ಭಾಗ್ಯಲಕ್ಷ್ಮಿ ಸೀರಿಯಲ್ ಪ್ರೋಮೋ ಬಿಡುಗಡೆಯಾಗಿದೆ. ಇದನ್ನು ನೋಡಿದ ಅಭಿಮಾನಿಗಳು ಭಾಗ್ಯ ಬೆನ್ನು ತಟ್ಟಿದ್ದಾರೆ. ಜೊತೆಗೆ ಮುಂದಿನ ಕಥೆ ಹೇಗೆ ಸಾಗಬೇಕು ಎಂಬ ಚರ್ಚೆ ಶುರುವಾಗಿದೆ.
ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗ್ತಿರುವ ಭಾಗ್ಯಲಕ್ಷ್ಮಿ ಸೀರಿಯಲ್ (Bhagyalakshmi serial) ಹೊಸ ತಿರುವು ಪಡೆದಿದೆ. ಇಷ್ಟು ದಿನ ತಾಂಡವ್ ತನ್ನ ಸರ್ವಸ್ವ ಅಂತ ಭಾಗ್ಯ ಬದುಕಿದ್ದಳು. ಇಡೀ ತನ್ನ ಜೀವನವನ್ನು ಮನೆ, ಮಕ್ಕಳ ಸಂತೋಷಕ್ಕೆ ಮೀಸಲಿಟ್ಟಿದ್ದಳು. ಆದ್ರೆ ಯಾವಾಗ ತಾಂಡವ್ ಬಣ್ಣ ಬದಲಾಯ್ತೋ ಭಾಗ್ಯ ಕೂಡ ಬದಲಾಗ್ತಿದ್ದಾಳೆ. ವೆಡ್ಡಿಂಗ್ ಆನಿವರ್ಸರಿ (Wedding Anniversary) ದಿನ ಭಾಗ್ಯ, ತಾಂಡವ್ ಗೆ ದೊಡ್ಡ ಶಾಕ್ ನೀಡಿದ್ದಾಳೆ.
ಮದುವೆ ಆನಿವರ್ಸರಿ ಹಿಂದಿನ ದಿನ, ತಾಂಡವ್ ಜೊತೆ ಭರ್ಜರಿ ಶಾಪಿಂಗ್ ಮಾಡಿದ್ದ ಭಾಗ್ಯ, ನಾಳೆ ಏನೋ ವಿಶೇಷವಾಗಿದ್ದು ನಡೆಯುತ್ತೆ ಎಂಬ ಸುಳಿವು ನೀಡಿದ್ದಳು. ಆದ್ರೆ ಅದ್ಯಾರಿಗೂ ಅರ್ಥವಾಗಿರಲಿಲ್ಲ. ಇಡೀ ಮನೆಯನ್ನು ಸಿಂಗರಿಸಿದ್ದ ಭಾಗ್ಯ, ಮದುವೆ ಮಂಟಪವನ್ನು ಸಿದ್ಧಪಡಿಸಿ ತಾಂಡವ್ ಜೊತೆ ಇನ್ನೊಮ್ಮೆ ಮದುವೆಗೆ ಸಿದ್ಧವಾಗಿದ್ದಾಳೆ. ಮಂಟಪದಲ್ಲಿ ಕುಳಿತ ತಾಂಡವ್ಗೆ ಭಾಗ್ಯ ತಾಳಿಯನ್ನು ನೀಡಿ, ಇನ್ನೊಮ್ಮೆ ತನ್ನ ಕೊರಳಿಗೆ ಕಟ್ಟುವಂತೆ ಹೇಳ್ತಿದ್ದಾಳೆ. ಆದ್ರೆ ತಾಳಿ ಕೈನಲ್ಲಿ ಹಿಡಿದ ತಾಂಡವ್, ಭಾಗ್ಯಾಗೆ ತಾಳಿ ಕಟ್ಟಲು ಒಪ್ಪಿಕೊಳ್ತಿಲ್ಲ. ನನಗೆ ನೀನು ಇಷ್ಟವಿಲ್ಲ, ನಾನು ನಿನಗೆ ಮತ್ತೊಮ್ಮೆ ತಾಳಿ ಕಟ್ಟೋದಿಲ್ಲ ಎನ್ನುತ್ತಾನೆ ತಾಂಡವ್. ಪತಿಯ ಮಾತನ್ನು ಶಾಂತವಾಗಿ ಕೇಳಿಸಿಕೊಳ್ಳುವ ಭಾಗ್ಯ, ಹೊಟೇಲ್ ನಲ್ಲಿ ಶ್ರೇಷ್ಠಾಗೆ ತಾಳಿ ಕಟ್ಟಲು ಅಷ್ಟೊಂದು ಆತುರ ಮಾಡಿದ್ರಿ ಈಗ ಪತ್ನಿಗೆ ತಾಳಿ ಕಟ್ಟಲು ಯಾಕಾಗ್ತಿಲ್ಲ ಎನ್ನುತ್ತಾಳೆ. ಭಾಗ್ಯ ಮಾತು ಕೇಳಿ ಮನೆಯವರೆಲ್ಲ ಶಾಕ್ಗೆ ಒಳಗಾಗಿದ್ದಾರೆ.
ಬಿಗ್‌ಬಾಸ್ ರಾಜ-ಪ್ರಜೆಗಳ ಆಟದಲ್ಲಿ ರದ್ದಾದ ಟಾಸ್ಕ್, ಉಗ್ರಂ ಮಂಜು ಅಣಕಿಸಿದ್ದಕ್ಕೆ ಮೋಕ್ಷಿತಾ ಕಣ್ಣೀರು!
ತಾಂಡವ್ ಹಾಗೂ ಶ್ರೇಷ್ಠಾ ಪ್ರೀತಿ ಮಾಡ್ತಿದ್ದಾರೆ ಎಂಬ ಸಂಗತಿ ಇಡೀ ಮನೆಯವರಿಗೆ ತಿಳಿದಿದೆ. ಇದನ್ನು ಭಾಗ್ಯ ಕೇಳಿದ್ರೆ ಪ್ರಾಣ ಕಳೆದುಕೊಳ್ತಾಳೆ ಎನ್ನುವ ಭಯದಲ್ಲಿಯೇ ಅದನ್ನು ಕುಸುಮಾ ಮುಚ್ಚಿಟ್ಟಿದ್ದಳು. ಆದ್ರೆ ಭಾಗ್ಯಾಗೆ ಈ ವಿಷ್ಯ ಗೊತ್ತಾಗಿದೆ ಎಂಬುದು ಈಗ ಕುಸುಮಾಗೆ ತಿಳಿದಿದೆ. ಶ್ರೇಷ್ಠಾ ವಿಷ್ಯವನ್ನು ತಾಂಡವ್ ನಿಂದಲೇ ಬಾಯಿಬಿಡಿಸುವ ಭಾಗ್ಯ ಪ್ರಯತ್ನ ಯಶಸ್ವಿಯಾಗಿದೆ. ಆದ್ರೆ ಭಾಗ್ಯ ಮುಂದಿನ ನಡೆ ಏನು ಎಂಬುದು ಸ್ಪಷ್ಟವಾಗಿಲ್ಲ.
ಕಲರ್ಸ್ ಕನ್ನಡ, ಭಾಗ್ಯಲಕ್ಷ್ಮಿ ಪ್ರೋಮೋವನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡ್ತಿದ್ದಂತೆ ವೀಕ್ಷಕರು ತಮ್ಮ ಅಭಿಪ್ರಾಯ ಮುಂದಿಟ್ಟಿದ್ದಾರೆ. ಭಾಗ್ಯಾ ಮಾಡಿದ್ದು ಸರಿಯಾಗಿದೆ ಎಂದು ಬಹುತೇಕರು ಹೇಳಿದ್ದಾರೆ. ತಾಂಡವ್ ಜೊತೆಗಿದ್ದು, ಶ್ರೇಷ್ಠಾಗೆ ಬುದ್ಧಿಕಲಿಸಬೇಕು, ತಾಂಡವ್ ನನ್ನು ಬದಲಿಸಬೇಕು ಎಂದು ಮತ್ತೊಂದಿಷ್ಟು ಮಂದಿ ಕಮೆಂಟ್ ಮಾಡಿದ್ದಾರೆ. ಭಾಗ್ಯಾ ತನ್ನ ಮಕ್ಕಳು ಹಾಗೂ ಅತ್ತೆ- ಮಾವನ ಜೊತೆ ಬೇರೆ ವಾಸ ಮಾಡಬೇಕು. ಶ್ರೇಷ್ಠಾ ಜೊತೆ ತಾಂಡವ್ ಮದುವೆ ಮಾಡಿಸಬೇಕು. ಆಗ ತಾಂಡವ್ ಗೆ ಶ್ರೇಷ್ಠಾ ಬುದ್ಧಿ ತಿಳಿಯುತ್ತದೆ. ಯಾರು ಕತ್ತೆ ಎಂಬುದು ಗೊತ್ತಾಗುತ್ತದೆ. ತಪ್ಪಿನ ಅರಿವಾಗಿ ತಾಂಡವ್ ಭಾಗ್ಯ ಮುಂದೆ ಬಂದು ಕ್ಷಮೆ ಕೇಳಬೇಕು ಎಂದು ಮತ್ತೊಬ್ಬ ಬಳಕೆದಾರರು ನಿರ್ದೇಶಕರಿಗೆ ಸಲಹೆ ನೀಡಿದ್ದಾರೆ. ಭಾಗ್ಯಾ ಸುಮ್ಮನಿರಬೇಡ, ನಾಲ್ಕು ಕಪಾಳಕ್ಕೆ ಬಾರಿಸು, ಭಾಗ್ಯಾ ತಾಂಡವ್ ವಿರುದ್ಧ ಸೇಡು ತೀರಿಸಿಕೋ ಎಂದೆಲ್ಲ ವೀಕ್ಷಕರು ಹೇಳ್ತಿದ್ದಾರೆ. ಮಂಟಪದಲ್ಲಿ ತಾಳಿ ಕಟ್ಟುವಂತೆ ಹೇಳಿ ಮತ್ತೆ ಭಾಗ್ಯ ಅವಮಾನಕ್ಕೆ ಒಳಗಾಗಿದ್ದಾಳೆ. ಇದು ಬೇಕಿತ್ತಾ ಎಂದು ಮತ್ತೊಬ್ಬರು ಕೇಳಿದ್ದಾರೆ.
ತಮನ್ನಾ-ವಿಜಯ್ ವರ್ಮಾ ನಡುವೆ ಎಲ್ಲ ಆಗಿದೆ, ಇದೊಂದು ಕೆಲಸ ಬಾಕಿ!
ತಾಂಡವ್ ಗಾಗಿ ಭಾಗ್ಯ ಏನೆಲ್ಲ ಕಸರತ್ತು ಮಾಡಿದ್ದಾಳೆ. ಸ್ಕೂಲ್, ಡಾನ್ಸ್ ಅಂತ ಏನೇ ಮಾಡಿದ್ರೂ ತಾಂಡವ್ ಪ್ರೀತಿ ಗಳಿಸಲು ಸಾಧ್ಯವಾಗ್ಲಿಲ್ಲ. ಹೋಟೆಲ್ ಗೆ ಹನಿಮೂನ್ ಗೆ ಬಂದಿದ್ದ ತಾಂಡವ್ ಹಾಗೂ ಶ್ರೇಷ್ಠಾ ನೋಡಿ ಭಾಗ್ಯ ಕುಸಿದಿದ್ದಳು. ಭಾಗ್ಯಾ ಬಗ್ಗೆ ತಾಂಡವ್ ಗಿಂದ ಭಾವನೆ ಹೊರಬಂದಿತ್ತು. ಇವೆಲ್ಲವನ್ನೂ ಕೇಳಿ, ಸಹಿಸಿಕೊಂಡಿದ್ದಳು ಭಾಗ್ಯ.