ಪುನೀತ್ ರಾಜ್‌ಕುಮಾರ್ ಬಳಸುತ್ತಿದ್ದ ದುಬಾರಿ ಸೈಕಲ್‌ನ ಆಂಕರ್ ಅನುಶ್ರೀಗೆ ಗಿಫ್ಟ್‌ ಕೊಟ್ಟ ಅಶ್ವಿನಿ!

Published : Mar 20, 2025, 02:08 PM ISTUpdated : Mar 20, 2025, 02:27 PM IST
ಪುನೀತ್ ರಾಜ್‌ಕುಮಾರ್ ಬಳಸುತ್ತಿದ್ದ ದುಬಾರಿ ಸೈಕಲ್‌ನ ಆಂಕರ್ ಅನುಶ್ರೀಗೆ ಗಿಫ್ಟ್‌ ಕೊಟ್ಟ ಅಶ್ವಿನಿ!

ಸಾರಾಂಶ

ಪುನೀತ್ ರಾಜ್‌ಕುಮಾರ್ ಅವರ 50ನೇ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಿಸಿದರು. ಕಠೀರವ ಸ್ಟುಡಿಯೋದಲ್ಲಿ ಅನ್ನದಾನ ಮಾಡಲಾಗಿತ್ತು. ಅನುಶ್ರೀಗೆ ಅಶ್ವಿನಿ ಪುನೀತ್ ಅವರು ಅಪ್ಪು ಬಳಸುತ್ತಿದ್ದ ಸೈಕಲ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಕೊರೋನಾ ಸಮಯದಲ್ಲಿ ಅಪ್ಪು ಸೈಕಲ್ ಓಡಿಸುತ್ತಿದ್ದರು. ಆ ಸೈಕಲ್ ಈಗ ಅನುಶ್ರೀ ಮನೆಯಲ್ಲಿ ಸಿಂಹಾಸನದಂತಿದೆ ಎಂದು ಹೇಳಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ರವರ 50ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗಿತ್ತು. ಕಠೀರವ ಸ್ಟುಡಿಯೋದಲ್ಲಿ ಇರುವ ಸಮಾಧಿ ಬಳಿ ಬೆಳಗ್ಗೆಯಿಂದ ಸಂಜೆವರೆಗೂ ಅಭಿಮಾನಿ ದೇವರುಗಳಿಗೆ ಊಟ ವ್ಯವಸ್ಥೆ ಮಾಡಲಾಗಿತ್ತು. ಮನೆ ಬಳಿ ಬಂದು ಪೂಜೆ ಸಲ್ಲಿಸಿ ವಿಶ್ ಮಾಡುವವರು ಸಾವಿರಾರೂ ಮಂದಿ. ಈ ವರ್ಷ ಆಚರಣೆ ಸ್ಪೆಷಲ್ ಮಾಡಬೇಕು ಎಂದು ಅಪ್ಪು ಸಿನಿಮಾ ಮರು ಬಿಡುಗಡೆ ಮಾಡುವ ನಿರ್ಧರ ಮಾಡಿದ್ದರು. ಅಪ್ಪು ಕುಟುಂಬಸ್ಥರಿಗೆ ಮಾತ್ರವಲ್ಲ ಅವರ ಸಿನಿಮಾ ಸ್ನೇಹಿತರು ಮತ್ತು ಅಭಿಮಾನಿಗಳಿಗೆ ಆ ದಿನ ಹಬ್ಬದಂತೆ ಇತ್ತು. 

ಅಪ್ಪು ಅಪ್ಪಟ ಅಭಿಮಾನಿ ಆಂಕರ್ ಅನುಶ್ರೀ. ಶಿವರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಜೊತೆ ಸಿಕ್ಕಾಪಟ್ಟೆ ಕ್ಲೋಸ್‌ ಈಕೆ. ನಾಲ್ಕೈದು ಸಲ ಅಪ್ಪು ಜೊತೆ ನಿರೂಪಣೆ ಮಾಡಿದ್ದಾರೆ ಅನುಶ್ರೀ. ಈ ಗೌರವಕ್ಕೆ ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ನಡೆಯುವ ಸಂದರ್ಶನಗಳಲ್ಲಿ ಪುನೀತ್‌ರನ್ನು ನೆನಪಿಸಿಕೊಳ್ಳುತ್ತಾರೆ ಹಾಗೂ ಆಗಮಿಸುವ ಗೆಸ್ಟ್‌ಗಳಿ ಪುನೀತ್‌ ಇರುವ ಬೆಳ್ಳಿ ನಾಣ್ಯ ನೀಡುತ್ತಾರೆ. ನಾನು ಅಪ್ಪು ಸರ್ ದೊಡ್ಡ ಅಭಿಮಾನಿ ಎಂದು ಕಣ್ಣೀರಿಡುವ ಆಂಕರ್ ಅನುಶ್ರೀಗೆ ಅಶ್ವಿನಿ ಪುನೀತ್ ಸ್ಪೆಷಲ್ ಉಡುಗರೆಯನ್ನು ನೀಡಿದ್ದಾರೆ. ಅದುವೇ ಅಪ್ಪು ಬಳಸುತ್ತಿದ್ದ ದುಬಾರಿ ಸೈಕಲ್.

ನಟಿ ಶರಣ್ಯ ಶೆಟ್ಟಿ ಹೆಸರು ಬಳಸಿ ವಾಟ್ಸಪ್‌ನಲ್ಲಿ ಹಣ ಪೀಕುತ್ತಿದ್ದ ಖದೀಮರು!

ಹೌದು! ಕೊರೋನಾ ಲಾಕ್‌ಡೌನ್‌ ಸಮಯಲ್ಲಿ ಸಿಕ್ಕಾಪಟ್ಟೆ ಸೈಕಲ್ ಓಡಿಸುವ ಅಭ್ಯಾಸ ಬೆಳೆಸಿಕೊಂಡರು ಅಪ್ಪು. ಕಿಲೋ.ಗಟ್ಟಲೆ ಪ್ರಯಾಣ ಮಾಡುತ್ತಿದ್ದರು. ಹೀಗಾಗಿ ತಮ್ಮ ಸೈಕಲ್‌ನ ತುಂಬಾ ಚೆನ್ನಾಗಿ ಕಾಪಾಡಿಕೊಂಡಿದ್ದರು. ಈ ಸೈಕಲ್‌ನ ಅನುಶ್ರೀಗೆ ಅಶ್ವಿನಿ ಉಡುಗೊರೆಯಾಗಿ ನೀಡಿದ್ದಾರೆ. ಈ ವಿಚಾರವನ್ನು ಎಲ್ಲಿಯೂ ರಿವೀಲ್ ಮಾಡಿಲ್ಲ ಆದರೂ ಮಾಧ್ಯಮಗಳಿಗೆ ಹೇಗೋ ತಿಳಿದಿದೆ ಎಂದು ಅನು ಶಾಕ್ ಆಗಿದ್ದಾರೆ. 'ನನ್ನ ತಾಯಿ ನಂತರ ತುಂಬಾ ಇಷ್ಟ ಪಡುವ ವ್ಯಕ್ತಿ ವ್ಯಕ್ತಿತ್ವ ಅಂದ್ರೆ ಪುನೀತ್ ರಾಜ್‌ಕುಮಾರ್ ಸರ್. ನಾನು ಕೂಡ ಅಭಿಮಾನಿ ರೀತಿ ಹಬ್ಬದ ರೀತಿಯಲ್ಲಿ ಆಚರಣೆ ಮಾಡುತ್ತಿದ್ದೀನಿ. ಅವರು ಬಂಗಾರದ ಮನುಷ್ಯ...ಸೂರ್ಯನೊಬ್ಬ ಚಂದ್ರನೊಬ್ಬ ನಮ್ಮ ಅಪ್ಪು ಸರ್ ಕೂಡ ಒಬ್ಬರೇ. ಇಲ್ಲಿಗೆ ಯಾರು ಬೇಕಿದ್ರೂ ಬಂದು ಹೋಗ್ಬೋದು ಆದರೆ ಅಪ್ಪು ಯಾವತ್ತಿದ್ದರೂ ಲೋಕಲ್' ಎಂದು ಅನುಶ್ರೀ ಮಾತನಾಡಿದ್ದಾರೆ.

ಬೇಸಿಗೆ ಹೆಚ್ಚಾಯ್ತು ಅಂತ ಎಳನೀರು ಕುಡಿಯುವವರೇ ಎಚ್ಚರ...ಈ ಸಮಸ್ಯೆ ಬಗ್ಗೆ ಗೊತ್ತಿರಲಿ!

'ನಿಮಗೆ ಯಾರು ಇದೆಲ್ಲಾ ಹೇಳುತ್ತಿರುವುದು. ಇವತ್ತಿಗೂ ಆ ಸೈಕಲ್‌ನನ್ನ ಬಳಿ ಇದೆ. ನನಗೆ ಹೇಳಿ ಕೊಟ್ಟಿದ್ದರು ಈ ಸೈಕಲ್‌ನ ಬಳಸಬೇಕು ಹಾಗೆ ಇಡುವಂತೆ ಇಲ್ಲ ಎಂದು. ಆದರೆ ಅಪ್ಪು ಸರ್ ಬಳಸುತ್ತಿದ್ದ ಸೈಕಲ್ ಅವರು ಕುಳಿತುಕೊಳ್ಳುತ್ತಿದ್ದ ಸೈಕಲ್ ಹೀಗಾಗಿ ಅದು ನಮ್ಮ ಮನೆಯಲ್ಲಿ ಸಿಂಹಾಸನ ತರ ಇದೆ.ಅಪ್ಪು ಸರ್ ಜೊತೆ ಸಾಕಷ್ಟು ನೆನಪುಗಳು ಇದೆ. ಅವರೊಟ್ಟಿಗೆ ಊಟ ಮಾಡಿರುವುದು ಒಟ್ಟಿಗೆ ಡ್ಯಾನ್ಸ್ ಮಾಡಿರುವುದು ಸಾಕಷ್ಟು ಇದೆ.  ನನ್ನ ಒಂದು ಹಾಡನ್ನು ಅವರ ಸಿನಿಮಾಗಾಗಿ ಹಾಡಿದ್ದು. ಅವರೊಟ್ಟಿಗೆ ಯೋಗ ಮಾಡಿದ್ದೀನಿ' ಅನುಶ್ರೀ ಹೇಳಿದ್ದಾರೆ.

ಏಳೇಳು ಜನ್ಮಕ್ಕೂ ಇದೇ ನಂಗೆ ಗಿಫ್ಟ್‌; ಅನುಪಮಾ ಗೌಡ ಮುಖದ ಹಚ್ಚೆ ಹಾಕಿಸಿಕೊಂಡ ತಾಯಿ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!
ಹೊರ ಹೋದ್ಮೇಲೆ ನೀನೇ ಟ್ರೇನ್ ಮಾಡ್ಬೇಕಲ್ವಾ ! ಮನಸ್ಸಿನ ಮಾತು ಹೊರ ಹಾಕಿದ ರಾಶಿಕಾ