ಅಪರ್ಣಾಗೆ ಕ್ಯಾನ್ಸರ್‌ ಎಂದು ಗೊತ್ತಾಗಿದ್ದು ಯಾವಾಗ? ಗಂಡ ನಾಗರಾಜ್‌ ವಸ್ತಾರೆ ಹೇಳಿದ ಸತ್ಯ

Published : Sep 01, 2026, 06:15 PM IST
Nagaraj Vastare

ಸಾರಾಂಶ

ಅಪರ್ಣಾ ವಸ್ತಾರೆ ಅವರ ಪತಿ ನಾಗರಾಜ್ ವಸ್ತಾರೆ, ಪತ್ನಿಯ ಕ್ಯಾನ್ಸರ್ ಹೋರಾಟದ ಬಗ್ಗೆ ಭಾವುಕರಾಗಿ ಮಾತನಾಡಿದ್ದಾರೆ. ಅಪರ್ಣಾ ಅವರ ಎಡ ಪಕ್ಕೆಯ ನೋವಿನಿಂದ ಆರಂಭವಾದ ಅನಾರೋಗ್ಯವು ಕ್ಯಾನ್ಸರ್ ಎಂದು ಪತ್ತೆಯಾಗಿದ್ದು ಹೇಗೆ ಮತ್ತು ಆ ನೋವಿನ ದಿನಗಳನ್ನು ಅವರು ಹೇಗೆ ಎದುರಿಸಿದರು ಎಂಬುದನ್ನು ನೆನೆದಿದ್ದಾರೆ.

ಅಪ್ಪಟ ಕನ್ನಡದ ನಿರೂಪಣೆಯ ಮೂಲಕ ಜನಪ್ರಿಯತೆಯ ಉತ್ತುಂಗಕ್ಕೆ ಏರಿದವರು ಅಪರ್ಣಾ ವಸ್ತಾರೆ. ಸಾಯುವ ಕೊನೆ ದಿನಗಳವರೆಗೂ ಅಪರ್ಣಾಗೆ ಕ್ಯಾನ್ಸರ್‌ ಅಂಥ ಒಂದು ಗಂಭೀರ ಕಾಯಿಲೆ ಇತ್ತು ಅನ್ನೋದೇ ಹೆಚ್ಚಿನವರಿಗೆ ತಿಳಿದಿರಲಿಲ್ಲ. ಕೆಲ ಕಾಲದ ಕಾನ್ಸರ್‌ ಕಾಯಿಲೆಗೆ ಸೊರಗಿ ಹೋಗಿದ್ದ ಅಪರ್ಣಾ 2024ರ ಜುಲೈ 11 ರಂದು ಸಾವು ಕಂಡಿದ್ದರು. ಆ ವೇಳೆ ಅವರಿಗೆ 58 ವರ್ಷ. ಅಪ್ಪಟ ಕನ್ನಡದ ನಿರೂಪಕಿಯೊಬ್ಬರನ್ನು ಕಳೆದುಕೊಂಡ ಕ್ಷಣ ಕನ್ನಡಿಗರದಾಗಿತ್ತು.

ಆದರೆ, ಅಪರ್ಣಾ ಸಾವು ಕಂಡು 2 ವರ್ಷವಾದರೂ ಅವರ ಪತಿ ನಾಗರಾಜ್‌ ವಸ್ತಾರೆ ಆ ನೋವಿನಿಂದ ಹೊರಬಂದಂತೆ ಕಾಣುತ್ತಿಲ್ಲ. ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಅಪರ್ಣಾ ಅವರ ಜೊತೆಗಿನ ಜೀವನವನ್ನು ನೆನೆದು ಭಾವುಕರಾಗಿದ್ದಾರೆ. ಇದೇ ವೇಳೆ ಅಪರ್ಣಾಗೆ ಕ್ಯಾನ್ಸರ್‌ನಂಥ ಕಾಯಿಲೆ ಇದ್ದಿದ್ದು ಗೊತ್ತಾಗಿದ್ದು ಯಾವಾಗ ಅನ್ನೋ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

ಯಾವ ಒಂದು ಮೊದಲ ಸಿಂಪ್ಟಮ್‌ನಿಂದಾಗಿ ನೀವು ಆಸ್ಪತ್ರೆಗೆ ಹೋಗಲೇಬೇಕು ಅಂತಾ ತೀರ್ಮಾನ ಮಾಡಿದ್ರಿ ಅನ್ನೋ ಪ್ರಶ್ನೆಗೆ, ಆಕೆಗೆ ಕ್ಯಾನ್ಸರ್ ಎಂದು ಗೊತ್ತಾಗಿದ್ದು ಜುಲೈ ತಿಂಗಳಲ್ಲಿ ಅದಕ್ಕೂ ಎರಡು ತಿಂಗಳ ಹಿಂದೆಯಷ್ಟೇ ನನ್ನ ತಾಯಿ ತೀರಿಕೊಂಡಿದ್ದರು. ನಾನು ಆ ದುಃಖದ ನಡುವೆಯೇ ಹೋರಾಟ ಮಾಡ್ತಾ ಇದ್ದೆ. ಜುಲೈ ತಿಂಗಳ ಸಮಯದಲ್ಲಿ ಆಕೆಗೆ ಎಡಗಡೆ ಪಕ್ಕೆಯಲ್ಲಿ ನೋವು ಕಾಣಿಸಿಕೊಂಡಿತು. ಏನೇ ಆದ್ರೂ ಹೋಗ್ತಾ ಇರಲಿಲ್ಲ. ಆರಂಭದಲ್ಲಿ ಆಕೆ ನಮ್ಮ ಆರೋಗ್ಯವನ್ನು ನಾವೇ ನೋಡ್ಕೊಬೇಕು ಅಂತಾ ಇದ್ದಳು. ನಾನು ಹೆಚ್ಚಾಗಿ ಅಲೋಪತಿ ಒಲವಿರುವ ವ್ಯಕ್ತಿ. ಆಕೆಯೆ ಆಯುರ್ವೇದ ಅಚ್ಚುಮೆಚ್ಚು. ಇಬ್ಬರದು ಈ ವಿಚಾರದಲ್ಲಿ ವಿಭಿನ್ನವಾದ ಮನಸ್ಥಿತಿಗಳಿದ್ದವು. ಮನೆಯಲ್ಲಿ ಏನೇನೋ ಮನೆ ಮದ್ದು ಮಾಡಿಕೊಂಡರು. ಏನೇ ಆದರೂ ನೋವು ನಿಂತಿರಲಿಲ್ಲ ಎಂದು ನಾಗರಾಜ್‌ ವಸ್ತಾರೆ ಹೇಳಿದ್ದಾರೆ.

ಅದಾ ಬಳಿಕ ನೋವು ಜಾಸ್ತಿ ಆಗುತ್ತಿತ್ತು. ನೋವು, ನೋವು ಅಂತಾ ಚಡಪಡಿಸೋಳು. ನಾನಾಗ ಹೇಳಿದೆ. ಈಗ ನಾವು ವೈದ್ಯರನ್ನು ಭೇಟಿಯಾಗಲೇಬೇಕು ಅಂತಾ. ಆ ಪಕ್ಕೆ ನೋವು ಅಂತಾ ಹೋಗಿ ಶುರುವಾದ್ದದ್ದು ಅದಕ್ಕೊಂದಷ್ಟು ಟ್ರೀಟ್‌ಮೆಂಟ್‌ ಅಂತಾ ಮಾಡಿದೆವು. ಇದಕ್ಕಾಗಿಯೇ ಒಂದು ತಿಂಗಳು ಕಳೆಯಿತು. ಆಕೆಗೆ ನೋವು ನಿಲ್ಲಲಿಲ್ಲ. ಅದಾದ ಬಳಿಕವೇ ಆಕೆಗೆ ಕ್ಯಾನ್ಸರ್‌ ಇರೋದು ಗೊತ್ತಾಗಿತ್ತು ಎಂದಿದ್ದಾರೆ.

ಜೀವನದ ಬಗ್ಗೆ ತುಂಬಾ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ

ನಾವಿಬ್ಬರೂ ಜೀವನದಲ್ಲಿ ಬಹಳ ನೋವುಂಡವರು. ಜೀವನದಿಂದ ಹೆಚ್ಚಾಗಿ ನಿರೀಕ್ಷೆಯನ್ನೂ ಇಟ್ಟುಕೊಂಡಿರಲಿಲ್ಲ. ಆದರೆ, ಒಬ್ಬರಿಗೊಬ್ಬರು ಆದಷ್ಟು ಸರಳವಾಗಿ ಒಬ್ಬರನ್ನೊಬ್ಬರು ಒಪ್ಪಿಕೊಂಡು ಬದುಕಬೇಕು ಅಂತಾ ತೀರ್ಮಾನ ಮಾಡಿದ್ದೆವು. ನಾವು ಜಗಳವೇ ಆಡಿಲ್ಲ ಅಂತಲ್ಲ. ಸಿಕ್ಕಾಪಟ್ಟೆ ಆಡಿದ್ದೇನೆ. ಆದರೆ, ನಮ್ಮ ಸಂಸಾರದಲ್ಲಿ ಒಂದು ಬದ್ಧತೆ ಇತ್ತು. ಏನೇ ಆದರು ನನಗೆ ನೀನು ನಿನಗೆ ನಾನು ಅಷ್ಟೇ. ಆದರೆ, ಆ ಎರಡು ವರ್ಷದ ಹೋರಾಟ ಇತ್ತಲ್ಲ. ಕ್ಯಾನ್ಸರ್‌ ಸಲುವಾಗಿ ಆಕೆಯ ಹೋರಾಟ, ಆಕೆ ಏನು ಅನ್ನೋದು ಮುಂಚಿಗಿಂತಲೂ ಹೆಚ್ಚು ಅರ್ಥವಾಯಿತು ಎಂದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕರ್ಲಿ ಹೇರ್, ಹಳದಿ ಡ್ರೆಸ್: ಸಂಗೀತಾ ಶೃಂಗೇರಿ ಹೊಸ ಅವತಾರ ನೋಡಿ ನೆಟ್ಟಿಗರು ಏನಂದ್ರು?
ಐಶ್ವರ್ಯಾ ಸಿಂಧೋಗಿ ಮನೆಯಲ್ಲಿ ಅದ್ಧೂರಿ ವರಮಹಾಲಕ್ಷ್ಮಿ ಹಬ್ಬ: ತಾಯಿಯೊಂದಿಗೆ ಬಂದ ಶಿಶಿರ್ ಶಾಸ್ತ್ರಿ!