ಪ್ರೀತಿಯಲ್ಲಿ ಬಿದ್ದಾಗ ಧರ್ಮದ ತಲೆ ಕೆಡಿಸಿಕೊಳ್ಳಲಿಲ್ಲ, ಆದ್ರೆ ಆಮೇಲೆ ಆಗಿದ್ದೇ ಬೇರೆ... ವೀರ ಕನ್ನಡಿಗ ನಟಿ ಅನಿತಾ ಓಪನ್​ ಮಾತು

By Suchethana D  |  First Published Sep 22, 2024, 12:59 PM IST

ಇಜಾಜ್​ ಖಾನ್​ ಜೊತೆ ಬಹು ವರ್ಷಗಳ ಸಂಬಂಧ ಹೊಂದಿದ್ದ ನಟಿ ಅನಿತಾ ಹಸನಂದಾನಿ, ಆ ಸಂಬಂಧದಿಂದ ಹೊರಬಂದದ್ದು ಏಕೆ ಎಂಬ ಬಗ್ಗೆ ಸಂದರ್ಶನದಲ್ಲಿ ಹೇಳಿದ್ದಾರೆ. ಅದರ ಡಿಟೇಲ್ಸ್ ಇಲ್ಲಿದೆ... 
 


 ಹಿಂದಿ ಕಿರುತೆರೆ ವೀಕ್ಷಕರಿಗೆ ಅನಿತಾ ಹಸನಂದಾನಿ ಚಿರಪರಿಚಿತರು. ಯೇ ಹೈ ಮೊಹಬ್ಬತೇನ್, ನಾಗಿನ್​, ಕಾವ್ಯಾಂಜಲಿ ಮುಂತಾದ ಸೀರಿಯಲ್​ಗಳಿಂದ ಮನೆ ಮಾತಾಗಿರುವವರು ಇವರು. ಕೆಲವು ವರ್ಷಗಳಿಂದ ಸೀರಿಯಲ್​ಗಳಲ್ಲಿ ನಟಿಸುವ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ಹಿಂದಿ ಸೀರಿಯಲ್​ ಮಾತ್ರವಲ್ಲದೇ ಬೇರೆ ಭಾಷೆಗಳ ಸೀರಿಯಲ್​ಗಳು ಹಾಗೂ ತಮಿಳು ಚಿತ್ರಗಳಲ್ಲಿಯೂ ನಟಿಸುತ್ತಿರುವ ಅನಿತಾ, ವೈವಿಧ್ಯಮಯ ಪಾತ್ರಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಇದೀಗ ನಟಿ ಸಿದ್ಧಾರ್ಥ್ ಕಣ್ಣನ್ ಅವರೊಂದಿಗೆ ಸಂದರ್ಶನ ನೀಡಿದ್ದು, ತಮ್ಮ ಜೀವನದ ಹಲವು ವಿಷಯಗಳ ಬಗ್ಗೆ ಓಪನ್​ ಆಗಿ ಮಾತನಾಡಿದ್ದಾರೆ. ಈ ಸಂದರ್ಶನದಲ್ಲಿ ತಮ್ಮ ಲವ್​ ಸ್ಟೋರಿ ಕುರಿತು ಹೇಳಿಕೊಂಡಿರುವ ಅವರು, ಅನ್ಯ ಧರ್ಮಿಯನೊಬ್ಬನ ಜೊತೆ ಪ್ರೀತಿಯ ಬಲೆಯಲ್ಲಿ ಬಿದ್ದ ಬಗೆಯನ್ನು ಹೇಳಿಕೊಂಡು, ಅದರಿಂದ ಹೇಗೆ ಹೊರಬಂದೆ ಎಂಬ ಬಗ್ಗೆ ತಿಳಿಸಿದ್ದಾರೆ.

ಅಷ್ಟಕ್ಕೂ, ಅನಿತಾ ಈಗ ರೋಹಿತ್​ ರೆಡ್ಡಿ ಎನ್ನುವವರನ್ನು ಮದುವೆಯಾಗಿದ್ದು ಮಗುವಿನ ತಾಯಿಯಾಗಿದ್ದಾರೆ. ಆದರೆ ಇಜಾಜ್​ ಎಂಬುವವರ ಜೊತೆ ಲವ್​ನಲ್ಲಿ ಬಿದ್ದು, ಡೇಟಿಂಗ್​ ಮಾಡುತ್ತಿದ್ದ ಸಮಯವನ್ನು ಈ ಸಂದರ್ಶನದಲ್ಲಿ ಅವರು ಮೆಲುಕು ಹಾಕಿದ್ದಾರೆ. ಇಜಾಜ್​ ಖಾನ್​ ಜೊತೆ ಲವ್​ನಲ್ಲಿ ಬಿದ್ದೆ. ಆತ ಮುಸ್ಲಿಂ, ನಾನು ಹಿಂದು. ಇದೊಂದೇ ಕಾರಣಕ್ಕೆ ನನ್ನ ಅಮ್ಮನಿಗೆ ಈ ಸಂಬಂಧ ಇಷ್ಟವಿರಲಿಲ್ಲ. ಅವರು ಪದೇ ಪದೇ ಬುದ್ಧಿ ಹೇಳಿದರೂ ನಾನು ಕೇಳಲಿಲ್ಲ. ಏಕೆಂದರೆ ಪ್ರೀತಿಯ ಬಲೆಗೆ ಸಿಲುಕಿಯಾಗಿತ್ತು. ಎಲ್ಲವೂ ಚೆನ್ನಾಗಿದೆ ಎನ್ನಿಸಿತ್ತು. ಈ ಸಮಯದಲ್ಲಿ ಯಾರು ಏನೇ ಬುದ್ಧಿ ಹೇಳಿದರೂ ಅದು ತಲೆಗೆ ಹೋಗುತ್ತಿರಲಿಲ್ಲ. ಇದೇ ಕಾರಣಕ್ಕೆ ಅದೊಂದು ಹಂತದಲ್ಲಿ ಅಮ್ಮನನ್ನೇ ಎದುರು ಹಾಕಿಕೊಂಡು ಪ್ರೀತಿಯೇ  ಮೇಲು ಎಂದು ಬಯಸಿಬಿಟ್ಟೆ ಎಂದು ಅನಿತಾ ಹೇಳಿದ್ದಾರೆ. 

Tap to resize

Latest Videos

undefined

ಈ ಎರಡು ಷರತ್ತು ಒಪ್ಪಿಕೊಂಡ್ರೆ ತಂದೆ- ಮಗಳು ಮದ್ವೆಯಾಗ್ಬೋಕೆ ಸರ್ಕಾರದಿಂದಲೇ ಗ್ರೀನ್​ ಸಿಗ್ನಲ್​!
  

ಅಷ್ಟಕ್ಕೂ ಇಜಾಜ್​ ಜೊತೆಗಿನ ನನ್ನ ಸಂಬಂಧ  ದೀರ್ಘಕಾಲದ್ದೇ ಆಗಿತ್ತು. ನನ್ನ ಅಮ್ಮ ಈ ಸಂಬಂಧ ಒಪ್ಪದಿದ್ದರೂ ಈ ಬಗ್ಗೆ ತಿಳಿದಿದ್ದರೂ ಆತ ಅದಕ್ಕೆ ಏನೂ ಹೇಳದೇ ಇರುವುದು ನನಗೆ ಖುಷಿ ಕೊಡುತ್ತಿತ್ತು. ನನ್ನ ಬಗ್ಗೆ ಆತನಿಗೆ ಇದ್ದ ಕಾಳಜಿ ನೋಡಿ ತುಂಬಾ ಖುಷಿಯೂ ಆಗುತ್ತಿತ್ತು ಎನ್ನುತ್ತಲೇ ನಂತರ ನಡೆದ ಘಟನೆಯನ್ನು ವಿವರಿಸಿದ್ದಾರೆ. ಒಂದು ಹಂತ ಮೀರಿದಾಗ, ನನ್ನನ್ನು ಆತ ಬದಲಾಯಿಸಲು ಪ್ರಯತ್ನಿಸಿದ. ಆಗ ನನಗೆ ಅಸಲಿಯತ್ತು ಗೊತ್ತಾಯಿತು ಎಂದಿರುವ ನಟಿ, ಅದು ಏನು ಎಂಬುದನ್ನು ನೇರವಾಗಿ ಹೇಳಲಿಲ್ಲ. ಆದರೆ, ‘ಯಾರಾದರೂ ನಿಮ್ಮನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ ಎಂದರೆ ಅದು ಪ್ರೀತಿ ಅಲ್ಲ ಎಂದೇ ಅರ್ಥ. ಆರಂಭದಲ್ಲಿ ಪ್ರೀತಿಯಲ್ಲಿ ಬಿದ್ದಾಗ ಇವೆಲ್ಲಾ ಗೊತ್ತಾಗಲಿಲ್ಲ. ಬದಲಾಯಿಸು ಶುರು ಮಾಡಿದಾಗ ಇದು ನಿಜವಾದ ಪ್ರೀತಿ ಅಲ್ಲ ಎಂದು ತಿಳಿಯಿತು.  ನಾನು ಪ್ರೀತಿಸುವ ವ್ಯಕ್ತಿಗಾಗಿ ಒಂದು ಹಂತದಲ್ಲಿ ಸಂಪೂರ್ಣ ಬದಲಾಗಲು ಕೂಡ ಸಿದ್ಧವಾಗಿಬಿಟ್ಟಿದ್ದೆ. ಆಮೇಲೆ ಯಾಕೋ ಸತ್ಯದ ಅರಿವಾಗತೊಡಗಿತು. ಆ ಸಂಬಂಧದಿಂದ ಹೊರಕ್ಕೆ ಬಂದೆ' ಎಂದಿದ್ದಾರೆ ನಟಿ.

'ಈಗ ಬೇರೊಂದು ಮದುವೆಯಾದ ಮೇಲೆ ನಾನು ಹಿಂದಿನದ್ದನ್ನು ಯೋಚಿಸಿದಾಗ, ಎಷ್ಟು ತಪ್ಪು ಮಾಡಲು ಹೊರಟಿದ್ದೆ ಎಂದು ಅನ್ನಿಸುತ್ತಿದೆ. ಅದಕ್ಕಾಗಿ ಈಗ ವಿಷಾದಿಸುತ್ತಿದ್ದೇನೆ. ಆದರೆ ಆ ಸಂಬಂಧದಿಂದ ಹೊರಕ್ಕೆ ಬರುವುದು ನನಗೆ ಬಹಳ ಕಷ್ಟವಾಯಿತು. ಹೊರಕ್ಕೆ ಬಂದ ಮೇಲೂ ಅದನ್ನು ಮರೆಯಲು ವರ್ಷಗಳೇ ಹಿಡಿದವು. ಆ ಸಮಯದಲ್ಲಿ ತುಂಬಾ ಒಂಟಿತನ ಅನುಭವಿಸಿದೆ. ಆದರೆ ಆ ಬಳಿಕವೂ ಜೀವನ ಸುಲಭವಾಗಿರಲಿಲ್ಲ. ಆತನಿಂದಾಗಿ  ತಮಿಳು ಚಿತ್ರರಂಗವನ್ನೇ ತೊರೆಯಬೇಕಾಯಿತು. ಇದು ನನಗೆ ತುಂಬಾ ನೋವಿದೆ. ನಾನು ಇಷ್ಟಪಟ್ಟಿರುವ  ವೃತ್ತಿಜೀವನವನ್ನು ತ್ಯಜಿಸಿದ್ದೇನೆ ಎಂದು ಹೇಳಿದ್ದಾರೆ. 

ಮಗಳನ್ನೇ ಮದ್ವೆಯಾದ ಅಪ್ಪ! ಕುಂಕುಮ-ಸಿಂಧೂರ ಇಟ್ಟದ್ಯಾಕೆ ಎಂದು ಅವ್ರ ಬಾಯಲ್ಲೇ ಕೇಳಿ...

click me!