Amruthadhaare Serial: ಭೂಮಿಕಾ, ಯಾವುದು ಆಗಬಾರದು ಅನ್ಕೊಂಡಿದ್ದಳೋ ಅದೇ ಆಗೋಯ್ತು; ಭರ್ಜರಿ ಟ್ವಿಸ್ಟ್‌!

Published : Oct 12, 2025, 11:54 PM IST
amruthadhaare serial

ಸಾರಾಂಶ

Amruthadhaare Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಹಾಗೂ ಗೌತಮ್‌ಗೆ ದೊಡ್ಡ ಶಾಕ್‌ ಎದುರಾಗಿದೆ. ಗೌತಮ್‌ ಬಯಸದೆ ಇರೋದು ಕಣ್ಣು ಮುಂದೆ ಬಂದಿದೆ. ಈಗ ಅವನು ಏನು ಮಾಡುತ್ತಾನೆ? 

ಜಗತ್ತು ತುಂಬ ಚಿಕ್ಕದು, ಭೂಮಿ ಗುಂಡಗಿದೆ ಎಂದು ಹೇಳ್ತಾರೆ. ಅದೀಗ ಅಮೃತಧಾರೆ ಧಾರಾವಾಹಿಯಲ್ಲಿ ನಿಜವಾಗಿದೆ. ಹೌದು, ಭೂಮಿಕಾ ಹಾಗೂ ತನ್ನ ಮಗನನ್ನು ನೋಡಬೇಕು ಎಂದು ಗೌತಮ್‌ ಐದು ವರ್ಷಗಳ ಕಾಲ ಒದ್ದಾಡಿದ್ದನು. ಆದರೆ ಈಗ ಬಯಸದೆ ಅವನ ಮುಂದೆ ಭೂಮಿಕಾ ಬಂದಿದ್ದಾಳೆ.

ಮಗುವನ್ನು ದತ್ತು ತಗೊಂಡಿರೋ ಗೌತಮ್

ಸ್ವಂತ ಮಗಳು ಎಲ್ಲಿದ್ದಾಳೆ ಅಂತ ಗೌತಮ್‌ ಹುಡುಕಾಟ ಮಾಡುತ್ತಿರುವಾಗಲೇ, ಅನಿರೀಕ್ಷಿತವಾಗಿ ಒಂದು ಹುಡುಗಿ ಸಿಕ್ಕಿದ್ದಾಳೆ. ಆ ಮಗುವಿಗೆ ಮಾತೇ ಬರಲ್ಲ. ಆ ಮಗು ಗೌತಮ್‌ಗೆ ಸಿಕ್ಕಿದಾಗ, ಅವನು ಪೊಲೀಸರಿಗೆ ಒಪ್ಪಿಸುತ್ತಾನೆ, ಆದರೆ ಆ ಮಗು ಮಾತ್ರ ಗೌತಮ್‌ನಿಂದ ದೂರ ಆಗುತ್ತಿದ್ದೇನೆ ಅಂತ ಬೇಸರ ಮಾಡಿಕೊಂಡಿದ್ದಾಳೆ. ಆಗಿದ್ದು ಆಗಲೀ ಎಂದು ಅವನು ಅವಳನ್ನು ದತ್ತು ತಗೊಂಡಿದ್ದಾನೆ. ಈಗ ಅವನ ಮನೆಗೆ ಮಗಳು ಬಂದಿದ್ದಾಳೆ.

ಎದುರು ಬದುರಾದ ಗೌತಮ್-‌ ಭೂಮಿಕಾ

ಕುಶಾಲನಗರದಲ್ಲಿದ್ದ ಭೂಮಿ ತನ್ನ ಮಗ ಆಕಾಶ್‌, ಮಲ್ಲಿಯನ್ನು ಕರೆದುಕೊಂಡು ಬೆಂಗಳೂರಿಗೆ ಬಂದಿದ್ದಾರೆ. ಆ ಬಾಡಿಗೆ ಮನೆಯಲ್ಲಿ ಮಲ್ಲಿ ಹಾಗೂ ಮನೆ ಓನರ್‌ ಜಗಳ ಆಡಿಕೊಂಡಿದ್ದಾರೆ. ಹೀಗಾಗಿ ಅವರು ಮನೆಯನ್ನು ಖಾಲಿ ಮಾಡುವ ಹಾಗೆ ಆಯ್ತು. ಈಗ ಭೂಮಿಕಾ ತನ್ನ ಗೆಳತಿ ಕಾವೇರಿ ಸಲಹೆಯಂತೆ ವಠಾರಕ್ಕೆ ಬಂದಿದ್ದಾಳೆ. ಆ ವಠಾರದಲ್ಲಿ ಕಾವೇರಿಯೂ ಇದ್ದಳು, ಗೌತಮ್‌ ಕೂಡ ಇದ್ದನು. ಗೌತಮ್‌ ತನ್ನ ವಠಾರಕ್ಕೆ ಬಂದವರಿಗೆ ಕಾಫಿ ಕೊಡಬೇಕು ಎಂದು ಬಾಗಿಲು ತೆಗೆದು ನೋಡಿದರೆ, ಅಲ್ಲಿ ಭೂಮಿಕಾ ಎದುರಾಗಿದ್ದಾಳೆ.

ಗೌತಮ್‌ ಹಾಗೂ ಭೂಮಿಕಾ ಒಂದಾಗ್ತಾರಾ?

“ನಮ್ಮಿಂದ ದೂರ ಇರಿ, ನಮ್ಮಿಂದ ದೂರ ಇರಲಿಲ್ಲ ಅಂದರೆ ನನ್ನ ನಿರ್ಧಾರ ಬೇರೆ ಆಗತ್ತೆ” ಎಂದು ಭೂಮಿಕಾ, ಗೌತಮ್‌ಗೆ ವಾರ್ನ್‌ ಮಾಡಿದ್ದಳು. ಈಗ ಗೌತಮ್‌ ಏನ್‌ ಮಾಡ್ತಾನೆ ಎಂದು ಕಾದು ನೋಡಬೇಕಿದೆ. ಗೌತಮ್‌ ಬೇಕು ಅಂತಲೇ ನಮ್ಮ ಮನೆಗೆ ಬಂದ್ರು, ನಮ್ಮನ್ನು ಫಾಲೋ ಮಾಡಿದ್ರು ಅಂತ ಅವಳು ಅವನಿಗೆ ಬೈದರೂ ಆಶ್ಚರ್ಯವಿಲ್ಲ. ಒಟ್ಟಿನಲ್ಲಿ ಈ ಧಾರಾವಾಹಿ ಎಪಿಸೋಡ್‌ನಲ್ಲಿ ಏನೇನು ಆಗಲಿದೆಯೋ ಏನೋ! ವಠಾರದಲ್ಲಿ ಗೌತಮ್‌ ಹಾಗೂ ಭೂಮಿ ಇರೋದರಿಂದ ಈ ಜೋಡಿ ಮಧ್ಯದ ಬಾಂಧವ್ಯ ಹೆಚ್ಚಾಗಲಿದ್ದು, ಒಂದಾಗುವ ಸಾಧ್ಯತೆಯೂ ಇದೆ. ಆ ಮಗುವಿನಿಂದ ಮನಸ್ತಾಪ ಉಂಟಾಗುವ ಸಾಧ್ಯತೆಯೂ ಇದೆ.

ವೀಕ್ಷಕರಿಗೆ ಹಬ್ಬ

ಗೌತಮ್‌ ಹಾಗೂ ಭೂಮಿಕಾ ದೂರ ಆಗಿರೋದು, ಗೌತಮ್‌ ಮಗಳು ಕಳೆದಿರೋದು, ಈಗ ಸಿಕ್ಕಿರೋ ಬಾಲಕಿಗೆ ಮಾತು ಬರದೆ ಇರೋದು, ಅಪ್ಪ-ಮಗ-ಮಗಳು ದೂರ ದೂರ ಇರೋದು ಕೂಡ ವೀಕ್ಷಕರಿಗೆ ಬೇಸರವಾಗಿತ್ತು. ಈ ಬೇಸರಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆಯಾ ಎಂದು ಕಾದು ನೋಡಬೇಕಿದೆ.

ಕಥೆ ಏನು?

ಗೌತಮ್‌ ಮಲತಾಯಿ ಶಕುಂತಲಾ ತನ್ನವರಿಗೆ ಅಪಾಯ ಮಾಡುತ್ತಾಳೆ ಎಂದು ಭಯಕ್ಕೆ ಬಿದ್ದು ಭೂಮಿಕಾ ಎಲ್ಲರಿಂದ ದೂರ ಇದ್ದಾಳೆ. ಮಗಳು ಹುಟ್ಟಿದ್ದು, ಕಿಡ್ನ್ಯಾಪ್‌ ಆಗಿರೋ ವಿಷಯವನ್ನು ನನಗೆ ಹೇಳಿಲ್ಲ ಎನ್ನುವ ಕಾರಣಕ್ಕೆ ಭೂಮಿ ಸಿಟ್ಟಿನಲ್ಲಿದ್ದಾಳೆ ಎಂದು ಗೌತಮ್‌ ಅಂದುಕೊಂಡಿದ್ದಾನೆ. ಆದರೆ ಭೂಮಿಕಾ ಉದ್ದೇಶ ಬೇರೆಯೇ ಇದೆ.

ಪಾತ್ರಧಾರಿಗಳು

ಗೌತಮ್‌ ದಿವಾನ್‌ - ರಾಜೇಶ್‌ ನಟರಂಗ

ಭೂಮಿಕಾ ಸದಾಶಿವ- ಛಾಯಾ ಸಿಂಗ್‌

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!