
ಅಮೃತಧಾರೆ ಧಾರಾವಾಹಿಯಲ್ಲಿ ಒಂದು ವಾರದಲ್ಲಿ ಡಿಎನ್‌ಎ ರಿಪೋರ್ಟ್ ಬರುತ್ತದೆ, ಮಗಳು ಸಿಗ್ತಾಳೆ ಅಂತ ಗೌತಮ್ ಅಂದುಕೊಂಡಿದ್ದನು. ಈಗ ಅವನಿಗೆ ಭಾರೀ ನಿರಾಸೆಯಾಗಿದ್ದು, ಆ ಮಗು ಗೌತಮ್‌ದಲ್ಲ ಎಂದು ಪೊಲೀಸರು ಹೇಳಿದ್ದಾರೆ. ಇದೆಷ್ಟರ ಮಟ್ಟಿಗೆ ಸತ್ಯ?
ಈಗಾಗಲೇ ಗೌತಮ್, ಮಗಳು ಸಿಕ್ಕಿರೋದು, ಅನಾಥಾಶ್ರಮದಲ್ಲಿರೋದು, ಒಂದು ವಾರದಲ್ಲಿ ಡಿಎನ್‌ಎ ರಿಪೋರ್ಟ್ ಬರೋ ವಿಚಾರವನ್ನು ಶಕುಂತಲಾ ಬಳಿ ಹೇಳಿದ್ದನು. ಡಿಎನ್‌ಎ ರಿಪೋರ್ಟ್ ಬರೋವರೆಗೂ ಏನೂ ಹೇಳಬೇಡ ಅಂತ ಆನಂದ್ ಗಿಣಿಗೆ ಹೇಳಿದಂತೆ ಹೇಳಿದ್ರೂ ಕೂಡ ಗೌತಮ್ ಕೇಳಿರಲಿಲ್ಲ. ಇನ್ನೊಂದು ಕಡೆ ಶಕುಂತಲಾಗೆ ಭೂಮಿಕಾ ಕಪಾಳಮೋಕ್ಷ ಕೂಡ ಮಾಡಿದ್ದಾಳೆ. ಜಯದೇವ್‌ಗೂ ಕೂಡ ನೀನು ಜಯದೇವ್ ದಿವಾನ್, ಜೇಡಿ ಮಣ್ಣು ಅಂತ ಕೂಡ ಉಗಿದಿದ್ದಾಳೆ. ಇವೆಲ್ಲವೂ ಈಗ ಗೌತಮ್‌ನನ್ನು ಮಗಳಿಂದ ದೂರ ಮಾಡಿದ್ಯಾ?
ಭೂಮಿಕಾಗೆ ಹೊಟ್ಟೆಯಲ್ಲಿ ಅವಳಿ ಮಕ್ಕಳಿರೋದು ಯಾರಿಗೂ ಗೊತ್ತಿರಲಿಲ್ಲ. ಮೊದಲು ಭೂಮಿಕಾ ಮಗಳಿಗೆ ಜನ್ಮ ನೀಡಿದಳು, ಆ ಮಗುವನ್ನು ಜಯದೇವ್ ಕದ್ದೊಯ್ದು ಕಾಡಿನಲ್ಲಿ ಬಿಸಾಡಿದ್ದನು. ಆಮೇಲೆ ಭೂಮಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಗೌತಮ್, ಜಯದೇವ್, ಶಕುಂತಲಾ, ಆನಂದ್ ಬಿಟ್ಟು ಯಾರಿಗೂ ಕೂಡ ಭೂಮಿಗೆ ಅವಳಿ ಮಕ್ಕಳಾಗಿರೋದು ಗೊತ್ತೇ ಇಲ್ಲ. ಇದೇ ಸತ್ಯವನ್ನು ಶಕ್ಕು, ಭೂಮಿಗೆ ಹೇಳಿ ಗಂಡ-ಹೆಂಡತಿ ಮಧ್ಯೆ ತಂದಿಡಬಹುದು. ಮಗು ವಿಚಾರದಲ್ಲಿ ಭೂಮಿ ತುಂಬ ಸೆನ್ಸಿಟಿವ್. ಹೀಗಾಗಿ ಅವಳು ಗೌತಮ್ ಮೇಲೆ ಬೇಸರ ಮಾಡಿಕೊಳ್ಳಲೂಬಹುದು.
ಯಾವ ಅನಾಥಾಶ್ರಮದಲ್ಲಿ ಗೌತಮ್ ಮಗಳಿದ್ದಾಳೆ ಅಂತ ತಿಳಿದುಕೊಳ್ಳಲು ಶಕುಂತಲಾ ಪ್ರಯತ್ನಪಟ್ಟಿದ್ದಳು. ಆ ಕೇಡಿಗೆ ಇಂಥ ವಿಷಯ ತಿಳ್ಕೊಳೋದು ಅಷ್ಟು ಕಷ್ಟ ಏನಲ್ಲ. ಅವಳೇ ಮೋಸ ಮಾಡಿ ಡಿಎನ್‌ಎ ರಿಪೋರ್ಟ್ ಬದಲಾಯಿಸಿದರೂ ಕೂಡ ಆಶ್ಚರ್ಯವಿಲ್ಲ. ಒಟ್ಟಿನಲ್ಲಿ ಅನಾಥಾಶ್ರಮದಲ್ಲಿ ಸಿಕ್ಕ ಮಗುವೇ ಗೌತಮ್ ಮಗು ಆಗಿರೋ ಸಾಧ್ಯತೆ ಜಾಸ್ತಿ ಇದೆ. ಇದರ ಸತ್ಯಾಸತ್ಯತೆ ಯಾವಾಗ ಹೊರಬೀಳಲಿದೆ? ಏನಾಗಲಿದೆ ಎಂದು ಕಾದು ನೋಡಬೇಕಿದೆ.
ಗೌತಮ್ ಮಗಳು ಯಾವಾಗ ಮನೆಗೆ ಬರ್ತಾಳೆ? ಮಗಳು ಸಿಗೋ ಮುನ್ನವೇ ಮಗಳು ಹುಟ್ಟಿದ್ದಳು ಎನ್ನೋ ವಿಷಯ ಭೂಮಿಗೆ ಗೊತ್ತಾಗತ್ತೆ? ಮಗಳ ಕಾರಣಕ್ಕೆ ಭೂಮಿ ಹಾಗೂ ಗೌತಮ್ ಬೇರೆ ಬೇರೆ ಆಗ್ತಾರಾ ಹೀಗೆ ಸಾಕಷ್ಟು ಪ್ರಶ್ನೆಗಳು ಎದ್ದಿವೆ. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ಕುತೂಹಲದಿಂದ ಕೂಡಿವೆ.
ಶಕುಂತಲಾ ವಿಷ, ಮುಖವಾಡ ಹಾಕಿಕೊಂಡು ಬದುಕ್ತಿರೋಳು ಎನ್ನೋದು ಭೂಮಿಗೆ ಗೊತ್ತಾಗಿದೆ. ಇವರಿಬ್ಬರ ನೇರಯುದ್ಧ ಶುರುವಾಗಿದೆ. ತನ್ನ ಕಪಾಳಕ್ಕೆ ಬಾರಿಸಿದಳು ಅಂತ ಭೂಮಿಕಾ ಮನೆಯವರ ಮೇಲೆ ಶಕ್ಕು ಕಣ್ಣಿಟ್ಟಿದ್ದಾಳೆ. ಗಂಡನಿಗೆ ಶಕುಂತಲಾ ಬಗ್ಗೆ ಏನೇ ಹೇಳಿದರೂ ಕೂಡ ಅವರು ನಂಬೋದಿಲ್ಲ ಅಂತ ಭೂಮಿಗೆ ಅರ್ಥ ಆಗಿದೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಅಂತ ಭೂಮಿ ಹೊಸ ದಾರಿ ಹುಡುಕಿಕೊಂಡಿದ್ದಾಳೆ.
ಈ ಧಾರಾವಾಹಿಯಲ್ಲಿ ಗೌತಮ್ ಹಾಗೂ ಭೂಮಿಕಾಗೆ ಮದುವೆಯಾಗಿದೆ. ಮನೆಯವರ ಖುಷಿಗೋಸ್ಕರ ಮದುವೆಯಾದ ಇವರು ಆಮೇಲೆ ಪ್ರೀತಿಯಲ್ಲಿ ಬಿದ್ದು, ಪಾಲಕರಾಗಿದ್ದಾರೆ. ಇನ್ನೊಂದು ಕಡೆ ಗೌತಮ್ ಆಸ್ತಿ ಹೊಡೆಯಲು ಶಕುಂತಲಾ ಯಾರ ಪ್ರಾಣವನ್ನು ಬೇಕಾದರೂ ತೆಗೆಯೋಕೆ ರೆಡಿ ಇದ್ದಾಳೆ. ಶಕುಂತಲಾ ಹಾಗೂ ಅವಳ ಮಗ ಜಯದೇವ್‌ರಿಂದ ಭೂಮಿಕಾ ತನ್ನನ್ನು, ತನ್ನವರನ್ನು ಹೇಗೆ ಕಾಪಾಡಿಕೊಳ್ತಾಳೆ ಎಂದು ಕಾದು ನೋಡಬೇಕಿದೆ.
ಗೌತಮ್ ದಿವಾನ್- ರಾಜೇಶ್ ನಟರಂಗ
ಭೂಮಿಕಾ- ಛಾಯಾ ಸಿಂಗ್
ಶಕುಂತಲಾ- ವನಿತಾ ವಾಸು
ಜಯದೇವ್- ರಾಣವ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.