
ಮಂಗಳೂರು (ಜೂ.19): ಗಾಯಕಿ ಹಾಗೂ ನಿರೂಪಕಿ ಅಖಿಲಾ ಪಜಿಮಣ್ಣು (Akhila Pajimannu) ಸಂಸಾರ (divorce) ಮುರಿದುಬಿದ್ದಿದೆ. ಕನ್ನಡ ಕೋಗಿಲೆ (Kannada Kogile) ಸೀಸನ್ 1 ಹಾಗೂ ಸೀಸನ್ 2 ರನ್ನರ್ ಅಪ್ ಆಗಿದ್ದ ಅಖಿಲಾ ತಮ್ಮ ಸುಮಧುರ ಕಂಠದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದರು. ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಅಮೆರಿಕದಲ್ಲಿ ವಾಸವಿದ್ದ ಧನಂಜಯ್ ಶರ್ಮ (Dhananjai Sharma) ಅವರನ್ನು ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದರು.
ಪುತ್ತೂರು ಕೋರ್ಟ್‌ನಲ್ಲಿ (Puttur Court) ಇಬ್ಬರೂ ಕೂಡ ತಮ್ಮ ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇಬ್ಬರೂ ಒಪ್ಪಿಗೆಯಿಂದ ಈ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ. ‘ಕನ್ನಡ ಕೋಗಿಲೆ’ ಕಾರ್ಯಕ್ರಮದ ಮೂಲಕ ಮನೆ ಮಾತಾಗಿರುವ ಗಾಯಕಿ ಅಖಿಲಾ ಪಜಿಮಣ್ಣು 2021ರ ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರೆ, ಅದರ ಮರುವರ್ಷ ವಿವಾಹವಾಗಿದ್ದರು. ನಿಶ್ಚಿತಾರ್ಥ ಹಾಗೂ ಮದುವೆಯ ವಿಡಿಯೋವನ್ನು ಅವರು ತಮ್ಮ ಇನ್ಸ್‌ಟಾಗ್ರಾಮ್ ಪೇಜ್‌ನಲ್ಲಿ ಹಂಚಿಕೊಂಡಿದ್ದರು.
ಪುತ್ತೂರಿನವರಾದ ಅಖಿಲಾ, 2011 ರಲ್ಲಿ ಸರಿಗಮಪ ಲಿಟಲ್ ಲಿಲ್ ಚಾಂಪ್ಸ್‌ನಲ್ಲಿ ಕಾಣಿಸಿಕೊಂಡ ನಂತರ ಖ್ಯಾತಿಗೆ ಏರಿದ್ದರು. ಇದರ ವಿಜೇತರಾಗಿದ್ದ ಆಕೆ, 2019 ರಲ್ಲಿ, ಅವರು ಕನ್ನಡ ಕೋಗಿಲೆ ಸೀಸನ್ 1 ರಲ್ಲಿ ಭಾಗವಹಿಸಿದರು ಮತ್ತು ಅಲ್ಲಿ 1 ನೇ ರನ್ನರ್ ಅಪ್ ಆಗಿದ್ದರು. ಇಡೀ ಕಾರ್ಯಕ್ರಮದ ಅತ್ಯಂತ ಜನಪ್ರಿಯ ಸಿಂಗರ್‌ಗಳಲ್ಲಿ ಒಬ್ಬರಾಗಿದ್ದ ಅವರು ಇದರೊಂದಿಗೆ ಕರ್ನಾಟಕದಲ್ಲಿ ಮನೆಮಾತಾಗಿದ್ದರು. ಹೀಗಿದ್ದಾಗಲೇ ಒಂದು ದಿನ ಇನ್ಸ್‌ಟಾಗ್ರಾಮ್‌ನಲ್ಲಿ ವಿಡಿಯೋ ಬಿಟ್ಟು, ಎಂಬಿಎ ಪದವೀಧರ ಧನಂಜಯ್ ಶರ್ಮಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದನ್ನು ತಿಳಿಸಿದ್ದಾರೆ.
ವಿಚ್ಛೇದನದ ಬಗ್ಗೆ ಅಧಿಕೃತವಾಗಿ ಕೋರ್ಟ್‌ನ ದಾಖಲೆಗಳೂ ಸಿಕ್ಕಿದ್ದು, ಜೂನ್ 12 ರಂದು ಇವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ವಿಚ್ಛೇದನಕ್ಕೆ ಕಾರಣ ಏನು ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದ ಅಖಿಲಾ ಪಜಿಮಣ್ಣು ತಮ್ಮ ಖಾತೆಯಿಂದ ಗಂಡ ಧನಂಜಯ ಶರ್ಮ ಅವರಿದ್ದ ಎಲ್ಲಾ ಫೋಟೋ ವಿಡಿಯೋಗಳನ್ನು ಡಿಲೀಟ್ ಮಾಡಿದ್ದಾರೆ.
ರಿಯಾಲಿಟಿ ಶೋ ಯಶಸ್ಸಿನ ಬಳಿಕ ಕೆಲ ಕಾಲ ಮಾಯವಾಗಿದ್ದ ಅಖಿಲಾ ಪಜಿಮಣ್ಣು, ಬಳಿಕ ಮುಂಜಾನೆ ರಾಗ ಕಾಯ್ರಕಮದೊಂದಿಗೆ ಕಿರುತೆರೆಗೆ ಮರಳಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದರು.
ಈ ವೇಳೆ ಮಾತನಾಡಿದ್ದ ಅವರು, "ಇದು ನಿರೂಪಕಿಯಾಗಿ ನನ್ನ ಮೊದಲ ಕಾರ್ಯಕ್ರಮ. ನನಗೆ ಯಾವಾಗಲೂ ಕಾರ್ಯಕ್ರಮಗಳನ್ನು ಆಯೋಜಿಸುವ ಆಸೆ ಇತ್ತು. ನಾನು ಕನ್ನಡ ಕೋಗಿಲೆಯಲ್ಲಿದ್ದಾಗ, ಭಕ್ತಿಗೀತೆಗಳನ್ನು ಹಾಡುತ್ತಿದ್ದಾಗ ನನಗೆ ಅದ್ಭುತ ಪ್ರತಿಕ್ರಿಯೆ ಸಿಗುತ್ತಿತ್ತು. ಭಕ್ತಿ ಕಾರ್ಯಕ್ರಮವನ್ನು ಆಯೋಜಿಸುವ ಅವಕಾಶ ಬಂದಾಗ ಅದು ಆಶ್ಚರ್ಯಕರವಾಗಿತ್ತು. ಪ್ರೇಕ್ಷಕರು ನನ್ನನ್ನು ನಿರೂಪಕನಾಗಿ ನೋಡಲು ಇಷ್ಟಪಡುತ್ತಾರೆ ಎಂದು ನಾನು ಭಾವಿಸುತ್ತೇನೆ. ನಿರೂಪಣೆ ನನಗೆ ಸಂಪೂರ್ಣವಾಗಿ ಹೊಸ ಅನುಭವವಾಗಿರುವುದರಿಂದ, ನಾನು ಅದರ ಪ್ರತಿಯೊಂದು ಭಾಗವನ್ನು ಆನಂದಿಸುತ್ತಿದ್ದೇನೆ ಮತ್ತು ಅದೇ ಸಮಯದಲ್ಲಿ, ನಾನು ಹೊಸ ಕೌಶಲ್ಯಗಳನ್ನು ಕಲಿಯುತ್ತಿದ್ದೇನೆ. ಪ್ರದರ್ಶನದಲ್ಲಿ, ನಾವು ಕರ್ನಾಟಕದ ವಿವಿಧ ಭಾಗಗಳಲ್ಲಿರುವ ವಿವಿಧ ದೇವಾಲಯಗಳಿಗೆ ಭೇಟಿ ನೀಡುತ್ತೇವೆ. ದೇವಾಲಯಗಳ ಬಗ್ಗೆ, ವಿಶೇಷವಾಗಿ ಅಷ್ಟೊಂದು ಜನಪ್ರಿಯವಲ್ಲದ ದೇವಾಲಯಗಳ ಬಗ್ಗೆ ನಾವು ಕಥೆಯನ್ನು ಹೇಳುತ್ತೇವೆ ಮತ್ತು ಹಾಡುಗಾರಿಕೆಯೂ ಇರುತ್ತದೆ' ಎಂದು ಹೇಳಿದ್ದರು.
ಯಾರು ಈ ಧನಂಜಯ್ ಶರ್ಮ: ಧನಂಜಯ್ ಶರ್ಮ ಮೂಲತಃ ಮೈಸೂರುನವರಾಗಿದ್ದು, ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಮೆರಿಕದ ಖಾಸಗಿ ಕಂಪನಿಯೊಂದರಲ್ಲಿ ಫರ್ಮ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದ್ದು, ಇತ್ತೀಚೆಗೆ ಟೆಸ್ಲಾ ಕಾರು ಖರೀದಿ ಮಾಡಿಯೂ ಸುದ್ದಿಯಾಗಿದ್ದರು. ಟೆಸ್ಲಾ ಕಾರ್‌ನಲ್ಲಿ ಪತ್ನಿಯ ಜೊತೆಗೆ ಟ್ರಿಪ್‌ಗೆ ಹೋಗುವ ಚಿತ್ರಗಳನ್ನೂ ಅವರು ಹಂಚಿಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.