ಅಮೃತಧಾರೆ ಸೀರಿಯಲ್ಗೆ ರೋಚಕ ಟ್ವಿಸ್ಟ್ ಬಂದಿದೆ. ಹಲ್ಲಿಯಿಂದ ಪತಿ-ಪತ್ನಿ ಒಂದಾಗುವ ಕಾಲ ಬಂದಿದೆ. ಏನಿದು ವಿಷಯ?
ಸ್ನೇಹಿತ ಆನಂದ್, ಗೌತಮ್ಗೆ ಚಾಲೆಂಜ್ ಕೊಟ್ಟಾಗಿದೆ. ಪತ್ನಿಗೆ ಕಿಸ್ ಮಾಡ್ಲೇಬೇಕು ಎನ್ನುವ ಚಾಲೆಂಜ್ ಇದು. ಇಲ್ಲದಿದ್ದರೆ ಪಾರ್ಟಿಯಲ್ಲಿ ಕುಡಿದ ವಿಷಯವನ್ನು ಅಜ್ಜಿಗೆ ತಿಳಿಸುವುದಾಗಿ ಹೇಳಿದ್ದಾನೆ. ಗೌತಮ್ಗೆ ಬೇರೆ ದಾರಿಯೇ ಇಲ್ಲ. ಪತ್ನಿಗೆ ಕಿಸ್ ಕೊಡಲೇಬೇಕು. ಆದರೆ ಪ್ರೀತಿ-ಪ್ರೇಮದ ಗಂಧಗಾಳಿಯೇ ಇಲ್ಲದ ಗೌತಮ್ಗೆ ಇದು ನುಂಗಲಾಗದ ತುತ್ತಾಗಿದೆ. ಅಷ್ಟಕ್ಕೂ, ಇದ್ದರೆ ಇರಬೇಕು ಇಂಥ ಸ್ನೇಹಿತರು ಎನ್ನುವಂಥ ಸ್ನೇಹ ಅಮೃತಧಾರೆ ಸೀರಿಯಲ್ ಗೌತಮ್ ಮತ್ತು ಆನಂದ್ ಅವರದ್ದು. ಇದು ಧಾರಾವಾಹಿಯಾದರೂ ನಿಜ ಜೀವನದಲ್ಲಿ ಇಂಥ ಸ್ನೇಹಿತರು ಸಿಕ್ಕರೆ ಅವರೆಷ್ಟು ಪುಣ್ಯವಂತರು ಎನ್ನುತ್ತಿದ್ದಾರೆ ಪ್ರೇಕ್ಷಕರು. ಯಾರೇ ಕೈಬಿಟ್ಟರೂ ಕೊನೆಯವರೆಗೆ ಇರುವವರು, ನೋವಿನ ಕಾಲಕ್ಕೆ ಆಗುವವರು ಸ್ನೇಹಿತರೇ ಎನ್ನುವ ಮಾತಿದೆ. ಆದರೆ ಇದು ಬದಲಾಗುತ್ತಿರುವ ಕಾಲಘಟ್ಟದಲ್ಲಿ ಬಹುತೇಕ ಮಂದಿ ಬೆನ್ನಿಗೆ ಚೂರಿ ಹಾಕುವವರೇ ಇರುವ ಸಮಯದಲ್ಲಿ ಗೌತಮ್ ಮತ್ತು ಆನಂದ್ ಸ್ನೇಹ ಮಾತ್ರ ಸೀರಿಯಲ್ ವೀಕ್ಷಕರಿಗೆ ಖುಷಿ ಕೊಡುವುದಂತೂ ಸುಳ್ಳಲ್ಲ. ರೊಮ್ಯಾನ್ಸ್, ಪ್ರೀತಿ, ಪ್ರಣಯದ ಗಂಧ ಗಾಳಿಯೇ ಇಲ್ಲದ ಗೌತಮ್ಗೆ ಇವೆಲ್ಲವನ್ನೂ ಹೇಳಿಕೊಡುವ ಆನಂದ್ನ ಸ್ನೇಹದ ಪರಿಯೇ ಕುತೂಹಲವಾದದ್ದು. ತಮಾಷೆಯ ಧಾಟಿಯಲ್ಲಿ ಪತ್ನಿಯ ಮೇಲೆ ಮೋಹ ಹುಟ್ಟುವಂತೆ ಮಾಡುವಲ್ಲಿ ಆನಂದ್ ಪಾಲು ಬಹುದೊಡ್ಡದಿದೆ.
ಕುಡಿದ ಮತ್ತಲ್ಲಿ ಪಾರ್ಟಿಯ ಸಂದರ್ಭದಲ್ಲಿ ಭೂಮಿಕಾ ಗೌತಮ್ ಜೊತೆ ಸೆಲ್ಫಿ ತೆಗೆದುಕೊಂಡು ಕಿಸ್ ಕೊಟ್ಟಿದ್ದಳು. ಪತ್ನಿಯ ಮೇಲೆ ಕುಚ್ ಕುಚ್ ಶುರುವಾಗಿರುವ ಗೌತಮ್ ಕಚೇರಿಯ ಸಮಯದಲ್ಲಿ ಅದನ್ನೇ ನೋಡುತ್ತಾ ಕುಳಿತಿದ್ದ. ಆ ಸಮಯಕ್ಕೆ ಸರಿಯಾಗಿ ಆನಂದ್ ಅಲ್ಲಿಗೆ ಬಂದಿದ್ದಾನೆ. ಕೂಡಲೇ ಫೋನ್ ಅನ್ನು ಉಲ್ಟಾ ಇಟ್ಟಿದ್ದಾನೆ ಗೌತಮ್. ಕಚೇರಿಯ ವಿಷಯ ಮಾತನಾಡಿದರೂ ಗೌತಮ್ ಗಮನ ಬೇರೆ ಕಡೆ ಇರುವುದು ನೋಡಿ ಈ ಆನಂದ್ಗೋ ಡೌಟ್ ಬಂದಿದೆ.
ಆಮೀರ್ ಖಾನ್@ 59: ಆರು ರೂ. ಶಾಲಾ ಫೀಸ್ ಕಟ್ಟಲಾಗದೇ ಒದ್ದಾಡಿದ್ದ ನಟನ ರೋಚಕ ಸ್ಟೋರಿ ಇಲ್ಲಿದೆ..
ಆಮೇಲೆ ನೇರವಾಗಿ ಫೋನ್ ಕಡೆ ಗಮನ ಹೋಗಿದೆ. ಅದರಲ್ಲಿರುವ ಮುತ್ತಿನ ಸೆಲ್ಫಿ ನೋಡಿದ್ಮೇಲೆ ಸುಮ್ಮನಿರ್ತಾನಾ ತರ್ಲೆ ಗೆಳೆಯ? ಗೌತಮ್ನ ಕಾಲೆಳೆದಿದ್ದಾನೆ. ನಂತರ ಇಬ್ಬರ ನಡುವೆ ಕೆಲವು ಮಾತುಕತೆಯಾಗಿದೆ. ಹಾಗೇನಿಲ್ಲ ಎಂದು ಎಷ್ಟು ಗೌತಮ್ ಹೇಳಿದ್ರೂ ಆನಂದ್ ಬಿಡುತ್ತಿಲ್ಲ. ಕೊನೆಗೆ ಗೌತಮ್ಗೇ ಬ್ಲ್ಯಾಕ್ಮೇಲ್ ಮಾಡಿದ್ದಾನೆ. ಅತ್ತಿಗೆ ನಿನಗೆ ಮುತ್ತು ಕೊಟ್ಟ ಹಾಗೆ ನೀನೂ ಅತ್ತಿಗೆಗೆ ಮುತ್ತುಕೊಡಬೇಕು ಎಂದಿದ್ದಾನೆ. ಇದೆಲ್ಲಾ ಸಾಧ್ಯವೇ ಇಲ್ಲ ಎಂದು ಗೌತಮ್ ಹೇಳಿದ್ರೂ, ಒಂದು ವೇಳೆ ಹಾಗೆ ಮಾಡದಿದ್ದರೆ ಇಲ್ಲಿಯವರೆಗೆ ನಾವು ಮಾತನಾಡಿದ್ದನ್ನೆಲ್ಲಾ ಜಗಜ್ಜಾಹೀರ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಇದನ್ನು ಒಪ್ಪಿಕೊಳ್ಳದೇ ಗೌತಮ್ಗೆ ಬೇರೆ ವಿಧಿ ಇಲ್ಲ.
ಇದೇ ಗುಂಗಿನಲ್ಲಿ ಮನೆಗೆ ಹೋಗಿದ್ದಾನೆ ಗೌತಮ್. ಭೂಮಿಕಾ ಮಲಗಿದ್ದಾಳೆ. ಗೌತಮ್ನ ಗೊರಕೆ ಶಬ್ದ ಕೇಳಿಸಬಾರದು ಎಂದು ದಿನವೂ ಕಿವಿಗೆ ಹತ್ತಿಹಾಕಿಕೊಂಡು ಮಲಗುತ್ತಾಳೆ ಇವಳು. ಗೌತಮ್ ಪತ್ನಿಯನ್ನು ಕರೆದರೂ ಅವಳಿಗೆ ಅದು ಕೇಳಿಸುತ್ತಿಲ್ಲ. ಕಿಸ್ ಮಾಡುವುದು ಹೇಗೆ ಎನ್ನುವ ದೊಡ್ಡ ಚಿಂತೆ ಶುರುವಾಗಿ ಡುಮ್ಮಾ ಸರ್ಗೆ. ಭೂಮಿಕಾಗೆ ಹೇಗೆ ಹೇಳೋದು ಇದನ್ನೆಲ್ಲಾ ಎನ್ನುವಾಗಲೇ ಅಲ್ಲೊಂದು ಹಲ್ಲಿ ಬಂದುಬಿಟ್ಟಿದೆ. ಹಲ್ಲಿಯನ್ನು ಹುಷ್ ಹುಷ್ ಎಂದು ಓಡಿಸುವಷ್ಟರಲ್ಲಿಯೇ ಅದು ಭೂಮಿಕಾ ಮಲಗಿದ್ದ ಹಾಸಿಗೆ ಬಳಿ ಹೋಗಿದೆ. ಅದನ್ನು ಓಡಿಸಲು ಗೌತಮ್ ಭೂಮಿಕಾ ಬಳಿ ಬರುತ್ತಿದ್ದಂತೆಯೇ, ಭೂಮಿಕಾಗೆ ಎಚ್ಚರವಾಗಿದೆ. ಇದನ್ನು ನೋಡಿ ಭೂಮಿಕಾ ಬೇರೆಯ ಅರ್ಥವನ್ನೇ ಕಲ್ಪಿಸಿಕೊಂಡಿದ್ದಾಳೆ. ಅವಳಿಗೆ ಶಾಕ್ ಆಗಿದೆ. ಪತ್ನಿಗೆ ಕಿಸ್ ಕೊಡಲು ಹಲ್ಲಿ ಸಹಾಯ ಮಾಡ್ತಾ? ಚಾಲೆಂಜ್ನಲ್ಲಿ ಡುಮ್ಮ ಸರ್ ಗೆಲ್ಲಾರಾ ಎನ್ನುವುದು ಈಗಿರುವ ಪ್ರಶ್ನೆ.
ಪ್ರೇಯಸಿಯೆಂಬ ಬಿಸಿ ತುಪ್ಪ! ಮದ್ವೆಯಾದೋನ ಇಂಥ ಪಾಡು ಯಾರಿಗೂ ಬೇಡ ಅಂತಿದ್ದಾರೆ ನೆಟ್ಟಿಗರು!