ಹೆಂಡತಿ- ಅಸ್ಟ್ರಾಲಾಜಿ ಇಬ್ರಲ್ಲಿ ಹೆಚ್ಚು ಪ್ರೀತಿಸೋದು ಯಾರನ್ನು ಅಂತ ಕೇಳಿದ್ರೆ ಹೀಗೆ ಹೇಳೋದಾ ಗುರೂಜಿ?

By Suchethana D  |  First Published Nov 29, 2024, 7:34 PM IST

ಆರ್ಯವರ್ಧನ್‌ ಗುರೂಜಿ ಅವರಿಗೆ ನೀವು ಹೆಂಡತಿ ಮತ್ತು ಅಸ್ಟ್ರಾಲಾಜಿ ಎರಡಲ್ಲಿ ಯಾವುದನ್ನು ಹೆಚ್ಚು ಪ್ರೀತಿಸೋದು ಎಂದು ಕೇಳಿದ್ರೆ ಅವರು ಹೇಳಿದ್ದೇನು ನೋಡಿ!
 


ನಂಬರ್‌ ಎಂದ್ರೆ ನಾನು, ನಾನೆಂದ್ರೆ ನಂಬರ್‌ ಎನ್ನುತ್ತಲೇ ಫೇಮಸ್‌ ಆದವರು ಆರ್ಯವರ್ಧನ್‌ ಗುರೂಜಿ. ಸಂಖ್ಯಾಶಾಸ್ತ್ರದ ಮೂಲಕ ನಂಬರ್‌ನಿಂದಲೇ ಭವಿಷ್ಯ ನುಡಿಯುವ ಗುರೂಜಿ ‘ಬಿಗ್ ಬಾಸ್‌ ಕನ್ನಡ ಓಟಿಟಿ 1’ ಹಾಗೂ ‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮಗಳಲ್ಲಿ ಸ್ಪರ್ಧಿಸಿ ಹೆಸರು ಮಾಡಿದ್ದರು. ಬಿಗ್‌ಬಾಸ್‌ ಮನೆಯಲ್ಲಿಯೂ  ‘ನಾನು ಅಂದ್ರೆ ನಂಬರ್.. ನಂಬರ್‌ ಅಂದ್ರೆ ನಾನು’ ಎನ್ನುತ್ತಲೇ ಆಡಿದ್ದರು. ಅಲ್ಲಿಯೂ ಪ್ರತಿ ಸಲ ನಂಬರ್‌ ನೋಡುತ್ತಲೇ ಭವಿಷ್ಯ ನುಡಿಯುತ್ತಿದ್ದರು. ಬಿ‌ಗ್‌ಬಾಸ್‌ಗೆ ಹೋಗಿ ಬಂದ ಮೇಲೆ ಸಹಜವಾಗಿ ಇವರ ವರ್ಚಸ್ಸು ಹೆಚ್ಚಾಗಿದೆ. ಸಂಖ್ಯಾಶಾಸ್ತ್ರ ಹೇಳಿ ಫೇಮಸ್‌ ಆಗಿರುವುದಕ್ಕಿಂತಲೂ ಹೆಚ್ಚಾಗಿ, ಬಿಗ್‌ಬಾಸ್ ಇವರಿಗೆ ಹೆಸರು ತಂದುಕೊಟ್ಟಿದೆ. ಬಿಗ್ ಮನೆಯಲ್ಲಿದ್ದಾಗಲೇ ಇವರು ತಮಗೆ ತೋಚಿದ್ದನ್ನೆಲ್ಲಾ ಹೇಳಿ,  ಹೇಗೆ ಬೇಕೋ ಹಾಗೆ ಡೈಲಾಗ್ ಹೊಡೆದು ಎಡವಟ್ಟು ಮಾಡಿಕೊಳ್ಳುತ್ತಿರುವುದೂ ಇದೆ.

ಇಂತಿಪ್ಪ ಗುರೂಜಿ, ಡಾನ್ಸ್‌ ಕರ್ನಾಟಕ ಡಾನ್ಸ್‌ ವೇದಿಕೆಯಲ್ಲಿ, ಡಿಸ್ಕೋ ಡಾನ್ಸ್‌ ಸೇರಿದಂತೆ ಭರ್ಜರಿ ಸ್ಟೆಪ್‌ ಹಾಕಿ ಎಲ್ಲರನ್ನೂ ರಂಜಿಸಿದ್ದರು. ಆ ಸಮಯದಲ್ಲಿ ಅವರ ಪತ್ನಿ ಕೂಡ ಅಲ್ಲಿ ಹಾಜರು ಇದ್ದರು. ಆಗ ಪತ್ನಿ ಕಣ್ಣೀರು ಹಾಕುತ್ತಾ,  ಆರ್ಯವರ್ಧನ್​ ಅವರು ತುಂಬಾ ಶ್ರದ್ಧೆಯಿಂದ ಡಾನ್ಸ್​ ಕಲಿಯುತ್ತಿದ್ದಾರೆ. ಬೆಳಿಗ್ಗೆ 5 ಗಂಟೆಗೆಲ್ಲಾ ಮನೆ ಬಿಟ್ಟು ಹೋಗಿಬಿಟ್ಟಿದ್ದರು.  15 ದಿನಗಳಿಂದ ನನ್ನನ್ನು ಮಾತನಾಡಿಸಲಿಲ್ಲ, ಮಕ್ಕಳನ್ನೂ ಮಾತನಾಡಿಸಲಿಲ್ಲ, ಶೂಟಿಂಗ್‌ ಸೆಟ್‌ನಲ್ಲಿಯೇ ಇದ್ದರು ಎಂದು ಕಣ್ಣೀರಿಟ್ಟಿದ್ದರು. ಆಗ ಆರ್ಯವರ್ಧನ್ ಅವರು, ನನಗೆ ಡಾನ್ಸ್​ ಎಂದರೆ ತುಂಬಾ ಇಷ್ಟ. ಇದಕ್ಕಾಗಿ ಏನು ಬೇಕಾದರೂ ಮಾಡಲು ಸಾಧ್ಯ ಎಂದಿದ್ದರು. ಆದರೆ ಇದೀಗ ವಿಭಿನ್ನ ಪ್ರಶ್ನೆಯೊಂದನ್ನು ಕೀರ್ತಿ ನಾರಾಯಣ್‌ ಅವರು, ಆರ್ಯವರ್ಧನ್‌ ಗುರೂಜಿ ಮುಂದೆ ಇಟ್ಟಿದ್ದಾರೆ. ಅದೇನೆಂದರೆ, ನಿಮಗೆ ಪತ್ನಿ ತುಂಬಾ ಇಷ್ಟನೋ, ಅಸ್ಟ್ರಾಲಾಜಿನೋ, ಎರಡಲ್ಲಿ ಒಂದು ಸೆಲೆಕ್ಟ್‌ ಮಾಡೋದಾದ್ರೆ ಯಾವುದನ್ನು ಮಾಡುವಿರಿ ಎಂದು.

Tap to resize

Latest Videos

ವಿಡಿಯೋ ಮಾಡಲು ಹೋದ್ರೆ ಡಾ.ಬ್ರೋ ಕೈಕಟ್ಟಿ ಬಾಕ್ಸಿಂಗ್‌ ಗ್ರೌಂಡ್‌ಗೆ ಇಳಿಸೋದಾ ನೈಜೇರಿಯನ್‌ಗಳು?

ಈ ಪ್ರಶ್ನೆಗೆ ಆರ್ಯನ್‌ ಗುರೂಜಿ ತುಂಬಾ ತಲೆ ಕೆಡಿಸಿಕೊಂಡರು. ಎಲ್ಲಿಂದ ಹುಡುಕಿಕೊಂಡು ಬಂದ್ರಿ ಈ ಪ್ರಶ್ನೆ ಎಂದರು. ಕೂಡಲೇ, ಪತ್ನಿಗಿಂತಲೂ ಹೆಚ್ಚಾಗಿ ಆಸ್ಟ್ರಾಲಾಜಿಯನ್ನು ಪ್ರೀತಿಸುತ್ತೇನೆ ಎಂದು ಹೇಳಿದರು. ಮನೆ  ಸುಮ್ಮನೇ, ಹೆಂಡತಿನೂ ಸುಮ್ಮನೇ ಅಷ್ಟೇ ಎಂದಿದ್ದಾರೆ! ಈ ಹಿಂದೆ ಆರ್ಯವರ್ಧನ್‌ ಗುರೂಜಿ ತಮ್ಮ ಪತ್ನಿಗೆ ಬಹಳ ಹೆದರುವ ವಿಷಯವನ್ನೂ ತಿಳಿಸಿದ್ದರು.  ಅವಳು, ನನ್ನ ತಪ್ಪುಗಳನ್ನು ಕರೆಕ್ಟ್‌ ಆಗಿ ಹುಡುಕಿ ಹೇಳಿಬಿಡುತ್ತಾಳೆ.  ನಾನೂ ಕೂಡಾ ಅವಳಿಗೆ ಆವಾಜ್‌ ಹಾಕ್ತಿನಿ, ಆದರೆ ಆಕೆ ನನ್ನ ತಪ್ಪನ್ನು ಹುಡುಕಿ ತೋರಿಸುತ್ತಾಳೆ, ಆಕೆಯಲ್ಲಿ ಏನೂ ತಪ್ಪು ಸಿಗುವುದಿಲ್ಲ. ಆಕೆ ನನ್ನನ್ನು ಬಹಳ ಪ್ರೀತಿಸುತ್ತಾಳೆ. ಬಿಗ್‌ ಬಾಸ್‌ಗೆ ಹೋಗುತ್ತಿದ್ದೇನೆ ಎಂದು ಹೇಳಿದಾಗ ಆಕೆ ಬಹಳ ಕಣ್ಣೀರಿಟ್ಟಿದ್ದಳು. ಪರಿಚಯದವರನ್ನು ಕರೆಸಿ ಹೇಳಿದಾಗ ಒಪ್ಪಿದಳು ಎಂದಿದ್ದರು.
 
ಡಾನ್ಸ್‌ ಕರ್ನಾಟಕ ಡಾನ್ಸ್‌ ವೇದಿಕೆಯಲ್ಲಿ, ಮೊದಲ ಬಾರಿಗೆ  ಡಿಸ್ಕೊ ಡಾನ್ಸ್​ ಮಾಡಿದ್ದ ಗುರೂಜಿಯನ್ನು ನೋಡಿ ಪತ್ನಿ ಮತ್ತು ಮಗಳು ಅಚ್ಚರಿ ವ್ಯಕ್ತಪಡಿಸಿದ್ದರು.  ಇದೇ ವೇಳೆ ವೇದಿಕೆಯ ಮೇಲೆ ಬಂದ ಅವರ ಪತ್ನಿ, ಜೀವನದಲ್ಲಿ ಎಂದಿಗೂ ನಾನು ಐ ಲವ್​ ಯು ಎಂದು ಹೇಳಿರಲಿಲ್ಲ ಎನ್ನುತ್ತಲೇ ಐ ಲವ್​ ಯೂ ಆರ್ಯ ಎಂದು ಹೇಳಿದ್ದರು. ಇದಕ್ಕೆ ಖುಷಿಯಾದ ಆರ್ಯವರ್ಧನ್​ ಅವರು ಪತ್ನಿಯನ್ನು ಎತ್ತಿಕೊಂಡು ಪ್ರೀತಿಯ ಅಪ್ಪುಗೆ ನೀಡಿದದರು. ಇದಕ್ಕೆ ಗುರೂಜಿ ಅಭಿಮಾನಿಗಳು ಪುಳುಕಿತರಾಗಿದ್ದರು. 

ಬೆಟ್ಟದ ತುದಿ ನಿಂತು ರೀಲ್ಸ್‌ ಮಾಡ್ತಿದ್ದ ಯುವತಿಗೆ ಮುಂದೇನಾಯ್ತು ನೋಡಿ! ಶಾಕಿಂಗ್‌ ವಿಡಿಯೋ ವೈರಲ್

 
 
 
 
 
 
 
 
 
 
 
 
 
 
 

A post shared by @keerthientclinic

click me!