
ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ‘ಅಮೃತಧಾರೆ’ ಕೊನೆಯ ಸಂಚಿಕೆಯ ಶೂಟಿಂಗ್ ಮುಗಿಸಿದ್ದು, ಶೀಘ್ರದಲ್ಲಿ ಧಾರಾವಾಹಿ ಕೂಡ ಅಂತ್ಯವಾಗಲಿದೆ. ಅಮೃತಧಾರೆ ಧಾರಾವಾಹಿ ಕಳೆದ ನಾಲ್ಕು ವರ್ಷಗಳಿಂದ ವೀಕ್ಷಕರಿಗೆ ಭರ್ಜರಿ ಮನರಂಜನೆ ನೀಡುತ್ತಾ ಬಂದಿದ್ದು, ಗೌತಮ್ ದಿವಾನ್ ಮತ್ತು ಭೂಮಿಕಾ ಜೋಡಿಯನ್ನು ಜನ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು. ಇದೀಗ ಕೊನೆಗೂ ಅಂತ್ಯವಾಗಿತ್ತಿದೆ. ಈ ಕುರಿತು ಧಾರಾವಾಹಿಯಲ್ಲಿ ಆನಂದ್ ಪತ್ನಿ ಅಪರ್ಣಾ ಪಾತ್ರದಲ್ಲಿ ನಟಿಸುತ್ತಿರುವ ನಟಿ ಸ್ವಾತಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.
ಗೌತಮ್ ದಿವಾನ್ ಬೆಸ್ಟ್ ಫ್ರೆಂಡ್ ಆನಂದ್ ಹಾಗೂ ಅವನ ಪತ್ನಿ ಅಪರ್ಣಾ. ಮೂವರು ಜೊತೆಯಾಗಿ ಕಾಲೇಜು ಓದಿದವರು. ಅಪರ್ಣಾಳನ್ನು ಗೌತಮ್ ಪ್ರೀತಿಯಿಂದ ಕರೆಯುತ್ತಿದ್ದುದ್ದೇ ಡಾರ್ಲಿಂಗ್ ಎಂದು. ಅಪರ್ಣ ಮತ್ತು ಆನಂದ್ ಜೋಡಿ, ಅಪರ್ಣಾ ಮತ್ತು ಗೌತಮ್ ಮಾತುಕತೆ ಹಾಗೂ ಆನಂದ್ ಕಾಲೆಳುವ ರೀತಿಯನ್ನು ಜನ ಇಷ್ಟಪಟ್ಟಿದ್ದರು. ಧಾರಾವಾಹಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಈ ಪಾತ್ರಕ್ಕೆ ಜೀವ ತುಂಬಿ ಜನ ಮನ ಗೆದ್ದಿದ್ದರು ಸ್ವಾತಿ. ಇವರು ಸೀರಿಯಲ್ ಅಂತ್ಯದ ಕುರಿತು ಭಾವುಕ ಪೋಸ್ಟ್ ಮಾಡಿದ್ದು, ಜೊತೆಗೆ ಸೀರಿಯಲ್ ತಂಡದ ಜೊತೆಗಿನ ಫೋಟೊಗಳನ್ನು ಸಹ ಹಂಚಿಕೊಂಡಿದ್ದಾರೆ.
ಸ್ವಾತಿ ಪೋಸ್ಟ್ ನಲ್ಲಿ ಏನಿದೆ?
ಅಮೃತಧಾರೆ ಧಾರಾವಾಹಿಯ 1,100 ಸಂಚಿಕೆಗಳು… ಲೆಕ್ಕವಿಲ್ಲದಷ್ಟು ನೆನಪುಗಳು… ಎಂದಿಗೂ ಮರೆಯಲಾಗದ ಸುಂದರ ಪಯಣ! ಈ ಧಾರಾವಾಹಿಯನ್ನು ಇಷ್ಟು ವಿಶೇಷವಾಗಿಸಿದ ಇಡೀ ತಾರಾಗಣ, ತಂತ್ರಜ್ಞರ ತಂಡ, ನಿರ್ದೇಶಕರು, ನಿರ್ಮಾಪಕರು, ತಾಂತ್ರಿಕ ವರ್ಗ ಹಾಗೂ ತೆರೆಮರೆಯಲ್ಲಿ ಹಗಲಿರುಳು ಶ್ರಮಿಸಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮೆಲ್ಲರ ಪ್ರೀತಿ, ಬೆಂಬಲ, ಸಮರ್ಪಣೆ ಮತ್ತು ಸಹಕಾರದಿಂದ ಈ ಸುಂದರ ಪಯಣ ಮತ್ತಷ್ಟು ಸ್ಮರಣೀಯವಾಗಿದೆ. ನಿಮ್ಮೊಂದಿಗೆ ಕಳೆದ ಪ್ರತಿಯೊಂದು ಕ್ಷಣವೂ ಅಮೂಲ್ಯವಾದ ನೆನಪಾಗಿ ಉಳಿಯಲಿದೆ. ಪ್ರತಿಯೊಂದು ಅಂತ್ಯವೂ ಹೊಸ ಅಧ್ಯಾಯದ ಆರಂಭವೇ ಆಗಿರುತ್ತದೆ. ಧಾರಾವಾಹಿ ಮುಕ್ತಾಯಗೊಳ್ಳಬಹುದು, ಆದರೆ ಅದರೊಂದಿಗಿನ ನೆನಪುಗಳು ಎಂದಿಗೂ ಮಾಸುವುದಿಲ್ಲ. ಈ ಸುಂದರ ಪಯಣದ ಭಾಗವಾಗಿದ್ದಕ್ಕೆ ಸದಾ ಹೆಮ್ಮೆ ಇದೆ. ಈ ತಂಡದ ಪ್ರತಿಯೊಬ್ಬರಿಗೂ ಮತ್ತೊಮ್ಮೆ ಹೃದಯಪೂರ್ವಕ ಧನ್ಯವಾದಗಳು ಎಂದು ಸ್ವಾತಿ ಬರೆದುಕೊಂಡಿದ್ದಾರೆ.
ವೀಕ್ಷಕರು ಹೇಳಿದ್ದೇನು?
ಅಮೃತಧಾರೆ ಧಾರಾವಾಹಿ ನಮ್ಮ ಜೀವನದ ಒಂದು ಭಾಗವೇ ಆಗಿತ್ತು. ಈ ಧಾರಾವಾಹಿ ಮುಗಿಯುತ್ತಿರುವುದಕ್ಕೆ ಬೇಸರ ಇದೆ. ಜೊತೆಗೆ ಡುಮ್ಮ ಸರ್ ನ ಪ್ರೀತಿಯ ಡಾರ್ಲಿಂಗ್ ನ್ನು ಸಹ ಮಿಸ್ ಮಾಡಿಕೊಳ್ಳುತ್ತೇವೆ. ಆದಷ್ಟು ಬೇಗ ಹೊಸ ಧಾರಾವಾಹಿ ಮೂಲಕ ವಾಪಾಸ್ ಬನ್ನಿ ಎಂದು ಹಾರೈಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.