
ಬಿಗ್ಬಾಸ್ (Bigg Boss) ಮನೆಯಲ್ಲಿ ಈಗ ಸೂಟ್ಕೇಸ್ ಸದ್ದು ಮಾಡುತ್ತಿದೆ. ಎಲ್ಲ ಸ್ಪರ್ಧಿಗೂ ಒಂದೊಂದು ಸೂಟ್ಕೇಸ್ ನೀಡಲಾಗಿದೆ. ಇದರ ರಹಸ್ಯವೇನು ಎಂದು ವಾಹಿನಿ ಪ್ರೊಮೋ ಒಂದನ್ನು ಶೇರ್ ಮಾಡಿ ಪ್ರಶ್ನೆ ಮಾಡಿದೆ. ಇದಾಗಲೇ ನಾಲ್ವರು ಬಿಗ್ಬಾಸ್ನಿಂದ ಎಲಿಮಿನೇಟ್ ಆಗಿದ್ದಾರೆ. ಇದೀಗ ಉಳಿದಿರುವ ಸ್ಪರ್ಧಿಗಳಲ್ಲಿ ಮುಂದಿನ ಟಿಕೆಟ್ ಯಾರಿಗೆ ಎನ್ನುವ ಕುತೂಹಲವಿದೆ. ಇದರ ನಡುವೆಯೇ, ಎಲ್ಲರಿಗೂ ಸೂಟ್ಕೇಸ್ ನೀಡಲಾಗಿದ್ದು, ಅಚ್ಚರಿಯನ್ನು ತರಲಾಗಿದೆ. ಇಷ್ಟು ಬೇಗ ಕಳೆದ ಸೀಸನ್ ರಿಪೀಟ್ ಆಗತ್ತಾ ಎನ್ನುವ ಪ್ರಶ್ನೆ ಎದುರಾಗಿದೆ.
ಅಷ್ಟಕ್ಕೂ ಬಿಗ್ಬಾಸ್ ಕನ್ನಡ ಸೀಸನ್ 11ರಲ್ಲಿ ಇದೇ ರೀತಿ ಸೂಟ್ಕೇಸ್ ಸದ್ದು ಮಾಡಿತ್ತು. ಆದರೆ ಫಿನಾಲೆಗೆ ಕೆಲವೇ ದಿನಗಳು ಬಾಕಿ ಇರುವಾಗ ಹೀಗೆ ಮಾಡಲಾಗಿತ್ತು. ಮೂವರು ಸ್ಪರ್ಧಿಗಳು ಫಿನಾಲೆ ತಲುಪಿದ್ದ ಸಂದರ್ಭದಲ್ಲಿ, ಭಿನ್ನವಾಗಿ ಎಲಿಮಿನೇಷನ್ ನಡೆದಿತ್ತು. ಎಲ್ಲರ ಸೂಟ್ಕೇಸ್ ಅನ್ನು ಅವರ ಮುಂದೆಯೇ ಇರಿಸಿ, ಆ ಸೂಟ್ಕೇಸ್ ಒಳಗೆ ಅವರ ಭವಿಷ್ಯ ಇರಿಸಲಾಗಿತ್ತು. ಯಾರ ಸೂಟ್ಕೇಸ್ನಲ್ಲಿ ಸಂದೇಶ ಇದೆಯೋ ಅವರು ಬಿಗ್ಬಾಸ್ನಿಂದ ಹೊರಕ್ಕೆ ಹೋಗಲಿದ್ದಾರೆ ಎನ್ನುವುದಾಗಿ ತೋರಿಸಲಾಗಿತ್ತು. ಆದರೆ ಈ ಸೀಸನ್ನಲ್ಲಿ ಇಷ್ಟು ಬೇಗ ಈ ಟಾಸ್ಕ್ ನೀಡಿರುವುದು ಅಚ್ಚರಿ ತಂದಿದೆ.
ಇನ್ನು ಸದ್ಯದ ಪರಿಸ್ಥಿತಿ ನೋಡುವುದಾದರೆ, ಮುಂದಿನ ಎಲಿಮಿನೇಸ್ ರಿಷಾ ಗೌಡ (Risha Gowda) ಎನ್ನಲಾಗುತ್ತಿದೆ. ಏಕೆಂದರೆ ಅವರು ಬಿಗ್ಬಾಸ್ ನಿಮಯವನ್ನು ಉಲ್ಲಂಘಿಸಿ ಗಿಲ್ಲಿಯ ಮೇಲೆ ಕೈ ಮಾಡಿದ್ದಾರೆ. ದೈಹಿಕ ಹಲ್ಲೆ ಮಾಡಿದವರನ್ನು ತಕ್ಷಣವೇ ಹೊರಹಾಕುವ ನಿಯಮವಿರುವುದರಿಂದ, ರಿಷಾ ಅವರು ಎಲಿಮಿನೇಟ್ ಆಗುತ್ತಾರೆಯೇ ಎಂಬ ಚರ್ಚೆ ನಡೆದಿತ್ತು. ಆದರೆ ಬಿಗ್ ಬಾಸ್ ಯಾವುದೇ ನಿರ್ಧಾರ ತೆಗೆದುಕೊಂಡಿರಲಿಲ್ಲ. ಆದರೆ ಇದೀಗ ನಿಜ ಎಂದೇ ಹೇಳಾಗುತ್ತಿದೆ. ಇಲ್ಲಿಯೂ ಕಳೆದ ಸೀಸನ್ನೇ ರಿಪೀಟ್ ಆಗಿತ್ತು. ಬಿಗ್ಬಾಸ್ 11ರಲ್ಲಿ ರಂಜಿತ್ ಹಾಗೂ ಲಾಯರ್ ಜಗದೀಶ್ ಮಧ್ಯೆ ಕಿರಿಕ್ ಆದಾಗ ಸಾಕಷ್ಟು ಚರ್ಚೆಗಳು ನಡೆದವು. ಆ ಕ್ಷಣವೇ ಬಿಗ್ ಬಾಸ್ ಇಬ್ಬರನ್ನೂ ಮನೆಯಿಂದ ಹೊರಕ್ಕೆ ಹಾಕಿದ್ದರು. ಈಗ ಅದೇ ರಿಪೀಟ್ ಆಗತ್ತಾ ಎನ್ನುವ ಚರ್ಚೆ ನಡೆದಿದೆ.
ಅಷ್ಟಕ್ಕೂ, ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ನೀಡಿರುವ ರಿಷಾ ಗೌಡ ಅವರಿಗೆ ಈಗ ಸಾಕಷ್ಟು ನೆಗೆಟಿವ್ ಕಾಮೆಂಟ್ ಸಿಗುತ್ತಿವೆ. ಮನೆಯೊಳಗೆ ಇರುವ ಸ್ಪರ್ಧಿಗಳೇ ರಿಷಾ ಗೌಡ ಆಟದ ಶೈಲಿಗೆ ಟೀಕೆ ಮಾಡಿದ್ದಾರೆ. ಮಸಿ ಬಳಿಯುವ ಟಾಸ್ಕ್‌ನಲ್ಲಿ ರಿಷಾ ಮುಖಕ್ಕೆ ಮಸಿ ಬಳಿದು ಹಲವು ಟೀಕೆಗಳನ್ನು ಮಾಡಿದ್ದಾರೆ. ಆದ್ದರಿಂದ ಅವರು ಹೊರಗೆ ಹೋಗುವುದು ಪಕ್ಕಾ ಎನ್ನಲಾಗಿದೆ. ಅದರ ನಡುವೆಯೇ, ಸೂಟ್ಕೇಸ್ ಸೌಂಡ್ ಮಾಡುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.