'ಫೋನ್‌ ಚಾರ್ಜರ್‌ ಮಿಸ್‌ ಆಯ್ತು..' ಸೋಶಿಯಲ್‌ ಮೀಡಿಯಾದಲ್ಲಿ ಎಐ ಮಹಾಭಾರತ್‌ ಫುಲ್‌ ಟ್ರೋಲ್‌!

Published : Nov 03, 2025, 08:20 PM IST
ai mahabharat Jio Hotstar

ಸಾರಾಂಶ

AI Mahabharat Series Massively Trolled on Social Media ಜಿಯೋ ಹಾಟ್‌ಸ್ಟಾರ್‌ನ ಎಐ ವೆಬ್‌ ಸಿರೀಸ್‌, 'ಮಹಾಭಾರತ್‌ ಏಕ್‌ ಧರ್ಮಯುದ್ಧ್‌' ಸೋಶಿಯಲ್‌ ಮೀಡಿಯಾದಲ್ಲಿ ನಗೆಪಾಟಲಿಗೆ ಈಡಾಗಿದೆ. 

ಬೆಂಗಳೂರು (ನ.3): ಇತ್ತೀಚೆಗೆ ಪ್ರೇಕ್ಷಕರನ್ನು ಸಿನಿಮಾ ಮಂದಿರಕ್ಕೆ ಕರೆತಂದಿದ್ದ ಐತಿಹಾಸಿಕ ಕಥೆ ಆಧಾರಿತ ಕಾಂತಾರ-1 ಸಿನಿಮಾದ ಹಾಡಿನ ದೃಶ್ಯವೊಂದರಲ್ಲಿ ವಾಟರ್‌ ಬಾಟಲಿ ಇದ್ದಿದ್ದು ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಟ್ರೋಲ್‌ ಆಗಿತ್ತು.ಅದೇ ರೀತಿಯಲ್ಲಿ ಜಿಯೋ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗುತ್ತಿರುವ ಎಐ ವೆಬ್‌ ಸಿರೀಸ್‌ ಮಹಾಭಾರತ್‌ ಏಕ್‌ ಧರ್ಮ್‌ಯುದ್ಧ್‌ ಕೂಡ ಸೋಶಿಯಲ್‌ ಮೀಡಿಯಾದಲ್ಲಿ ನಗೆಪಾಟಲಿಗೆ ಈಡಾಗಿದೆ. ಎಐ ರಚಿತ ಮಹಾಭಾರತ್‌ ಏಕ್‌ ಧರ್ಮಯುದ್ಧ್‌ ನೋಡಿರುವ ವೀಕ್ಷಕರು, ಅರಮನೆಯ ದೃಶ್ಯಗಳನ್ನು ಆಧುನಿಕ ಕಾಲದ ಮಂಚ ಹಾಗೂ ಬೆಡ್‌ಸೈಡ್‌ ಟೇಬಲ್‌ಗಳನ್ನೂ ಗುರುತಿಸಿದ್ದಾರೆ.

ಕಲೆಕ್ಟಿವ್‌ ಮೀಡಿಯಾ ನೆಟ್‌ವರ್ಕ್‌ ನಿರ್ಮಾಣದ ಈ ಸಿರೀಸ್‌ನ ಮೊದಲ ಎಪಿಸೋಡ್‌ ಅಕ್ಟೋಬರ್‌ 25 ರಂದು ಒಟಿಟಿಗೆ ಬಂದಿದೆ. ಆದರೆ, ಆಧುನಿಕ ಕಾಲದ ಬೆಡ್‌ಗಳು, ಬೆಡ್‌ಸೈಡ್‌ ಟೇಬಲ್‌ಗಳು ಆನ್‌ಲೈನ್‌ ಪ್ರೇಕ್ಷಕರ ಗಮನಸೆಳೆದಿದ್ದು ಸೋಶಿಯಲ್‌ ಮೀಡಿಯಾ ಟ್ರೋಲ್‌ಗೆ ಕಾರಣವಾಗಿದೆ.

ಈ ಎಪಿಸೋಡ್‌ನಲ್ಲಿ ರಾಜಕುಮಾರ ದೇವವ್ರತನ ಜನ್ಮ ಹಾಗೂ ಶಂತನು ಮಹಾರಾಜ ಹಾಗೂ ಗಂಗಾ ಮಾತೆಯ ಕಥೆಯನ್ನು ಹೊಂದಿದೆ. ಆ ಮೂಲಕ ಪುರಾತನ ಹಸ್ತಿನಾಪುರದ ವಿವರಗಳನ್ನು ತಿಳಿಸುವುದು ಈ ಎಪಿಸೋಡ್‌ನ ಉದ್ದೇಶವಾಗಿತ್ತು. ಆದರೆ, ಈ ಸಿರೀಸ್‌ಅನ್ನು ನೋಡಿದ ವೀಕ್ಷಕರು ಪೌರಾಣಿಕ ಸಿರೀಸ್‌ನಲ್ಲಿನ ಅರಮನೆಯ ದೃಶ್ಯಗಳಲ್ಲಿ ಆಧುನಿಕ ಯುಗದ ಟೇಬಲ್‌ಗಳು ಡ್ರಾವರ್‌ಗಳನ್ನು ಕಂಚು ಅಚ್ಚರಿಪಟ್ಟಿದದು ಸಾಕಷ್ಟು ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ.

ಯೂಸರ್‌ಗಳು ಈ ಪ್ರಮಾದದ ಬಗ್ಗೆ ತಕ್ಷಣವೇ ಗಮನಸೆಳೆದಿದ್ದಾರೆ. ಒಬ್ಬ ಯೂಸರ್, 'ಬಹುಶಃ ಅವರು ವೈರ್‌ಲೆಸ್‌ ಚಾರ್ಜರ್‌ ಸೇರಿಸೋದನ್ನು ಮಿಸ್‌ ಮಾಡಿದ್ದಾರೆ' ಎಂದು ಕಾಲೆಳೆದಿದ್ದರೆ, ಇನ್ನೂ ಕೆಲವರು, ಬೆಡ್‌ರೂಮ್‌ನ ವಾಲ್‌ನಲ್ಲಿ ಒಂದು ಚಿತ್ರವಿದ್ದು ಅದರಲ್ಲಿ ವ್ಯಕ್ತಿಯೊಬ್ಬ ಸೂಟ್‌ ಧರಿಸಿದ್ದಾನೆ ಎಂದು ಗಮನಸೆಳೆದಿದ್ದಾರೆ. ಈ ವಿಚಾರಗಳು ಪೌರಾಣಿಕ ವಿಚಾರಗಳನ್ನು ಚಿತ್ರಿಸುವಾಗ ನಿರ್ದೇಶಕ ಹಾಗೂ ನಿರ್ಮಾಪಕರು ಗಮನಸೆಳೆಯಬೇಕಾದ ವಿಚಾರಗಳ ಬಗ್ಗೆ ತಿಳಿಸಿದ್ದಾರೆ.

ಇನ್ನೊಂದು ಕಾಮೆಂಟ್‌ನಲ್ಲಿ, "ಇದು ಅತ್ಯಂತವಾಗಿ ಕೆಟ್ಟದಾಗಿದ್ದರೂ, ಇದನ್ನು ಮಾಡುವ ಅವರ ಧೈರ್ಯವನ್ನು ನಾನು ಮೆಚ್ಚಲೇಬೇಕು. ಬಜೆಟ್ ವಿವರಗಳನ್ನು ನೋಡಲು ಆಸಕ್ತಿದಾಯಕವಾಗಿರುತ್ತದೆ" ಎಂದು ಹೇಳಿದೆ.

'ನಾನು ಹಾಗೂ ನನ್ನ ಅಮ್ಮ ಈ ಸಿರೀಸ್‌ ನೋಡುತ್ತಿದ್ದೆವು. ನಾನು ಆಕೆಯ ಬಳಿಯಲ್ಲಿದ್ದೆ. ಆಕೆ, 'ನೋಡು ಆಕೆ ಎಷ್ಟು ಪರ್ಫೆಕ್ಟ್‌ ಆಗಿ ಕಾಣುತ್ತಾಳೆ' ಎಂದಿದ್ದಳು. ಕೊನೆಗೆ ನಾನು ಅದು ಎಐ ಎಂದು ವಿವರಿಸಿದೆ. ಆಕೆ ಇದರಿಂದ ಬೇಸರ ಪಟ್ಟುಕೊಂಡಳು. ಇಷ್ಟು ಇನೋಸೆಂಟ್‌ ಆಗಿರುವ ಕೊನೆಯ ಜನರೇಷನ್‌ ಅವರದು ಮಾತ್ರ ಎಂದಿದ್ದಾರೆ.

ಎಪಿಸೋಡಿಕ್‌ ಸ್ವರೂಪದಲ್ಲಿ ಪ್ರಸಾರ

'ಮಹಾಭಾರತ - ಏಕ್ ಧರ್ಮಯುದ್ಧ' ಪ್ರಸ್ತುತ ಎಪಿಸೋಡಿಕ್ ಸ್ವರೂಪವನ್ನು ಅನುಸರಿಸುತ್ತಿದ್ದು, ಪ್ರತಿ ಶುಕ್ರವಾರ ಜಿಯೋಹಾಟ್‌ಸ್ಟಾರ್‌ನಲ್ಲಿ ಹೊಸ ಸಂಚಿಕೆಗಳನ್ನು ಬಿಡುಗಡೆ ಮಾಡುತ್ತಿದೆ.

ಈ ನಿರ್ಮಾಣವು ಕಲೆಕ್ಟಿವ್ ಮೀಡಿಯಾ ನೆಟ್‌ವರ್ಕ್‌ನ ಕೆಲಸವಾಗಿದೆ. ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಕಲೆಕ್ಟಿವ್ ಆರ್ಟಿಸ್ಟ್ಸ್ ನೆಟ್‌ವರ್ಕ್‌ನ ಸಂಸ್ಥಾಪಕ ಮತ್ತು ಗುಂಪಿನ ಸಿಇಒ ವಿಜಯ್ ಸುಬ್ರಮಣಿಯಂ, ಯೋಜನೆಯ ಮಹತ್ವದ ಕುರಿತು ಹೀಗೆ ಹೇಳಿದರು: "ನಮ್ಮಲ್ಲಿ ಅನೇಕರಿಗೆ, ಮಹಾಭಾರತವು ಕೇವಲ ಒಂದು ಕಥೆಗಿಂತ ಹೆಚ್ಚಿನದಾಗಿದೆ; ಇದು ನಮ್ಮ ಪೋಷಕರು ಮತ್ತು ಅಜ್ಜಿಯರಿಂದ ನಾವು ಕೇಳಿ ಬೆಳೆದ ಕಥೆಗಳು - ನಮ್ಮ ಕಲ್ಪನೆ ಮತ್ತು ಮೌಲ್ಯಗಳನ್ನು ರೂಪಿಸಿದ ಕಥೆಗಳು. AI ಮಹಾಭಾರತದೊಂದಿಗೆ, ಆಧುನಿಕ AI ತಂತ್ರಜ್ಞಾನದ ಶಕ್ತಿಯ ಮೂಲಕ ಜೀವಕ್ಕೆ ತಂದ ಅದೇ ಕಾಲಾತೀತ ಕಥೆಗಳನ್ನು ಸಂಪೂರ್ಣವಾಗಿ ಹೊಸ ರೀತಿಯಲ್ಲಿ ಅನುಭವಿಸಲು ನಮಗೆ ಅವಕಾಶ ಸಿಗುತ್ತದೆ," ಎಂದು ಅವರು ಹೇಳಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕ್ಯಾಪ್ಟನ್ಸಿ ಟಾಸ್ಕ್‌ಗಾಗಿ ರಕ್ತ ಹರಿಸಿದ ಸ್ಪರ್ಧಿಗಳು: ರಜತ್-ಚೈತ್ರಾ ನಡುವೆ ತಂದಿಕ್ಕಿ ತಮಾಷೆ ನೋಡಿದ ಗಿಲ್ಲಿ
Bigg Boss: ದೇವರ ಮುಂದೆ ಬಿಕ್ಕಿಬಿಕ್ಕಿ ಅತ್ತ ಚೈತ್ರಾ ಕುಂದಾಪುರ: ವೀಕೆಂಡ್​ ಹೊತ್ತಲ್ಲಿ ಅಂಥದ್ದೇನಾಯ್ತು?