ಗೌತಮ್ ಮತ್ತು ಭೂಮಿಕಾ ನಡುವಿನ ದಾಂಪತ್ಯ ಜೀವನದಲ್ಲಿ ಹುಳಿ ಹಿಂಡಲು ಬಂದ ಕಿರಣ್ಗೆ ಗೌತಮ್ ಕೊಟ್ಟಿದ್ದಾನೆ ಭಾರಿ ದೊಡ್ಡ ಶಾಕ್! ಏನಿದು?
ದಾಂಪತ್ಯ ಜೀವನ ಚೆನ್ನಾಗಿರಬೇಕು ಎಂದು ಪರಸ್ಪರ ಪತಿ-ಪತ್ನಿ ಮೇಲೆ ನಂಬಿಕೆಯೇ ಮುಖ್ಯ. ದಂಪತಿ ನಡುವೆ ಯಾರೇ ಮೂರನೆಯ ವ್ಯಕ್ತಿ ಎಂಟ್ರಿ ಕೊಟ್ಟರೂ ದಂಪತಿ ನಡುವೆ ನಂಬಿಕೆ ಇದ್ದರೆ ಯಾವ ಶಕ್ತಿಯೂ ಏನೂ ಮಾಡಲು ಸಾಧ್ಯವೇ ಇಲ್ಲ ಎನ್ನುವ ಮಾತನ್ನು ತಿಳಿಸಿಕೊಟ್ಟಿದೆ ಅಮೃತಧಾರೆ ಸೀರಿಯಲ್. ಭೂಮಿಕಾ ಮತ್ತು ಗೌತಮ್ ಬಾಳಲ್ಲಿ ಹುಳಿ ಹಿಂಡಲು ಬಂದ ಕಿರಣ್ಗೆ ಗೌತಮ್ ಸದಾ ನೆನಪಿಡುವ ಉಡುಗೊರೆ ಕೊಟ್ಟು ಕಳಿಸಿದ್ದಾನೆ. ಭೂಮಿಕಾ ಹುಟ್ಟುಹಬ್ಬದ ದಿನ ಸೀನ್ ಕ್ರಿಯೇಟ್ ಮಾಡಲು ಬಂದಿದ್ದಾನೆ ಕಿರಣ್. ತಾನೇ ಕೇಕ್ ತಂದು ಅದನ್ನು ಕಟ್ ಮಾಡಿ ಭೂಮಿಕಾ ಬಾಯಲ್ಲಿ ಇಡಲು ಹೋಗಿದ್ದಾರೆ. ಈ ಮೊದಲು ಏನೋ ಎಡವಟ್ಟು ನಡೆಯುತ್ತಿದೆ ಎಂದು ಗೌತಮ್ಗೆ ಮೊದಲೇ ಅರಿವಾಗಿತ್ತು. ಅದೇ ಇನ್ನೊಂದೆಡೆ, ಭೂಮಿಕಾ ಇನ್ನು ತಮ್ಮ ಕಥೆ ಮುಗಿಯಿತು ಎಂದೇ ಅಂದುಕೊಳ್ಳುತ್ತಾಳೆ. ತನಗೆ ಗಂಡನ ಮನೆಯಲ್ಲಿ ಜಾಗ ಇಲ್ಲ ಎಂದು ಅಳುತ್ತಾಳೆ. ಬರ್ತ್ಡೇ ಪಾರ್ಟಿ ಅಲ್ಲಿಗೇ ಮುಗಿಯುತ್ತದೆ. ಭೂಮಿಕಾ ಅಪ್ಪ-ಅಮ್ಮ ಮನೆಗೆ ಹೋಗಲು ರೆಡಿಯಾಗುತ್ತಾರೆ. ಆಗ ಮಧ್ಯೆ ಪ್ರವೇಶಿಸುವ ಗೌತಮ್, ನಿಮ್ಮಿಂದ ನನಗೆ ಸತ್ಯ ಗೊತ್ತಾಗಬೇಕು. ಸತ್ಯ ತಿಳಿಯದೇ ಹೀಗೆ ಮನೆ ಬಿಟ್ಟು ಹೋಗಬಾರದು ಎಂದು ಹೇಳುತ್ತಾನೆ. ಅದಕ್ಕೆ ಗೌತಮ್ ಕಿರಣ್ ಬಳಿ ಬಂದು ಈಗ ಸತ್ಯ ಹೇಳಿ. ನೀವಿಬ್ಬರೂ ಪ್ರೀತಿ ಮಾಡಿದ್ದು ಸತ್ಯನಾ ಎಂದು ಕೇಳುತ್ತಾನೆ. ಅದಕ್ಕೆ ಕಿರಣ್, ಹೌದು ಸರ್. ನಾವಿಬ್ಬರೂ ಪ್ರೀತಿ ಮಾಡಿದ್ದು ಸತ್ಯ. ಭೂಮಿಕಾ ಕೂಡ ನನ್ನನ್ನು ಪ್ರೀತಿ ಮಾಡುತ್ತಿದ್ದಳು. ಮದುವೆ ಮಾಡಿಕೊಳ್ಳಬೇಕು ಎಂದುಕೊಂಡಿದ್ದೂ ಸತ್ಯ ಎನ್ನುತ್ತಾನೆ.
ಆಗ ಗೌತಮ್ ಪ್ರಮಾಣ ಮಾಡು ಎಂದು ಹೇಳುತ್ತಲೇ ಆತನ ಕೆನ್ನೆಗೆ ಹೊಡೆಯುತ್ತಾನೆ. ಭೂಮಿಕಾ ಎಂಥವರು ಎಂದು ನಿನಗೆ ಗೊತ್ತಿಲ್ಲ. ನನಗೆ ಗೊತ್ತಿದೆ ಎನ್ನುತ್ತಾನೆ. ಭೂಮಿಕಾಗೆ ಗೊತ್ತಿಲ್ಲದೇ ಇರುವುದು ಎರಡೇ. ಅದು ಒಂದು ನಿನ್ನ ಥರ ಮುಖವಾಡ ಹಾಕಿಕೊಳ್ಳದೇ ಇರುವುದು ಹಾಗೂ ಇನ್ನೊಂದು ಸುಳ್ಳು ಹೇಳುವುದು. ಅದು ಅವರ ಗುಣ. ಅವರು ಒರಟಾಗಿ ಮಾತನಾಡುತ್ತಾರೆ.ಆದರೆ ಮನಸ್ಸಿನಲ್ಲಿ ಪ್ರೀತಿ ಇದೆಯಲ್ಲ, ಅದು ತಾಯಿಯ ಪ್ರೀತಿಗಿಂತಲೂ ಹೆಚ್ಚು. ಇನ್ನೊಬ್ಬರ ಬಗ್ಗೆ ಕೇರ್, ಅನುಕಂಪ ಗುಣ ಯಾರಿಗೂ ಇಲ್ಲ ಎನ್ನುತ್ತಾನೆ.
undefined
ನುಗ್ಗೆ ಸೊಪ್ಪಿನ ಟೇಸ್ಟಿ, ಆರೋಗ್ಯಕರ ಸೂಪ್ ಮಾಡೋದನ್ನ ನಟಿ ಅದಿತಿ ಹೇಳಿಕೊಟ್ಟಿದ್ದಾರೆ ನೋಡಿ...
ನಾವಿಬ್ಬರೂ ಇಷ್ಟಪಟ್ಟು ಮದುವೆ ಆಗದೇ ಇರಬಹುದು. ಆದರೆ ನಾನು ಅವರನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇನೆ. ಯಾವನೋ ಒಬ್ಬ ಬಂದು ಬಾಯಿಗೆ ಬಂದ ಹಾಗೆ ಮಾತನಾಡಿದರೆ ನಂಬ್ತೇನೆ ಅಂದುಕೊಂಡೆಯಾ? ನಾನು ಹೀಗೆ ಬಂದು ಸೀನ್ ಕ್ರಿಯೇಟ್ ಮಾಡಬೇಕೆಂದೇನೂ ಇರಲಿಲ್ಲ. ಈತ ಬದಲಾಗುತ್ತಾನೆ ಎಂದುಕೊಂಡೆ. ಸುಮ್ಮನೇ ಸೀನ್ ಕ್ರಿಯೇಟ್ ಮಾಡಿ ಹೆಣ್ಣಿನ ಸಂಸಾರ ಹಾಳುಮಾಡುವುದಿಲ್ಲ ಎಂದುಕೊಂಡೆ. ಆದರೆ ಈಗ ಮನುಷ್ಯ ಅಲ್ಲ, ಮೃಗ. ವಿಕೃತಿ ಮನಸ್ಥಿತಿ ಇರೋನು ಎನ್ನುತ್ತಲೇ ಅವನ ಕೊರಳಿಗೆ ಕೈ ಹಾಕುತ್ತಾನೆ. ಇಲ್ಲಿಗೆ ಪ್ರೊಮೋ ಮುಗಿದಿದೆ. ಇದರ ಹಿಂದಿರುವ ಶಕ್ತಿ ಯಾರು ಎಂದು ತಿಳಿಯುತ್ತದೆಯೇ ಎನ್ನುವುದು ಮುಂದಿರುವ ಕುತೂಹಲ.
ಕಣ್ಣಾರೆ ಕಂಡರೂ ಪರಾಮರ್ಶಿಸಿ ನೋಡಬೇಕು ಎನ್ನುವ ಮಾತಿನಂತೆ, ಕಣ್ಣಿಗೆ ಕಂಡದ್ದೆಲ್ಲವೂ ನಿಜ ಎಂದು ಅಂದುಕೊಳ್ಳುವ ಪೂರ್ವದಲ್ಲಿ, ದಂಪತಿ ನಡುವೆ ಏನಾದರೂ ಸಂದೇಹ ಎದುರಾದರೆ ಅದನ್ನು ಮಾತಿನ ಮೂಲಕ ಬಗೆಹರಿಸಿಕೊಂಡರೆ ಯಾವುದೇ ಸಮಸ್ಯೆ ಬರುವುದಿಲ್ಲ. ಎಲ್ಲಕ್ಕಿಂತಲೂ ಮೇಲಾಗಿ ಪರಸ್ಪರ ನಂಬಿಕೆಯೇ ಮುಖ್ಯ. ಇಷ್ಟೆಲ್ಲಾ ಪೀಠಿಕೆ ಏಕೆಂದರೆ, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಅಮೃತಧಾರೆ ಸೀರಿಯಲ್ನ ನಾಯಕ ಗೌತಮ್ ನಡೆದುಕೊಂಡಿರುವ ರೀತಿಯಿಂದ ಈ ವಿಷಯ ಚರ್ಚೆಗೆ ಬಂದಿದೆ.
ಬಿಗ್ಬಾಸ್ ಗೆದ್ದು ಇತಿಹಾಸ ಸೃಷ್ಟಿಸಿದ ಬೆನ್ನಲ್ಲೇ ರೈತನ ಮಗ ಜೈಲಿಗೆ! 9 ಕೇಸ್ ದಾಖಲು: ಅಷ್ಟಕ್ಕೂ ಆಗಿದ್ದೇನು?