ಚೈತ್ರಾ ಕುಂದಾಪುರ ಲವ್ ಸ್ಟೋರಿ ರಿವೀಲ್ ! ಪ್ರೀತಿ ಶುರುವಾಗಿದ್ದು ಎಲ್ಲಿಂದ?

Published : May 05, 2025, 12:35 PM ISTUpdated : May 05, 2025, 12:38 PM IST
ಚೈತ್ರಾ ಕುಂದಾಪುರ ಲವ್ ಸ್ಟೋರಿ ರಿವೀಲ್ ! ಪ್ರೀತಿ ಶುರುವಾಗಿದ್ದು ಎಲ್ಲಿಂದ?

ಸಾರಾಂಶ

ಬಿಗ್‌ಬಾಸ್ ಖ್ಯಾತಿಯ ಚೈತ್ರಾ ಕುಂದಾಪುರ 12 ವರ್ಷಗಳ ಪ್ರೀತಿಯ ಬಳಿಕ ಮದುವೆಯಾಗುತ್ತಿದ್ದಾರೆ. ಕಾಲೇಜಿನಲ್ಲೇ ಆರಂಭವಾದ ಈ ಪ್ರೇಮಕಥೆಯಲ್ಲಿ ಆರಂಭದಲ್ಲಿ ಹುಡುಗ ಚೈತ್ರಾಳನ್ನು ದ್ವೇಷಿಸುತ್ತಿದ್ದರಂತೆ. ಮಜಾ ಟಾಕೀಸ್‌ನಲ್ಲಿ ಈ ವಿಷಯ ಬಹಿರಂಗವಾಗಿದ್ದು, ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಎಂದು ಚೈತ್ರಾ ತಿಳಿಸಿದ್ದಾರೆ.  

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada Season 11) ರ ಸ್ಪರ್ಧಿ, ಫೈರ್ ಬ್ರ್ಯಾಂಡ್ (Fire Brand) ಎಂದೇ ಪ್ರಸಿದ್ಧಿ ಪಡೆದಿರುವ ಚೈತ್ರಾ ಕುಂದಾಪುರ (Chaitra Kundapur) ಮದುವೆ ಆಗ್ತಿದ್ದಾರೆ. ಈ ವಿಷ್ಯ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಮಾಡ್ತಾನೆ ಇದೆ. ಈಗ ಮಜಾ ಟಾಕೀಸ್ ನಲ್ಲಿ ಚೈತ್ರಾ ಮದುವೆ ವಿಷ್ಯ ಚರ್ಚೆಯಾಗಿದೆ. ಚೈತ್ರಾ ಕುಂದಾಪುರ ಮದುವೆ ಆಗ್ತಿರೋದು ಕನ್ಫರ್ಮ್ ಆಗಿದೆ. ಹುಡುಗನಿಗಾಗಿ ಚೈತ್ರಾ ತಮ್ಮ ಸ್ವಭಾವ ಬದಲಿಸಿಕೊಳ್ಳುವ ಪ್ರಯತ್ನ ಶುರು ಮಾಡಿದ್ದು, ಗಂಗಮ್ಮಜ್ಜಿಯಿಂದ ಟಿಪ್ಸ್ ಕೂಡ ಪಡೆದಿದ್ದಾರೆ. 

ಸೃಜನ್ ಲೋಕೇಶ್ (Srujan Lokesh), ಗಂಗಮ್ಮಜ್ಜಿಗೆ ಚೈತ್ರಾ ಮದುವೆ ಆಗ್ತಿದ್ದಾರೆ, ಅವರಿಗೆ ಟಿಪ್ಸ್ ನೀಡಿ ಎನ್ನುವ ವಿಡಿಯೋ ಈ ಹಿಂದೆ ವೈರಲ್ ಆಗಿತ್ತು. ಅದನ್ನು ನೋಡಿದ ವೀಕ್ಷಕರು, ಇದು ತಮಾಷೆಯಾ ಇಲ್ಲ ಸತ್ಯವಾ ಎನ್ನುವ ಕನ್ಫ್ಯೂಸ್ ನಲ್ಲಿ ಇದ್ರು. ಮಜಾ ಟಾಕೀಸ್ ಫುಲ್ ಎಪಿಸೋಡ್ ಪ್ರಸಾರ ಆದ್ಮೇಲೆ ವೀಕ್ಷಕರಿಗೆ ಉತ್ತರ ಸಿಕ್ಕಿದೆ.

12 ವರ್ಷದ ಲವ್ : ಮಜಾ ಟಾಕೀಸ್ (Maja Talkies) ಶೋಗೆ ಬಂದ ಧರ್ಮ ಕೀರ್ತಿರಾಜ್, ಅನುಷಾ ಹಾಗೂ  ಚೈತ್ರಾರನ್ನು ವೆಲ್ ಕಂ ಮಾಡಿದ ಸೃಜನ್ ಲೋಕೇಶ್, ಚೈತ್ರಾ ಕುಂದಾಪುರ ಅವರಿಗೆ ಮದುವೆ ಫಿಕ್ಸ್ ಆಗಿದೆ ಎನ್ನುತ್ತಲೇ ಮಾತು ಶುರು ಮಾಡಿದ್ರು. ಲವ್ ಮ್ಯಾರೇಜಾ ಇಲ್ಲ ಅರೇಂಜ್ಡ್  ಮ್ಯಾರೇಜಾ ಎನ್ನುವ ಸೃಜನ್ ಪ್ರಶ್ನೆಗೆ ಚೈತ್ರಾ ಎರಡೂ ಎಂದು ಉತ್ತರ ನೀಡಿದ್ರು. ತಕ್ಷಣ ಮಧ್ಯ ಮಾತನಾಡಿದ ಅನುಷಾ, ಅವರದ್ದು 12 ವರ್ಷದ ಲವ್ ಸ್ಟೋರಿ ಎಂದಿದ್ದಾರೆ. ಇದಕ್ಕೆ ಚೈತ್ರಾ ತಲೆದೂಗಿ ಯಸ್ ಎಂದಿದ್ದಲ್ಲದೆ, ಕಾಲೇಜಿನಲ್ಲಿ ಲವ್ ಸ್ಟೋರಿ ಶುರುವಾಗಿದ್ದು ಎಂಬ ಸುಳಿವು ನೀಡಿದ್ದಾರೆ.

ಎಲ್ಲರಂತೆ ನಮ್ಮದು ರೋಮ್ಯಾಂಟಿಕ್ ಆಗಿ ಪ್ರೀತಿ ಶುರು ಆಗ್ಲಿಲ್ಲ. ನನ್ನನ್ನು ದ್ವೇಷಿಸುವವರೆ ಈಗ ಪ್ರೀತಿಸ್ತಿದ್ದಾರೆ ಎಂದು ಚೈತ್ರಾ ಹೇಳಿದ್ದಾರೆ. ಕ್ಯಾಂಟೀನ್ ನಲ್ಲಿ ನನ್ನ ಬಗ್ಗೆ ಬೈತಾ ಓಡಾಡ್ತಿದ್ದ ಹುಡುಗ, ನನ್ನನ್ನು ಕಂಡ್ರೆ ಇರಿಟೇಟ್ ಮಾಡ್ಕೊಂಡು, ಇವಳೊಬ್ಬಳು ಕಿರಿಕಿರಿ ಎನ್ನುತ್ತಿದ್ದರು.  ಕೊನೆಯಲ್ಲಿ ಅದು ಪ್ರೀತಿಯಾಗಿ ಬದಲಾಯ್ತು ಎಂದಿದ್ದಾರೆ. ಆದ್ರೆ ಎಲ್ಲೂ ಹುಡುಗ ಯಾರೂ ಎಂಬುದನ್ನು ಚೈತ್ರಾ ಹೇಳಿಲ್ಲ. ಹಾಗೆಯೇ ಮದುವೆ ಯಾವಾಗ ಎನ್ನುವ ವಿಷ್ಯವನ್ನು ಕೂಡ ಚೈತ್ರಾ ಬಿಟ್ಟುಕೊಟ್ಟಿಲ್ಲ. 

ಚೈತ್ರಾ ಮದುವೆ ಆಗ್ತಿರುವ ಹುಡುಗನನ್ನು ಬಿಗ್ ಬಾಸ್ ಸ್ಪರ್ಧಿಗಳು ನೋಡಿದ್ದಾರೆ. ಅವರು ತುಂಬಾ ಸಾಫ್ಟ್. ಕೂಲ್ ಆಗಿ ಮಾತನಾಡ್ತಾರೆ. ಚೈತ್ರಾಗೆ ತದ್ವಿರುದ್ಧ ಎಂದು ಧರ್ಮ ಕೀರ್ತಿರಾಜ್ ಹಾಗೂ ಅನುಷಾ ಹೇಳಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಚೈತ್ರಾ, ತಮ್ಮ ಹುಡುಗನಿಗೆ ಹೇಗೆಲ್ಲ ಕಾಟ ಕೊಟ್ಟಿದ್ದೆ ಎಂಬುದನ್ನು ಹೇಳಿದ್ದರಂತೆ. ಅದನ್ನು ಶೋನಲ್ಲಿ ಹೇಳುವಂತೆ ಧರ್ಮ ಒತ್ತಾಯ ಮಾಡಿದ್ರು. ಆದ್ರೆ ಚೈತ್ರಾ ಯಾವುದನ್ನೂ ಹೇಳಿಲ್ಲ. ಹುಡುಗನಿಗಾಗಿ ನನ್ನ ಸ್ವಭಾವ ಬದಲಿಸಿಕೊಳ್ತಿದ್ದೇನೆ ಎಂಬುದನ್ನಷ್ಟೇ ಹೇಳಿದ್ದಾರೆ. 

ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಉಂಗುರ ಕಳೆದುಕೊಂಡು ಚಡಪಡಿಸಿದ್ದರು. ಉಂಗುರ ನೋಡಿ, ಚೈತ್ರಾಗೆ ಮದುವೆ ಫಿಕ್ಸ್ ಆಗಿದೆ ಅಂತ ಜನ ಅಂದ್ಕೊಂಡಿದ್ದರು. ಚೈತ್ರಾ ಕೂಡ ಸುಳಿವು ನೀಡಿದ್ರೂ ಹೊರಗೆ ಬಂದ್ಮೇಲೆ, ಅದು ಎಂಗೇಜ್ ಮೆಂಟ್ ಉಂಗುರ ಅಲ್ಲ. ನನಗೆ ಮದುವೆ ಫಿಕ್ಸ್ ಆಗಿಲ್ಲ ಎಂದಿದ್ದರು. ಧಾರ್ಮಿಕ ವ್ಯಕ್ತಿ., ಆಧ್ಯಾತ್ಮಿಕದಲ್ಲಿ ನಂಬಿಕೆ ಇರುವ ವ್ಯಕ್ತಿ ಬೇಕು. ಅಮ್ಮನಿಗೆ ಒಳ್ಳೆ ಮಗ ಆಗಿರಬೇಕು. ಮದುವೆಯಾಗುವ ಹುಡುಗನ ಬಗ್ಗೆ ಹೆಚ್ಚಿನ ನಿರೀಕ್ಷೆ ಇಲ್ಲ. ಅಮ್ಮ ತೋರಿಸಿದ ಹುಡುಗನಿಗೆ ಕೊರಳು ನೀಡ್ತೇನೆ ಎಂದಿದ್ದರು. ಆದ್ರೀಗ ಚೈತ್ರಾ ಕುಂದಾಪುರ ಅವರದ್ದು ಲವ್ ಕಂ ಅರೇಂಜ್ಡ್  ಮ್ಯಾರೇಜ್ ಎಂಬುದು ಗೊತ್ತಾಗಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಹೈ-ಬಿಪಿಯಿಂದ ಮದುವೆ ಮರುದಿನವೇ ಪ್ರಖ್ಯಾತ ಹಾಸ್ಯನಟನ ಎರಡೂ ಕಿಡ್ನಿ ಫೇಲ್‌, ತನ್ನ ಕಿಡ್ನಿ ನೀಡಿ ಜೀವ ಉಳಿಸಿದ್ದಳು ಪತ್ನಿ!
ಬಿಗ್ ಬಾಸ್ ಮನೆಗೆ ಪವರ್ ಕಟ್, ಕಗ್ಗಲತ್ತಲ್ಲಿ ಕಂಟೆಸ್ಟೆಂಟ್‌ಗಳು; BESCOM ಕಿತಾಪತಿ ಇರಬಹುದೇ?