ಆ್ಯಂಕರ್ ಅನುಶ್ರೀ ಅವರು ಮದುಮಗಳಾಗಿರುವಂತೆ ರೆಡಿಯಾಗಿರುವ ವಿಡಿಯೋ ವೈರಲ್ ಆಗಿದೆ. ಇದನ್ನು ನೋಡಿದ ಅಭಿಮಾನಿಗಳು ಗುಟ್ಟಾಗಿ ಮದುವೆ ನಡೆದೋಯ್ತಾ ಕೇಳ್ತಿದ್ದಾರೆ. ಏನಿದು ವಿಡಿಯೊ
ಆ್ಯಂಕರ್ ಅನುಶ್ರೀ ಎಂದಾಕ್ಷಣ, ಅವರ ಲಕ್ಷಾಂತರ ಅಭಿಮಾನಿಗಳು ಸದಾ ಕೇಳುವ ಪ್ರಶ್ನೆ ಒಂದೇ ಮೇಡಂ... ಮದ್ವೆ ಯಾವಾಗ ಎನ್ನುವುದು. ಇದಕ್ಕೆ ಉತ್ತರ ಕೊಟ್ಟೂ ಕೊಟ್ಟೂ ಅನುಶ್ರೀಯವರು ಸೋತು ಹೋಗಿದ್ದಾರೆ. ಒಂದೇ ಪ್ರಶ್ನೆಯನ್ನು ಎಷ್ಟೂ ಅಂತ ಕೇಳ್ತೀರಾ ಎಂದು ಬೇಸರ ವ್ಯಕ್ತಪಡಿಸಿದ್ದೂ ಇದೆ. ನಾನು ಮದ್ವೆಯಾಗದೇ ಇರುವುದಿಲ್ಲ, ಆಗೇ ಆಗ್ತೀನಿ. ನಿಮಗೆ ಹೇಳಿಯೇ ಆಗ್ತೀನಿ. ಅಲ್ಲಿಯವರೆಗೆ ಮದ್ವೆ ವಿಷಯ ಕೆದಕದೇ ನನ್ನ ಪಾಡಿಗೆ ನನ್ನನ್ನು ಬಿಟ್ಟುಬಿಡಿ ಎಂದು ಅನುಶ್ರೀ ಅವರು ಅಭಿಮಾನಿಗಳಲ್ಲಿ ಹೇಳಿಕೊಂಡಿದ್ದೂ ಆಗಿದೆ. ಆದರೆ ಅವರು ಸೋಷಿಯಲ್ ಮೀಡಿಯಾದಲ್ಲಿ ಫೋಟೋ, ವಿಡಿಯೋ ಶೇರ್ ಮಾಡಿದಾಗಲೆಲ್ಲಾ ತರ್ಲೆ ಫ್ಯಾನ್ಸ್ ಇದೇ ಪ್ರಶ್ನೆ ಕೇಳುತ್ತಾರೆ. ಅನುಶ್ರೀ ಅವರಿಗೆ ಇಂದು ಅಂದರೆ ಜನವರಿ 25 ಹುಟ್ಟುಹಬ್ಬದ ಸಂಭ್ರಮ. ಗೂಗಲ್ ದಾಖಲೆ ಪ್ರಕಾರ, ನಟಿ 1988ರ ಜ.25ರಂದು ಹುಟ್ಟಿದ್ದು, ಕಳೆದ ಜನವರಿಯಲ್ಲಿ 36ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ವಯಸ್ಸು ಇಷ್ಟಾದರೂ ಮದುವೆ ಇನ್ನೂ ಆಗಿಲ್ಲ ಎನ್ನುವುದೇ ಅನುಶ್ರೀ ಅವರ ಅಭಿಮಾನಿಗಳಿಗೆ ಬೇಸರ ತಂದಿದೆ. ಆದ್ದರಿಂದ ಹೋದಲ್ಲಿ, ಬಂದಲ್ಲಿ ಮದ್ವೆ ಯಾವಾಗ ಎನ್ನುವ ಪ್ರಶ್ನೆಯೇ ಎದುರಾಗುತ್ತಿರುತ್ತದೆ. ಈಗಲೂ ಅದನ್ನೇ ಕೇಳುತ್ತಿದ್ದಾರೆ. ನಾನೂ ಮದ್ವೆಯಾಗುತ್ತೇನೆ. ಆದ್ರೆ ಕೇಳಿದ್ದನ್ನೇ ಎಷ್ಟೂ ಅಂತ ಕೇಳ್ತೀರಾ ಎಂದು ಪದೇ ಪದೇ ಅನುಶ್ರೀ ಕೇಳಿದರೂ ಅಭಿಮಾನಿಗಳಿಗೆ ಇವರನ್ನು ಮದುವೆ ಮಾಡಿಸಿದ ಹೊರತೂ ಸಮಾಧಾನ ಇಲ್ಲ ಎನ್ನಿಸುತ್ತದೆ.
ಇದೀಗ ಆ್ಯಂಕರ್ ಅನುಶ್ರೀ ಅವರು ಮದುಮಗಳಂತೆ ಕಂಗೊಳಿಸಿರುವ ವಿಡಿಯೋ ಒಂದು ವೈರಲ್ ಆಗಿದೆ. ಅಷ್ಟಕ್ಕೂ ಈ ವಿಡಿಯೋ ಅನ್ನು ಅವರೇ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದು ನನ್ನ ಇಷ್ಟದ ಉಡುಗೆ ಎಂದು ಕ್ಯಾಪ್ಷನ್ ಕೊಟ್ಟುಕೊಂಡಿದ್ದಾರೆ. ಇದರಲ್ಲಿ ರೇಷ್ಮೆ ಸೀರೆ, ಸಕಲಾಭರಣಗಳನ್ನು ತೊಟ್ಟು ಥೇಟ್ ಮದುಮಗಳಂತೆ ಕಂಗೊಳಿಸುತ್ತಿದ್ದಾರೆ. ಇದರ ವಿಡಿಯೋ ನೋಡಿದ ಮೇಲೆ ಪಡ್ಡೆ ಹುಡುಗರು ಸುಮ್ನೆ ಇರ್ತಾರಾ? ನಮಗೆ ಹೇಳದೇ ಕೇಳದೇ ಮದ್ವೆ ಆಗಿಬಿಟ್ರಾ ಮೇಡಂ ಎಂದು ಪ್ರಶ್ನಿಸುತ್ತಿದ್ದಾರೆ. ಇನ್ನು ಕೆಲವರು ಹೀಗೆಲ್ಲಾ ಡ್ರೆಸ್ ಮಾಡಿಕೊಂಡು ಎಷ್ಟೂ ಅಂತ ಹುಡುಗರ ತಲೆ ಕೆಡಿಸ್ತೀರಾ, ಬೇಗ ಮದ್ವೆಯಾಗಿ ಎಂದು ಅಳುವ ಇಮೋಜಿ ಹಾಕಿಕೊಂಡಿದ್ದಾರೆ. ಮತ್ತೆ ಹಲವರು ನಟಿಯ ರೂಪಕ್ಕೆ ಮನಸೋತಿರುವುದಾಗಿ ತಿಳಿಸುತ್ತಿದ್ದಾರೆ.
ವೇಟ್ ಮಾಡ್ತಾ ಇದ್ದೀನಿ ಎನ್ನುತ್ತಲೇ ಅಭಿಮಾನಿಗಳ ತಲೆಗೆ ಹುಳು ಬಿಟ್ಟ ಆ್ಯಂಕರ್ ಅನುಶ್ರೀ...
ಅಷ್ಟಕ್ಕೂ ಅನುಶ್ರೀ ಅವರು ಈ ರೀತಿ ರೆಡಿಯಾಗಿದ್ದು, ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ಗೆ. ಇದರಲ್ಲಿ ರಾಣಿಯಾಗಿ ಅನುಶ್ರೀ ಮಿಂಚಿದ್ದಾರೆ. ಇದಕ್ಕಾಗಿ ಈ ಪರಿಯ ಡ್ರೆಸ್ ಹಾಕಿಕೊಂಡಿದ್ದಾರೆ. ಇನ್ನು ಕಿರುತೆರೆ ವೀಕ್ಷಕರಿಗೆ ಅನುಶ್ರೀ ಅವರ ಬಗ್ಗೆ ಹೇಳುವುದೇ ಬೇಡ. ಕನ್ನಡ ಕಿರುತೆರೆ ಜನಪ್ರಿಯ ನಿರೂಪಕಿ ಕಮ್ ಸ್ಯಾಂಡಲ್‌ವುಡ್ ನಟಿ (Sandalwood star) ಅನುಶ್ರೀ ಮನೆಮಾತಾಗಿರುವ ನಟಿ. ಅದ್ಭುತವಾಗಿ ಕಾರ್ಯಕ್ರಮ ನಿರೂಪಣೆಯ ಜೊತೆಗೆ ಸಂಗೀತ, ನೃತ್ಯದಿಂದಲೂ ಮನರಂಜಿಸುವ ಅನುಶ್ರೀ ಸದ್ಯ ಸರಿಗಮಪ ಸಂಗೀತದ ರಿಯಾಲಿಟಿ ಷೋನಲ್ಲಿ ಬಿಜಿಯಾಗಿದ್ದಾರೆ. ತಮ್ಮ ಚಟಪಟ ಮಾತಿನಿಂದಾಗಿ ಅನುಶ್ರೀ ಅವರು ಅಭಿಮಾನಿಗಳ ಮನ ಗೆದ್ದಿದ್ದಾರೆ. ಅವರು ಟಿವಿ ಶೋಗಳನ್ನು ನಡೆಸಿಕೊಡುವ ಶೈಲಿಗೆ ವೀಕ್ಷಕರು ಫಿದಾ ಆಗಿದ್ದಾರೆ. ಕಿರುತೆರೆಯಲ್ಲಿ ಅನುಶ್ರೀ ಅವರಿಗೆ ಹಲವು ವರ್ಷಗಳ ಅನುಭವ ಇದೆ. ಹಲವು ರಿಯಾಲಿಟಿ ಶೋಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಖ್ಯಾತಿ ಅವರಿಗಿದೆ. ತಮ್ಮ ಅದ್ಭುತ ನಿರೂಪಣಾ ಶೈಲಿಯಿಂದ ಇದಾಗಲೇ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 2023ರಲ್ಲಿ ಅನುಶ್ರೀ ಅವರಿಗೆ ಹಲವಾರು ಪ್ರಶಸ್ತಿಗಳೂ ಸಂದಿವೆ.
ಅನುಶ್ರೀ ಅವರು ಎಷ್ಟು ಫೇಮಸ್ಸೋ ಕೆಲವೊಮ್ಮೆ ಇವರನ್ನು ಟ್ರೋಲ್ ಮಾಡುವವರೂ ಇದ್ದಾರೆ. ಕೆಲ ದಿನಗಳ ಹಿಂದೆ ನೇರ ಪ್ರಸಾರದಲ್ಲಿ ಇವರು, ತಮ್ಮ ವಿರುದ್ಧ ಕೆಲವರು ಮಾಡುವ ಟೀಕೆಗಳ ಕುರಿತು ನೋವು ತೋಡಿಕೊಂಡಿದ್ದರು. ಅವರ ಅಭಿಮಾನಿಯೊಬ್ಬರು ಖುಷಿಯಾಗಿರಿ ಎಂದು ಹೇಳಿದಾಗ, ಇಂಥ ಮಾತು ಹೇಳುವವರೇ ತುಂಬಾ ಅಪರೂಪ ಎನ್ನುತ್ತಾ ಮನದಾಳದ ಮಾತು ಬಿಚ್ಚಿಟ್ಟಿದ್ದರು. ಖುಷಿಯಾಗಿದ್ದರೆ ಓವರ್ ಆ್ಯಕ್ಟಿಂಗ್ ಅಂತೀರಿ, ಸ್ವಲ್ಪ ಕಷ್ಟ ಹೇಳಿಕೊಂಡು ಕಣ್ಣೀರು ಹಾಕಿದರೆ ಅದಕ್ಕೂ ಓವರ್ ಆ್ಯಕ್ಟಿಂಗ್ ಅಂತೀರಿ, ಏನನ್ನಾದರೂ ನೋಡಿ ಆಶ್ಚರ್ಯ ಪಟ್ಟರೆ ಅದಕ್ಕೂ ಹಾಗೆಯೇ ಹೇಳುತ್ತೀರಿ... ಸಾಧನೆಯನ್ನು ಹೊಗಳಿದರೆ ಬಕೆಟ್ ಅಂತೀರಿ. ಒಂದೊಂದು ಭಾವನೆಗೂ ಒಂದೊಂದು ಹೆಸರು ಕೊಡ್ತೀರಾ ಎಂದು ನೋವು ತೋಡಿಕೊಂಡರು. ಇದೇ ವೇಳೆ ಇರಲಿ ಬಿಡಿ... ಹತ್ತು ಜನರು ಹೀಗೆಲ್ಲಾ ಹೇಳಿದ್ರೂ, ಕೋಟ್ಯಂತರ ಮಂದಿ ಹರಸುವವರು ಇದ್ದಾರೆ. ಅವರ ಹೊಟ್ಟೆ ತಣ್ಣಗಾಗಿರಲಿ ಎಂದಿದ್ದಾರೆ. ಇದೇ ವೇಳೆ ಯಾರನ್ನೂ ಹೇಟ್ ಮಾಡಬೇಡಿ. ಯಾರಾದ್ರೂ ಇಷ್ಟ ಆಗಿಲ್ಲ ಅಂದ್ರೆ ಅವರ ಬಗ್ಗೆ ಏನೂ ಹೇಳಲೇಬೇಡಿ. ಹೊಗಳಲು ಆಗಿಲ್ಲ ಎಂದ್ರೆ ಕೆಟ್ಟದ್ದನ್ನು ಹೇಳಬೇಡಿ ಎಂದಿದ್ದರು. ಆದರೆ ಈಗ ಮಾತ್ರ ಯಾವುದಕ್ಕೆ ವೇಟ್ ಎಂದು ಹೇಳಲಿಲ್ಲ.
ಬಿಗ್ಬಾಸ್ ನೀತು ಲವ್ ಮಾಡ್ತಿದ್ದಾರಾ? ಮದ್ವೆಯಾಗೋ ಯೋಚ್ನೆ ಇದ್ಯಾ? ನಟಿಯ ಮನದಾಳದ ಮಾತು ಇಲ್ಲಿದೆ...