ಅದ್ಕೇ ಹೇಳೋದು ಅಕ್ಕವ್ರೇ... ಗಂಡಸ್ರು ಜಾಸ್ತಿ ಪಿರೂತಿ ಮಾಡಿದ್ಕೂಡ್ಲೆ ನಂಬ್​ಬಿಡ್ಬೇಡಿ... ಮಲ್ಲಿಯಂಥವರಿಗೆ ನೆಟ್ಟಿಗರ ಸಲಹೆ!

By Suchethana D  |  First Published Sep 27, 2024, 12:42 PM IST

ಅಪಘಾತದಲ್ಲಿ ಮಲ್ಲಿ ಮಗುವನ್ನು ಕಳೆದುಕೊಂಡಿದ್ದಾಳೆ. ಆದರೆ ಮಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಭೂಮಿಕಾ ಬಳಿ ಕ್ಷಮೆ ಕೋರಿದ ಅವಳು ಜೈದೇವನ ಎಲ್ಲಾ ವಿಷಯ ಹೇಳುತ್ತಾಳಾ? 
 


ಅಂತೂ ಮಲ್ಲಿ ಸಾಯಲಿಲ್ಲ. ಜೈದೇವನ ಕುತಂತ್ರದ ನಡುವೆಯೂ, ನರ್ಸ್​ ಕಿತಾಪತಿ ನಡುವೆಯೂ ಮಲ್ಲಿಗೆ ಜೀವ ಬಂದಿದೆ. ವೈದ್ಯರು ಆಕೆಗೆ ಆಪರೇಷನ್​ ಮಾಡಬೇಕು, ಪರಿಸ್ಥಿತಿ ಸರಿಯಿಲ್ಲ ಎಂದ ನಡುವೆಯೂ ಕುತೂಹಲ ಎಂಬಂತೆ ಮಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಇದೀಗ ಮಲ್ಲಿ ಎಲ್ಲಾ ವಿಷಯವನ್ನೂ ಭೂಮಿಕಾ ಬಳಿ ಹೇಳಲು ಕಾಯುತ್ತಿದ್ದಾಳೆ. ತಾನು ಭೂಮಿಕಾಳನ್ನು ತಪ್ಪಾಗಿ ತಿಳಿದುಕೊಂಡಿರುವುದಕ್ಕೆ ಮಲ್ಲಿಗೆ ನೋವಾಗಿದೆ. ತಾನು ಮಾಡಿದ್ದು ತಪ್ಪು ಎಂಬ ಅರಿವಾಗಿದೆ. ಜೈದೇವನ ಮೇಲೆ ಸದಾ ಕಣ್ಣು ಇಟ್ಟಿಡು ಎಂದು ಭೂಮಿಕಾ ಪದೇ ಪದೇ ಮಲ್ಲಿಗೆ ಹೇಳುತ್ತಿದ್ದಳು.  ಆದರೆ ತನ್ನ ಗಂಡನ ಮೇಲೆ ಅತಿಯಾದ ಪ್ರೀತಿ, ವಿಶ್ವಾಸದಿಂದ ಭೂಮಿಕಾಳನ್ನೇ ತಪ್ಪಾಗಿ ತಿಳಿದುಕೊಂಡಿದ್ದಳು ಮಲ್ಲಿ. ಇದಕ್ಕೆ ಕಾರಣ ಜೈದೇವ ಇನ್ನೊಬ್ಬಳ ಜೊತೆ ರೊಮ್ಯಾನ್ಸ್​ ಮಾಡಲು ಪೆದ್ದು ಮಲ್ಲಿಯನ್ನು ಪ್ರೀತಿಸುವಂತೆ ನಟಿಸಿ ಮೋಸ ಮಾಡಿದ್ದ. ಇದನ್ನು ನಂಬಿ ಬಿಟ್ಟಿದ್ದಳು ಮಲ್ಲಿ.

ಇದೀಗ ಎಚ್ಚರ ಆಗುತ್ತಿದ್ದಂತೆಯೇ ಭೂಮಿಕಾಳಿಗೆ ಎಲ್ಲಾ ವಿಷಯಗಳನ್ನೂ ಹೇಳಲು ಮಲ್ಲಿ ಕಾಯುತ್ತಿದ್ದಾಳೆ. ದೇಹಕ್ಕೆ ಆಗಿರುವ ಗಾಯವನ್ನು ವಾಸಿ ಮಾಡಬಹುದು, ಆದರೆ ಮನಸ್ಸಿಗೆ ಆಗಿರೋ ಗಾಯ ಅಲ್ಲವಲ್ಲ ಎಂದು ಜೈದೇವ ಆ ಹುಡುಗಿಯ ಜೊತೆ ಇರುವ ಚಿತ್ರಣವನ್ನು ಅವಳು ನೆನಪಿಸಿಕೊಂಡಿದ್ದಾಳೆ. ಭೂಮಿಕಾಳಿಗೆ ಕ್ಷಮೆ ಕೋರಿದ ಮಲ್ಲಿ, ಎಲ್ಲಾ ವಿಷಯವನ್ನು ಹೇಳಬೇಕು ಎನ್ನುವಷ್ಟರದಲ್ಲಿಯೇ ಜೈದೇವನ ಎಂಟ್ರಿಯಾಗಿದೆ. ಇನ್ನು ಈ ವಿಷಯವನ್ನು ಹೇಳಲು ಜೈದೇವ ಕೊಡುವುದಿಲ್ಲ ಎನ್ನುವುದು ನಿಜವೇ. ಏಕೆಂದರೆ ಸೀರಿಯಲ್​ ಮುಂದುವರೆಯಬೇಕಲ್ಲ. ಆದರೆ ಸದ್ಯ ಮಲ್ಲಿಯನ್ನು ಪ್ರಾಣಾಪಾಯದಿಂದ ಪಾರು ಮಾಡಿರುವುದಕ್ಕೆ ಸೀರಿಯಲ್​ ಪ್ರಿಯರಿಗೆ ಖುಷಿಯಾಗಿದೆ. ಏಕೆಂದರೆ ಮಲ್ಲಿಯನ್ನು ಸಾಯಿಸಿಯೇ ಬಿಡುತ್ತಾರೆ ಎನ್ನುವುದು ಬಹುತೇಕ ಮಂದಿಯ ಅಭಿಪ್ರಾಯ ಆಗಿತ್ತು. ಆದರೆ ಈಗ ಮಲ್ಲಿಯಂಥ ಮಹಿಳೆಯರಿಗೆ ನೆಟ್ಟಿಗರು ಸಲಹೆ ಕೊಡುತ್ತಿದ್ದಾರೆ. ತೀರಾ ಕೆಟ್ಟ ನಡವಳಿಕೆಯ ಗಂಡ ಏಕಾಏಕಿ ಬದಲಾಗುವ ಹಾಗೆ ಮಾಡಿದ ಅಂದ್ರೆ ಅವ್ರನ್ನು ನಂಬಬೇಡಿ, ಅಲ್ಲಿ ಮೋಸನೂ ಅಡಗಿರಬಹುದು. ಇದನ್ನು ತಿಳಿದುಕೊಂಡಿದ್ರೆ ಮಲ್ಲಿಗೆ ಇಂಥ ಸ್ಥಿತಿ ಬರ್ತಿಲ್ಲ ಎನ್ನುತ್ತಿದ್ದಾರೆ. 

Tap to resize

Latest Videos

undefined

ಆರೇಳು ದಶಕಗಳಲ್ಲಿ ಮದುವೆ ಎನ್ನುವುದೇ ಇರಲ್ಲ: ಅಧ್ಯಯನದಿಂದ ಬಯಲಾಗಿದೆ ಶಾಕಿಂಗ್​ ವಿಷಯ!

ಇದಕ್ಕೆ ಕಾರಣವೂ ಇದೆ. ಅಮೃತಧಾರೆ ಸೀರಿಯಲ್​ ಇದೀಗ 400 ಕಂತುಗಳನ್ನು ಪೂರೈಸಿದೆ.  ಇದರ ಫೋಟೋ ಅನ್ನು ವಾಹಿನಿ ನಿನ್ನೆ ಹಂಚಿಕೊಂಡಿತ್ತು.  ಪ್ರೊಮೋ ನೋಡಿ ಫ್ಯಾನ್ಸ್​ ಶಾಕ್​ ಆಗಿದ್ದರು. ಏಕೆಂದ್ರೆ ಅದರಲ್ಲಿ ಮಲ್ಲಿಯ ಫೋಟೋ ಇಲ್ಲ! ಜೈದೇವ, ಆನಂದ್​ ಅವನ ಪತ್ನಿ, ಅತ್ತೆ ಶಕುಂತಲಾ, ಪಾರ್ಥ ಮತ್ತು ಪತ್ನಿ ಇದ್ದಾರೆ. ಆದರೆ ಮಲ್ಲಿ ಮಿಸ್ಸಿಂಗ್​. ಇದೇ  ಕಾರಣಕ್ಕೆ ಮಲ್ಲಿಯನ್ನು ಜೈದೇವ ಸಾಯಿಸುವಲ್ಲಿ ಯಶಸ್ವಿಯಾಗಿಬಿಟ್ಟನಾ ಎನ್ನುವ ಆತಂಕ ವೀಕ್ಷಕರನ್ನು ಕಾಡಿತ್ತು. ಈ ಬಗ್ಗೆ ಕಮೆಂಟ್​ ಬಾಕ್ಸ್​ನಲ್ಲಿ ಪ್ರಶ್ನಿಸುತ್ತಿದ್ದರು, ಒಂದು ವೇಳೆ ಮಲ್ಲಿಯನ್ನು ಸಾಯಿಸಿದರೆ, ಸೀರಿಯಲ್​ಗೆ ಅರ್ಥವೇ ಇಲ್ಲ ಎನ್ನುವುದು ಅವರ ಮಾತು. ಅಷ್ಟಕ್ಕೂ ನರ್ಸ್​ಗೆ ಹಣದ ಆಮಿಷ ಒಡ್ಡಿದ್ದಾನೆ ಜೈದೇವ. ಒಂದು ವೇಳೆ ಮಲ್ಲಿಗೆ ಏನಾದ್ರೂ ಆದರೆ ಇಡೀ ವೈದ್ಯಕೀಯ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತದೆ ಎನ್ನುವ ಮಾತನ್ನೂ ಹಲವರು ಹೇಳುತ್ತಿದ್ದರು. ಅಂತೂ ಮಲ್ಲಿ ಬದುಕಿದ್ದಾಳೆ.

ಅಷ್ಟಕ್ಕೂ ಸೀರಿಯಲ್​ನಲ್ಲಿ,  ತನ್ನನ್ನು, ಗಂಡನನ್ನು, ಪತ್ನಿ ಮಲ್ಲಿಯನ್ನು ಕೊಲ್ಲಲು ಸಂಚುರೂಪಿಸಿದ್ದು ತಿಳಿದಿದ್ದರೂ ಜೈದೇವನನ್ನು ನಂಬಿ ಅತೀ ಪೆದ್ದು ಎನ್ನುವಂತೆ ಭೂಮಿಕಾ ಮತ್ತು ಗೌತಮ್​ ನಡೆದುಕೊಂಡಿದ್ದಾರೆ. ಇದು ಸದ್ಯ ಸೀರಿಯಲ್​ ಪ್ರೇಮಿಗಳಿಗೆ ಇಷ್ಟವಾಗುತ್ತಿಲ್ಲ. ಹಾವಿಗೆ ವಿಷ ಇದೆ ಎಂದು ಗೊತ್ತಾದ ಮೇಲೂ ಅದನ್ನು ಮುದ್ದು ಮಾಡುವುದು ಎಷ್ಟು ಸರಿ ಎನ್ನುವುದು ಪ್ರೇಕ್ಷಕರ ಮಾತು. ತಾನು ಒಳ್ಳೆಯವನು ಎನ್ನುವ ಪೋಸ್​ ಕೊಟ್ಟು ಹೆಜ್ಜೆ ಹೆಜ್ಜೆಗೂ ಅಣ್ಣ ಮತ್ತು ಅತ್ತಿಗೆಯನ್ನು ಯಾಮಾರಿಸುತ್ತಿದ್ದಾನೆ ಜೈದೇವ. ಈಗ ಪತ್ನಿಯನ್ನು ಕೊಲ್ಲುವ ಮಟ್ಟಿಗೆ ಬಂದಿದ್ದಾನೆ. ತುಂಬು ಗರ್ಭಿಣಿ ಪತ್ನಿಯನ್ನು ತವರಿಗೆ ಬಿಟ್ಟು ಬರಲು ಹೋಗಿದ್ದ. ಅವಳನ್ನು ಬೇರೆ ಕಾರಿನಲ್ಲಿ ಕುಳ್ಳರಿಸಿ ತಾನು ಗರ್ಲ್​ಫ್ರೆಂಡ್​ ಜೊತೆ ಲಲ್ಲೆ ಹೊಡೆಯುತ್ತಿದ್ದಾಗ ಅದನ್ನು ಮಲ್ಲಿ ನೋಡಿದ್ದಾಳೆ. ಮತ್ತೊಂದು ಕಡೆಯಿಂದ ಗಾಡಿ ಬಂದು ಅವಳಿಗೆ ಗುದ್ದಿದೆ. ಮಗು ಸತ್ತು ಹೋಗಿದೆ.  

ನಿಜವಾಗ್ಲೂ ಈ ಭೂಮಿ ಮೇಲೆ ಇಂಥ ಹೆಂಡ್ತಿ ಇರೋಕೆ ಸಾಧ್ಯನಾ ಅಂತಿರೋದ್ಯಾಕೆ ಭಾಗ್ಯಲಕ್ಷ್ಮಿ ಫ್ಯಾನ್ಸ್​!

click me!