ನನ್ನ ಕನ್ನಡ ಪ್ರೇಮದ ಬಗ್ಗೆ ಗೊತ್ತಿಲ್ಲದೆ ಕಾಮೆಂಟ್‌ ಮಾಡೋರು ಕಾಲು ಎಕ್ಕಡಕ್ಕೂ ಸಮವಲ್ಲ: ನಿರೂಪಕಿ ಸೌಮ್ಯಾ ರಾವ್‌

Published : Jan 17, 2025, 01:23 PM ISTUpdated : Jan 17, 2025, 08:12 PM IST
ನನ್ನ ಕನ್ನಡ ಪ್ರೇಮದ ಬಗ್ಗೆ ಗೊತ್ತಿಲ್ಲದೆ ಕಾಮೆಂಟ್‌ ಮಾಡೋರು ಕಾಲು ಎಕ್ಕಡಕ್ಕೂ ಸಮವಲ್ಲ: ನಿರೂಪಕಿ ಸೌಮ್ಯಾ ರಾವ್‌

ಸಾರಾಂಶ

ಕನ್ನಡ ಚಿತ್ರರಂಗದಲ್ಲಿ ಅವಕಾಶ ಸಿಗದೆ ಇರುವ ಬಗ್ಗೆ ನಿರೂಪಕಿ ಸೌಮ್ಯಾ ರಾವ್‌ ಅವರು ತೆಲುಗು ಸಂದರ್ಶನವೊಂದರಲ್ಲಿ ಮಾತನಾಡಿದ್ದರು. ಈ ಬಗ್ಗೆ ಅನೇಕರು ಬೇಸರ ಹೊರಹಾಕಿದ್ದರೆ, ಇನ್ನೂ ಕೆಲವರು ಸತ್ಯ ಮಾತಾಡಿದ್ದಾರೆ ಅಂತ ಮೆಚ್ಚುಗೆ ಸೂಚಿಸಿದ್ದರು. ಈ ವಿಚಾರವಾಗಿ ಸೌಮ್ಯಾ ರಾವ್‌ ಅವರು ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ.  

ಕರ್ನಾಟಕ ಮೂಲದ ನಟಿ, ನಿರೂಪಕಿ ಸೌಮ್ಯಾ ರಾವ್‌ ಅವರು ತೆಲುಗಿನ ಸಂದರ್ಶನವೊಂದರಲ್ಲಿ ಕನ್ನಡ ಚಿತ್ರರಂಗದ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಕೆಲವರು ಈ ಮಾತನ್ನು ಒಪ್ಪಿದರೆ, ಇನ್ನೂ ಕೆಲವರು ತೀವ್ರ ಆಕ್ರೋಶ ಹೊರಹಾಕಿದ್ದರು. ಈಗ ಈ ವಿಚಾರವಾಗಿ ಮತ್ತೆ ಸೌಮ್ಯಾ ರಾವ್‌ ಅವರು ರಾಜೇಶ್‌ ಗೌಡ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದಾರೆ.

ಸಂದರ್ಶನದಲ್ಲಿ ಸೌಮ್ಯಾ ರಾವ್‌ ಹೇಳಿದ್ದೇನು?
'ನನ್ನನ್ನು ಕನ್ನಡ ಚಿತ್ರರಂಗ ಬೆಳೆಸಿಲ್ಲ, ಹೀಗಾಗಿ ನನಗೆ ಕನ್ನಡ ಚಿತ್ರರಂಗದ ಬಗ್ಗೆ ಅಭಿಮಾನ ಇಲ್ಲ. ಕಾಂತಾರ ಹಾಗೂ ಕೆಜಿಎಫ್‌ ಸಿನಿಮಾ ಆದ್ಮೇಲೆ ಅಲ್ಲಿ ಯಾವುದೇ ಒಳ್ಳೆಯ ಸಿನಿಮಾಗಳು ಬಂದಿಲ್ಲ. ಅಲ್ಲಿ ಪ್ರತಿಭೆಗಳನ್ನು ಬೆಳೆಸೋದಿಲ್ಲ. ಮುಂದೆ ಚಿತ್ರರಂಗ ಇನ್ನಷ್ಟು ಸಣ್ಣದಾಗುತ್ತದೆ,' ಎಂದು ಸೌಮ್ಯಾ ರಾವ್‌ ಹೇಳಿದ್ದರು.

ಕನ್ನಡ ಚಿತ್ರರಂಗ ಪ್ರತಿಭಾವಂತರನ್ನು ಪ್ರೋತ್ಸಾಹಿಸಲ್ಲ: ಕಾಸ್ಟಿಂಗ್ ಕೌಚ್ ಬಗ್ಗೆ ಬಾಯ್ಬಿಟ್ಟ ಜಬರ್ದಸ್ತ್ ಮಾಜಿ ನಿರೂಪಕಿ

ಸ್ಪಷ್ಟನೆ ನೀಡಿದ ನಟಿ! 
ಕನ್ನಡ ಚಿತ್ರರಂಗದಲ್ಲಿ ಕೆಜಿಎಫ್‌, ಕಾಂತಾರ ಆದ್ಮೇಲೆ ಒಳ್ಳೆಯ ಸಿನಿಮಾಗಳು ಬಂದಿಲ್ಲ. ಚಿತ್ರರಂಗ ಸಣ್ಣದಾಗುತ್ತಿದೆ, ಇಲ್ಲಿ ಪ್ರತಿಭೆಗಳನ್ನು ಬೆಳೆಸೋದಿಲ್ಲ ಎಂದು ಹೇಳಿದ್ದು ಅನೇಕ ಆಕ್ರೋಶಕ್ಕೆ ಕಾರಣವಾಗಿತ್ತು. ಕನ್ನಡದಲ್ಲಿ ಎಷ್ಟು ಸಿನಿಮಾಗಳನ್ನು ಮಾಡಿದ್ದಾರೆ? ಕನ್ನಡದಲ್ಲಿ ಇವರು ಏನು ಮಾಡಿದ್ದಾರೆ ಅಂತ ತೆಲುಗು ನಾಡಿನಲ್ಲಿ ಕನ್ನಡದ ಬಗ್ಗೆ ಹೀಗೆ ಹೇಗೆ ಮಾತಾಡ್ತಾರೆ ಎಂದು ಅನೇಕರು ಕೋಪ ಮಾಡಿಕೊಂಡಿದ್ದರು. ಈ ಬಗ್ಗೆ ಮತ್ತೆ ಸೌಮ್ಯಾ ರಾವ್‌ ಮಾತನಾಡಿದ್ದಾರೆ.

'ನಾನು ಈ ಸಂದರ್ಶನ ಕೊಟ್ಟು ಎರಡು ತಿಂಗಳ ಮೇಲಾಯ್ತು. ಸಂದರ್ಶನ ಆಗಿ ಹದಿನೈದು ದಿನ ಆದ್ಮೇಲೆ ಎಡಿಟ್‌ ಆಗಿ ಅಪ್‌ಲೋಡ್‌ ಆಗಿತ್ತು. ಆ ಟೈಮ್‌ನಲ್ಲಿ ಮ್ಯಾಕ್ಸ್‌, ಯುಐ ಸಿನಿಮಾ ರಿಲೀಸ್‌ ಆಗಿರಲಿಲ್ಲ. ನಾನು ಡಾ ರಾಜ್‌ಕುಮಾರ್‌ ಸಿನಿಮಾಗಳನ್ನು ನೋಡಿ ಬೆಳೆದವಳು. ನನಗೆ ಕನ್ನಡ ಅಂದ್ರೆ ತುಂಬ ಇಷ್ಟ. ನಾನು ಕನ್ನಡದ ಬಗ್ಗೆ ಮಾತಾಡಲಿಲ್ಲ, ಕನ್ನಡ ಚಿತ್ರರಂಗದ ಬಗ್ಗೆ ಮಾತಾಡಿದೆ. ನಾನು ಈ ಹಿಂದಿನ ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡಿರಲಿಲ್ಲ, ಪ್ರಸ್ತುತ ಚಿತ್ರರಂಗದ ಬಗ್ಗೆ ಮಾತನಾಡಿದ್ದೆ, ಬೇಸರ ಹೊರಹಾಕಿದ್ದೆ ಅಷ್ಟೇ… ನನಗೆ ತೆಲುಗಿನಲ್ಲಿ ಎಲ್ಲ ಪದಗಳು ಗೊತ್ತಿಲ್ಲ. ಕನ್ನಡ ಚಿತ್ರರಂಗ ಸಣ್ಣದು ಅಂತ ನಾನು ಹೇಳಿಲ್ಲ, ಸಂಕುಚಿತ ಮನಸ್ಸು ಇದೆ ಎಂಬರ್ಥದಲ್ಲಿ ಹೇಳಿದೆ. ಸಂಕುಚಿತ ಪದಕ್ಕೆ ತೆಲುಗಿನಲ್ಲಿ ಏನು ಹೇಳ್ತಾರೆ ಅಂತ ಗೊತ್ತಿಲ್ಲ,' ಎಂದು ಸೌಮ್ಯಾ ರಾವ್‌ ಹೇಳಿದ್ದಾರೆ.

'ನನಗೆ ಕನ್ನಡದಲ್ಲಿ ನಟಿಸಲು ಇಷ್ಟವಿದ್ದರೂ ಅವಕಾಶ ಸಿಗಲಿಲ್ಲ. ಇಲ್ಲಿ ಕಾಸ್ಟಿಂಗ್‌ ಕೌಚ್‌ ಅನುಭವ ಆಗಿದ್ದಕ್ಕೆ ನಾನು ಮಾತನಾಡಿದೆ. ತೆಲುಗಿನಲ್ಲಿ ಅನುಭವ ಆಗಿದ್ದರೆ ಅದನ್ನು ಮಾತಾಡ್ತಿದ್ದೆ. ನಾನು ಬಡತನದಲ್ಲಿ ಬೆಳೆದವಳು. ಕನ್ನಡದಲ್ಲಿ ಇಂದು ಹೀರೋಯಿನ್‌ಗಳು ಕಡಿಮೆ ಆಗಿದ್ದಾರೆ, ಇಲ್ಲಿಯವರಿಗೆ ಅವಕಾಶ ಸಿಗ್ತಿಲ್ಲ. ಹೀಗಾಗಿ ಒಳ್ಳೆಯ ಕಲಾವಿದರನ್ನು ಕಳೆದುಕೊಳ್ತಿದ್ದಾರೆ. ನನಗೆ ಪುನೀತ್‌ ರಾಜ್‌ಕುಮಾರ್‌, ಉಪೇಂದ್ರ, ಶಿವರಾಜ್‌ಕುಮಾರ್‌, ಕಿಚ್ಚ ಸುದೀಪ್‌ ಅಂದ್ರೆ ತುಂಬ ಇಷ್ಟ. ನಾನು ಕನ್ನಡದ ಸಾಕಷ್ಟು ಸುದ್ದಿಗೋಷ್ಠಿಗಳನ್ನು ನಿರೂಪಣೆ ಮಾಡಿದ್ದೇನೆ. ದುಡ್ಡು ಇಷ್ಟೇ ಕೊಡಿ ಅಂತ ನಾನು ಕೇಳಿಲ್ಲ, ಇಷ್ಟೆಲ್ಲ ಚೆನ್ನಾಗಿ ಕನ್ನಡ ಮಾತಾಡ್ತಿದ್ದರೂ ಕೂಡ ಅವಕಾಶ ಕೊಡಲಿಲ್ಲ,' ಎಂದು ಸೌಮ್ಯಾ ರಾವ್‌ ಹೇಳಿದ್ದಾರೆ.

'ನನ್ನ ಸಂದರ್ಶನದ ಪೂರ್ತಿ ವಿಡಿಯೋವನ್ನು ನೋಡದೆ ಕೆಟ್ಟ ಕೆಟ್ಟದಾಗಿ ಕಾಮೆಂಟ್‌ ಮಾಡ್ತಿದ್ದಾರೆ. ಈ ರೀತಿ ಕಾಮೆಂಟ್‌ ಮಾಡೋರಿಗೆ ತಾಯಿ-ಅಕ್ಕ ಇರೋದಿಲ್ವಾ? ಬಿಟ್ಟಿ ಕರೆನ್ಸಿ ಹಾಕ್ತಾರೆ ಅಂತ ಈ ರೀತಿ ಕೆಟ್ಟದಾಗಿ ಕಾಮೆಂಟ್‌ ಮಾಡೋದು ಸರೀನಾ? ಈ ರೀತಿ ಕೆಟ್ಟದಾಗಿ ಕಾಮೆಂಟ್‌ ಮಾಡೋರು ನನ್ನ ಕಾಲು ಎಕ್ಕಡಕ್ಕೂ ಸಮ ಇಲ್ಲ. ನಾನು ಪದೇ ಪದೇ ಹೇಳ್ತಿದೀನಿ ನನ್ನ ತಾಯಿಯಷ್ಟೇ ಕನ್ನಡ ಕೂಡ ತುಂಬ ಇಷ್ಟ,' ಎಂದು ಸೌಮ್ಯಾ ರಾವ್‌ ಅವರು ಸ್ಪಷ್ಟಪಡಿಸಿದ್ದಾರೆ.

ತೆಲುಗು ಕಿರುತೆರೆಯಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ; ಮೊನ್ನೆ ಬಿಗ್ ಬಾಸ್ ನಿಖಿಲ್, ಈಗ ನಿರೂಪಕಿ ಸೌಮ್ಯಾರಾವ್!

ತೆಲುಗಿನವ್ರು ನನ್ನಂತೆ ಕನ್ನಡ ಮಾತಾಡ್ತಾರಾ?
'ಇತ್ತೀಚೆಗೆ ತೆಲುಗಿನ ಶೋವೊಂದರಲ್ಲಿ ಓರ್ವ ವ್ಯಕ್ತಿ ನಿನಗೆ ತೆಲುಗು ಸರಿಯಾಗಿ ಬರೋದಿಲ್ಲಾ ಅಂತ ಹೇಳ್ತಾರೆ. ನಾನು ತೆಲುಗಿಗೆ ಹೋಗಿ ಎರಡು-ಮೂರು ವರ್ಷ ಆಗಿದೆ, ಇಷ್ಟು ತೆಲುಗು ಮಾತಾಡ್ತೀನಿ, ಈ ಟೈಮ್‌ನಲ್ಲಿ ನೀನು ಕನ್ನಡ ಕಲಿತು ಮಾತಾಡ್ತೀಯಾ ಅಂತ ಕೇಳಿದೆ. ಅದು ವೈರಲ್‌ ಆಗೋಯ್ತು. ಆ ವ್ಯಕ್ತಿಗೆ ಎಲ್ಲರೂ ಬೈಯ್ದರು, ನನ್ನ ಬೆಂಬಲಿಸಿದರು. ಆಮೇಲೆ ಆ ವ್ಯಕ್ತಿ ಜೊತೆ ಲೈವ್‌ ಬಂದು ಜೈ ಕರ್ನಾಟಕ ಅಂತ ಹೇಳಿಸಿದೆ,' ಎಂದು ಸೌಮ್ಯಾ ರಾವ್‌ ಹೇಳಿದ್ದಾರೆ. 

'ನನ್ನ ರಾಜ್ಯದ ವೀರ ಮಹಿಳೆ ಕಿತ್ತೂರು ಚೆನ್ನಮ್ಮ ರಾಣಿ ಬಗ್ಗೆ ನಟಿಸೋಕೆ ಕನ್ನಡದಲ್ಲಿ ನನಗೆ ಅವಕಾಶ ಸಿಗಲಿಲ್ಲ, ತೆಲುಗಿನಲ್ಲಿ ಸಿಗ್ತು. ಇದು ನನ್ನ ದುರಾದೃಷ್ಟ,' ಎಂದು ಸೌಮ್ಯಾ ರಾವ್‌ ಅವರು ಹೇಳಿದ್ದಾರೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಇಂಥ ಸಣ್ಣಬುದ್ಧಿ ಸರಿನಾ? ಗಿಲ್ಲಿ ನಟ ಬೇಡಿದರೂ, ಗೋಗರೆದರೂ ಕೇಳಲಿಲ್ಲ: ರಘು ವಿರುದ್ಧ ರೊಚ್ಚಿಗೆದ್ದ ಜನತೆ
BBK 12: ಏನ್ರೀ ಇದು ತೆವಲು? ರಜತ್‌, ಅಶ್ವಿನಿ ಗೌಡ, ರಘು ಯಾಕೆ ಹೀಗೆಲ್ಲ ಮಾಡಿದ್ರು?