ಒಂದು ಜೋಕ್​ ಹೇಳ್ತೀನಿ ಅಂತ ಇಂಥ ಜೋಕ್​ ಹೇಳೋದಾ ಸೀತಾರಾಮ ಪ್ರಿಯಾ?

By Suchethana D  |  First Published Jun 9, 2024, 12:09 PM IST

ಸೀತಾರಾಮ ಸೀರಿಯಲ್​ ಪ್ರಿಯಾ ಅರ್ಥಾತ್​ ಮೇಘನಾ ಶಂಕರಪ್ಪ ಅವರು ಜೋಕ್​ ಹೇಳುತ್ತೇನೆ ಎಂದು ಹೀಗೆ ಹೇಳಿ ಎಲ್ಲರೂ ಉಫ್​ ಎನ್ನುವಂತೆ ಮಾಡಿದ್ದಾರೆ. ಅವರು ಹೇಳಿದ ಜೋಕ್​ ಏನು?
 


ಸೀತಾರಾಮ ಸೀರಿಯಲ್​ ಪ್ರಿಯಾ ಸೋಷಿಯಲ್ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. ಇವರ ರಿಯಲ್​ ಹೆಸರು ಮೇಘನಾ ಶಂಕರಪ್ಪ. ತಮ್ಮ ಸೀರಿಯಲ್​ ಶೂಟಿಂಗ್​ನಲ್ಲಿಯೇ ಕೆಲವೊಂದು ರೀಲ್ಸ್​ ಮಾಡಿದರೆ, ಬಿಡುವಿನ ವೇಳೆಯಲ್ಲಿ ಸಕತ್​ ಡ್ಯಾನ್ಸ್ ಸ್ಟೆಪ್​ ಹಾಕಿ ಅಭಿಮಾನಿಗಳ ಮನ ಗೆಲ್ಲುವುದು ಇದೆ. ಇದೀಗ ಮೇಘನಾ ಅವರು ಸೀತಾರಾಮ ಸೀರಿಯಲ್​ ತಂಡದ ಜೊತೆ ಒಂದು ರೀಲ್ಸ್​ ಮಾಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಅಯ್ಯೋ ಎಂದಿದ್ದಾರೆ. ಇವರು ಒಂದು ಜೋಕ್​  ಮಾಡುವುದಾಗಿ ಹೇಳಿ ಎಲ್ಲರನ್ನೂ ಫೂಲ್​ ಮಾಡಿದ್ದು, ಸೀತಾರಾಮ ಪಾತ್ರಧಾರಿಗಳು ಉಫ್ ಎಂದಿದ್ದಾರೆ.

ಅಷ್ಟಕ್ಕೂ ಸೀತಾರಾಮ ಪ್ರಿಯಾ  , ನಾನೊಂದು ಜೋಕ್​ ಹೇಳುತ್ತೇನೆ ಎಂದು ಮೊದಲಿಗೆ ಅಶೋಕ್​ಗೆ ಹೇಳಿದ್ದಾರೆ. ಆಮೇಲೆ ವಿವಿಧ ಪಾತ್ರಧಾರಿಗಳಾಗಿರುವ ರಾಮ್, ಭಾರ್ಗವಿ ಸೇರಿದಂತೆ ಎಲ್ಲ ಪಾತ್ರಧಾರಿಗಳೂ ಹೇಳಿದ್ದಾರೆ. ಎಲ್ಲರೂ ಏನೋ ಜೋಕ್​ ಹೇಳುತ್ತಾರೆ ಎಂದುಕೊಂಡು ಹೇಳು ಹೇಳು ಎಂದಿದ್ದಾರೆ. ಆದರೆ ಮೇಘನಾ  ಇನ್ನೊಂದು ಟೇಕ್​ನಲ್ಲಿ ಎಲ್ಲರ ಎದುರು ಬಂದು 'ಜೋಕ್'​ ಎಂದಷ್ಟೇ ಹೇಳಿದ್ದಾರೆ.  ನಾನೊಂದು 'ಜೋಕ್​' ಹೇಳುತ್ತೇನೆ ಎಂದಿದ್ನಲ್ಲಾ ಎನ್ನುತ್ತಲೇ 'ಜೋಕ್​' ಎಂದು ಎಲ್ಲರಿಗೂ ಹೇಳಿದ್ದಾರೆ. ಅಯ್ಯೋ ಇದೇನಾ ಎಂದು ಕೆಲವರು ಹೇಳಿದರೆ, ಸತ್ಯಜೀತ್​ ಪಾತ್ರಧಾರಿ ಮಾತ್ರ ಬಿದ್ದೂ ಬಿದ್ದೂ ನಕ್ಕಿದ್ದಾರೆ. ಒಟ್ಟಿನಲ್ಲಿ ಸೀತಾರಾಮ ಪ್ರಿಯಾ ಎಲ್ಲರನ್ನೂ ಫೂಲ್​  ಮಾಡಿದ್ದಾರೆ. 

Tap to resize

Latest Videos

ಮಾಲಾ ಟಮ್​ ಟಮ್​ ಎಂದ ಸೀತಾರಾಮ ಪ್ರಿಯಾ: ನಿಮ್​ ನೋಡಿ ಎದೆ ಡಬ್​ ಡಬ್​ ಆಯ್ತು ಎಂದ ಫ್ಯಾನ್ಸ್​

ಇನ್ನು ಮೇಘನಾ ಅವರ ಬಣ್ಣದ ಬದುಕಿನ ಕುರಿತು ಹೇಳುವುದಾದರೆ, 'ಸೀತಾರಾಮ' ಸೀರಿಯಲ್​ಗೂ ಮುನ್ನ ಅವರು,  ನಟಿಸಿದ್ದು 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ಖಳನಾಯಕಿ ನೇತ್ರಾ ಪಾತ್ರದ ಮೂಲಕ ಗಮನ ಸೆಳೆದಿದ್ದರು ಮೇಘನಾ ಶಂಕರಪ್ಪ.  ನಿರೂಪಕಿಯಾಗಿ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದ ಮೇಘನಾ ಶಂಕರಪ್ಪ ನಟನೆಗೆ ಕಾಲಿಟ್ಟಿದ್ದು 'ಕಿನ್ನರಿ' ಧಾರಾವಾಹಿಯ ನಂತರ. ಮುಂದೆ 'ಕೃಷ್ಣ ತುಳಸಿ', 'ರತ್ನಗಿರಿ ರಹಸ್ಯ', 'ದೇವಯಾನಿ', 'ಸಿಂಧೂರ' ಹೀಗೆ ಕೆಲವೊಂದು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಮೇಘನಾ ಅವರು ಸದ್ಯ ಪ್ರಿಯಾ ಆಗಿ ಬದಲಾದುದು ಕಿರುತೆರೆ ವೀಕ್ಷಕರಿಗೆ ಖುಷಿ ತಂದಿದೆ. ಪಾಸಿಟಿವ್ ಆಗಿರಲಿ, ನೆಗೆಟಿವ್ ಆಗಿರಲಿ ಯಾವುದೇ ಪಾತ್ರ ನೀಡಿದರೂ ಅಚ್ಚುಕಟ್ಟಾಗಿ ಜೀವ ತುಂಬುವ ಮೇಘನಾ ಎರಡು ಶೇಡ್ ಪಾತ್ರವಿರುವ ಪಾತ್ರದ ಮೂಲಕ ಗುರುತಿಸಿಕೊಂಡಾಕೆ. ಕಿರುತೆರೆ ಅಂಗಳದಲ್ಲಿ ಭಿನ್ನ ಪಾತ್ರಗಳ ಮೂಲಕ ಮೋಡಿ ಮಾಡುತ್ತಿರುವ ಈಕೆಗೆ ಹಿರಿತೆರೆಯಲ್ಲಿ ಕಾಣಿಸಿಕೊಳ್ಳುವ ಆಸೆಯೂ ಇದೆ.

ಅಂದಹಾಗೆ ಈಚೆಗೆ ಮೇಘನಾ ಅವರು, ಈಚೆಗೆ ಹೊಸ ಮನೆಗೆ ಕಾಲಿಟ್ಟಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿಯೂ ಇತ್ತೀಚಿಗೆ ಸಕತ್​ ಆ್ಯಕ್ಟೀವ್​ ಆಗಿರುವ ಅವರು, ಇದಾಗಲೇ ಅಸಂಖ್ಯ ಅಭಿಮಾನಿಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪಡೆದುಕೊಂಡಿದ್ದಾರೆ.  ಆಗಾಗ್ಗೆ ರೀಲ್ಸ್​  ಮಾಡುವ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗುತ್ತಿದ್ದಾರೆ. 

ಸೀತಾರಾಮ ಸೀರಿಯಲ್​ ಪ್ರಿಯಾ ಮದ್ವೆಯ ಭರ್ಜರಿ ಫೋಟೋಶೂಟ್ ಹೇಗಿತ್ತು? ವಿಡಿಯೋ ಮಾಹಿತಿ ನೀಡಿದ ನಟಿ

click me!