
ಅಮೃತಧಾರೆ ಧಾರಾವಾಹಿಯಲ್ಲಿ ( Amruthadhaare Serial ) ಮನೆ ಬಿಟ್ಟು ಹೋದೆ ಅಂತ ಶಕುಂತಲಾ ನಾಟಕ ಮಾಡಿಕೊಂಡು ಜಯದೇವ್ ಮನೆಗೆ ಹೋಗಿದ್ದಳು. ಗೌತಮ್ ಅವಳಿಗೆ ಸಮಾಧಾನ ಮಾಡಿ ಕರೆದುಕೊಂಡು ಬಂದಿದ್ದನು. ಆಮೇಲೆ ಇದೇ ವಿಚಾರಕ್ಕೆ ಶಕುಂತಲಾ, ಭೂಮಿಯನ್ನು ವ್ಯಂಗ್ಯ ಮಾಡಿದ್ದಳು. ಆಗ ಭೂಮಿಕಾ ಮಾತ್ರ ಸಾಕಾ? ಬೇಕಾ ಎನ್ನೋ ಥರ ಕಪಾಳಮೋಕ್ಷ ಮಾಡಿದ್ದಾಳೆ.
“ನೀವು ಭಿಕ್ಷುಕರು, ನನ್ನ ಮಗಳು ನಿಮ್ಮ ಮನೆ ಸೊಸೆಯಾದಳು. ನಿಮ್ಮ ತಾಯಿ ಯಾವಾಗಲೂ ವಟ ವಟ ಅಂತ ಮಾತಾಡ್ತಾ ಬಿಲ್ಡ್‌ಅಪ್ ಕೊಡ್ತಾ ಇರ್ತಾಳೆ, ನಿಮ್ಮ ಅಪ್ಪನೂ ಅಷ್ಟೇ. ನಾನು ಸಾಕಿರೋ ನಾಯಿ ಗೌತಮ್. ಅವನಿಗೆ ತಲೆಯಲ್ಲಿ ಮಿದುಳು ಇದ್ದರೂ ಕೂಡ ಅದು ವರ್ಕ್ ಆಗೋದಿಲ್ಲ. ಅವನು ನನ್ನ ಮಾತನ್ನೇ ಕೇಳೋದು, ನಾನು ಹೇಳಿದ್ದನ್ನೇ ಕೇಳ್ತಾನೆ. ಮೇಷ್ಟ್ರು ಮಗಳು ನೀನು ಪಾಪದವಳಲ್ಲ, ನೀನು ಗೌತಮ್‌ಗೆ ಸರಿಯಾದ ಜೋಡಿ ಅಲ್ಲ. ಸುಮ್ಮನಿರೋದು ಬಿಟ್ಟು ನನ್ನ ಮೇಲೆ ಎಗರುತ್ತೀಯಾ. ಶ್ರೀಮಂತಿಕೆ ಸೊಕ್ಕು ನಿನ್ನ ತಲೆಗೇರಿದೆ. ಮದುವೆಗೂ ಮುನ್ನ ನೀವು ಗತಿಗೆಟ್ಟೋರು. ಆರಕ್ಕೆ ಏರಲ್ಲ, ಮೂರಕ್ಕೆ ಇಳಿಯಲ್ಲ ಎನ್ನೋ ಥರ ಇದ್ರಿ. ಹೆಂಡ್ತಿ ಮಕ್ಕಳನ್ನು ಸಾಕೋ ಯೋಗ್ಯತೆ ನಿಮ್ಮ ಅಪ್ಪನಿಗೆ ಇಲ್ಲ. ನಿನ್ನ ತಮ್ಮನಿಗೆ ಬ್ಯುಸಿನೆಸ್ ಮಾಡೋಕೆ ಗೌತಮ್ ಸಹಾಯ ಬೇಕು. ನಿಮ್ಮನೆ ಕೊಚ್ಚೆಗುಂಡಿ. ನಾನು ಹಾಕೋ ಬಿಸ್ಕತ್ ತಿಂದು ಕಾಲು ಕೆಳಗಡೆ ಬಿದ್ದಿರಬೇಕು, ಅಷ್ಟೇ ಅವನ ಯೋಗ್ಯತೆ” ಎಂದು ಶಕುಂತಲಾ ಭೂಮಿಕಾಗೆ ಹೇಳಿದ್ದಾಳೆ.
“ಶಕುಂತಲಾ ಮಾತು ಕೇಳಿ ಭೂಮಿಕಾ ಸಿಟ್ಟಾಗಿದ್ದಾಳೆ. ಆಗ ಅವಳು ಕಪಾಳಕ್ಕೆ ಬಾರಿಸಿದ್ದಾಳೆ. “ಸುಮ್ನೆ ಇದ್ರೆ ಸರಿ, ಇಲ್ಲ ಅಂದ್ರೆ ಇನ್ನೂ ಒಂದು ಬೀಳತ್ತೆ. ನನ್ನ ಹೂವು ಅಂತ ಅಂದುಕೊಂಡಿದ್ದೀರಾ. ನಾನು ಫೈಯರ್. ನನ್ನ ಗಂಡ ಏನೇ ಹೇಳಿದ್ರು ನಂಬ್ತಾರೆ ಅಲ್ವಾ? ಈಗ ಹೋಗಿ ಭೂಮಿಕಾ ಹೊಡೆದಳು ಅಂತ ಹೇಳಿ ಹೋಗಿ, ನಾನು ಪುಣ್ಯಕೋಟಿ ಗೋವು ಹೌದು, ತಲೆಕೆಟ್ಟರೆ ಗುಮ್ಮೋ ಗೂಳಿ ಆಗ್ತೀನಿ. ಭೂಕಂಪನೂ ಆಗತ್ತೆ, ಜ್ವಾಲಾಮುಖಿಯೂ ಸಿಡಿಯತ್ತೆ. ಒಳ್ಳೆಯದು ಮಾಡೋಕೆ ಆಗಲ್ಲ ಅಂದ್ರೆ ಕೆಟ್ಟದನ್ನು ಮಾಡೋಕೆ ಬರಬೇಡಿ. ನನ್ನ ಹಾಗೂ ನನ್ನ ಕುಟುಂಬದವರ ಬಗ್ಗೆ ಏನೇ ಮಾತಾಡಿದ್ರೂ ಸುಮ್ಮನೆ ಇರೋದಿಲ್ಲ. ಕ್ಲಾಸ್ ಗೊತ್ತು, ಮಾಸ್ ಗೊತ್ತು” ಎಂದು ಭೂಮಿ ಎಚ್ಚರಿಕೆ ಕೊಟ್ಟಿದ್ದಾಳೆ. ಈ ಎಪಿಸೋಡ್ ಅನೇಕರಿಗೆ ಇಷ್ಟ ಆಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.