
ಅಣ್ಣಯ್ಯ ಧಾರಾವಾಹಿಯಲ್ಲಿ ಕೊನೆಗೂ ಜಿಮ್ ಸೀನಾನ ಅಸಲಿ ಮುಖದ ಅನಾವರಣ ಆಗಿದೆ. ಪಿಂಕಿ ಜೊತೆ ಮದುವೆಯಾಗಲು ನಿರ್ಧರಿಸಿ, ನೆಲೆ, ಅನ್ನ, ನೀರು ಎಲ್ಲಾ ಕಳೆದುಕೊಂಡಿದ್ದ ಜಿಮ್ ಸೀನಾ, ಕೊನೆಗೆ ಮದುವೆಯಾಗುವ ಹೊತ್ತಿಗೆ ಪಿಂಕಿ ಬೇರೆಯವರ ಜೊತೆ ಮದುವೆಯಾಗಿಗುವುದಾಗಿ ಹೇಳಿ ಮನೆ ಬಿಟ್ಟಿದ್ದಳು. ನಂತರ ಸೀನಾ ಸ್ಥಿತಿ ಭಿಕ್ಷೆ ಬೇಡುವವರೆಗೆ ಬಂದಿತ್ತು. ಬಳಿಕ ಎಲ್ಲವೂ ಬದಲಾಗಿ ರಶ್ಮಿ ಕಾಲನ್ನು ತನ್ನ ಕೈಮೇಲೆ ಇರಿಸಿ, ಮನೆಗೆ ಸ್ವಾಗತಿಸಿದ್ದರು ಸೀನಾ. ಕೊನೆಗೂ ಜಿಮ್ ಸೀನಾ ಮತ್ತು ಗುಂಡಮ್ಮ ನಡುವೆ ಎಲ್ಲಾ ಸರಿ ಆಯ್ತು. ಗಂಡ ಹೆಂಡತಿ ಸಂಬಂಧ ಸುಮಧುರದಿಂದ ಕೂಡಿದೆ ಎಂದು ಹೇಳುವಾಗಲೇ ಈಗ ಸೀನಾ ನಿಜಾ ಮುಖ ಬಯಲಾಗಿದೆ.
ಇದೀಗ ಬಿಡುಗಡೆಯಾದ ಪ್ರೊಮೋದಲ್ಲಿ ತೋರಿಸಿದಂತೆ ಜಿಮ್ ಸೀನಾ ಕಾರು ಖರೀದಿಸಿದ್ದಾನೆ. ತಾನು ಖರೀದಿಸಿದ ಕಾರು ಕೂಡ ಹೆಂಡ್ತಿ ಹೆಸರಲ್ಲೇ ಇರಬೇಕು ಎಂದು, ರಶ್ಮಿ ಕೈಯಿಂದ ಗಾಡಿ ಪತ್ರಗಳಿಗೆ ಸಹಿ ಮಾಡಿಸುತ್ತಿದ್ದಾರೆ. ಈ ಕಾಗದಗಳ ಜೊತೆಗೆ ಖಾಲಿ ಪತ್ರವನ್ನು ಕೂಡ ಇಟ್ಟಿದ್ದು, ಅದಕ್ಕೂ ರಶ್ಮಿ ಸಹಿ ಹಾಕುವಂತೆ ಮಾಡುತ್ತಿದ್ದಾನೆ. ಅಂದರೆ, ಇಲ್ಲಿವರೆಗೆ ಜಿಮ್ ಸೀನಾ ಮಾಡಿದ್ದೆಲ್ಲಾ ಸುಳ್ಳು, ನಾಟಕ ಎನ್ನುವಂತಾಯ್ತು, ಜಿಮ್ ಸೀನಾ ತಂದೆ ಎಲ್ಲಾ ಆಸ್ತಿಯನ್ನು ರಶ್ಮಿ ಹೆಸರಿಗೆ ಬರೆಸಿದ್ದಾನೆ. ಹಾಗಾಗಿ ಆಕೆಯ ಹೆಸರಲ್ಲಿದ್ದ ಎಲ್ಲಾ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಸಿ, ಕೊನೆಗೆ ಪಿಂಕಿ ಜೊತೆ ಮದುವೆಯಾಗುವ ಎಲ್ಲಾ ಪ್ಲ್ಯಾನ್ ಮಾಡಿದ್ದಾನೆ ಸೀನಾ. ಹಾಗಿದ್ರೆ ರಶ್ಮಿ ಮುಂದಿನ ಜೀವನದ ಕಥೆ ಏನು?
ಅಣ್ಣಯ್ಯ ಶಿವು ವಿರುದ್ಧ ವೀಕ್ಷಕರು ಕಿಡಿ
ಧಾರಾವಾಹಿಯಲ್ಲಿ ಶಿವು ಪಾತ್ರದ ವಿರುದ್ಧ ವೀಕ್ಷಕರು ಕಿಡಿ ಕಾರಿದ್ದಾರೆ. ಶಿವುಗೆ ಎಲ್ಲವೂ ಗೊತ್ತಾಗುತ್ತದೆ. ದೇವಿಯ ಮಾತು ಕೇಳಿಸುತ್ತೆ. ಆದರೆ ತನ್ನ ತಂಗಿಯರ ಜೀವನ ಯಾವ ರೀತಿ ಎಂದು ಮಾತ್ರ ಗೊತ್ತಾಗುವುದೇ ಇಲ್ಲ. ಮೂರು ತಂಗಿಯರ ಜೀವನವನ್ನು ನರಕ ಮಾಡಿದ್ರೂ, ಎಲ್ಲಾ ಕಣ್ಣಿಗೆ ಕಾಣುವಂತಿದ್ರೂ ಅದು ಶಿವುಗೆ ಗೊತ್ತಾಗುತ್ತಿಲ್ಲ. ಇವನೆಂಥ ಅಣ್ಣ. ಎಂದು ಕಿಡಿ ಕಾರಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.