ನಾನು ನಂದಿನಿ ರೆಕಾರ್ಡ್ ಬ್ರೇಕ್ ಮಾಡುತ್ತಾ ನಿಂಗಿ – ಅಂಗಿ? ಗಣೇಶೋತ್ಸವಕ್ಕೆ ಸಿದ್ಧವಾಯ್ತು ವಿಕ್ಕಿ ಪೀಡಿಯಾ ಹೊಸ ಸಾಂಗ್

Published : Aug 23, 2025, 06:28 PM IST
 Vickypedia

ಸಾರಾಂಶ

ವಿಕ್ಕಿ ಪೀಡಿಯಾ ಹೊಸ ಸಾಂಗ್ ರಿಲೀಸ್ ಆಗಿದೆ. ಇನ್ಸ್ಟಾಗ್ರಾಮ್ ಪೋಸ್ಟ್ ಆಗ್ತಿದ್ದಂತೆ ಸಾಂಗ್ ವೈರಲ್ ಆಗಿದೆ. ಗಾರೆ ಕೆಲ್ಸದ ನಿಂಗಿ ಏನು ಮಾಡಿದ್ಲು, ನೀವು ನೋಡಿ. 

ನಾನು ನಂದಿನಿ ಅಂತ ನಂದಿನಿ ಬೆಂಗಳೂರಿಗೆ ಬಂದಿದ್ದಾಯ್ತು, ಮದುವೆಯಾದ ಮಹಿಳೆ ಗೋಳು ಹೇಳಿದ್ದೂ ಆಯ್ತು ಈಗ ವಿಕ್ಕಿ ಪೀಡಿಯಾ (vickypedia) ಅಲಿಯಾಸ್ ವಿಕ್ಕಿ, ಗಾರೆ ಕೆಲ್ಸದ ನಿಂಗಿ ಮೇಲೆ ಕಣ್ಣಿಟ್ಟು ಸಾಂಗ್ ರಿಲೀಸ್ ಮಾಡಿದ್ದಾರೆ. ಹೊಸತನವನ್ನು ಹುಡುಕೋದ್ರಲ್ಲಿ ವಿಕ್ಕಿ ಟೀಂ ಮುಂದಿದೆ. ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೆಟ್ ಮಾಡುವ ವಿಕ್ಕಿ ಟೀಂ ಈ ಬಾರಿ ನಾನು ನಂದಿನಿ ಸಾಂಗ್ ರೆಕಾರ್ಡ್ ಬ್ರೇಕ್ ಮಾಡುವ ಸಾಧ್ಯತೆ ದಟ್ಟವಾಗಿದೆ. ಈ ಬಾರಿ ಗಣೇಶೋತ್ಸವದಲ್ಲಿ ನಿಂಗಿ ಸಾಂಗ್ ಫುಲ್ ಹಿಟ್ ಅಂತಿದ್ದಾರೆ ಫ್ಯಾನ್ಸ್.

ಗಾರೆ ಕೆಲ್ಸದ ನಿಂಗಿ, ಹರಿದೈತಿ ನಿನ್ನ ಅಂಗಿ ಅಂತ ಟ್ರ್ಯಾಕ್ಟರ್ ಓಡ್ಸೋ ನಿಂಗ, ನಿಂಗಿ ಹಿಂದೆ ಬರ್ತಾನೆ. ಅವನ ಜೊತೆ ಇನ್ನಿಬ್ಬರು ಹುಡುಗ್ರು ಸ್ಟೆಪ್ಸ್ ಹಾಕ್ತಾರೆ. ಸೀರೆ ಮೇಲೆ ಹರಿದ ಅಂಗಿ ಹಾಕಿ, ರೆಡ್ ಕಲರ್ ವಿಗ್ ಹಾಕಿ ಪಕ್ಕಾ ಗಾರೆ ಕೆಲ್ಸದ ನಿಂಗಿ ತರ ಕಾಣ್ತಿರುವ ವಿಕ್ಕಿ, ಮೂತಿ ತಿರುವಿದ್ದೇ ತಿರುವಿದ್ದು. ಸಾಂಗ್ ಆರಂಭದಿಂದ ಹಿಡಿದು ಮಧ್ಯದವರೆಗೂ ನಿಂಗಿ ಸೊಂಟದ ಜೊತೆ ಮೂತಿ ಕೂಡ ತಿರಗ್ತಿದೆ. ಟೀಂ ಸಾಂಗ್ ಭರ್ಜರಿಯಾಗಿ ಮೂಡಿ ಬಂದಿದೆ. ಲಿರಿಕ್ಸ್ ಜೊತೆ ಮ್ಯೂಸಿಕ್ ಫ್ಯಾನ್ಸ್ ಹಿಡಿದಿಟ್ಟಿದೆ.

ಈ ಹಾಡಿಗೆ ವಿಕಿಪೀಡಿಯಾ ಹಾಗೂ ಅನೂಪ್ ಸುಧೀಂದ್ರ ಸಾಹಿತ್ಯವಿದೆ. ಆಶಿತ್ ನೃತ್ಯ ಸಂಯೋಜನೆ ಮಾಡಿದ್ರೆ ವಿವೇಕ್ ವಿಡಿಯೋ ಹೊಣೆ ಹೊತ್ಕೊಂಡಿದ್ದಾರೆ. ಮಂಜು ನದುಲಮಣಿ ಆಡಿಟಿಂಗ್ ಮಾಡಿದ್ರೆ ಸಚಿತ್ ಕ್ಲೇರ್ ಮ್ಯೂಜಿಕ್ ನೀಡಿದ್ದಾರೆ. ಎಲ್ಲರೂ ಅಧ್ಬುತವಾಗಿ ನಟಿಸಿದ್ದಾರೆ. ವಿಡಿಯೋ ಜೊತೆ ಸಾಂಗ್ ಅಧ್ಬುತವಾಗಿ ಮೂಡಿ ಬಂದಿದೆ. ಸಾಂಗ್ ಕೊನೆಯವರೆಗೂ ಪ್ರಾಸದ ಟಚ್ ನೀಡಲಾಗಿದೆ. ಸೊಂಟ ಕುಣಿಸ್ತಾ ಕೆಳಗೆ, ಮೇಲೆ ಡಾನ್ಸ್ ಮಾಡುವ ಸ್ಟೆಪ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ವಿಕ್ಕಿ ಸಾರಿ ವಿತ್ ಶರ್ಟ್ ಸ್ಟೈಲ್ ವೀಕ್ಷಕರಿಗೆ ಇಷ್ಟವಾಗಿದೆ.

ಇಂಜಿನಿಯರ್ ಮುಗಿಸಿ ಒಂದು ವರ್ಷ ಕೆಲ್ಸ ಮಾಡಿ ಸೋಶಿಯಲ್ ಮೀಡಿಯಾ ಕಡೆ ತಿರುಗಿದ ವಿಕ್ಕಿ, ನಾನು ನಂದಿನಿ ಮೂಲಕ ಹಿಟ್ ಆದ್ರು. ನಾನು ನಂದಿನಿ ಸಾಂಗ್ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರ ಬಾಯಲ್ಲಿ ಕೇಳಿ ಬಂದಿತ್ತು. ಆಗ್ಲೇ ಜನರಿಗೆ ವಿಕ್ಕಿ ಪರಿಚಯ ಆಗಿದ್ದು. ಅದಾದ್ಮೇಲೆ ವಿಕ್ಕಿ ಕೆಲ ಸಾಂಗ್ ರಿಲೀಸ್ ಮಾಡಿದ್ದಾರೆ. ಜೊತೆಗೆ ತಮಾಷೆ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ. ಆದ್ರೆ ನಂದಿನಿ ನಂತ್ರ ವಿಕ್ಕಿ ಈ ಸಾಂಗ್ ಸೂಪರ್ ಹಿಟ್ ಆಗೋ ಸಾಧ್ಯತೆ ದಟ್ಟವಾಗಿದೆ.

ಇನ್ಸ್ಟಾಗ್ರಾಮ್ ನಲ್ಲಿ ಸಾಂಗ್ ಪೋಸ್ಟ್ ಆಗಿ ಕೆಲವೇ ಗಂಟೆಯಲ್ಲಿ ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ. ಸಾಂಗ್ ಕೊನೆಯಲ್ಲಿ ನೀಡುವ ಟ್ವಿಸ್ಟ್ ನೋಡುಗರಿಗೆ ಮನರಂಜನೆ ನೀಡ್ತಿದೆ. ಇನ್ಸ್ಟಾಗ್ರಾಮ್ ಹೊಸ ಟ್ರೆಂಡ್ ಸಾಂಗ್ ರೆಡಿಯಾಗಿದೆ, ಡಿಜೆಗೆ ಹೊಸ ಸಾಂಗ್ ಸಿಕ್ಕಿದೆ, ಸೂಪರ್ ಲಿರಿಕ್ಸ್, ನೈಟಿಗೆ ಬ್ರೇಕ್ ಅಂತೆಲ್ಲ ನೋಡುಗರು ಕಮೆಂಟ್ ಮಾಡಿದ್ದಾರೆ.

ಸಾಂಗ್ ಲಿರಿಕ್ಸ್ ಹೀಗಿದೆ : ಗಾರೆ ಕೆಲ್ಸದ ನಿಂಗಿ ಹರಿದೈತಿ ನಿನ್ನ ಅಂಗಿ, ನಿನ್ನ ಹಿಂದೆ ಬಿದ್ದು ಆಗೋದೆ ನಾ ಕಮಂಗಿ. ಗಾರೆ ಕೆಲ್ಸದ ನಿಂಗಿ ಹರಿದೈತಿ ನಿನ್ನ ಅಂಗಿ, , ನಿನ್ನ ಹಿಂದೆ ಬಿದ್ದು ಕಳೆದೋಯ್ತು ನನ್ನ ಲುಂಗಿ. ಗಾರೆ ಕೆಲ್ಸದ್ ನಿಂಗಿ, ಹೇ ಗಾರೆ ಕೆಲ್ಸದ್ ನಿಂಗಿ, ಗಾರೆ ಕೆಲ್ಸದ್ ನಿಂಗಿ ಹೇ ಬಾರೆ ಕೆಲ್ಸದ್ ನಿಂಗಿ… ಟ್ರ್ಯಾಕ್ಟರ್ ಓಡ್ಸೋ ನಿಂಗ, ನೀ ಹಿಂಗ್ ಯಾಕ್ ಆಡ್ತಿಯೋ ಮಂಗ, ನಂಗ್ ಬೇಡ ನಿನ್ನ ಸಂಗ, ನೀ ಬಿರಿಯಾನಿ ಲವಂಗ, ಟ್ರ್ಯಾಕ್ಟರ್ ಓಡ್ಸೋ ನಿಂಗ ನೀ ನೋಡಬ್ಯಾಡ ಹಂಗ, ಪೊಲೀಸ್ ಕೇಸು ಕೊಡಿಸ್ತೀನ್ ನೀ ಮಾಡೋದು ಫುಲ್ಲು ರಾಂಗಾ, ತರ್ತಾರ್ ನೋಡು ಕಡ್ಡಿ, ಅವ್ರು ಬಿಚ್ತಾರ್ ನಿಂದು ಚಡ್ಡಿ, ಹೊಡೆದು ಹೊಡೆದು ಹೊಡೆದು, ಅವರು ಮುರಿತಾರೆ ನಿಂದು ಹಡ್ಡಿ… ಗಾರೆ ಕೆಲ್ಸದ್ ನಿಂಗಿ ಐ ಸಾರಿ ಐ ಕ್ಲಿಂಗಿ, ನಿನ್ ಸಹವಾಸನೆ ಬ್ಯಾಡ ನಾವಿಬ್ರೂ ಅಣ್ಣ ತಂಗಿ..

 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!