Annayya Serial: ಪುಣ್ಯಕೋಟಿಯಾಗಿದ್ದ ಶಿವು, ರೌಡಿಯಾಗಿದ್ದ; ಬೂದಿ ಮುಚ್ಚಿದ ಸತ್ಯ ರಿವೀಲ್!

Published : Jul 11, 2025, 11:12 AM ISTUpdated : Jul 11, 2025, 11:19 AM IST
annayya kannada serial

ಸಾರಾಂಶ

Annayya Kannada Serial Episode: 'ಅಣ್ಣಯ್ಯ' ಧಾರಾವಾಹಿಯಲ್ಲಿ ಮಾರಿಗುಡಿ ಶಿವು, ರೌಡಿ ಶಿವು ಆಗಿದ್ದನಂತೆ. ಹೀಗೊಂದು ಪ್ರೋಮೋ ರಿಲೀಸ್‌ ಆಗಿದ್ದು, ಭಾರೀ ಕುತೂಹಲ ಸೃಷ್ಟಿಸಿದೆ. 

'ಅಣ್ಣಯ್ಯ' ಧಾರಾವಾಹಿಯಲ್ಲಿ ತಂಗಿಯಂದಿರನ್ನು ಕಂಡರೆ ಶಿವುಗೆ ತುಂಬ ಪ್ರೀತಿ, ಯಾರಿಗೂ ಅವನು ಎದುರು ಮಾತನಾಡೋದಿಲ್ಲ. ಹೀಗಿರುವಾಗ ಶಿವು ಈ ಹಿಂದೆ ರೌಡಿ ಆಗಿದ್ದ ಎನ್ನೋದು ರಿವೀಲ್‌ ಆಗಿದೆ. ಹೌದು, ಹೊಸ ಪ್ರೋಮೋ ರಿಲೀಸ್‌ ಆಗಿದ್ದು, ಭಾರೀ ಕುತೂಹಲ ಸೃಷ್ಟಿ ಮಾಡಿದೆ.

ಶಿವಣ್ಣ ಜೈಲು ಸೇರಿದ್ದನಾ?

'ಅಣ್ಣಯ್ಯ' ಧಾರಾವಾಹಿಯ ಹೊಸ ಪ್ರೋಮೋದಲ್ಲಿ ಶಿವು ಗೆಟಪ್‌ ಚೇಂಜ್‌ ಆಗಿದೆ. ಶೇರ್ವಾನಿ ಹಾಕಿದ ಶಿವು ಸಿಕ್ಕಾಪಟ್ಟೆ ಸಿಟ್ಟು ಮಾಡಿಕೊಳ್ತಾನೆ, ಕೈಯಲ್ಲಿ ಮಚ್ಚು ಹಿಡಿದುಕೊಂಡಿರ್ತಾನೆ. ಇನ್ನು ಅವನ ಮನೆ ಮುಂದೆ ನಾಲ್ವರು ಇರುತ್ತಾರೆ. ಈ ಹಿಂದೆ ಮುಂಬೈನಲ್ಲಿದ್ದೆ ಎನ್ನುತ್ತಿದ್ದ ಶಿವಣ್ಣ ಜೈಲು ಸೇರಿದ್ದನಾ ಎಂಬ ಕುತೂಹಲ ಶುರುವಾಗಿದೆ.

ಜೈಲಿನಲ್ಲಿ ಅಮ್ಮ-ಮಗನ ಮಿಲನ!

ಜೈಲಿನಲ್ಲಿರುವ ಖೈದಿಗಳಿಗೆ ಚಿಕಿತ್ಸೆ ಕೊಡಲು ಪಾರು ಜೊತೆ ಶಿವು ಬಂದಿದ್ದಾನೆ, ಆಗ ಅವನು ಜೈಲು ನೋಡಿ ಗಂಭೀರವಾಗಿದ್ದಾನೆ. ಇನ್ನೊಂದು ಕಡೆ ಅಲ್ಲಿಯೇ ಶಿವು ತಾಯಿ ಕೂಡ ಇದ್ದಾಳೆ. ಶಿವು ಹಾಗೂ ಶಾರದಾ ಮುಖಾಮುಖಿಯಾಗಿದ್ದು, ಮಗನನ್ನು ನೋಡಿ ಅವಳು ಖುಷಿಪಟ್ಟಿದ್ದಾಳೆ. ಸೊಸೆ ಡಾಕ್ಟರ್‌ ಆಗಿದ್ದು, ಜೈಲಿನಲ್ಲಿರುವವರಿಗೆ ಸರಿಯಾಗಿ ಚಿಕಿತ್ಸೆ ಸಿಗಬೇಕು ಎಂದು ಅವಳು ಬಯಸುತ್ತಿದ್ದಾಳೆ.

ಬೂದಿ ಮುಚ್ಚಿದ ಸತ್ಯ ರಿವೀಲ್!‌

ನಿನಗೂ ಜೈಲಿಗೂ ಉತ್ತರ ದಕ್ಷಿಣ ಎಂದು ಪಾರು ಹೇಳುತ್ತಿದ್ದಂತೆ ಶಿವುಗೆ ಹಳೆಯ ದಿನಗಳೆಲ್ಲವೂ ನೆನಪಾಗಿದೆ. ಮಚ್ಚು ಹಿಡಿದುಕೊಂಡು ರೌಡಿಸಂ ಮಾಡುತ್ತಿದ್ದ ಶಿವು ಅವನಿಗೆ ನೆನಪಾಗಿದ್ದಾನೆ. ಈ ಮೂಲಕ ಬೂದಿ ಮುಚ್ಚಿದ ಸತ್ಯವೊಂದು ರಿವೀಲ್‌ ಆಗಲಿದೆ. ಓಂದುವೇಳೆ ಶಿವು ಇತಿಹಾಸ ಬೇರೆಯೇ ಇದ್ದರೆ, ಅದನ್ನು ಪಾರು ಒಪ್ಪಿಕೊಳ್ತಾಳಾ? ಜೀವ ತೆಗೆಯುತ್ತಿದ್ದ ವ್ಯಕ್ತಿಯೇ ನನ್ನ ಗಂಡ ಅಂತ ಗೊತ್ತಾದರೆ ಅವಳು ಏನು ಮಾಡಲಿದ್ದಾಳೆ ಎಂಬ ಕುತೂಹಲ ಶುರುವಾಗಿದೆ. ವೀಕ್ಷಕರಂತೂ ಈ ಎಪಿಸೋಡ್‌ ನೋಡಿ ಭಾರೀ ಖುಷಿಪಟ್ಟಿದ್ದಾರೆ.

ಅಸಲಿಗೆ ಏನಾಗಿರಬಹುದು?

ಶಾರದಾ ಬೇರೆಯವರ ಜೊತೆ ಓಡಿಹೋದಳು ಅಂತ ವೀರಭದ್ರನೇ ಊರು ತುಂಬ ಸುದ್ದಿ ಹಬ್ಬಿಸಿದ್ದನು. ಹೀಗಾಗಿ ಶಿವು ಕುಟುಂಬವನ್ನು ಊರಿನಿಂದ ಹೊರಗಡೆ ಹಾಕಬೇಕು ಎಂದು ನ್ಯಾಯ ತೀರ್ಮಾನವಾಗಿತ್ತು. ಆದರೆ ವೀರಭದ್ರನೇ ನಾಟಕ ಮಾಡಿ ಶಿವು ಕುಟುಂಬವನ್ನು ಊರಿನಲ್ಲೇ ಇರೋ ಹಾಗೆ ಮಾಡಿದ್ದನು. ಹಾಗೆಯೇ ಶಿವುನ 150 ಎಕರೆ ಆಸ್ತಿಯನ್ನು ಕಬಳಿಸಿದ್ದನು. ಈ ವಿಷಯ ರೌಡಿಗೆ ಗೊತ್ತಾಗೋದಿಲ್ವಾ? ನಮ್ಮ ಮನೆಯ ಹೆಣ್ಣು ಮಕ್ಕಳ ವಿಷಯಕ್ಕೆ ಸ್ವಲ್ಪವೂ ಸಮಸ್ಯೆ ಆಗಬಾರದು ಅಂತ ಬಹಳ ಕಾಳಜಿ ಮಾಡುವ ಈತ, ಹಣಕ್ಕಾಗಿ ತುಂಬ ಒದ್ದಾಡುತ್ತಾನೆ. ಹೀಗಾಗಿ ಈಗ ಇರುವ ಶಿವುಗೂ, ಈ ಹಿಂದೆ ಇದ್ದ ಶಿವುಗೂ ಸಂಬಂಧವೇ ಇಲ್ಲ ಎನ್ನೋ ರೀತಿ ಇದೆ. ಒಟ್ಟಿನಲ್ಲಿ ಧಾರಾವಾಹಿ ತಂಡ ಯಾವ ರೀತಿ ಕಥೆ ಹೆಣೆದಿರಬಹುದು ಎಂದು ಕಾದು ನೋಡಬೇಕಿದೆ.

ಕಥೆ ಏನು?

ಅಣ್ಣಯ್ಯ ಧಾರಾವಾಹಿಯಲ್ಲಿ ಶಿವುಗೆ ನಾಲ್ವರು ತಂಗಿಯರು. ಅವರಲ್ಲಿ ಒಬ್ಬಳಿಗೆ ಮದುವೆಯಾಗಿದ್ದು, ಇನ್ನೊಂದು ತಂಗಿಯ ಮದುವೆ ನಡೆಯುತ್ತಿದೆ. ಈಗಾಗಲೇ ಮದುವೆಯಾಗಿರೋ ರಶ್ಮಿಯನ್ನು ಅವಳ ಗಂಡ ಜಿಮ್‌ ಸೀನ ಹೇಟ್‌ ಮಾಡ್ತಾನೆ, ಅವನಿಗೆ ಪಿಂಕಿ ಎನ್ನುವವಳ ಮೇಲೆ ಲವ್‌ ಇತ್ತು. ಇನ್ನು ದಡ್ಡ ಮನು ಜೊತೆ ರಾಣಿ ಮದುವೆ ಮಾಡಲು ಇನ್ನೊಂದು ಪ್ಲ್ಯಾನ್‌ ನಡೆಯುತ್ತಿದೆ. ಈ ವಿಷಯ ಶಿವುಗೆ ಗೊತ್ತೇ ಇಲ್ಲ.

ಪಾತ್ರಧಾರಿಗಳು

ಶಿವು- ವಿಕಾಶ್‌ ಉತ್ತಯ್ಯ

ಪಾರು- ನಿಶಾ ರವಿಕೃಷ್ಣನ್

ರಶ್ಮಿ-ಪ್ರತೀಕ್ಷಾ ಶ್ರೀನಾಥ್‌

ಜಿಮ್‌ ಸೀನ- ಸುಷ್ಮಿತ್‌ ಜೈನ್‌

 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಹೊಸ ವರ್ಷಕ್ಕೆ ಶ್ವೇತಾ ಪ್ರಸಾದ್ ಸ್ಪೆಷಲ್ ಗಿಫ್ಟ್… ರಾಧಾ ಮಿಸ್ ಅಂದಕ್ಕೆ ಫ್ಯಾನ್ಸ್ ಫಿದಾ
Karna Serial: ಎಲ್ಲ ಖುಷಿಯಿಂದ ಇರ್ಬೇಕಿದ್ರೆ, ಈ ಥರ ಮಾಡಿದ್ರೆ ಚೆನ್ನಾಗಿರಲ್ಲ: ಡೈರೆಕ್ಟರ್‌ಗೆ ವಾರ್ನಿಂಗ್