ಅಮೃತಾ ರಾಮಮೂರ್ತಿ-ರಾಘವೇಂದ್ರ ಕಿರುತೆರೆ ದಂಪತಿ ಡ್ಯಾನ್ಸ್​ ವೈರಲ್​: ವ್ಹಾರೆವ್ಹಾ ಎಂದ ಫ್ಯಾನ್ಸ್​

By Suvarna NewsFirst Published Dec 9, 2023, 4:29 PM IST
Highlights

ನಟರಾದ ಅಮೃತಾ ರಾಮಮೂರ್ತಿ ಮತ್ತು ರಾಘವೇಂದ್ರ ಅವರು ತೆಲಗು ಡ್ಯಾನ್ಸ್​ ಒಂದಕ್ಕೆ ಸ್ಟೆಪ್​ ಹಾಕಿದ್ದು ಫ್ಯಾನ್ಸ್​ ಫಿದಾ ಆಗಿದ್ದಾರೆ.
 

ಕುಲವಧು ಮೂಲಕ ಖ್ಯಾತಿ ಪಡೆದಿದ್ದ ನಟಿ ಅಮೃತಾ ರಾಮಮೂರ್ತಿ, ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ತಮ್ಮ ಅದ್ಭುತ ನಟನೆ ಮೂಲಕ ಜನರಿಗೆ ಇಷ್ಟವಾಗಿದ್ದಾರೆ.  'ಮಿಸ್ಟರ್ & ಮಿಸ್‌ಸ್ ರಂಗೇಗೌಡ' ಧಾರಾವಾಹಿಯಲ್ಲಿ ನಟಿಸ್ತಿದ್ದ  ಅಮೃತಾ ರಾಮಮೂರ್ತಿ (Amrutha Ramamurthy) ಮತ್ತು ಇದೇ ಧಾರಾವಾಹಿಯ ನಾಯಕ ರಾಘವೇಂದ್ರ ಅವರ ನಡುವೆ ಪ್ರೀತಿ ಚಿಗುರಿ ಇಬ್ಬರೂ ಹಸೆಮಣೆ ಏರಿ ವರ್ಷಗಳು ಕಳೆದಿವೆ. ಇದೀಗ ಅವರಿಬ್ಬರೂ ಧ್ರುತಿ ಎನ್ನುವ ಪುಟಾಣಿಯ ಪಾಲಕರೂ ಆಗಿದ್ದಾರೆ.  ಇವರು ಧಾರಾವಾಹಿಗಳ ಜೊತೆಯಲ್ಲಿ ಸೋಷಿಯಲ್​ ಮೀಡಿಯಾದಲ್ಲಿಯೂ ಆ್ಯಕ್ಟೀವ್​ ಆಗಿದ್ದಾರೆ. ಆಗಾಗ್ಗೆ ಕೆಲವೊಂದು ಅಪ್​ಡೇಟ್ಸ್​ಗಳನ್ನು ಶೇರ್​ ಮಾಡಿಕೊಳ್ಳುತ್ತಿರುತ್ತಾರೆ. ಕೆಲ ದಿನಗಳ ಹಿಂದಷ್ಟೇ ಮಗಳಿವೆ ಹೇರ್​ಕಟ್​ (Haircut) ಮಾಡಿಸೋ ವಿಡಿಯೋವನ್ನು ಅವರು ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಶೇರ್​ ಮಾಡಿಕೊಂಡಿದ್ದರು. ಬಳಿಕ  ಅಮ್ಮನ ಬಳಿ ಇರುವ ರೇಷ್ಮೆ ಸೀರೆಗಳ ಕುರಿತು ಮಾಹಿತಿ ನೀಡಿದ್ದರು. ಕೆಲ ದಿನಗಳ ಹಿಂದೆ ಇವರು ತಮ್ಮ 125 ವರ್ಷ ಹಳೆಯದಾಗಿರುವ ಅಜ್ಜನ ಮನೆಯ ಪರಿಚಯ ಮಾಡಿಸಿದ್ದರು.

ಇದೀಗ ನಟಿ, ಮಿದುನ್​ ಮುಕುಂದನ್​ ಅವರ ಹಾಡೊಂದಕ್ಕೆ ಪತಿ ಸಹಿತ ಡ್ಯಾನ್ಸ್​ ಮಾಡಿದ್ದು, ಫ್ಯಾನ್ಸ್​ ಫಿದಾ ಆಗಿದ್ದಾರೆ. ನಿಮ್ಮ ಜೋಡಿ ಸೂಪರ್ ಎನ್ನುತ್ತಿದ್ದಾರೆ. ಅಂದಹಾಗೆ ಅಮೃತಾ ರಾಮಮೂರ್ತಿ ಕನ್ನಡ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಅಮೃತಾ ಕಲರ್ಸ್ ಕನ್ನಡದ ಕುಲವಧು, ಜೀ ಕನ್ನಡದ ಮಿಸ್ಟರ್ ಆಂಡ್ ಮಿಸಸ್ ರಂಗೇಗೌಡ ಧಾರಾವಾಹಿಯಿಂದ ಹೆಚ್ಚು ಖ್ಯಾತಿ ಗಳಿಸಿದರು. ನಂತರ ಕಸ್ತೂರಿ ನಿವಾಸ, ಮೇಘ ಮಯೂರಿ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಜೊತೆಗೆ ತೆಲುಗು ಸೀರಿಯಲ್ ಗಳಲ್ಲೂ ನಟಿಸಿದ್ದಾರೆ.  ಅಮೃತ ಕಿರುತೆರೆ ನಟ ರಘು ಅವರನ್ನು ಮದುವೆಯಾಗಿದ್ದು, ಧೃತಿ ಎಂಬ ಮುದ್ದಾದ ಮಗಳಿದ್ದಾಳೆ. 

Latest Videos

ಆಸ್ಪತ್ರೆಯಿಂದ ವಾಪಸಾದ ಸಂಗೀತಾ, ಡ್ರೋನ್​ ಪ್ರತಾಪ್ ಕಣ್ಣಿಗೆ ಡ್ಯಾಮೇಜ್​? ಇತರ ಸ್ಪರ್ಧಿಗಳ ಕಣ್ಣೀರು

ಅಮೃತಾ ರಾಮಮೂರ್ತಿ ಅವರು ಹೆಚ್ಚಾಗಿ ನೆಗೆಟಿವ್ ರೋಲ್‍ಗಳನ್ನೇ ಮಾಡ್ತಾರೆ. ನಮ್ಮನೆ ಯುವರಾಣಿಯ ನಂತರ ರಾಘವೇಂದ್ರ ಅವರು ತೆಲುಗಿನ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಕನ್ನಡದಲ್ಲಿ ನಟಿಸಲು ಅವಕಾಶ ಸಿಕ್ಕರೆ ಖಂಡಿತಾ ಮಾಡ್ತೇನೆ ಎಂದು ಹೇಳಿಕೊಂಡಿದ್ದರು.

ಉಡುಪಿ ಸಮೀಪದ ಮಟ್ಟು ಗ್ರಾಮದಲ್ಲಿರುವ ಅಜ್ಜನ ಮನೆಯನ್ನು ಇತ್ತೀಚೆಗಷ್ಟೇ ಪರಿಚಯಿಸಿದ್ದರು ಅಮೃತಾ. ಹಿಂದಿನ ಕಾಲದಲ್ಲಿ ಹೆಚ್ಚಾಗಿ ಮನೆಗಳ ಒಳಗೆ ಪ್ರವೇಶಿಸುವಾಗ ಬಗ್ಗಿಯೇ ಪ್ರವೇಶಿಸಬೇಕಿತ್ತು. ಅದೇ ರೀತಿ ಅಮೃತಾ ಅವರ ಅಜ್ಜನ ಮನೆ ಕೂಡ ಇದೆ. ಅಲ್ಲೇ ಇರುವ ತಮ್ಮ ವಕೀಲ ಅಜ್ಜ ಸೇರಿದಂತೆ ಇತರ ಅಜ್ಜಂದಿರ ಫೋಟೋಗಳನ್ನು ಪರಿಚಯಿಸಿರುವ ನಟಿ,  ಅನಂತಯ್ಯ ಅಜ್ಜ, ಹರಿದಾಸ ಅಜ್ಜ,  ರಾಮಕೃಷ್ಣ,  ಜ್ಯೋತಿರಾವ್ ಮುಂತಾದವರ ಪರಿಚಯ ಮಾಡಿಸಿದ್ದಾರೆ. ಇದಾದ ಬಳಿಕ  ಚಾವಡಿ, ದೇವರ ಮನೆ, ಅಡುಗೆ ಮನೆಗಳನ್ನು ಪರಿಚಯ ಮಾಡಿದ್ದರು. ಹಿಂದಿನ ಕಾಲದಲ್ಲಿನ ಒಲೆಯ ಮೇಲಿನ ಅಡುಗೆಯ ಸವಿ ತಿಂದವರಷ್ಟೇ ಬಲ್ಲರು. ಈಗಲೂ ಕೆಲವು ಹಳ್ಳಿಗಳಲ್ಲಿ ಸೌದೆಯ ಮೇಲೆಯೇ ಅಡುಗೆ ಮಾಡಲಾಗುತ್ತದೆ. ಗ್ಯಾಸ್​ ಬಳಸಿ ಮಾಡುವ ಅಡುಗೆಗಿಂತ ಸೌದೆಯ ಮೇಲೆ ಮಾಡಿದ ಅಡುಗೆಯ ರುಚಿಯೇ ಹೆಚ್ಚು. ಇದೇ ಕಾರಣಕ್ಕೆ ಇದೀಗ ಮಹಾನಗರಗಳಲ್ಲಿಯೂ ಸೌದೆ ಒಲೆಗೆ ಡಿಮ್ಯಾಂಡ್​​ ಬರಲು ಶುರುವಾಗಿದೆ. ಅದನ್ನೆಲ್ಲಾ ನಟಿ ಪರಿಚಯ ಮಾಡಿಸಿದ್ದರು. 

ದೇವಸ್ಥಾನದಲ್ಲಿ ಮಹಿಳೆಯರು ನನ್​ ನೋಡಿ ಥೂ ಅವ್ಳೇ.. ಇವ್ಳಿಗೇನ್​ ಮಾತಾಡ್ಸೋದು ಅಂದ್ರು: ದೀಪಾ ಕಟ್ಟೆ

 

click me!