
‘ಅಮೃತಧಾರೆ’ ಧಾರಾವಾಹಿಯಲ್ಲಿ ( Amruthadhaare Serial ) ಮಗಳನ್ನು ಕಿಡ್ನ್ಯಾಪ್ ಮಾಡಿ ಕಾಡಿನಲ್ಲಿ ಬಿಟ್ಟಿರೋದು ನಾವೇ ಎಂದು ಶಕುಂತಲಾ, ಭೂಮಿಗೆ ಹೇಳಿದ್ದಳು. ತನಗೊಬ್ಬಳು ಮಗಳಿದ್ದಾಳೆ, ಈಗ ಅವಳಿಲ್ಲ, ಈ ವಿಷಯ ಗೌತಮ್‌ಗೆ ಗೊತ್ತಿದ್ದರೂ ಕೂಡ ಹೇಳಿಲ್ಲ ಎಂದು ಭೂಮಿಕಾ ಬೇಸರದಲ್ಲಿದ್ದಾಳೆ. ಆದರೂ ಅವಳು ರಣಚಂಡಿಯಾಗಿದ್ದಾಳೆ.
“ನಿನ್ನ ಮನೆಯಲ್ಲಿ ಅಮ್ಮ, ಜೀವ, ಮಹಿಮಾ ಇದ್ದಾರೆ, ಅಪೇಕ್ಷಾ ಕೂಡ ಆ ಮನೆಗೆ ಹೋಗಿದ್ದಾಳೆ. ನಿನ್ನ ಗಂಡ ಏರ್‌ಪೋರ್ಟ್‌ನಿಂದ ಹೊರಗಡೆ ಬರುತ್ತಿದ್ದಂತೆ ಕೊಲ್ಲೋಕೆ ಶಾರ್ಪ್ ಶೂಟರ್ ಕಾದು ನಿಂತಿದ್ದಾನೆ. ಒಂದು ಮಗುವನ್ನು ಸಾಯಿಸಿದ್ದೇವೆ, ಇನ್ನೊಂದು ಮಗುವನ್ನು ಸಾಯಿಸುತ್ತೇವೆ. ತಾಕತ್ ಇದ್ದರೆ ನಿಲ್ಲಿಸು” ಎಂದು ಶಕುಂತಲಾ, ಭೂಮಿಗೆ ಒಪನ್ ಚಾಲೆಂಜ್ ಮಾಡಿದ್ದಾರೆ. ಶಕುಂತಲಾ ಮಾತಿಗೆ ಭೂಮಿಕಾ ಬೇಸರಗೊಂಡಿದ್ದಾಳೆ. ಅದೇ ಸಮಯಕ್ಕೆ ಮತ್ತೆ ಗನ್ ತಗೊಂಡು, ಸಾಯಿಸೋಕೆ ರೆಡಿಯಾಗಿದ್ದಾಳೆ. ಒಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಏನಾಗಲಿದೆ ಎಂದು ಕಾದು ನೋಡಬೇಕಿದೆ.
ಗೌತಮ್‌ಗೆ ಶಕುಂತಲಾ ಎಂಬ ಮಲತಾಯಿ ಇದ್ದಾಳೆ, ಅವಳಿಗೆ ಜಯದೇವ್ ಎಂಬ ನೀಚ ಮಗನೂ ಇದ್ದಾನೆ. ಶಕುಂತಲಾ ಆಸ್ತಿಗೋಸ್ಕರ ಏನು ಬೇಕಿದ್ರೂ ಮಾಡ್ತಾಳೆ. ಆದರೆ ಗೌತಮ್ ಮಾತ್ರ ಈ ಮಾತನ್ನು ನಂಬಲು ರೆಡಿ ಇಲ್ಲ. ಇನ್ನೊಂದು ಕಡೆ ಭೂಮಿಕಾ ಮಗಳನ್ನು ಕಿಡ್ನ್ಯಾಪ್ ಮಾಡಿರೋದು ಶಕುಂತಲಾ ಅನ್ನೋದು ಅವಳಿಗೆ ಗೊತ್ತಾಗಿದೆ. ಭೂಮಿಕಾಗೆ ಈ ವಿಷಯ ಹೇಳಿದರೆ ಅವಳ ಆರೋಗ್ಯ ಹಾಳಾಗುತ್ತದೆ ಎಂದು ಗೌತಮ್ ಸುಮ್ಮನಿದ್ದನು. ಈಗ ಗೌತಮ್ ಹಾಗೂ ಭೂಮಿಕಾ ನಡುವೆ ಮನಸ್ತಾಪ ಬರಲಿದೆಯಾಬೆಂಬ ಸಂದೇಹ ಶುರು ಆಗಲಿದೆ.
ಮಗಳು ಕಿಡ್ನ್ಯಾಪ್ ಆದರೂ ಕೂಡ ಗೌತಮ್‌ಗೆ ಅವಳನ್ನು ಹುಡುಕಲು ಆಗಿಲ್ಲ. ಆದರೆ ಶಕುಂತಲಾಗೆ ಜಯದೇವ್ ಹಾಗೂ ಶಾಕುಂತಲಾ ಹಣೆಬರಹ ಏನು ಎನ್ನೋದು ಗೊತ್ತಾಗಿದೆ. ಈಗ ಮಗಳು ಹುಟ್ಟಿದ್ದಳು, ಅದನ್ನು ಶಕುಂತಲಾ ಕಾಡಿನಲ್ಲಿ ಬಿಟ್ಟಿದ್ದಳು ಎನ್ನೋದು ಕೂಡ ಅವಳಿಗೆ ಗೊತ್ತಾಗಿದೆ. ಭೂಮಿಗೆ ಈ ವಿಷಯ ಗೊತ್ತಾಗಿರೋದು ಒಳ್ಳೆಯದು, ಗೊತ್ತಾದರೆ ಆ ಮಗು ಸಿಗುತ್ತದೆ ಎಂದು ವೀಕ್ಷಕರು ಕೂಡ ಹೇಳುತ್ತಿದ್ದಾರೆ. ಇನ್ನೊಂದು ಕಡೆ ಭೂಮಿ ಫ್ರೆಂಡ್ ಕೂಡ ಓರ್ವ ಮಗಳನ್ನು ದತ್ತು ತಗೊಂಡಿದ್ದಾಳೆ. ದತ್ತು ತಗೊಂಡ ಮಗುವೇ ಭೂಮಿಕಾ ಮಗು ಎಂದು ಕೂಡ ಹೇಳಲಾಗುತ್ತಿದೆ. ಆ ಮಗು ಹುಡುಕಲು ಭೂಮಿ ಏನು ಮಾಡುತ್ತಾಳೆ? ಶಕುಂತಲಾ ಎನ್ನುವ ಹೆಂಗಸಿನಿಂದ ಭೂಮಿ ತನ್ನವರನ್ನು ಹೇಗೆ ರಕ್ಷಣೆ ಮಾಡಿಕೊಳ್ತಾಳೆ ಎಂದು ಕಾದು ನೋಡಬೇಕಿದೆ.
ಶಕುಂತಲಾ- ವನಿತಾ ವಾಸು
ಭೂಮಿ- ಛಾಯಾ ಸಿಂಗ್
ಜಯದೇವ್- ರಾಣವ್
ಗೌತಮ್- ರಾಜೇಶ್ ನಟರಂಗ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.