ಕನಸಿನ ಹುಡುಗನಿಗಾಗಿ ಕಾಯ್ತಿರೋ ಬಿಗ್‌ಬಾಸ್‌ ಅನುಷಾ: ನಿಮ್ಮಲ್ಲಿ ಈ ಕ್ವಾಲಿಟಿ ಇದ್ರೆ ಟ್ರೈ ಮಾಡ್ಬೋದು!

Published : Nov 22, 2024, 06:52 PM IST
ಕನಸಿನ ಹುಡುಗನಿಗಾಗಿ ಕಾಯ್ತಿರೋ ಬಿಗ್‌ಬಾಸ್‌ ಅನುಷಾ: ನಿಮ್ಮಲ್ಲಿ ಈ ಕ್ವಾಲಿಟಿ ಇದ್ರೆ ಟ್ರೈ ಮಾಡ್ಬೋದು!

ಸಾರಾಂಶ

ಬಿಗ್‌ಬಾಸ್‌ ಖ್ಯಾತಿಯ ಅನುಷಾ ರೈ, ಮದುವೆಯಾಗುವ ಹುಡುಗನ ಕ್ವಾಲಿಟಿ ಬಗ್ಗೆ ಹೇಳಿದ್ದಾರೆ. ಅವರ ಕನಸಿನ ಹುಡುಗ ಹೇಗಿರಬೇಕು?  

ಬಿಗ್‌ಬಾಸ್‌ನಿಂದ ಅನುಷಾ ರೈ ಈಗಾಗಲೇ ಹೊರಕ್ಕೆ ಬಂದಿದ್ದಾರೆ. 7ನೇ ವಾರ 50ನೇ ದಿನ ನಟಿ  ಎಲಿಮಿನೇಟ್ ಆಗಿದ್ದಾರೆ. ದೊಡ್ಮನೆಗೆ  ಎಂಟ್ರಿ ಕೊಡುವ  ಮುಂಚಿನಿಂದಲೂ ಧರ್ಮ ಕೀರ್ತಿರಾಜ್ ಜೊತೆ ಅನುಷಾ ಅವರಿಗೆ ಇದ್ದ ಒಡನಾಟ  ಬಿಗ್ ಬಾಸ್ ಮನೆಯಲ್ಲೂ ಮುಂದುವರೆದಿತ್ತು. ಇದೇ ಕಾರಣಕ್ಕೆ ಏನೇನೋ ಗಾಸಿಪ್‌ಗಳು ಸುಳಿದಾಡಿದ್ದವು. ಆದರೆ ಇವೆಲ್ಲವೂ ಗಾಳಿಸುದ್ದಿಯಷ್ಟೇ. ಅಂಥದ್ದೇನೂ ಇಲ್ಲ ಎಂದು ಅನುಷಾ ಮಾಧ್ಯಮಗಳ ಎದುರು ಸ್ಪಷ್ಟನೆ ಕೊಟ್ಟಿದ್ದರು. ತಮ್ಮಿಬ್ಬರ ನಡುವೆ ಇರುವುದು ಪವಿತ್ರ ಸ್ನೇಹ ಮಾತ್ರ.  ಧರ್ಮ ಅವರನ್ನು  ತುಂಬಾ ಗೌರವಿಸ್ತೀನಿ. ಅವರೂ ಕೂಡ.  ನಮ್ಮ ಮಧ್ಯೆ ಕಾಳಜಿಯ ಪ್ರೀತಿ ಇದೆ ಅಷ್ಟೇ ಎಂದು ಹೇಳಿದ್ದರು.  ಇದೀಗ ಅವರು ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದಾರೆ. ತಮ್ಮ ಕನಸಿನ ಹುಡುಗ ಹೇಗೆ ಇರಬೇಕು ಎನ್ನುವ ಬಗ್ಗೆ ಹೇಳಿಕೊಂಡಿದ್ದಾರೆ. ತಾವು ಮದುವೆ ಆಗದೇ ಇರುವುದಕ್ಕೆ ಇನ್ನೂ ಸೂಕ್ತ ಹುಡುಗ ಸಿಕ್ಕದೇ ಇರುವುದು ಕಾರಣ ಎಂದು ಹೇಳಿದ್ದಾರೆ.

ಕಿರಿಕ್ ಕೀರ್ತಿ ಅವರ   ಯೂಟ್ಯೂಬ್ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ಬಿಗ್‌ಬಾಸ್‌ ಪಯಣದ ಕುರಿತು ಮಾತನಾಡುತ್ತಲೇ ನಟಿ, ಮದುವೆಯ ಬಗ್ಗೆ ಕೇಳಿದ ಪ್ರಶ್ನೆಗೆ ನಾಚುತ್ತಲೇ ಉತ್ತರಿಸಿದ್ದಾರೆ. ನಿಮ್ಮ ಮದುವೆ ಯಾವಾಗ ಎಂದು ಪ್ರಶ್ನಿಸಿದ್ದಕ್ಕೆ, ಇನ್ನೂ ಸೂಕ್ತ ಹುಡುಗ ಸಿಕ್ಕಿಲ್ಲ ಎಂದಿದ್ದಾರೆ. ಹಾಗಿದ್ದರೆ ನಿಮ್ಮ ಹುಡುಗ ಹೇಗೆ ಇರಬೇಕು ಎನ್ನುವ ಪ್ರಶ್ನೆಗೆ ಅನುಷಾ ಅವರು, ನನಗೆ ಆಗರ್ಭ ಶ್ರೀಮಂತ, ವೆಲ್‌ ಸೆಟ್ಲಡ್‌ ಎಲ್ಲಾ ಬೇಕು ಎನ್ನುವ ಆಸೆ ಇಲ್ಲ. ಆದ್ರೆ ಆತ ನನ್ನನ್ನು ತುಂಬಾ ಕೇರ್‍‌ ಮಾಡಬೇಕು, ನೆಮ್ಮದಿ, ಪ್ರೀತಿಯಿಂದ ಜೊತೆಯಾಗಿ ಇರಬೇಕು. ನಾನು ಹೇಗಿದ್ದೆನೋ ಹಾಗೆ ಒಪ್ಪಿಕೊಳ್ಳಬೇಕು. ಅಡ್ಜಸ್ಟ್‌ ಮಾಡಿಕೊಳ್ಳುವ ಸ್ಥಿತಿ ಬಂದ್ರೆ ನಾನು ಸ್ವಲ್ಪ ಬದಲಾಗುತ್ತೇನೆ. ಅದು ಬೇರೆ ಪ್ರಶ್ನೆ. ಆದರೆ ಎಲ್ಲದ್ದಕ್ಕೂ ಪ್ರಶ್ನೆ ಮಾಡಬಾರದು, ನನ್ನ ಕರಿಯರ್‍‌ಗೆ ಸಪೋರ್ಟ್  ಮಾಡಬೇಕು ಎಂದು ಹೇಳಿದ್ದಾರೆ.

ತಾಳಿ ಕಟ್ಟೋ ಟೈಂನಲ್ಲಿ ಪಂಚೆ ಬಿದ್ದೋದ್ರೆ ಏನ್‌ ಮಾಡ್ತೀರಾ ಕೇಳಿದ್ರೆ ವಿಜಯ್‌ ಸೂರ್ಯ ತರ್ಲೆ ಉತ್ತರ ಕೇಳಿ!

ಆಗ ಕೀರ್ತಿ ಅವರು, ಹಾಗಿದ್ರೆ ನೋಡಿಯಪ್ಪ, ಇಂಥ ಹುಡುಗರು ಅರ್ಜಿ ಹಾಕಿ ಎಂದು ಹೇಳಿದ್ದಾರೆ. ಅಷ್ಟಕ್ಕೂ ಬಿಗ್‌ಬಾಸ್‌ನಿಂದ ಎಲಿಮಿನೇಷನ್ ಆಗಿದ ದಿನ ನಟಿ,  ಅಳುತ್ತಾ ಬಂದಿದ್ದರು. ಆಗ ಅಭಿಮಾನಿಗಳು ಅವರಿಗೆ ಸಮಾಧಾನ ಪಡಿಸಿದ್ದರು. ಬಳಿಕ ನಟಿ, ನೋವಿನಲ್ಲಿದ್ದ ನಾನು ನಿಮ್ಮ ಬೆಂಬಲ ನೋಡಿ ಖುಷಿಯಾಗಿದ್ದೇನೆ. ಬಿಗ್ ಬಾಸ್ ಮನೆಯ ಹೊರಗೆ ನನಗೆ ಇಷ್ಟೆಲ್ಲ ಪ್ರೀತಿ ಸಿಕ್ಕಿದೆ ಎಂಬುದು ನನಗೆ ಗೊತ್ತಿರಲಿಲ್ಲ. ನಾನು ಅಳ್ತಾ ಮನೆಯಿಂದ ಹೊರಗೆ ಬಂದೆ. ಆದ್ರೆ ಇಲ್ಲಿ ನಿಮ್ಮ ಕಮೆಂಟ್ಸ್, ಬೆಂಬಲ ನೋಡಿ ನಾನು ದುಃಖವನ್ನು ಮರೆತಿದ್ದೇನೆ. ದಯವಿಟ್ಟೂ ನಾನು ಮನೆಯಿಂದ ಹೊರಗೆ ಬಂದೆ ಎನ್ನುವ ಕಾರಣಕ್ಕೆ ಯಾರೂ ಬೇಸರಪಟ್ಟುಕೊಳ್ಳಬೇಡಿ. ನನಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ ಎಂದು ವಿಡಿಯೋ ಹಾಕಿದ್ದ ಅನುಷಾ, ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ನಾನು ಸದಾ ಚಿರಋಣಿ ಎಂದಿದ್ದರು.

 
ಅಷ್ಟಕ್ಕೂ ಅನುಷ್ಕಾ ಸಾಕಷ್ಟು ಫ್ಯಾನ್ಸ್‌ ಗಳಿಸಿದ್ದಾರೆ. ಗೌತಮಿ, ಮೋಕ್ಷಿತಾ ಹಾಗೂ ಚೈತ್ರಾಗಿಂತ ಅನುಷ್ಕಾ ತುಂಬಾ ಉತ್ತಮವಾಗಿ ಆಟವಾಡಿದ್ದರು. ಬಿಗ್ ಬಾಸ್ ಮನೆಯಲ್ಲಿ ಮುಖವಾಡಕ್ಕೆ ಹೆಚ್ಚು ಬೆಲೆ ಎಂಬುದು ಮತ್ತೊಮ್ಮೆ ಅರ್ಥವಾಯ್ತು ಎಂದು ಅಭಿಮಾನಿಯೊಬ್ಬರು ಕಮೆಂಟ್ ಮಾಡಿದ್ದರು. ನೀವಿಲ್ಲದ ಬಿಗ್ ಬಾಸ್ ನಾವು ನೋಡೋದಿಲ್ಲ ಎಂದು ಇನ್ನೊಬ್ಬರು ತಮ್ಮ ನೋವು ತೋಡಿಕೊಂಡಿದ್ದರು. . ನೀವು ಅಪರಂಜಿ. ಬಿಗ್ ಬಾಸ್ ನಲ್ಲಿ ಗೆಲುವು ಸಿಕ್ಕಿಲ್ಲ ಅಂದ್ರೂ ಹೊರಗೆ ನಿಮಗೆ ಬೆಂಬಲ ಸಿಕ್ಕಿದೆ, ಖುಷಿಯಾಗಿರಿ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದರು. ಧರ್ಮ ಅವರ ಜೊತೆ ನೀವು ಮದುವೆ ಆಗಿ, ನಿಮ್ಮಿಬ್ಬರ ಜೋಡಿ ಚೆನ್ನಾಗಿದೆ ಎಂದು ಕೆಲವರು ಅನುಷಾ ರೈಗೆ ಸಲಹೆ ನೀಡಿದ್ದರು. ನೀವು ಹೊರಬಿದ್ದಿದ್ದಕ್ಕೆ ನಾವು ಅತ್ತಿದ್ದೇವೆ, ನಮ್ಮ ಸಪೋರ್ಟ್ ಸದಾ ನಿಮಗಿರುತ್ತದೆ ಎಂದು ಬಹುತೇಕ ಅಭಿಮಾನಿಗಳು ಬರೆದಿದ್ದರು. 

ಕನ್ನಡದ 'ಕೂಲ್' ನಟಿ ಮತ್ತೆ ಗರ್ಭಿಣಿ: ಯಾ ಅಲ್ಲಾ.. ಎನ್ನುತ್ತಲೇ ಭಾವುಕ ಪೋಸ್ಟ್‌ ಮಾಡಿದ ಸನಾ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare Serial: ರಿಯಲ್​ ಮದ್ವೆಗಾಗಿ ಜೈದೇವ್​ ಪ್ಲಾಸ್ಟಿಕ್​ ಸರ್ಜರಿ? ಹೊಸ ಅವತಾರದಲ್ಲಿ ಜೈ- ಯಾರೀ ನಟ
Amruthadhaare Serial ರಣರೋಚಕ ಟ್ವಿಸ್ಟ್​: ಸಿಸಿಟಿವಿಯಲ್ಲಿ ಕಂಡುಬಂದ ಜೈದೇವ ಸಮಾಧಿಯ ಭಯಾನಕ ದೃಶ್ಯ