ಅಮೃತಧಾರೆ ಸೀರಿಯಲ್‌ನಲ್ಲಿ ಛಾಯಾ ಸಿಂಗ್ ನಿರ್ವಹಿಸುತ್ತಿರೋ ಭೂಮಿಕಾ ಪಾತ್ರವನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಅದರಲ್ಲೂ ಗೌತಮ್ ಬಳಿ, 'ನನ್ನ ಆಟಾಡೋ ಗೊಂಬೆ ಅಂದ್ಕೊಂಡಿದ್ದೀರ' ಅನ್ನುವಾಗ ಕೊಟ್ಟ ಎಕ್ಸ್‌ಪ್ರೆಶನ್‌ಗೆ ಫ್ಯಾನ್ಸ್ ಶಹಭಾಸ್ ಅಂದಿದ್ದಾರೆ.
ಅಮೃತಧಾರೆ ಸೀರಿಯಲ್ ಒಂದು ರೇಂಜಿಗೆ ಟಿಆರ್‌ಪಿಯಲ್ಲಿ ಮೇಲೇರ್ತಾ ಹೋಗ್ತಾ ಇದೆ. ಇನ್ನೊಂದು ಕಡೆ ಈ ಸೀರಿಯಲ್‌ನ ಪಾತ್ರಗಳು, ಅವುಗಳ ಡೈಲಾಗ್ ಜನರಿಗೆ ಕನೆಕ್ಟ್ ಆಗ್ತಾ ಇವೆ. ಭೂಮಿಕಾ ಪಾತ್ರದ ಡೈಲಾಗ್ ಅನ್ನಂತೂ ವೀಕ್ಷಕರು ಹಾಡಿ ಹೊಗಳ್ತಿದ್ದಾರೆ. ಅದಕ್ಕೆ ಅವರಿಗೆ ಸಿಕ್ಕಿರೋ ಡೈಲಾಗ್‌ಗಳು ಸಖತ್ತಾಗಿವೆ ಅನ್ನೋದು ಒಂದು ಕಡೆ ಆದ್ರೆ ಆ ಡೈಲಾಗನ್ನು ಹೇಳೋ ಛಾಯಾ ಸಿಂಗ್ ಎಕ್ಸ್‌ಪ್ರೆಶನ್ ವೀಕ್ಷಕರ ಮನ ಗೆದ್ದಿದೆ. ಲಕ್ಷಾಂತರ ಜನ ಈ ಸೀರಿಯಲ್‌ನ ಪ್ರೋಮೋ ಮೆಚ್ಚಿಕೊಂಡಿದ್ದಾರೆ. ನೂರಾರು ಜನ ಹೊಗಳಿ ಕಮೆಂಟ್ ಮಾಡಿದ್ದಾರೆ.
ಇನ್ನೊಂದು ಪಾಸಿಟಿವ್ ಅಂಶ ಅಂದರೆ ಗೌತಮ್ ದಿವಾನ್ ಪಾತ್ರ ಮಾಡಿರೋ ರಾಜೇಶ್ ನಟರಂಗ ಅಭಿನಯ. ಅವರು ಗೌತಮ್ ದಿವಾನ್ ಪಾತ್ರವನ್ನು ಆವಾಹಿಸಿಕೊಂಡು ಬಿಟ್ಟಿದ್ದಾರೆ ಅಂತಲೇ ಹೇಳಬಹುದು. ಆ ಪಾತ್ರಕ್ಕೆ ಬೇಕಾದ ಗತ್ತು, ದರ್ಪ, ಠೀವಿ ಒಂದು ಕಡೆಯಾದರೆ ತಂಗಿ ಮಹಿಮಾಗಾಗಿ ಏನು ಮಾಡಲೂ ಸಿದ್ಧನಿರುವ ಮಮತೆಯ ಅಣ್ಣ, ಫ್ಯಾಮಿಲಿಗಾಗಿ ತನ್ನ ಬದುಕನ್ನೇ ಮುಡಿಪಾಗಿಟ್ಟ ತ್ಯಾಗಮಯಿ ಮಗ, ಫ್ರೆಂಡ್ ತರಲೆಗೆ ಮುಖ ಸಿಂಡರಿಸೋ ಸಿಡುಕ, ಎಲ್ಲಕ್ಕಿಂತ ಹೆಚ್ಚಾಗಿ ಭೂಮಿಕಾ ಹಾಗೂ ತನ್ನ ಸಂಬಂಧ ಯಾವ ಬಗೆಯದು ಅಂತ ಗೊತ್ತಾಗದೇ ಪೇಚಾಡುವ ಅಮಾಯಕ.. ಈ ಎಲ್ಲ ಭಾವಗಳನ್ನೂ ಅವರು ಲೀಲಾಜಾಲವಾಗಿ ಹೊರಹೊಮ್ಮಿಸೋ ರೀತಿಯೂ ಸೀರಿಯಲ್ ಗ್ರೋಥ್‌ಗೆ ಒಂದು ಕಾರಣ ಅನ್ನಬಹುದು.
ಹೊಸ ಲುಕ್ನಲ್ಲಿ 'ಪುಟ್ಟಕ್ಕನ ಮಕ್ಕಳು' ವಿಲನ್ ರಾಜೇಶ್ವರಿ: ಸೋ ಸ್ವೀಟ್, ನಮ್ ಕ್ರಷ್ ಎಂದ ಫ್ಯಾನ್ಸ್
ಈ ಸೀರಿಯಲ್ ಕಥೆಯಲ್ಲೇ ಒಂದು ಯುನಿಕ್‌ನೆಸ್ ಇದೆ.
ಅಮೃತಧಾರೆ ಸಂಜೆ 7 ಗಂಟೆಗೆ ಜೀ ಕನ್ನಡದಲ್ಲಿ ಪ್ರಸಾರವಾಗ್ತಿದ್ದು, ಜನರಿಗೆ ಇಷ್ಟ ಆಗಿದೆ. ಗೌತಮ್ ದಿವಾನ್ ದೊಡ್ಡ ಬ್ಯುಸಿನೆಸ್ ಮ್ಯಾನ್. 45 ವರ್ಷ ಆಗಿದೆ. ಆದ್ರೆ ಇನ್ನೂ ಮದುವೆಯಾಗಿಲ್ಲ. ನಾಯಕಿ ಭೂಮಿಕಾ ಸದಾಶಿವ, 35 ವರ್ಷ. ಆದ್ರೂ ಅವಳಿಗೂ ಮದುವೆ ಆಗಿಲ್ಲ. ಈಗ ಇವರ ಮದುವೆ ಆಗುತ್ತಾ ಅನ್ನೋದೇ ಕಥೆ. ಇಬ್ಬರಿಗೂ ನಿಶ್ಚಿತಾರ್ಥ ಆಗಿದೆ. ಆದರೆ ಇನ್ನೊಂದೆಡೆ ಮುರಿದುಹೋಗೋ ಹಾದಿಯಲ್ಲಿದ್ದ ಈ ನಿಶ್ಚಿತಾರ್ಥ ಜೀವನ್ ಮಹಿಮಾ ದೆಸೆಯಿಂದ ಮತ್ತೆ ಹಿಂದಿನಂತಾಗಿದೆ. ಆದರೆ ಮದುವೆಗೆ ಮಾತ್ರ ಇನ್ನೂ ಆರು ತಿಂಗಳು ಕಾಯಬೇಕು ಅಂತ ಜೋಯಿಸರು ಹೇಳಿದ್ದಾರೆ. ಗೌತಮ್ ಭೂಮಿಕಾ ಮದುವೆ ಮಾಡಿ ಅತ್ತ ಜೀವನ್ ಮತ್ತು ಮಹಿಮಾ ಮದುವೆ ಮಾಡಿಬಿಟ್ಟರೆ ದೊಡ್ಡ ತಲೆನೋವು ಕಡಿಮೆ ಆದಂತೆ ಅಂತ ಗೌತಮ್ ಮಲತಾಯಿ ಹಾಕಿರೋ ಲೆಕ್ಕಾಚಾರ ತಲೆ ಕೆಳಗಾಗಿದೆ. ಏಕೆಂದರೆ ಮಹಿಮಾ ಈಗ ಗರ್ಭಿಣಿ. ಇನ್ನು ಆರು ತಿಂಗಳು ಮದುವೆ ಆಗದೇ ಇರೋದು ಅವಳಿಗೆ, ಕುಟುಂಬಕ್ಕೆ ದೊಡ್ಡ ಚಾಲೆಂಜ್.
ಮುಂದೆ ಏನಾಗುತ್ತೆ ಅನ್ನೋದು ಸದ್ಯದ ಕುತೂಹಲ. ಅಕ್ಕ ಮದುವೆ ಆಗದೇ ತಾನು ಮದುವೆ ಆಗೋ ಮಾತೇ ಇಲ್ಲ ಅಂತ ಜೀವನ್ ಹೇಳಿದ್ದಾನೆ. ಈ ಕಡೆ ತಮ್ಮ ಜೀವನ್ ಹಾಗೂ ಮಹಿಮಾ ಮದುವೆ ವಿಚಾರದಲ್ಲಿ ತಾನು ಆಟದ ಗೊಂಬೆ ಆಗಿರೋದು ಭೂಮಿಕಾಗೆ ಬಹಳ ನೋವು ತಂದಿದೆ. ನನ್ನನ್ನೇನು ಆಟಾಡೋ ಗೊಂಬೆ ಅಂದುಕೊಂಡಿದ್ದೀರ, ನಿಮಗೆ ಇಷ್ಟ ಆದಾಗ ಎಂಗೇಜ್‌ಮೆಂಟ್ ಮಾಡ್ಕೊಂಡು ಆಮೇಲೆ ಇದೆಲ್ಲ ಆಗಲ್ಲ ಅಂತೀರಲ್ಲ.. ಅಂತ ಭೂಮಿಕಾ ಗೌತಮ್ ಮುಂದೆ ಕಣ್ಣೀರು ಹಾಕಿದ್ದಾಳೆ. ಇದಕ್ಕೆ ಗೌತಮ್ ಮನಸ್ಸು ಕರಗಿದೆ. ತಾನು ತಪ್ಪು ಮಾಡ್ತಿರೋ ಅರಿವಾಗಿದೆ. ಅದನ್ನು ತಾನೇ ಸರಿ ಮಾಡ್ತೀನಿ ಅಂತಿದ್ದಾನೆ. ಆದರೆ ಭೂಮಿಕಾ ಮನೆಗೆ ಹೋಗೋ ಲಿಫ್ಟ್ ಕೆಟ್ಟು ನಿಂತಿದೆ. ಅವಳ ಮನೆಗೆ ಹೋಗ್ಬೇಕು ಅಂದರೆ ಅರವತ್ತೈದು ಮೆಟ್ಟಿಲು ಹತ್ತಬೇಕು. ಸ್ಥೂಲಕಾಯದ ಗೌತಮ್‌ಗೆ ಅದು ಆಗದ ಮಾತು. ಹೀಗಾಗಿ ಭೂಮಿ ತಾನೇ ಅಪ್ಪ ಅಮ್ಮನ ಬಳಿ ಮಾತಾಡ್ತೀನಿ ಅಂದಿದ್ದಾಳೆ. ಆದರೆ ಇವರಿಬ್ಬರ ಎಕ್ಸ್‌ಪ್ರೆಶನ್‌ನಲ್ಲೇ ಇಬ್ಬರ ನಡುವೆ ಪ್ರೀತಿಯೊಂದು ಚಿಗುರುತ್ತಿರುವ ಸೂಚನೆ ಸಿಕ್ಕಿದೆ.
ಯಾರೂ ಹೋಗದ ದೇಶಕ್ಕೆ ಕಾಲಿಟ್ಟ Dr Bro; ವಿಡಿಯೋ ಮಾಡಿದ್ದಕ್ಕೆ ಜಗಳಕ್ಕೆ ಬಿದ್ದ ಜನ!