿದ್ದಾಳೆ.  ಅದೇ ಕಾರಣಕ್ಕೆ ತುಳಸಿ ಅತ್ತೆ ಇಲ್ಲದೇ ನಾನು ಮನೆಯ ಹೊಸಿಲು ತುಳಿಯುವುದಿಲ್ಲ ಎಂದಿದ್ದಾಳೆ. 

ಡ್ರೋನ್​ ಪ್ರತಾಪ್​ ರನ್ನರ್​ ಅಪ್​ ಆದ ಕುರಿತು ನಟಿ ತಾರಾ ಹೇಳಿದ್ದೇನು? ನೇರಪ್ರಸಾರದಲ್ಲಿ ಫ್ಯಾನ್ಸ್​ ಜೊತೆ ಮಾತು...

ಎಲ್ಲರೂ ಗಾಬರಿಯಾಗಿದ್ದಾರೆ. ಮುಂದೆನು? ತುಳಸಿ ಮನೆಗೆ ಬಂದರೆ ಅವಿಗೆ ತೊಂದರೆ. ಮೊದಲೇ ಅವನಿಗೆ ತುಳಸಿ ಅಂದರೆ ಆಗಿಬರುವುದಿಲ್ಲ. ತುಳಸಿ ಮನೆಗೆ ವಾಪಸಾದರೆ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಖಂಡಿತ. ಇನ್ನು ತುಳಸಿ ಮನೆಗೆ ಬರದೇ ತಾನು ಮನೆ ಪ್ರವೇಶ ಮಾಡುವುದಿಲ್ಲ ಎಂದು ದೀಪಿಕಾ ಹೇಳುತ್ತಿದ್ದಾಳೆ. ಈ ಭಾರಿ ಟ್ವಿಸ್ಟ್​ ಕುರಿತು ಪ್ರೊಮೋ ಬಿಡುಗಡೆ ಮಾಡಲಾಗಿದೆ.  

ಇದಕ್ಕೂ ಮೊದಲು ದೀಪಿಕಾ ಅಪ್ಪ ಈ ಮದುವೆಯನ್ನು ನಿಲ್ಲಿಸಲು ಮದುವೆ ಒಪ್ಪಿಕೊಳ್ಳದಂತೆ ದೀಪಿಕಾಗೆ ಬುದ್ಧಿ ಹೇಳಿದ್ದ. ನೀನೊಂದು ವೇಳೆ ಅವಿಯ ಜೊತೆ ಮದುವೆಗೆ ಒಪ್ಪಿಕೊಂಡರೆ ನಾನು ನಿನ್ನ ಅಮ್ಮನಿಗೆ ಡಿವೋರ್ಸ್​  ಕೊಡುತ್ತೇನೆ ಎಂದಿದ್ದ. ಆದರೆ ಅಪ್ಪನ ಮಾತಿಗೆ ಸೊಪ್ಪು ಹಾಕದಿದ್ದ ದೀಪಿಕಾ, ಅಪ್ಪ ಆಡುತ್ತಿರುವುದು ಎಲ್ಲಾ ಹಸಿಸುಳ್ಳು ಎಂದು ಗೊತ್ತಾಗಿಯೇ ಮದುವೆಗೆ ಒಪ್ಪಿಕೊಂಡು ಅಪ್ಪನಿಗೆ ಮತ್ತು ಮದುವೆ ನಿಲ್ಲಿಸಲು ಶಾರ್ವರಿ ಮಾಡಿದ ಪ್ಲ್ಯಾನ್​ ಠುಸ್​ ಮಾಡಿದ್ದಳು. ಇದೀಗ ಮದುವೆ ಮನೆಯಲ್ಲಿ ತುಳಸಿ ಡಲ್​  ಆಗಿರುವುದನ್ನು ಮೊದಲೇ ನೋಡಿದ್ದ ದೀಪಿಕಾಗೆ ಏನೋ ಸಮಸ್ಯೆ ಆಗಿದೆ ಎನ್ನುವ ಅರಿವಾಗಿತ್ತು. ಇದೇ ಕಾರಣಕ್ಕೆ ತುಳಸಿ ಅಮ್ಮ ಬರದೇ ಮನೆಯೊಳಕ್ಕೆ ಪ್ರವೇಶ ಮಾಡುವುದಿಲ್ಲ ಎಂದಿದ್ದಾಳೆ. ಭಲೆ ಭಲೆ ದೀಪಿಕಾ ಅನ್ನುತ್ತಿದ್ದಾರೆ ಅಭಿಮಾನಿಗಳು. 

ಲೈವ್​ನಲ್ಲಿ ನಮ್ರತಾ ಸೌಂದರ್ಯ ಹೊಗಳಿದ ಕಾರ್ತಿಕ್​: ಸ್ನೇಹಿತ್​ನ ಕಾಲು ಹೀಗೆ ಎಳೆಯೋದಾ ಫ್ಯಾನ್ಸ್​?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!