
ಪುಣೆ (ಸೆ.03) ಜನಪ್ರಿಯ ಟಿವಿ ನಟ ಆಶೀಶ್ ಕಪೂರ್ ಅರೆಸ್ಟ್ ಆಗಿದ್ದಾರೆ. ಮಹಿಳೆ ನೀಡಿದ್ದ ಅತ್ಯಾ*ರ ದೂರಿನ ತನಿಖೆ ನಡೆಸುತ್ತಿರುವ ಪೊಲೀಸರು ಇದೀಗ ಅಶೀಶ್ ಕಪೂರ್ ಬಂಧಿಸಿದ್ದಾರೆ. ಆಗಸ್ಟ್ ತಿಂಗಳಲ್ಲಿ ಅಶೀಶ್ ಕಪೂರ್ ಆಯೋಜಿಸಿದ್ದ ಪಾರ್ಟಿಯಲ್ಲಿ ಅತ್ಯಾ*ರ ನಡೆಸಿದ್ದಾರೆ ಎಂದು ಮಹಿಳೆ ದೂರು ನೀಡಿದ್ದರು. ಇನ್‌ಸ್ಟಾಗ್ರಾಂ ಮೂಲಕ ನಟ ಆಶೀಶ್ ಕಪೂರ್‌ಗೆ ಮಹಿಳೆಯ ಪರಿಚಯವಾಗಿತ್ತು. ಬಳಿಕ ದೆಹಲಿಯಲ್ಲಿ ಆಯೋಜಿಸಿದ್ದ ಪಾರ್ಟಿಗೆ ಮಹಿಳೆಯನ್ನು ಆಹ್ವಾನಿಸಲಾಗಿತ್ತು. ಈ ಪಾರ್ಟಿಯಲ್ಲಿ ಆಶೀಶ್ ಕಪೂರ್ ಅತ್ಯಾ*ರ ಎಸಗಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ಆಗಸ್ಟ್ 11ರಂದು ಮಹಿಳ ದೂರು ನೀಡಿದ್ದರು. ಈ ದೂರಿನ ಅಡಿಯಲ್ಲಿ ಆಶೀಶ್ ಕಪೂರ್ ವಿರುದ್ದ ಎಫ್ಐಆರ್ ದಾಖಲಾಗಿತ್ತು. ಆರಂಭದಲ್ಲಿ ಸಾಮೂಹಿಕ ಅತ್ಯಾ*ರ ಎಂಬ ದೂರು ನೀಡಿದ್ದರು. ಪೊಲೀಸ್ ಪ್ರಾಥಮಿಕ ತನಿಖೆ ಬಳಿಕ ಅತ್ಯಾ*ರ ಪ್ರಕರಣವಾಗಿ ಮಾರ್ಪಾಡು ಮಾಡಲಾಗಿದೆ. ದೂರಿನ ಬಳಿಕ ಪೊಲೀಸರ ಕೈಗೆ ಸಿಗದೇ ಓಡಾಡುತ್ತಿದ್ದ ಅಶೀಶ್ ಕಪೂರ್‌ನನ್ನು ಇದೀಗ ಪುಣೆಯಲ್ಲಿ ಬಂಧಿಸಿದ್ದಾರೆ. ದೆಹಲಿ, ಗೋವಾ ಸೇರಿದಂತೆ ಹಲವೆಡೆ ಹುಡುಕಾಡಿದ್ದ ಪೊಲೀಸರು ಕೊನೆಗೆ ಗೋವಾದಲ್ಲಿ ಬಂಧಿಸಿದ್ದಾರೆ.
ದೆಹಲಿ ಮನೆಯಲ್ಲಿ ಆಯೋಜಿಸಿದ ಪಾರ್ಟಿಯ ಸಿಸಿಟಿವ ದೃಶ್ಯಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಮಹಿಳೆ ನೀಡಿ ದೂರಿನಲ್ಲಿ ಘಟನೆಯನ್ನು ಆರೋಪಿಗಳು ಮೊಬೈಲ್ ಮೂಲಕ ಸೆರೆ ಹಿಡಿದಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಪೊಲೀಸರಿಗೆ ಈ ಕುರಿತು ಯಾವುದೇ ವಿಡಿಯೋ ಸಾಕ್ಷಿಗಳು ಲಭ್ಯವಾಗಿಲ್ಲ. ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ತನಿಖೆ ತೀವ್ರಗೊಳಿಸಿದ್ದಾರೆ.
ಮಹಿಳೆ ನೀಡಿದ ದೂರಿನಲ್ಲಿ ಆಶೀಶ್ ಕಪೂರ್ ಪ್ರೀತಿಯ ನಾಟವಾಡಿದ್ದ ಎಂದು ಆರೋಪಿಸಲಾಗಿದೆ. ಗೆಳೆತನ ಹೆಸರಿನಲ್ಲಿ ಮೋಸ ಮಾಡಿದ್ದಾನೆ. ಬಲವಂತವಾಗಿ ಬಳಸಿಕೊಂಡಿದ್ದಾನೆ. ಆತನ ಗೆಳೆಯರು ಕೂಡ ಇದಕ್ಕೆ ಸಹಕರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದೀಗ ಗೋವಾದಲ್ಲಿ ಬಂಧನವಾಗಿರುವ ಆಶೀಶ್ ಕಪೂರ್‌ನ ದೆಹಲಿಗೆ ಕರೆತಂದು ವಿಚಾರಣೆ ನಡೆಸಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.