ಅಷ್ಟು ಹೆವಿ ಸೀರೆ ಒಡವೆ ಹಾಕ್ಕೊಂಡು ನಿಮಗೆ ನಿದ್ದೆ ಹೇಗೆ ಬರತ್ತೆ?: ಅಮೃತಧಾರೆ ಶಕುಂತಲಾ ದೇವಿಗೆ ವೀಕ್ಷಕರ ಪ್ರಶ್ನೆ

Published : Apr 02, 2024, 11:47 AM IST
ಅಷ್ಟು ಹೆವಿ ಸೀರೆ ಒಡವೆ ಹಾಕ್ಕೊಂಡು ನಿಮಗೆ ನಿದ್ದೆ ಹೇಗೆ ಬರತ್ತೆ?: ಅಮೃತಧಾರೆ ಶಕುಂತಲಾ ದೇವಿಗೆ ವೀಕ್ಷಕರ ಪ್ರಶ್ನೆ

ಸಾರಾಂಶ

ಅಮೃತಧಾರೆ ಸೀರಿಯಲ್‌ನ ಶಕುಂತಲಾ ದೇವಿ ವಿಚಿತ್ರ ಮನಸ್ಸಿನ ವಿಲನ್. ತುಂಟ ವೀಕ್ಷಕರು ಈಕೆ ಮೈತುಂಬ ಒಡವೆ ಹಾಕ್ಕೊಂಡು ಮಲಗೋದನ್ನು ನೋಡಿ ಹೇಗೆ ಪ್ರಶ್ನೆ ಮಾಡ್ತಿದ್ದಾರೆ ನೋಡಿ..  

ಅಮೃತಧಾರೆ ಜೀ ಕನ್ನಡದಲ್ಲಿ ಪ್ರಸಾರವಾಗ್ತಿರೋ ಹೈ ವೋಲ್ಟೇಜ್ ಸೀರಿಯಲ್. ಇದರಲ್ಲಿ ಮುಖ್ಯ ವಿಲನ್ ಶಕುಂತಳಾ ದೇವಿ. ಈಕೆ ಈ ಸೀರಿಯಲ್ ನಾಯಕ ಗೌತಮ್ ದಿವಾನ್‌ನ ಅಪ್ಪನ ಎರಡನೇ ಹೆಂಡತಿ. ತನ್ನ ತಾಯಿಯನ್ನು ಕಂಡರೆ ಆಗದಂತೆ ಮಾಡಿ ಆತನ ಸಂಪೂರ್ಣ ವ್ಯಕ್ತಿತ್ವವನ್ನು ತನ್ನ ಬಿಗಿಮುಷ್ಠಿಯಲ್ಲಿ ಹಿಡಿದಿಟ್ಟವಳು ಶಕುಂತಳಾ ದೇವಿ. ಕೋಟ್ಯಾಧಿಪತಿ ಗೌತಮ್ ದಿವಾನ್ ಈಕೆಯ ಮಾತಿನ ಗೆರೆ ದಾಟಿ ಹೋಗಲ್ಲ. ಇಂಥಾ ಟೈಮಲ್ಲಿ ಶಕುಂತಳಾ ದೇವಿ ಗೌತಮ್‌ಗೆ ಮದುವೆಯನ್ನೂ ಮಾಡಿರಲಿಲ್ಲ. ಆತನಿಗೆ ಮದುವೆ ಮಾಡಿದರೆ ಎಲ್ಲಿ ತನ್ನ ಅಧಿಕಾರ ಕೈ ತಪ್ಪಿ ಹೋಗುತ್ತೋ ಆತ ಸಂತೋಷವಾಗಿ ಇದ್ದರೆ ತನ್ನನ್ನು ಎಲ್ಲಿ ಕಡೆಗಣಿಸಬಹುದೋ ಎಂಬ ಆತಂಕ ಈಕೆಯದು. ಅದಕ್ಕಾಗಿ ಆತನ ಸಂತೋಷಗಳನ್ನೆಲ್ಲ ಕಿತ್ತುಕೊಂಡಿದ್ದಾಳೆ. ಆತನಿಗೆ ಮಧ್ಯವಯಸ್ಸು ಸಮೀಪಿಸುವವರೆಗೂ ಮದುವೆಯನ್ನೇ ಮಾಡಿಲ್ಲ. ಕೊನೆಗೆ ಪರಿಸ್ಥಿತಿ ತನ್ನ ಕುತ್ತಿಗೆಗೆ ಬಂದಾಗ ವಿಧಿಯಿಲ್ಲದೇ ಮದುವೆ ಮಾಡಿಸುತ್ತಾಳೆ.

ಸೊಸೆಯೂ ತನ್ನ ಕಂಟ್ರೋಲಲ್ಲಿ ಇರಬಹುದು ಎಂದುಕೊಂಡಿದ್ದಾಳೆ ಶಕುಂತಳಾ. ಆದರೆ ಮಹಾನ್ ಬುದ್ಧಿವಂತೆ, ಹೃದಯವಂತೆ ಭೂಮಿಕ ಗೌತಮ್ ದಿವಾನ್ ಹೆಂಡತಿಯಾಗಿ ಬಂದಿದ್ದಾಳೆ. ಆಕೆ ನ್ಯಾಯದ ಪರ ದನಿ ಎತ್ತುವ ಹೆಣ್ಣುಮಗಳು. ಆಕೆ ಒಳ್ಳೆತನದಿಂದಲೇ ಗೌತಮ್‌ಗೆ ಹತ್ತಿರವಾಗಿದ್ದಾಳೆ. ಜೊತೆಗೆ ಅತ್ತೆಯ ವಿಲನಿಶ್ ಕಲರ್ ಈಕೆಗೆ ಗೊತ್ತಾಗಿದೆ. ಆಟ ಆಡುವ ಅತ್ತೆ ಜೊತೆಗೆ ಒಳ್ಳೆತನದ ಸೊಸೆಯೂ ಆಟ ಆಡುತ್ತಿದ್ದಾಳೆ. ಅತ್ತೆಯ ಕೆಟ್ಟತನ, ಸೊಸೆಯ ಒಳ್ಳೆತನ ಮುಖಾಮುಖಿ ಆಗ್ತಿದೆ.

ನೆನಪಿದ್ಯಾ ಈ ಬಾಲನಟಿ ಕೀರ್ತನಾ? ಇಂದೀಕೆ ಐಎಎಸ್ ಆಫೀಸರ್!

ಇನ್ನೊಂದೆಡೆ ದಿವಾನ್‌ ಮನೆಯಲ್ಲಿ ಎಲ್ಲರೋ ಹೋಳಿ ಹಬ್ಬದ ಸಂಭ್ರಮದಲ್ಲಿರುತ್ತಾರೆ. ಪಾರ್ಥ ಮತ್ತು ಇತರರು ಹಬ್ಬದ ಮೂಡ್‌ನಲ್ಲಿದ್ದಾರೆ. ದಿವಾನ್‌ ಮನೆಯಲ್ಲೂ ನೀರನ್ನು ಹಾಳು ಮಾಡೋದು ಬೇಡ ಎಂದು ಗೌತಮ್‌ ಹೇಳುತ್ತಾನೆ. ಎಲ್ಲರೂ ಒಪ್ಪುತ್ತಾರೆ. ನೀರಿನ ಮಹತ್ವದ ಕುರಿತೂ ಎಲ್ಲರೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ಸೀರಿಯಲ್‌ ಮೂಲಕ ಬರಗಾಲದಲ್ಲಿ ನೀರಿನ ಮಹತ್ವವನ್ನು ಪ್ರೇಕ್ಷಕರಿಗೆ ದಾಟಿಸಲು ಯತ್ನಿಸಲಾಗಿದೆ. "ಭೂಮಿಕಾನಿಂದಾಗಿ ಗೌತಮ್‌ ಕೂಡ ಮೋರಲ್‌ ಎಂದೆಲ್ಲ ಮಾತನಾಡುತ್ತಾನೆ" ಎಂದು ಶಕುಂತಲಾ ಉರಿದುಕೊಳ್ಳುತ್ತಾರೆ.

ಇನ್ನೊಂದೆಡೆ ತನ್ನ ಹೆಂಡತಿ ಭೂಮಿಕಾಗೆ ಪ್ರೊಪೋಸ್ ಮಾಡಲು ಗೌತಮ್ ದಿವಾನ್ ಹರಸಾಹಸ ಮಾಡುತ್ತಿದ್ದಾನೆ. ಧೈರ್ಯ ಬರಲು ಹೋಳಿ ಹಬ್ಬದ ಪ್ರಯುಕ್ತ ರಾಮರಸದ ಪಾರ್ಟಿ ಮಾಡೋಣ ಎಂದು ಆನಂದ್‌ ಹೇಳುತ್ತಾನೆ. ಗೌತಮ್‌ಗೆ ಭೂಮಿಕಾ ಕಿಸ್‌ ಮಾಡಿದ ಆ ದಿನದ ಘಟನೆ ನೆನಪಾಗುತ್ತದೆ. ರಾಮರಸ ಕುಡಿದರೆ ಅತ್ತಿಗೆ ಮುಂದೆ ಧೈರ್ಯವಾಗಿ ಪ್ರಪೋಸ್‌ ಮಾಡಬಹುದು ಎಂದೆಲ್ಲ ಹೇಳುತ್ತಾನೆ. "ನಾನು ಇವತ್ತೇ ಪ್ರಪೋಸ್‌ ಮಾಡ್ತಿನಿ, ಪ್ರಿಪೇರ್‌ ಆಗಿದ್ದೇನೆ" ಎಂದು ಗೌತಮ್‌ ಹೇಳುತ್ತಾರೆ. ಆಮೇಲೆ ಅಲ್ಲಿಂದ ಆನಂದ್‌ ಹೋಗುತ್ತಾನೆ. ಆತ ಹೋದ ಬಳಿಕ ಗೌತಮ್‌ ಅವರು ಪ್ರ್ಯಾಕ್ಟೀಸ್‌ ಮಾಡಲು ಆರಂಭಿಸುತ್ತಾರೆ.

ಸೀತಾರಾಮ ಸೀರಿಯಲ್​ ಸೀತೆಯ ನಿಜ ಜೀವನದ ಮೊದಲ ಕ್ರಶ್​ ಯಾರು? ಪ್ರಿಯಾ ಎದುರು ಬಾಯ್ಬಿಟ್ಟ ಸತ್ಯವೇನು?

ಭೂಮಿಕಾಗೂ ತನ್ನ ಪ್ರೇಮ ಭಾವನೆಯನ್ನು ಗೌತಮ್ ಜೊತೆ ಹಂಚಿಕೊಳ್ಳುವ ಆಸೆ. ಆಕೆ ತನ್ನ ಭಾವನೆಗಳನ್ನು ಬರೆಯಲು ಆರಂಭಿಸುತ್ತಾರೆ. ಅತ್ತಿಗೆ ಏನೋ ಬರೆಯುತ್ತ ಇದ್ದಾರೆ ಎಂದು ಶಕುಂತಲಾದೇವಿ ಮಗಳು ಅಶ್ವಿನಿ ನೋಡ್ತಾಳೆ. ಬರೆಯೋದಾದ್ರೆ ಡೈರಿಯಲ್ಲಿ ಬರೆಯಬಹುದಿತ್ತು. ಬಾಂಡ್‌ ಪೇಪರ್‌ನಲ್ಲಿ ಬರೆಯುತ್ತ ಇದ್ದಾರೆ ಎಂದು ಯೋಚಿಸಿ ಅಲ್ಲಿಂದ ಹೋಗುತ್ತಾಳೆ. ಭೂಮಿಕಾ ಹೋದ ಬಳಿಕ ರೂಂನೊಳಗೆ ಹೋಗಿ ಅದನ್ನು ಓದುತ್ತಾಳೆ. "ಲವ್‌ ಲೆಟರಾ? ಅಣ್ಣ ಈ ಲೆಟರ್‌ ಓದಿ ಇಂಪ್ರೆಸ್‌ ಆದ್ರೆ ಅಷ್ಟೇ, ಇದನ್ನು ಮೊದಲು ಅಮ್ಮನಿಗೆ ಹೇಳಬೇಕು" ಎಂದು ಅಲ್ಲಿಂದ ಹೋಗುತ್ತಾಳೆ.

ಇದೀಗ ಶಕುಂತಳಾ ದೇವಿ ಗೌತಮ್ ಹಾಗೂ ಭೂಮಿ ನಡುವೆ ಗ್ಯಾಪ್ ತರಲು ಪ್ರಯತ್ನಿಸುತ್ತಿದ್ದಾಳೆ. ಸುಳ್ಳು ಜ್ಯೋತಿಷಿ ಕರೆಸಿ ಗೌತಮ್ ಹಾಗೂ ಭೂಮಿಕಾ ಒಂದಾದರೆ ಭೂಮಿಕಾ ಪ್ರಾಣಕ್ಕೆ ಅಪಾಯ ಎನ್ನುತ್ತಾರೆ. ಅತ್ತೆ ಶಕುಂತಳಾ ಹುಷಾರಿಲ್ಲದ ನಾಟಕ ಮಾಡುತ್ತಾಳೆ. ಮುಗ್ಧ ಗೌತಮ್ ಅಮ್ಮನ ಸೇವೆ ಮಾಡುತ್ತಾನೆ. ಆದರೆ ಇದರಲ್ಲಿ ಶಕುಂತಳಾ ದೇವಿ ಹೆವ್ವಿ ಮೇಕಪ್, ಅಷ್ಟೊಂದು ಬಂಗಾರ ಹೇರಿಕೊಂಡೇ ಮಲಗ್ತಿರೋದು ವೀಕ್ಷಕರ ನಗೆಗೆ ಕಾರಣವಾಗಿದೆ. ಅಷ್ಟು ಹೆವ್ವಿ ಸೀರೆ ಒಡವೆ ಹಾಕ್ಕೊಂಡು ನಿಮಗೆ ನಿದ್ದೆ ಹೇಗೆ ಬರತ್ತೆ? ಅಂತ ಅವರು ಪ್ರಶ್ನೆ ಮಾಡುತ್ತಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಸಮಾನ್ಯಳಲ್ಲಿ ಅಸಮಾನ್ಯ ಈ ಪುಟಾಣಿ: Naa Ninna Bidalaare ಹಿತಾ ನಿಬ್ಬೆರಗಾಗುವ ಫೋಟೋಶೂಟ್​!
Bigg Boss ಅಭಿಷೇಕ್​ಗೆ ದೊಡ್ಮನೆಯಿಂದ ಸಿಕ್ಕಿರೋ ಸಂಭಾವನೆ ಎಷ್ಟು? ಫ್ಯಾನ್ಸ್​ ನಿರೀಕ್ಷೆ ಸುಳ್ಳಾಗೋಯ್ತು!