
ಜನಪ್ರಿಯ ʼಅಮೃತಧಾರೆʼ ಧಾರಾವಾಹಿಯಿಂದ ನಟಿ ರಾಧಾ ಭಗವತಿ ಅವರು ಔಟ್ ಆಗಿದ್ದಾರೆ. ಇವರ ಪಾತ್ರಕ್ಕೆ ಹೊಸ ನಟಿಯೋರ್ವರ ಆಗಮನವಾಗಿದೆ. ʼಗಟ್ಟಿಮೇಳʼ ಧಾರಾವಾಹಿಯಲ್ಲಿ ಆದ್ಯ ಪಾತ್ರ ಮಾಡಿದ್ದ ನಟಿ ಅನ್ವಿತಾ ಸಾಗರ್ ಅವರು ಮಲ್ಲಿಯಾಗಿ ವೀಕ್ಷಕರ ಮುಂದೆ ಬಂದಿದ್ದಾರೆ.
ಅನ್ವಿತಾ ಸಾಗರ್ ಎಂಟ್ರಿ!
ʼಅಮೃತಧಾರೆʼ ಧಾರಾವಾಹಿಯ ಹೊಸ ಪ್ರೋಮೋ ರಿಲೀಸ್ ಆಗಿದ್ದು, ಅದರಲ್ಲಿ ಅನ್ವಿತಾ ಸಾಗರ್ ಅವರು ಕಾಣಿಸಿಕೊಂಡಿದ್ದಾರೆ. ʼಅಮೃತಧಾರೆʼ ಧಾರಾವಾಹಿಯಲ್ಲಿ ಮಲ್ಲಿಗೂ, ಜಯರಾಮ್‌ಗೂ ಏನೋ ಸಂಬಂಧ ಇದೆ ಎನ್ನೋದನ್ನು ಪ್ರೋಮೋದಲ್ಲಿ ಗೊತ್ತಾಗಿದೆ. ಇನ್ನು ಗೌತಮ್ ದಿವಾನ್‌ಗೆ ಮಲ್ಲಿ ತಾತನ ಮನೆಯಲ್ಲಿ ಜಯರಾಮ್ ಫೋಟೋ ಸಿಕ್ಕಿರೋದು ಸಾಕಷ್ಟು ಅನುಮಾನ ಮೂಡಿಸಿದೆ. ಜಯರಾಮ್‌ಗೂ, ಮಲ್ಲಿ ತಾತನಿಗೂ ಏನು ಸಂಬಂಧ ಎಂಬ ಅನುಮಾನ ಮೂಡಿಸಿದೆ.
ಗಣೇಶನ ಕೃಪೆ ಬಾಹ್ಯಾಕಾಶದಲ್ಲಿ ಸಿಲುಕಿದ ಸುನೀತಾ ವಿಲಿಯಮ್‌ನ ರಕ್ಷಿಸಿತ್ತಾ? ಗಣಪನ ವಿಗ್ರಹ ಜೊತೆಗೊಯ್ದಿದ್ದ ಸುನೀತಾ!
ಧಾರಾವಾಹಿಗಳಲ್ಲಿ ನಟನೆ!
ʼಗಟ್ಟಿಮೇಳʼ ಧಾರಾವಾಹಿ ಆರಂಭವಾದಾಗಿನಿಂದ ಮುಗಿಯವವರೆಗೂ ಅನ್ವಿತಾ ಸಾಗರ್ ಅವರು ಈ ಧಾರಾವಾಹಿಯಲ್ಲಿ ನಟಿಸಿದ್ದರು. ಇದಾದ ಬಳಿಕ ಅವರು ಉದಯ ವಾಹಿನಿಯ ʼಅಣ್ಣ-ತಂಗಿʼ ಧಾರಾವಾಹಿಯಲ್ಲಿ ನಟಿಸಿದ್ದರು. ಈಗ ಅವರು ಮತ್ತೆ ಜೀ ಕನ್ನಡಕ್ಕೆ ಮರಳಿದ್ದಾರೆ.
ರಾಧಾ ಭಗವತಿ ಏನಂದ್ರು?
ರಾಧಾ ಭಗವತಿ ಅವರು, “ರಾಮಾಚಾರಿ ಧಾರಾವಾಹಿಯಲ್ಲಿ ನನಗೆ ಡೇಟ್ ಕೊಡುತ್ತಿರಲಿಲ್ಲ, ಬೇರೆ ಪ್ರಾಜೆಕ್ಟ್‌ನಲ್ಲಿ ಕಾಣಿಸಿಕೊಳ್ಳೋಕೆ ಆಗುತ್ತಿರಲಿಲ್ಲ. ಭಾರ್ಗವಿ ಎಲ್‌ಎಲ್‌ಬಿ ಪ್ರಾಜೆಕ್ಟ್ ಸಿಕ್ಕಿತು, ಒಳ್ಳೆಯ ಅವಕಾಶ ಸಿಕ್ಕಿದೆ. ಲೀಡ್ ಪಾತ್ರವಾಗಿದ್ದರಿಂದ ಅಮೃತಧಾರೆ ಬಿಟ್ಟೆ” ಎಂದು ಹೇಳಿದ್ದಾರೆ.
'ಅಮೃತಧಾರೆ' ಶೂಟಿಂಗ್ ವೇಳೆ ಭೂಮಿಕಾ ಸೀರೆಗೆ ಬೆಂಕಿ! ಸೆಟ್ನಲ್ಲಿ ಆಗಿದ್ದೇನು? ತೆರೆಮರೆ ಕಥೆ ಏನು?
ಸಿನಿಮಾಗಳಲ್ಲಿ ರಾಧಾ ಭಗವತಿ ನಟನೆ!
ಕೆ ಎಸ್ ರಾಮ್ಜಿ ನಿರ್ದೇಶನದ ‘ರಾಮಾಚಾರಿ’ ಧಾರಾವಾಹಿಯಲ್ಲಿ ಹೀರೋ ಸಹೋದರಿ ಪಾತ್ರದಲ್ಲಿ ರಾಧಾ ಭಗವತಿ ಕಾಣಿಸಿಕೊಂಡಿದ್ದರು. ʼವಸಂತಕಾಲದ ಹೂವುಗಳುʼ ಸಿನಿಮಾದಲ್ಲಿ ಸುಮಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆಮೇಲೆ ʼಅಮೃತಧಾರೆಯʼಲ್ಲಿ ನಟಿಸಿದ್ದರು. ಮಲ್ಲಿ ಆಗಿ ಅವರು ವೀಕ್ಷಕರನ್ನು ರಂಜಿಸಿದ್ದರು. ಮಾಡೆಲ್ ಆಗಿರುವ ರಾಧಾ ಭಗವತಿ ಅವರು, ‘ಆ 90 ದಿನಗಳು’, ‘ಅಪಾಯವಿದೆ ಎಚ್ಚರಿಕೆ’ ಸಿನಿಮಾಗದಲ್ಲಿ ನಟಿಸಿದ್ದಾರೆ. ‘ಉಘೇ ಉಘೇ ಮಾದೇಶ್ವರ’ ಸೀರಿಯಲ್‌ನಲ್ಲಿಯೂ ನಟಿಸಿದ್ದರು. ‘ಬಾನಿಗೊಂದು ತಾರೆ’ ಮ್ಯೂಸಿಕ್ ವಿಡಿಯೋದಲ್ಲಿಯೂ ರಾಧಾ ಭಗವತಿ ಕಾಣಿಸಿಕೊಂಡಿದ್ದರು. ಅಭಿಜಿತ್ ತೀರ್ಥಹಳ್ಳಿ ಅವರು ಈ ಸಿನಿಮಾಕ್ಕೆ ನಿರ್ದೇಶನ ಮಾಡಿದ್ದರು. 'ಒಂದ್ಸಲ ಮೀಟ್ ಮಾಡೋಣ' ಸಿನಿಮಾದಲ್ಲಿ ಹೀರೋ ತಂಗಿ ಪಾತ್ರದಲ್ಲಿಯೂ ಅವರು ನಟಿಸುತ್ತಿದ್ದಾರೆ. ಎಸ್ ನಾರಾಯಣ್ ನಿರ್ದೇಶನ ಈ ಸಿನಿಮಾಕ್ಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.