Lakshmi Nivasa Serial: ಅಂಜಲಿ ಹೊರಬರೋಕೆ ಬೇರೆ ಕಾರಣ ಇದೆ; ಎಚ್ಚರಿಕೆ ಕೊಟ್ಟ ವಿಜಯಲಕ್ಷ್ಮೀ ಸುಬ್ರಮಣಿ

Published : Sep 26, 2025, 09:50 AM IST
anjali sudhakar actress vijayalakshmi subramani

ಸಾರಾಂಶ

Lakshmi Nivasa Tv Serial: ನಟಿ ಅಂಜಲಿ ಅವರು ‘ಲಕ್ಷ್ಮೀ ನಿವಾಸ’ ಧಾರಾವಾಹಿಯಿಂದ ಹೊರಗಡೆ ಬಂದಿದ್ದರು. ಈಗ ವಿಜಯಲಕ್ಷ್ಮೀ ಸುಬ್ರಮಣಿ ಕೂಡ ಸೀರಿಯಲ್‌ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ರೇಣುಕಾ ಪಾತ್ರದಲ್ಲಿ ಅಂಜಲಿ ನಟಿಸುತ್ತಿದ್ದರು. ಕೆಲವೇ ದಿನಗಳ ಹಿಂದೆ ಅವರು ಮಾಧ್ಯಮವೊಂದರಲ್ಲಿ ಈ ಪಾತ್ರದ ಬಗ್ಗೆ ಅಸಮಾಧಾನ ಇದೆ ಎಂದು ಹೇಳಿದ್ದರು. ಅದಾದ ಬಳಿಕ ಅವರು ಈ ಸೀರಿಯಲ್‌ನಲ್ಲಿ ಕಾಣಿಸಿರಲಿಲ್ಲ, ಹೊಸ ನಟಿಯ ಆಗಮವಾಗಿತ್ತು. ಈಗ ಈ ಬಗ್ಗೆ ಸಹನಟಿ ವಿಜಯಲಕ್ಷ್ಮೀ ಸುಬ್ರಮಣಿ ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ವಿಜಯಲಕ್ಷ್ಮೀ ಸುಬ್ರಮಣಿ ಏನಂದ್ರು?

“ಲಕ್ಷ್ಮೀ ನಿವಾಸ ಧಾರಾವಾಹಿಯಿಂದ ಹೊರನಡೆದ ನನ್ನ ಗೆಳತಿ ನಟಿ ಅಂಜಲಿ. ಅತಿಯಾದ ರಾಜಕೀಯ ನಿಜವಾದ ಕಲಾವಿದೆಯರಿಗೆ ಮನ್ನಣೆ, ಗೌರವ ಇಲ್ಲ, ಪಾತ್ರಕ್ಕೆ ನ್ಯಾಯ ಒದಗಿಸುವಲ್ಲಿ ನಾವಿಬ್ಬರೂ ಯಾವ ಕೊರತೆಯನ್ನು ಮಾಡಿಲ್ಲ. ಬೇಸರ ನೋವು ಇದೆ. ಅಂಜಲಿ ಇಂದು ನೀನು ಹೊರಗಡೆ ಬಂದಿರುವೆ, ಅತೀ ಶೀಘ್ರದಲ್ಲಿ ನಾನು ಕೂಡ ಈ ಸೀರಿಯಲ್‌ನಿಂದ ಹೊರಬರ್ತೀನಿ” ಎಂದು ವಿಜಯಲಕ್ಷ್ಮೀ ಅವರು ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಅರ್ಧ ಗಂಟೆ ಪ್ರಸಾರ ಆಗ್ತಿರೋ ಸೀರಿಯಲ್

ಅಂದಹಾಗೆ ಸಿದ್ದೇಗೌಡ್ರ ತಾಯಿಯಾಗಿ ಅಂಜಲಿ, ವಿಶ್ವನ ತಾಯಿಯಾಗಿ ನಟಿ ವಿಜಯಲಕ್ಷ್ಮೀ ನಟಿಸಿದ್ದರು. ವಿಶ್ವ ಪಾತ್ರಧಾರಿ ಭವಿಷ್‌ ಗೌಡ ಕೂಡ ಈ ಸೀರಿಯಲ್‌ನಿಂದ ಹೊರಬಂದಿದ್ದಾರೆ. ತನು ಪಾತ್ರಧಾರಿ ಕೂಡ ಬದಲಾವಣೆ, ವಿಶ್ವನ ತಂದೆ ಪಾತ್ರ ಕೂಡ ಬದಲಾಗಿದೆ, ಲಕ್ಷ್ಮೀ ಪಾತ್ರದಿಂದ ಶ್ವೇತಾ ಕೂಡ ಹೊರಬಂದಿದ್ದಾರೆ. ಒಟ್ಟಿನಲ್ಲಿ ಈ ಸೀರಿಯಲ್‌ನಲ್ಲಿ ಅನೇಕ ಪಾತ್ರಧಾರಿಗಳು ಹೊರಗಡೆ ಬಂದಿದ್ದಾರೆ. ಮೊದಲು ನಿತ್ಯ ಒಂದು ಗಂಟೆ ಪ್ರಸಾರ ಆಗ್ತಿದ್ದ ಈ ಸೀರಿಯಲ್‌ ಈಗ ಅರ್ಧ ಗಂಟೆ ಪ್ರಸಾರ ಆಗ್ತಿದೆ.

ನಟಿ ಅಂಜಲಿ ಏನಂದ್ರು?

ನಟಿ ಅಂಜಲಿ ಅವರು ಮಾಧ್ಯಮದ ಜೊತೆ ಮಾತನಾಡಿದ್ದಾಗ “ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ನನ್ನ ಪಾತ್ರದ ಆಫರ್‌ ಮಾಡುವಾಗ ಪಾತ್ರ ಬೇರೆ ಇರುತ್ತದೆ ಎಂದು ಹೇಳಿದ್ದರು. ಆದರೆ ಈ ಥರ ಇರತ್ತೆ ಅಂತ ಹೇಳಿರಲಿಲ್ಲ. ನಿರ್ಮಲಾ ಚೆನ್ನಪ್ಪ ಅವರು ನನ್ನ ಪಾತ್ರ ಬೇರೆ ಥರ ಇರತ್ತೆ ಅಂತ ಹೇಳಿದ್ದರು. ಈ ಪಾತ್ರದ ಬಗ್ಗೆ ನನಗೆ ಬೇಸರ ಇದೆ. ಧಾರಾವಾಹಿ ಆಫರ್‌ ಕೊಡುವಾಗ ಮೊದಲೇ ನಮ್ಮ ಪಾತ್ರ ಹೇಗಿದೆ ಅಂತ ಕ್ಲಿಯರ್‌ ಆಗಿ ಹೇಳಿಬಿಡಿ, ನೀವು ಪಾತ್ರ ಹೇಗಿರುತ್ತದೆ ಎಂದು ಹೇಳಿದಾಗ ಕಲಾವಿದರಿಗೆ ಆ ಪಾತ್ರ ನಿಜಕ್ಕೂ ಇಷ್ಟ ಆದರೆ ಒಪ್ಪಿಕೊಳ್ತಾರೆ. ಅದನ್ನು ಬಿಟ್ಟು ಈ ಥರ ಆದರೆ ನಮಗೂ ಬೇಸರ. ಈಗ ಹೇಗಾಗಿದೆ ಅಂದರೆ ಯಾವ ಮನೆಯವರು ಅಥವಾ ಕಲಾವಿದರು ಫ್ರೀ ಇದ್ದಾರೆ, ಶೂಟಿಂಗ್‌ಗೆ ಬರ್ತಾರೆ ಅಂತ ನೋಡಿಕೊಂಡು, ಅದರ ಮೇಲೆ ಈಗ ಸ್ಕ್ರಿಪ್ಟ್ ಬರೆಯುತ್ತಾರೆ, ಆಗ ಬೇರೆ ಪಾತ್ರಕ್ಕೆ ಹೊಡೆತ ಬೀಳತ್ತೆ‌, ಅಥವಾ ಇನ್ನೊಂದು ಪಾತ್ರದ ವ್ಯಾಲ್ಯು ಕಡಿಮೆ ಆಗುತ್ತದೆ ಅಂತ ಯೋಚಿಸೋದಿಲ್ಲ” ಎಂದು ಅಂಜಲಿ ಹೇಳಿದ್ದಾರೆ.

“ಸೀರಿಯಲ್‌ ಸೆಟ್‌ ಎಂದಾಗ ಕಲಾವಿದರು, ಪ್ರೊಡಕ್ಷನ್‌ ಹೌಸ್, ಸಂಭಾವನೆ‌ ಅಂತೆಲ್ಲ ಒಂದಿಷ್ಟು ಸಮಸ್ಯೆ ಇರುತ್ತದೆ. ಹೀಗಾಗಿ ಕೆಲ ಪಾತ್ರವನ್ನು ನೆಗೆಟಿವ್‌ ಆಗಿ ಬರೆದುಕೊಂಡು ಹೋಗುತ್ತಾರೆ. ಸಿದ್ದೇಗೌಡ್ರು ಅತ್ತಿಗೆ ನೀಲು ಪಾತ್ರಕ್ಕೆ ಈ ಕುಟುಂಬದ ಮೇಲೆ ಏನೋ ಹಳೇ ದ್ವೇಷ ಇದೆಯಂತೆ. ಆದರೆ ರೇಣುಕಾಗೆ ಯಾಕೆ ಮಗನ ಹೆಂಡ್ತಿ ಮೇಲೆ ಅಷ್ಟು ದ್ವೇಷ ಯಾಕೆ? ” ಎಂದು ಅಂಜಲಿ ಹೇಳಿದ್ದರು.

“ನನಗೆ ಪಾತ್ರ ಚೆನ್ನಾಗಿರಬೇಕು, ಇಲ್ಲ ಅಂದರೆ ನಾನು ವಾದ ಮಾಡ್ತೀನಿ. ಮುಂದೆ ಈ ಪಾತ್ರದ ಶೇಡ್ ಚೇಂಜ್ ಮಾಡ್ತೀನಿ ಅಂತ ಚಾನೆಲ್‌ನವರು ಭರವಸೆ ಕೊಟ್ಟಿದ್ದಾರೆ” ಎಂದು ಅಂಜಲಿ ಹೇಳಿದ್ದರು. ಇದಾದ ಬಳಿಕ ಅಂಜಲಿ ಅವರು ಸೀರಿಯಲ್‌ನಲ್ಲಿ ನಟಿಸಿಲ್ಲ ಎಂದು ಕಾಣುತ್ತಿದೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Viral Video: 62 ವರ್ಷದ ಹಿರಿಯ ನಟನನ್ನು ಮದುವೆಯಾದ್ರಾ ಬಾಲಿವುಡ್‌ ಬ್ಯೂಟಿ ಮಹಿಮಾ ಚೌಧರಿ?
Brahmagantu ರೂಪಾಗೆ ಕಿಚ್ಚನ ವಾರದ ಚಪ್ಪಾಳೆ: ಸೀರಿಯಲ್​ನಲ್ಲಿ ತಲೆ ಇರೋದು ಇವಳೊಬ್ಬಳಿಗೆ ಮಾತ್ರವಂತೆ!