ಅಪ್ಪು ಹಾಡಿಗೆ Amruthadhaare ಅಪ್ಪ-ಮಗನ ಡೇ ಔಟ್​: ಕುಣಿದಾಡಿದ ಪುನೀತ್​ ರಾಜ್​ ಫ್ಯಾನ್ಸ್​

Published : Sep 26, 2025, 08:00 PM IST
Amruthadhaare

ಸಾರಾಂಶ

ಅಮೃತಧಾರೆ ಧಾರಾವಾಹಿಯಲ್ಲಿ, ಗೌತಮ್ ಮತ್ತು ಅವನ ಮಗ ಆಕಾಶ್ (ಅಪ್ಪು) ನಡುವಿನ ಬಾಂಧವ್ಯ ಕೊಡಗಿನಲ್ಲಿ ಗಟ್ಟಿಯಾಗುತ್ತಿದೆ, ಆದರೆ ಆಕಾಶ್‌ಗೆ ಸತ್ಯ ತಿಳಿದಿಲ್ಲ. ಇನ್ನೊಂದೆಡೆ, ಎಂಎಲ್‌ಎಯಿಂದ ಭೂಮಿಕಾಗೆ ಅಪಾಯ ಎದುರಾಗಿದ್ದು, ಕಥೆಯಲ್ಲಿ ದೊಡ್ಡ ತಿರುವು ಬರುವ ಸಾಧ್ಯತೆಯಿದೆ.

ಪುನೀತ್​ ರಾಜ್​ ಕುಮಾರ್​ ಅವರು ಅವರ ಅಭಿಮಾನಿಗಳ ಅಪ್ಪು ಆಗಿದ್ದವರು. ಹಲವಾರು ಮಂದಿಯ ಮನೆಯಲ್ಲಿ ಚಿಕ್ಕ ಮಕ್ಕಳಿಗೆ ಅಪ್ಪು ಎಂದೇ ಕರೆಯುವುದು. ಅದೇ ರೀತಿ, ಅಮೃತಧಾರೆ ಸೀರಿಯಲ್​ (Amruthadhaare Serial)ನಲ್ಲಿ ಕೂಡ ಗೌತಮ್​ ಮತ್ತು ಭೂಮಿಕಾ ಮಗನನ್ನು ಅಪ್ಪು ಎಂದೇ ಹೆಸರು ಇಟ್ಟಿದ್ದಾರೆ. ಅವನ ಹೆಸರು ಆಕಾಶ್​ ಎಂದು ಇಟ್ಟಿದ್ದರೂ ಮನೆಯಲ್ಲಿ ಕರೆಯುವುದು ಅಪ್ಪು ಎಂದೇ. ಈಗ ಅಪ್ಪು ಮತ್ತು ಅಪ್ಪನ ಬಾಂಡಿಂಗ್​ ಜೋರಾಗಿ ನಡೆಯುತ್ತಿದೆ. ಆಕಾಶ್​ಗೆ ಇವನೇ ತನ್ನ ಅಪ್ಪ ಎನ್ನುವುದು ತಿಳಿದಿಲ್ಲವಾದರೂ ಕಣ್ಣು ಅರಿಯದಿದ್ದರೂ ಎನ್ನುತ್ತಾರಲ್ಲ, ಹಾಗೆ ಅಪ್ಪನ ಜೊತೆ ಕ್ಲೋಸ್​ ಆಗಿದ್ದಾನೆ, ಈ ವಿಷಯ ಇನ್ನಷ್ಟೇ ಭೂಮಿಕಾಗೆ ಗೊತ್ತಾಗುವುದರಲ್ಲಿದೆ. ಮುಂದೇನು ಎನ್ನುವ ಕುತೂಹಲವೂ ಇದೆ.

ಅಪ್ಪ-ಮಗನ ಡೇ ಔಟ್​

ಸದ್ಯ ಸೀರಿಯಲ್​ ಪ್ರಿಯರಿಗೆ ತಿಳಿದಿರುವಂತೆ ಅಮೃತಧಾರೆ ಸೀರಿಯಲ್​ ಶೂಟಿಂಗ್​ ಕೊಡಗಿನಲ್ಲಿ ನಡೆಯುತ್ತಿದೆ. ಇಲ್ಲಿಯೇ ಮನೆ ಮಾಡಿಕೊಂಡಿದ್ದಾಳೆ ಭೂಮಿಕಾ. ಇದೀಗ ಗೌತಮ್​ ಮತ್ತು ಮಗ ಆಕಾಶ್​ನ ಡೇ ಔಟ್​ ಶುರುವಾಗಿದೆ. ಕೊಡಗಿನ ಕೂರ್ಗ್ ಫನ್​ ವರ್ಲ್ಡ್​ನಲ್ಲಿ ಸೀರಿಯಲ್​ನ ಈ ಅಪ್ಪ-ಮಗ ಸಕತ್​ ಎಂಜಾಯ್​ ಮಾಡುವುದನ್ನು ನೋಡಬಹುದು. ಈ ಹಾಡಿನ ಬ್ಯಾಂಕ್​ಗ್ರೌಂಡ್​ನಲ್ಲಿ ಅಪ್ಪು ಅರ್ಥಾತ್​ ಪುನೀತ್​ ರಾಜ್​ ಕುಮಾರ್​ (Puneeth Rajkumar) ಅವರ ಅಪ್ಪು ಚಿತ್ರದ ಜಾಲಿ ಗೋ ಜಾಲಿ ಗೋ (Appu - "Jolly Go Jolly Go") ಹಾಡಿನ ಹಿನ್ನೆಲೆಯಲ್ಲಿ ಅಪ್ಪ-ಮಗನ ಡೇ ಔಟ್​ ತೋರಿಸಲಾಗಿದೆ. ಇದನ್ನು ನೋಡಿ ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ. ಅಪ್ಪುವನ್ನು ನೆನಪಿಸಿಕೊಳ್ಳುತ್ತಿದ್ದಾರೆ.

ಜಾಲಿ ರೈಡ್​ ಮಾಡಿದ ಅಪ್ಪ-ಮಗ

ಇದರಲ್ಲಿ ಫನ್​ ವರ್ಲ್ಡ್​ನ ವಿವಿಧ ಆಟಗಳನ್ನು ತೋರಿಸಲಾಗಿದೆ. ಅದೇ ರೀತಿ ತ್ರಿಡಿ-4D ಗಳಲ್ಲಿ ಅಪ್ಪ-ಮಗ ಜಾಲಿ ಮಾಡಿದ್ದನ್ನು ನೋಡಬಹುದು. ಅದೇ ರೀತಿ ರೋಪ್​ನಲ್ಲಿ ಆಕಾಶ್​ ಆಟವಾಡಿದ್ದನ್ನು ನೋಡಬಹುದು. ಒಟ್ಟಿನಲ್ಲಿ ಅಪ್ಪ-ಮಗನ ಬಾಂಡಿಂಗ್​ ಕಂಡು ನೆಟ್ಟಿಗರು ಇಬ್ಬರನ್ನೂ ಬೇಗ ಒಂದು ಮಾಡಿಸಿ, ಸತ್ಯ ಗೊತ್ತಾಗುವ ಹಾಗೆ ಮಾಡಿ ಎಂದು ಹೇಳುತ್ತಿದ್ದಾರೆ.

ಇನ್ನೊಂದೆಡೆ ಸೀರಿಯಲ್​ ಟ್ವಿಸ್ಟ್​?

ಆದರೆ ಅದೇ ಇನ್ನೊಂದೆಡೆ, ಸೀರಿಯಲ್​ನಲ್ಲಿ ಆಕಾಶ್​ ಕಿಡ್​ನ್ಯಾಪ್​ ಆಗುವ ಸಾಧ್ಯತೆಯೂ ಇದೆ. ಭೂಮಿಕಾ ಎಂಎಲ್​ಎ ಮಗನ ಮೇಲೆ ಆ್ಯಕ್ಷನ್​ ತೆಗೆದುಕೊಂಡಿರೋದು. ಅವನ ಮಗ ಶಾಲೆಯಲ್ಲಿ ಸ್ಮೋಕ್ ಮಾಡುತ್ತಿದ್ದ ಕಾರಣಕ್ಕೆ, ಅಪ್ಪನನ್ನು ಕರೆಸಿ ಬುದ್ಧಿ ಹೇಳಿಸಿದ್ದಳು. ಇದು ಎಂಎಲ್​ಎ ಕೋಪಕ್ಕೆ ಕಾರಣವಾಗಿದೆ. ತನ್ನದಲ್ಲದ ತಪ್ಪಿಗೆ ಭೂಮಿಕಾಳು ಈಗ ಕ್ಷಮೆ ಕೋರಿ ಪತ್ರ ಬರೆದುಕೊಡಬೇಕಿದೆ. ಆದರೆ ಸ್ವಾಭಿಮಾನಿ ಭೂಮಿಕಾ ಹಾಗೆ ಮಾಡಲು ಒಪ್ಪುತ್ತಿಲ್ಲ. ಬೇರೆ ಟೀಚರ್ಸ್​ ಹೇಳಿದರೂ ಆಕೆ ಅದನ್ನು ಒಪ್ಪಲಿಲ್ಲ. ಇದೇ ಕಾರಣಕ್ಕೆ ಈಗ ಆತನಿಂದ ಭೂಮಿಕಾ ಪ್ರಾಣಕ್ಕೆ ಅಪಾಯ ಇದೆ ಎನ್ನುವುದಂತೂ ಸುಳ್ಳಲ್ಲ. ರಾಜಕಾರಣಿಗಳು ಎಂದರೆ ಅಷ್ಟು ಸುಲಭ ಅಲ್ಲವಲ್ಲ! ಆತ ಇನ್ನೇನು ಮಾಡ್ತಾನೋ ಎನ್ನುವ ಭಯ ವೀಕ್ಷಕರಿಗೆ.

 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Viral Video: 62 ವರ್ಷದ ಹಿರಿಯ ನಟನನ್ನು ಮದುವೆಯಾದ್ರಾ ಬಾಲಿವುಡ್‌ ಬ್ಯೂಟಿ ಮಹಿಮಾ ಚೌಧರಿ?
Brahmagantu ರೂಪಾಗೆ ಕಿಚ್ಚನ ವಾರದ ಚಪ್ಪಾಳೆ: ಸೀರಿಯಲ್​ನಲ್ಲಿ ತಲೆ ಇರೋದು ಇವಳೊಬ್ಬಳಿಗೆ ಮಾತ್ರವಂತೆ!