Amruthadhaare Serial: ಜಯದೇವ್‌, ಶಕುಂತಲಾಗೆ ಬೆವರಿಳಿಸಿದ್ದ ಭೂಮಿಗೆ ನಡುಕ ಹುಟ್ಟಿಸುವಂತ ಶಾಕ್‌ ಸಿಕ್ಕಾಯ್ತು

Published : Sep 03, 2025, 09:27 AM IST
amruthadhaare serial

ಸಾರಾಂಶ

Amruthadhaare Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಜಯದೇವ್‌, ಶಕುಂತಲಾರ ಪ್ಲ್ಯಾನ್‌ ಉಲ್ಟಾ ಮಾಡಿದ ಭೂಮಿಕಾಗೆ ದೊಡ್ಡ ಶಾಕ್‌ ಸಿಕ್ಕಿದೆ. ಏನದು? 

ಅಮೃತಧಾರೆ ಧಾರಾವಾಹಿಯಲ್ಲಿ ಏರ್‌ಪೋರ್ಟ್‌ಗೆ ಭೂಮಿಕಾ ತನ್ನ ಮಗು ಜೊತೆ ಹೋಗುತ್ತಿದ್ದಳು. ಅವಳ ಕಾರ್‌ಗೆ ಪಾರ್ಥ ಡ್ರೈವರ್‌ ಆಗಿದ್ದನು. ಜಯದೇವ್-ಶಕುಂತಲಾ ಕಳಿಸಿದ್ದ ರೌಡಿಗಳು ಪಾರ್ಥನನ್ನು ಹೊಡೆದರು. ಆದರೆ ಭೂಮಿಕಾಗೆ ಇದರ ಸುಳಿವು ಇತ್ತು. ಹೀಗಾಗಿ ಅವಳು ಮಲ್ಲಿಯನ್ನು ಕರೆಸಿಕೊಂಡಿದ್ದಳು, ದಿಯಾಳನ್ನು ಕಿಡ್ನ್ಯಾಪ್‌ ಮಾಡಿಸಿದ್ದಳು.

ಭೂಮಿಕಾ ಚದುರಂಗದಾಟಕ್ಕೆ ಜಯದೇವ್‌ ತತ್ತರ! 

ಭೂಮಿಕಾ ಇದ್ದ ಜಾಗದಲ್ಲಿ ಪೊಲೀಸರು ಕೂಡ ಬಂದಿದ್ದರು. ಭೂಮಿಕಾ ಮಗು ಜಯದೇವ್‌ ಕೈಗೆ ಸಿಕ್ಕಿತ್ತು. ದಿಯಾಳನ್ನು ಕೊಲ್ತೀನಿ ಅಂತ ಭೂಮಿಕಾ ಹೇಳಿ, ಮಗುವನ್ನು ತನಗೆ ಕೊಡುವಂತೆ ಹೇಳಿದಳು. ಒಟ್ಟಿನಲ್ಲಿ ಮಗು ಭೂಮಿ ಕೈ ಸೇರಿತು, ಜಯದೇವ್‌ ಪ್ಲ್ಯಾನ್‌ ಉಲ್ಟಾ ಹೊಡೆಯಿತು. ಅತ್ತ ತನಗೆ ಗುಡ್‌ ಟೈಮ್‌ ಶುರುವಾಗಿದೆ, ನಾನು ಅಂದುಕೊಂಡ ಹಾಗೆ ಎಲ್ಲವೂ ಆಗ್ತಿದೆ ಅಂತ ಶಕುಂತಲಾ ಬೀಗುತ್ತಿದ್ದಳು. ಆದರೆ ಅವಳ ಪ್ಲ್ಯಾನ್‌ ಉಲ್ಟಾ ಆಗಿರೋದು ತಡವಾಗಿ ಗೊತ್ತಾಗಿದೆ. ಅವಳು ತನ್ನ ಅಣ್ಣನ ಜೊತೆ ಮಾತನಾಡಿ ಖುಷಿ ಹಂಚಿಕೊಂಡಿದ್ದಳು.

ಮನೆ ಬಿಟ್ಟು ಹೋಗಲು ಶಕುಂತಲಾ ರೆಡಿ!

ಆಮೇಲೆ ಏನಾಯ್ತು ಅಂತ ಜಯದೇವ್‌ ಫೋನ್‌ ಮಾಡಿ ಹೇಳಿದ್ದಾನೆ. ಸೂಟ್‌ಕೇಸ್‌ನಲ್ಲಿ ಬಟ್ಟೆ ತುಂಬಿ ಮನೆಯಿಂದ ಹೊರಡಲು ರೆಡಿಯಾಗಿದ್ದಾಳೆ. ಅಲ್ಲಿಗೆ ಭೂಮಿ, ಮಲ್ಲಿ ಬಂದು, “ನನ್ನ ಮಗುವನ್ನು ಕೊಲ್ಲಲು ಪ್ಲ್ಯಾನ್‌ ಮಾಡಿದ್ದೀರಿ, ನಾಚಿಕೆ ಆಗಬೇಕು ನಿಮಗೆ” ಅಂತೆಲ್ಲ ಬೈದಿದ್ದಾಳೆ. ಅಷ್ಟೇ ಅಲ್ಲದೆ ಗನ್‌ ತಗೊಂಡು, ಪೂರ್ತಿ ಬುಲೆಟ್‌ ನಿಮ್ಮ ತಲೆಯಲ್ಲಿ ಇಳಿಸಬೇಕು ಅಂತ ಅನಿಸ್ತಿದೆ ಎಂದು ಗುಡುಗಿದ್ದಾಳೆ.

ಮಗಳ ವಿಷಯ ಗೊತ್ತಾಗತ್ತಾ?

ಆಗ ಶಕುಂತಲಾ, ಭೂಮಿಗೆ ಮಗಳ ವಿಷಯವನ್ನು ಹೇಳಲು ಮುಂದಾಗಿದ್ದಾಳೆ. “ನಿನ್ನ ಮಗುವನ್ನು ಕಾಪಾಡಿಕೊಂಡೆ ಅಂತ ಬೀಗಬೇಡ. ನಿನಗೆ ಗೊತ್ತಿಲ್ಲದಿರೋ ಇನ್ನೊಂದು ವಿಷಯ ಇದೆ” ಎಂದು ಭೂಮಿಗೆ ಶಕುಂತಲಾ ಹೇಳಿದ್ದಳು. ಈಗ ಮಗಳ ವಿಷಯ ಹೊರಗಡೆ ಬಂದರೆ ಗೌತಮ್‌ ಹಾಗೂ ಭೂಮಿಕಾ ನಡುವೆ ಮನಸ್ತಾಪ ಶುರುವಾಗುವುದು. ಅಂದಹಾಗೆ ಮಗಳನ್ನು ಹುಡುಕಿಕೊಳ್ಳಲು ಭೂಮಿಕಾರ ಹೋರಾಟ ಶುರು ಆಗುವುದು. ಅಷ್ಟೇ ಅಲ್ಲದೆ ಭೂಮಿ ಫ್ರೆಂಡ್‌ಗೆ ಮಗಳು ಸಿಕ್ಕಿರುವ ಸಾಧ್ಯತೆ ಜಾಸ್ತಿ ಇದೆ. ಒಟ್ಟಿನಲ್ಲಿ ಹೊಸ ಅಧ್ಯಾಯ ಶುರು ಆಗುವುದು.

ಮಗಳು ಹುಡುಕುವ ಬಗ್ಗೆಯೇ ಎಪಿಸೋಡ್‌ ಪ್ರಸಾರ ಆಗುವ ಸಾಧ್ಯತೆ ಜಾಸ್ತಿ ಇದೆ. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ಕುತೂಹಲದಿಂದ ಕೂಡಿವೆ. ಫ್ರೆಂಡ್‌ಗೆ ಮಗು ಇಲ್ಲ, ಈಗ ಭೂಮಿ ಮಗು ಅವರ ಕೈ ಸೇರಿದೆ. ತನ್ನ ಮಗಳೇ ಫ್ರೆಂಡ್‌ ದತ್ತು ತಗೊಂಡಿರೋದು ಅಂತ ಭೂಮಿಗೆ ಗೊತ್ತಾದರೆ ಮುಂದೆ ಏನಾಗಬಹುದು? ಫ್ರೆಂಡ್‌ ಖುಷಿಗೋಸ್ಕರ ತನ್ನ ಮಗುವನ್ನು ಭೂಮಿ, ಅವಳಿಗೆ ಕೊಟ್ಟರೂ ಆಶ್ಚರ್ಯ ಇಲ್ಲ.

ಪಾತ್ರಧಾರಿಗಳು

ಭೂಮಿಕಾ- ಛಾಯಾ ಸಿಂಗ್‌

ಗೌತಮ್‌ ದಿವಾನ್-‌ ರಾಜೇಶ್‌ ನಟರಂಗ

ಶಕುಂತಲಾ- ವನಿತಾ ವಾಸು

ಮಲ್ಲಿ- ಅನ್ವಿತಾ ಸಾಗರ್‌

ಜಯದೇವ್-‌ ರಾಣವ್‌

ಅಂದಹಾಗೆ ಕೃಷ್ಣಮೂರ್ತಿ ಕವತ್ತಾರ್‌, ಶ್ವೇತಾ, ಮೈಸೂರು ಮಾಲತಿ, ಚಿತ್ರಾ ಶೆಣೈ, ಅಮೃತಾ ನಾಯಕ್‌, ಇಷಿತಾ ವರ್ಷಾ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!