ಬಿಗ್‌ಬಾಸ್ ಮನೇಲಿ ಸಂಗೀತಾ, ಡ್ರೋನ್ ಮೇಲೆ ನಡೆದಿದ್ದು ಕೊಲೆ ಯತ್ನಾನ? ನಿಜಕ್ಕೂ ಏನು ನಡೀತು ಅಲ್ಲಿ?

Published : Dec 09, 2023, 03:14 PM IST
ಬಿಗ್‌ಬಾಸ್ ಮನೇಲಿ ಸಂಗೀತಾ, ಡ್ರೋನ್ ಮೇಲೆ ನಡೆದಿದ್ದು ಕೊಲೆ ಯತ್ನಾನ? ನಿಜಕ್ಕೂ ಏನು ನಡೀತು ಅಲ್ಲಿ?

ಸಾರಾಂಶ

ಬಿಗ್‌ಬಾಸ್ ಮನೆಯ ಟಾಸ್ಕ್ ಒಂದರಲ್ಲಿ ಗಾಯಗೊಂಡು ಇಬ್ಬರು ಸ್ಪರ್ಧಿಗಳು ಆಸ್ಪತ್ರೆ ಸೇರಿದ್ದಾರೆ. ಇದು ಕೊಲೆ ಯತ್ನವಾ? ಈ ಮಾತು ಯಾಕೆ ಬಂತಿಲ್ಲಿ? ಸಂಗೀತಾ ಸಹೋದರ ಈ ರೀತಿ ಯಾಕೆ ರಿಯಾಕ್ಟ್ ಮಾಡಿದರು?

'ಬಿಗ್‌ಬಾಸ್ ಕನ್ನಡ ಸೀಸನ್ 10' ಕತೆ ಸದ್ಯ ಎಲ್ಲೆಲ್ಲೋ ಹೋಗ್ತಿದೆ. ಟಾಸ್ಕ್ ಒಂದರಲ್ಲಿ ಸಂಗೀತ ಮತ್ತು ಡ್ರೋನ್ ಪ್ರತಾಪ್ ಆಸ್ಪತ್ರೆ ಸೇರಿದ್ದಾರೆ. ಇದು ಕೊಲೆ ಯತ್ನ ಅನ್ನೋ ಮಾತು ಕೇಳಿ ಬರ್ತಿದೆ. ನಿಜಕ್ಕೂ ಅಲ್ಲಿ ನಡೆದದ್ದೇನು, ಬರೀ ನೊರೆ ಎರೆಚಾಟವಾ ಅಥವಾ ಆ ನೆವದಲ್ಲಿ ಬೇರೇನಾದ್ರೂ ನಡೀತಾ? ಹಾಗೆ ನೋಡಿದರೆ ಈ ಬಾರಿ ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವಿನ ತಿಕ್ಕಾಟ ಹೆಚ್ಚಾಗುತ್ತಲೇ ಇದೆ. ಈ ವಾರ ಸ್ಪರ್ಧಿಗಳನ್ನು ಗಂಧರ್ವರು ಹಾಗೂ ರಾಕ್ಷಸರು ಎಂದು ಎರಡು ಗುಂಪುಗಳಾಗಿ ವಿಂಗಡಿಸಿ ಟಾಸ್ಕ್‌ಗಳನ್ನು ನೀಡಲಾಗಿತ್ತು. ಆದರೆ ಟಾಸ್ಕ್‌ ವೇಲೆ ಸಂಗೀತಾ ಶೃಂಗೇರಿ ಹಾಗೂ ಡ್ರೋನ್ ಪ್ರತಾಪ್ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಈ ಬಗ್ಗೆ ಸಂಗೀತಾ ಸಹೋದರ ಬೇಸರ ವ್ಯಕ್ತಪಡಿಸಿದ್ದಾರೆ. ದಿಢೀರನೇ ಸಂಗೀತಾ ಶೃಂಗೇರಿ ಹಾಗೂ ಡ್ರೋನ್ ಪ್ರತಾಪ್ ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದಾರೆ ಎನ್ನಲಾಗ್ತಿದೆ.

ಟಾಸ್ಕ್‌ ವೇಳೆ ಸೋಪು ನೊರೆಯ ನೀರನ್ನು ಇಬ್ಬರ ಮುಖಕ್ಕೆ ಎರಚಿದ್ದರಿಂದ ಅಸ್ವಸ್ಥಗೊಂಡಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಚೇರ್ ಮೇಲೆ ಕೂರಿಸಿ ನೀರು ಎರಚಿದ ವೇಳೆ ಸಂಗೀತಾ, ಪ್ರತಾಪ್ ಮೂಗು, ಕಣ್ಣು ಹಾಗೂ ಮೂಗು, ಬಾಯಿಗೆ ನೀರು ಬಿದ್ದು ನೋವಿನಿಂದ ಒದ್ದಾಡಿದ್ದಾರೆ ಎನ್ನುವ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿದೆ.

ಸದ್ಯ ಇಬ್ಬರೂ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ. ಇದೆಲ್ಲದರ ನಡುವೆ ಸಂಗೀತಾ ಶೃಂಗೇರಿ ಸಹೋದರ ಸಂತೋಷ್ ಕುಮಾರ್ ಇನ್‌ಸ್ಟಾಗ್ರಾಮ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಟ ಸುದೀಪ್ ಹಾಗೂ ಕಲರ್ಸ್ ಕನ್ನಡ ಕುರಿತು ಬೇಸರಗೊಂಡಿದ್ದಾರೆ. ಈ ಬಗ್ಗೆ ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ಪೋಸ್ಟ್‌ ಮಾಡಿದ್ದು ಅದರ ಸ್ಕ್ರೀನ್‌ಶಾಟ್ ವೈರಲ್ ಆಗುತ್ತಿದೆ.

ನಮ್ರತಾ-ವಿನಯ್‌ ಕನಸಿಗೆ ಕೊಳ್ಳಿಯಿಟ್ಟ ಸ್ನೇಹಿತ್‌; ಕ್ಯಾಪ್ಟನ್ ಹೀಗೂ ಮಾಡಬಹುದಾ!?

'ಸುದೀಪ್ ಸರ್, ನೀವು ಹೇಳಿದ್ದಿರಿ. ಬಿಗ್‌ಬಾಸ್ ಮನೆ ಸುರಕ್ಷಿತ. ಏನು ಆಗಲ್ಲ ಅಂತ. ಆದರೆ ಈಗ ನೋಡಿದ್ರೆ, ಇದು ಹಾಗಿಲ್ಲ. ಇದು ಕುಟುಂಬದ ಶೋ ಅಂತ ಕಾಣಲ್ಲ. ಕೇವಲ ಹಿಂಸೆಯೇ ಕಾಣ್ತಿದೆ. ಕುಟುಂಬದವರು ಈ ರೀತಿಯ ಆಕ್ರಮಣಕಾರಿ ವರ್ತನೆಯನ್ನು ಹೇಗೆ ನೋಡ್ತಾರೆ, ಕಲರ್ಸ್ ಕನ್ನಡ.. ನಾವ್ ಸುದೀಪ್ ಸರ್ ಬಗ್ಗೆ ಸರಿ ಮಾಡುವವರೆಗೂ ನಾವು ಯಾಕೆ ಕಾಯಬೇಕು. ಬಿಗ್‌ಬಾಸ್ ಇರೋದು ಜನರ ತಪ್ಪುಗಳನ್ನು ತಕ್ಷಣ ಅವರಿಗೆ ಅರ್ಥ ಮಾಡಿಸಲು ಅಲ್ಲವೇ?' ಎಂದು ಸಂತೋಷ್ ಪ್ರಶ್ನಿಸಿದ್ದಾರೆ.

ಇನ್ನೊಂದೆಡೆ ವೀಕ್ಷಕರು ತಮ್ಮ ಆಕ್ರೋಶ ತೋಡಿಕೊಂಡಿದ್ದಾರೆ. 'ಇಲ್ಲೇನು ಕೊಲೆ ಯತ್ನ ನಡೀತಿದ್ಯಾ? ನಾವೇನು ನೋಡ್ತಿದ್ದೀವಿ?' ಅನ್ನೋ ರೀತಿಯ ಕಮೆಂಟ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದುಬರುತ್ತಿವೆ.

ಜೋತಿ ರೈ ಈಗ ಇನ್ಸ್‌ಪೆಕ್ಟರ್! ನನ್ನೂ ಜೈಲಿಗೆ ಹಾಕಮ್ಮಾ ಅಂತಿದ್ದಾರೆ ಪಡ್ಡೆಗಳು!

'ನೆನ್ನೆ ಆಗಿದ್ದು ಬರಿ ಟಾಸ್ಕ್ ಅಲ್ಲ ಡ್ರೋನ್ ಪ್ರತಾಪ್ ಮತ್ತೆ ಸಂಗೀತನ ಕೊಲೆ ಮಾಡುವ ಮಟ್ಟಿಗೆ ಇತ್ತು ಸರ್, ನಿನ್ನೆ ಆ ಎಪಿಸೋಡ್ ನೋಡಿ ಮೈ ಎಲ್ಲಾ ಉರಿದು ಹೋಯಿತು' ಎಂದೊಬ್ಬರು ಕಮೆಂಟ್ ಮಾಡಿದ್ದಾರೆ. 'ನಿನ್ನೆ ಸಂಗೀತಾ ಗೆ ಆ ಪಾಪಿಗಳು ಹಿಂಸೆ ಕೊಡೋದನ್ನ ನೋಡಿ ನನ್ನ ತಾಯಿ ಟಿವಿ ನೋಡುತ್ತಾ ಕಣ್ಣೀರು ಹಾಕಿದಳು. ಹೆತ್ತ ತಾಯಿ ಇನ್ನೆಷ್ಟು ಕಣ್ಣೀರು ಹಾಕಿರಬಹುದು', 'ಸಂಗೀತ ಕುರ್ಚಿ ಇಂದ ಎದ್ದೆಳಲಿಲ್ಲ ಎಂದರೆ ಸಂಗೀತನ ಕೊಲೆ ಆಗುತಿತ್ತು.. ವಿನಯ್‌ನ ಉದ್ದೇಶ ಕೂಡ ಅದೇ ಇತ್ತು.. ನಮ್ಮ ಮನೆಯವರು ಎಲ್ಲ ನಿನ್ನೆ ಎಪಿಸೋಡ್ ನೋಡಿ ಕಣ್ಣೀರು ಹಾಕುತ್ತಿದ್ದರು ಜಸ್ಟ್‌ ಫಾರ್‌ ಸಂಗೀತ.. ಪಾಪ ರೀ ಅವಳನ್ನು ಎಲ್ಲರೂ ಆ ಮನೇಲಿ ಟಾರ್ಗೆಟ್ ಮಾಡ್ತಾ ಇದಾರೆ... ವಿನಯ್ ಮತ್ತು ಮೈಕಲ್ ನೀವ್ ಮಾಡಿದ್ದು ಸರಿ ಇಲ್ಲ.. ನಿಮ್ಮ ಮನೇಲೂ ಹೆಣ್ಮಕ್ಳು ಇದ್ದಾರೆ..',

'ಸುದೀಪ್ ಅವ್ರೆ ಬ್ರಾಂಡೆಡ್ ಬಟ್ಟೆ ಹಾಕಿ ಹಣ ತಗೊಂಡು ಕಾಮಿಡಿ ಶೋ ಮಾಡಿ ಹೋಗಬೇಡಿ, ನಿನ್ನೆ ವಿನಯ್ ಟೀಮ್ ಅವ್ರು ಮಾಡಿದ್ದು ಅತೀ ಹೀನಾಯವಾಗಿತ್ತು. ಅವ ಯಾರು ರೌಡಿನಾ ಬಿಗ್ಬಾಸ್ ಮನೇಲಿ? ನೀವು ಯಾಕೆ ಸುಮ್ಮನೆ ಇರೋದು ಅಲ್ಲಾ ಅವ ನಿಮ್ಮ ಸಂಬಂಧಿನ? ಯಾಕೆ ವಾರ್ನ್ ಮಾಡ್ತಿಲ್ಲ ನೀವು? ಎಲ್ಲಾ ಸೀಸನ್ ಅಲ್ಲಿ ಕೂಡ ಹಾರಾಡ್ತಿದ್ದರಿ ನೀವು ಈ ಸೀಸನ್ ಅಲ್ಲಿ ಯಾಕೆ ಕಾಮಿಡಿ ಶೋ ಮಾಡಿ ಹೋಗ್ತಿದ್ದಿರ? ಇದು ಎಲ್ಲಾ ಕನ್ನಡಿಗರ ಕೂಗು ನೆನಪಿರಲಿ. ವಿನಯ್ ಯಾಕೆ ಕಳಪೆನಾ ಚರ್ಚೆ ಮಾಡ್ತಾನೇ ನೀವು ಯಾಕೆ ಇನ್ನ ಪ್ರಶ್ನೆ ಮಾಡಿಲ್ಲ? ಈ ವಾರ ಅಲ್ಲಿ ಕಳಪೆಯನ್ನ ನಿಮ್ಮ ಸಮ್ಮುಖದಲ್ಲೇ ಚರ್ಚೆ ಮಾಡಿ ಜೈಲ್ಗೆ ಹಾಕ್ಸಿ ಇಲ್ಲಾ ಅಂದ್ರೆ ಕಳಪೆ ತೀರ್ಮಾನ ಜನರಿಗೆ ಬಿಟ್ಟ್ ಕೊಡಿ, ಜನರ ವೋಟ್ ಬೇಕು ಇದು ಬೇಡ್ವಾ?' ಎಂದೆಲ್ಲ ಜನ ಆಕ್ರೋಶ ಹೊರ ಹಾಕ್ತಾ ಇದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಈಡೇರಿದ ಪ್ರಾರ್ಥನೆ; ಪತಿಯೊಂದಿಗೆ ಮಂತ್ರಾಲಯಕ್ಕೆ ಭೇಟಿ ನೀಡಿದ ಗಾಯಕಿ ಸುಹಾನಾ ಸೈಯದ್
BBK 12: ಪದೇ ಪದೇ ವಯಸ್ಸಿನ ಕ್ಯಾತೆ ತೆಗೆದ ಗಿಲ್ಲಿ ನಟ; ಅಸಲಿಗೆ ಚೈತ್ರಾ ಕುಂದಾಪುರ ವಯಸ್ಸು ಎಷ್ಟು?